Monday, 19th March 2018

Recent News

16 hours ago

ಕಾಂಗ್ರೆಸ್‍ನಿಂದ ಉಚ್ಛಾಟಿತರಾಗಿ, ಜೆಡಿಎಸ್‍ನಲ್ಲಿ ಗುರುತಿಸಿಕೊಂಡಿದ್ದ ಶಾಸಕ ನಡಹಳ್ಳಿ ಕಮಲ ಹಿಡಿಯಲು ಪ್ಲ್ಯಾನ್!

ವಿಜಯಪುರ: ಕಾಂಗ್ರೆಸ್ ಉಚ್ಛಾಟಿತರಾಗಿ ಜೆಡಿಎಸ್ ನಲ್ಲಿ ಗುರುತಿಸಿಕೊಂಡಿದ್ದ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿಗಳು ಜಿಲ್ಲೆಯಾದ್ಯಂತ ಕೇಳಿ ಬರುತ್ತಿವೆ ಶಾಸಕ ನಡಹಳ್ಳಿ ಅವರು ಬಿಜೆಪಿ ಸೇರುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ ಅಂತಾ ವಿಜಯಪುರ ಬಿಜೆಪಿ ಜಿಲ್ಲಾಧ್ಯಕ್ಷ ವಿಠ್ಠಲ್ ಕಟಕದೊಂಡ ಹೇಳಿದ್ದಾರೆ. ನೇರವಾಗಿ ನನಗೆ ಹೇಳದಿದ್ದರೂ, ನಮ್ಮ ಪಕ್ಷದ ಹಿರಿಯ ಮುಖಂಡರೊಂದಿಗೆ ನಡಹಳ್ಳಿ ಅವರು ಚರ್ಚಿಸಿರುವ ಮಾಹಿತಿ ನನಗೆ ಬಂದಿದೆ. ಇದೇ ರೀತಿಯಾಗಿ ಇನ್ನೂ ಹಲವು ಕಾಂಗ್ರೆಸ್ ಶಾಸಕರು ಮತ್ತು ಮುಖಂಡರು ಬಿಜೆಪಿ ಸೇರಲಿದ್ದಾರೆ. ಜಿಲ್ಲೆಯಲ್ಲಿ ಜೆಡಿಎಸ್ […]

3 days ago

ಝಳಕಿ ಚೆಕ್‍ ಪೋಸ್ಟ್ ಮೇಲೆ ಎಸಿಬಿ ದಾಳಿ – RTO ಅಧಿಕಾರಿ ಸೇರಿ 8 ಮಂದಿ ಅರೆಸ್ಟ್

ವಿಜಯಪುರ: ಜಿಲ್ಲೆಯ ಇಂಡಿ ತಾಲೂಕಿನ ಝಳಕಿ ಗ್ರಾಮದಲ್ಲಿರುವ RTO ಚೆಕ್‍ ಪೋಸ್ಟ್ ಮೇಲೆ ಎಸಿಬಿ ಅಧಿಕಾರಿಗಳು ಗುರುವಾರ ರಾತ್ರಿ ದಾಳಿ ನಡೆಸಿದ್ದಾರೆ. ಎಸಿಬಿ ಎಸ್‍ಪಿ ಅಮರನಾಥ ರೆಡ್ಡಿ ನೇತೃತ್ವದಲ್ಲಿ ದಾಳಿ ನಡೆಸಿರುವ ಅಧಿಕಾರಿಗಳು ಚೆಕ್‍ ಪೋಸ್ಟ್ ನಲ್ಲಿನ ದಾಖಲಾತಿಗಳು ಹಾಗು ಕಚೇರಿ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ 25,000 ರೂ. ನಗದು ಪತ್ತೆಯಾಗಿದೆ.   ಅಕ್ರಮವಾಗಿ ಸಂಗ್ರಹಿಸಿದ್ದ...

ಪೊಲೀಸರ ಮೇಲೆಯೇ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲು ಮುಂದಾಗಿದ್ದ ರೌಡಿ ಮೇಲೆ ಫೈರಿಂಗ್

1 week ago

ವಿಜಯಪುರ: ಆತ್ಮರಕ್ಷಣೆಗಾಗಿ ಪೊಲೀಸರು ರೌಡಿ ಶೀಟರ್ ಮೇಲೆ ಫೈರಿಂಗ್ ನಡೆಸಿರುವ ಘಟನೆ ನಗರದ ನವಭಾಗ್ ಪ್ರದೇಶದಲ್ಲಿ ನಡೆದಿದೆ. ವಿವಿಧ ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿ 25 ವರ್ಷದ ಯುನುಸ್ ಅಕ್ಲಾಸ್ ಪಟೇಲ್ ನನ್ನು ಬಂಧಿಸಲು ತೆರಳಿದ್ದ ವೇಳೆ ಆತ ಪೊಲೀಸರ ಮೇಲೆಯೇ ಮಾರಕಾಸ್ತ್ರದಿಂದ...

ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ಪಡೆದಿದ್ದ ಶಶಿಧರ್ ಮೇಲೆ ಫೈರಿಂಗ್

1 week ago

ವಿಜಯಪುರ: ಭೀಮಾತೀರದ ಹಂತಕ ಶಶಿಧರ್ ಮುಂಡೆವಾಡಿ ಪಿಎಸ್‍ಐ ಮತ್ತು ಪೇದೆ ಮೇಲೆ ಚಾಕುನಿಂದ ಹಲ್ಲೆ ನಡೆಸಿರುವ ಘಟನೆ ವಿಜಯಪುರದ ಇಂಡಿ ತಾಲೂಕಿನ ಬರಡೋಲ ಗ್ರಾಮದ ಬಳಿ ನಡೆದಿದೆ. ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ಪಡೆದ ಆರೋಪ ಎದುರಿಸುತ್ತಿರುವ ಶಶಿಧರ್ ಮುಂಡೆವಾಡಿ...

ಇಂದು ಸಂಜೆಯೊಳಗೆ ಸಿಎಂ ಸಿದ್ದರಾಮಯ್ಯ ಕೊಲೆ ಆಗಬಹುದು: ಕೆ.ಎಸ್.ಈಶ್ವರಪ್ಪ

2 weeks ago

ವಿಜಯಪುರ: ಇಂದು ಸಂಜೆಯೊಳಗೆ ಸಿಎಂ ಸಿದ್ದರಾಮಯ್ಯ ಅವರನ್ನು ಕೊಲೆ ಮಾಡುತ್ತಾರೆ ಎನ್ನುವ ಭಯ ನನಗೆ ಕಾಡುತ್ತಿದೆ ಎಂದು ಪರಿಷತ್ ವಿಪಕ್ಷ ನಾಯಕ ಕೆಎಸ್ ಈಶ್ವರಪ್ಪ ಆತಂಕ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಲೋಕಾಯುಕ್ತರ ಮೇಲೆ ಚಾಕು ಇರಿತ ಆಗಿದೆ. ಹೀಗಾಗಿ...

ನಿಸ್ವಾರ್ಥದಿಂದ 50-60 ವರ್ಷಗಳಿಂದ ಸ್ಮಶಾನ ಕಾಯುತ್ತಿರುವ ಮಹಿಳೆ

2 weeks ago

ವಿಜಯಪುರ: ಇಂದು ಮಹಿಳಾ ದಿನಾಚರಣೆ. ಸಾಧನೆ ಮಾಡಿದ ಮಹಿಳೆಯರನ್ನ ಗುರುತಿಸಿ ಇಂದು ಸನ್ಮಾನಿಸಲಾಗುತ್ತದೆ. ಇಲ್ಲೊಬ್ಬರು ನಿಸ್ವಾರ್ಥದಿಂದ ಸುಮಾರು 50-60 ವರ್ಷಗಳಿಂದ ಸ್ಮಶಾನ ಕಾಯುತ್ತಿದ್ದಾರೆ. ಆದರೆ ಇವರಿಗೆ ಸರ್ಕಾರದಿಂದ ಯಾವುದೇ ರೀತಿಯ ಸೌಲಭ್ಯಗಳು ಕೂಡ ಇಲ್ಲದಂತಾಗಿದೆ. ರಾಜ್ಯ ಸರ್ಕಾರ ಮಹಿಳಾ ದಿನಾಚರಣೆಗೆ ಲಕ್ಷಾಂತರ...

ವಿಜಯಪುರದಲ್ಲಿ ದಾನಮ್ಮನ ನಂತರ ಮತ್ತೊಬ್ಬ ಅಪ್ರಾಪ್ತೆ ಮೇಲೆ ಅತ್ಯಾಚಾರ ಯತ್ನ- ಇಂದು ಮುದ್ದೇಬಿಹಾಳ ಬಂದ್‍ಗೆ ಕರೆ

2 weeks ago

ವಿಜಯಪುರ: ದಾನಮ್ಮ ಅತ್ಯಾಚಾರ ಪ್ರಕರಣದ ನಂತರ ಜಿಲ್ಲೆಯಲ್ಲಿ ಮತ್ತೊಬ್ಬ ಅಪ್ರಾಪ್ತೆ ಮೇಲೆ ಅತ್ಯಾಚಾರ ಯತ್ನ ನಡೆದಿದೆ. ವಿಜಯಪುರದ ಮುದ್ದೇಬಿಹಾಳ ಪಟ್ಟಣದಲ್ಲಿ ಶಾಲೆಗೆ ಹೋಗುತ್ತಿದ್ದ 15 ವರ್ಷದ ಅಪ್ರಾಪ್ತೆ ಮೇಲೆ ನಾಲ್ವರಿಂದ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ ನಡೆದಿದೆ. ಸಂತ್ರಸ್ತೆಯನ್ನು ಬಾಳೆತೋಟಕ್ಕೆ ಎತ್ತೊಯ್ದ ಕಾಮುಕರು...

ಸರ್ಕಾರದ ಸಾಧನೆ ತಿಳಿಸುವ ವಾಹನದಲ್ಲಿ ಅಗ್ನಿ ಅವಘಡ- ಬಾಲಕರಿಬ್ಬರಿಗೆ ಗಾಯ

2 weeks ago

ವಿಜಯಪುರ: ರಾಜ್ಯ ಸರ್ಕಾರದ ಸಾಧನೆ ತಿಳಿಸುವ ವಾಹನಕ್ಕೆ ಬೆಂಕಿ ಹೊತ್ತಿಕೊಂಡ ಘಟನೆ ವಿಜಯಪುರದ ಬಬಲೇಶ್ವರದಲ್ಲಿ ನಡೆದಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ಮತಕ್ಷೇತ್ರ ಬಬಲೇಶ್ವರದಲ್ಲಿ ನೀರಾವರಿ ಯೋಜನೆಗಳ ಬಗ್ಗೆ ಮಾಹಿತಿ ಬಿತ್ತರಿಸುತ್ತಿದ್ದ ಸಂದರ್ಭದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಅದೃಷ್ಟವಶಾತ್ ಚಾಲಕ ಹಾಗೂ ಕ್ಲೀನರ್...