Friday, 25th May 2018

Recent News

2 days ago

ಎಂ.ಬಿ ಪಾಟೀಲ್ ವಿರುದ್ಧ ಅಶ್ಲೀಲ ಪದ ಬಳಕೆ- ಕಾಯಕರ್ತೆಯರಿಂದ ಮಹಿಳೆಯ ಮುಖಕ್ಕೆ ಮಸಿ

ವಿಜಯಪುರ: ಮಾಜಿ ಸಚಿವ ಎಂ. ಬಿ ಪಾಟೀಲ್ ವಿರುದ್ಧ ಮಹಿಳೆಯೊಬ್ಬರು ಅಶ್ಲೀಲ ಪದ ಬಳಕೆ ಮಾಡಿದ್ದರೆಂದು ಕಾಂಗ್ರೆಸ್ ಕಾರ್ಯಕರ್ತೆಯರು ಮಸಿ ಬಳಿದ ಘಟನೆ ವಿಜಯಪುರದಲ್ಲಿ ನಡೆದಿದೆ. ವಿಜಯಪುರ ನಗರದ ಜಿಲ್ಲಾಧಿಕಾರಿ ಕಚೇರಿ ಹತ್ತಿರವಿರುವ ಗಗನ ಮಹಲ್ ಹತ್ತಿರ ಮಹಿಳೆಯ ಮುಖಕ್ಕೆ ಮಸಿ ಬಳಿದು ಕಾರ್ಯಕರ್ತೆಯರು ಪಾಠ ಕಲಿಸಿದ್ದಾರೆ. ವಿಜಯಪುರ ಜಿಲ್ಲೆಯ ಬಬಲೇಶ್ವರ ಮತಕ್ಷೇತ್ರದ ರಬಕವಿ ಗ್ರಾಮದ ಚಂದ್ರೆವ್ವ ಎಂಬ ಮಹಿಳೆಯ ವಿರುದ್ಧ ಕಾರ್ಯಕರ್ತೆಯರು ಮಂಗಳವಾರ ಜಾಥಾದ ಮೂಲಕ ಆಗಮಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಇತ್ತೀಚೆಗೆ ನಡೆದ ವಿಜುಗೌಡ […]

4 days ago

ಕದಿಯಲು ಬಂದವರನ್ನು ಕಟ್ಟಿ ಹಾಕಿ ಥಳಿಸಿದ ಗ್ರಾಮಸ್ಥರು- ಕಳ್ಳರ ಕಾರಲ್ಲಿ ಮಾರಕಾಸ್ತ್ರಗಳು ಪತ್ತೆ

ವಿಜಯಪುರ: ಕದಿಯಲು ಬಂದ ಕಳ್ಳರನ್ನು ಗ್ರಾಮಸ್ಥರೇ ಕಟ್ಟಿಹಾಕಿ ಥಳಿಸಿದ ಘಟನೆ ವಿಜಯಪುರದ ಸಿಂದಗಿ ತಾಲೂಕಿನ ಚಿಕ್ಕರೂಗಿ ಗ್ರಾಮದಲ್ಲಿ ನಡೆದಿದೆ. ಈ ಹಿಂದೆ ಗ್ರಾಮದಲ್ಲಿ ಸರಣಿ ಕಳ್ಳತನ ನಡೆದಿತ್ತು. ಇದರಿಂದ ಎಚ್ಚೆತ್ತಿದ್ದ ಗ್ರಾಮಸ್ಥರು ನಿನ್ನೆ ರಾತ್ರಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದವರನ್ನು ತಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ 8 ಮಂದಿ ಎಸ್ಕೇಪ್ ಆಗಿದ್ದು, ನಾಲ್ವರು ಸಿಕ್ಕಿಬಿದ್ದಿದ್ದಾರೆ. ಕಳ್ಳರನ್ನು ಕಟ್ಟಿಹಾಕಿ...

ಸಚಿವ ಸ್ಥಾನಕ್ಕೆ ಆಗ್ರಹಿಸಿ ಕಲ್ಲು ಹೊತ್ತು ಶಾಸಕ ಶಿವಾನಂದ ಪಾಟೀಲ್ ಬೆಂಬಲಿಗನಿಂದ ಪ್ರತಿಭಟನೆ

6 days ago

ವಿಜಯಪುರ: ಚುನಾವಣಾ ಫಲಿತಾಂಶದ ಬಳಿಕ ರಾಜ್ಯ ರಾಜಕಾರಣದಲ್ಲಿ ನಡೆದ ಭಾರೀ ಹೈಡ್ರಾಮಾಕ್ಕೆ ಕೊನೆಗೂ ತೆರೆಬಿದ್ದಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಈ ಮಧ್ಯೆ ಸದ್ಯ ಸಚಿವ ಸ್ಥಾನ ಯಾರು ಯಾರಿಗೆಲ್ಲ ಸಿಗಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ....

ಬ್ಯಾಂಕಿನಲ್ಲಿ 3.50 ಲಕ್ಷ, 2.50 ಲಕ್ಷ ಕೈ ಸಾಲ: ರೈತ ನೇಣಿಗೆ ಶರಣು!

7 days ago

ವಿಜಯಪುರ: ಸಾಲಬಾಧೆಯಿಂದ ಮನನೊಂದು ರೈತರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಸಿಂದಗಿ ತಾಲೂಕಿನ ಗಬಸಾವಳಗಿ ಗ್ರಾಮದ ರೈತ ಮಡ್ಡೆಪ್ಪ ಪೂಜಾರಿ(40) ಆತ್ಮಹತ್ಯೆಗೆ ಶರಣಾಗಿದ್ದಾರೆ. ತೊಗರಿ ಮತ್ತು ಹತ್ತಿ ಬೆಳೆ ಕೈ ಕೊಟ್ಟ ಹಿನ್ನೆಲೆಯಲ್ಲಿ ತೀವ್ರ ಸಂಕಷ್ಟಕ್ಕೆ...

ಕರ್ನಾಟಕ ಚುನಾವಣೆ: ಅತಿ ಹೆಚ್ಚು ಮತದಾನವಾಗಿರುವ ಟಾಪ್ – 20 ಕ್ಷೇತ್ರಗಳು

2 weeks ago

ಬೆಂಗಳೂರು: ರಾಜ್ಯದ ಒಟ್ಟು 222 ಮತಕ್ಷೇತ್ರ ಚುನಾವಣೆ ಮುಕ್ತಾಯವಾಗಿದ್ದು ಕೆಲ ಕ್ಷೇತ್ರಗಳಲ್ಲಿ ಭಾರೀ ಪ್ರಮಾಣದ ಮತದಾನವಾಗಿದೆ. ಹೀಗಾಗಿ ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಮತದಾನವಾಗಿರುವ ಟಾಪ್ -20 ಕ್ಷೇತ್ರಗಳ ಮಾಹಿತಿ ಇಲ್ಲಿದೆ ವಿಜಯಪುರ ಜಿಲ್ಲೆಯ ಬಬಲೇಶ್ವರವು ಸಾಮಾನ್ಯ ವರ್ಗದ ಮತಕ್ಷೇತ್ರವಾಗಿದ್ದು...

ಭಾರೀ ಅಂತರದಿಂದ ಕಾಂಗ್ರೆಸ್ ಗೆಲುವು ಸಾಧಿಸಲಿದೆ- ಸಚಿವ ಎಂ.ಬಿ ಪಾಟೀಲ್

2 weeks ago

ವಿಜಯಪುರ: ರಾಜ್ಯ ಹಾಗೂ ವಿಜಯಪುರ ಜಿಲ್ಲೆಯೆ ಹೈ ವೋಲ್ಟೇಜ್ ಮತಕ್ಷೇತ್ರ ಬಬಲೇಶ್ವರದಲ್ಲಿ 80% ಮತದಾನವಾಗಿದೆ. ಇದೇ ಮೊದಲನೆ ಬಾರಿಗೆ ಈ ಮಟ್ಟಕ್ಕೆ ಮತದಾನವಾಗಿದ್ದು, ಕಾಂಗ್ರೆಸ್ ಭಾರಿ ಅಂತರದಿಂದ ಜಯಭೇರಿ ಬಾರಿಸಲಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಎಂ ಬಿ ಪಾಟೀಲ್ ಹೇಳಿದ್ದಾರೆ. ನನ್ನ...

ಜನನಿಬೀಡ ಪ್ರದೇಶದಲ್ಲಿದ್ದ ಕಟ್ಟಡ ಕುಸಿತ – ತಪ್ಪಿತು ಭಾರೀ ದುರಂತ

2 weeks ago

ವಿಜಯಪುರ: ಜನನಿಬೀಡ ಪ್ರದೇಶದಲ್ಲಿದ್ದ ಹಳೇ ಕಟ್ಟಡವೊಂದು ಕುಸಿದ ಪರಿಣಾಮ ಭಾರೀ ಅನಾಹುತವೊಂದು ಕೊದಲೆಳೆ ಅಂತರದಲ್ಲಿ ತಪ್ಪಿದ ಘಟನೆ ಜಿಲ್ಲೆಯ ಗಾಂಧಿಚೌಕದಲ್ಲಿ ನಡೆದಿದೆ. ಗಾಂಧಿಚೌಕದಲ್ಲಿರುವ ಮಾರ್ಕೆಟ್‍ ನ ಮೇಲ್ಛಾವಣಿ ಕುಸಿದು ಬಿದ್ದಿದೆ. ಎಲ್‍ಬಿಎಸ್ ಮಾರ್ಕೆಟ್ ಕಿರಿದಾಗಿದ್ದು, ಜನನಿಬೀಡ ಪ್ರದೇಶದಲ್ಲಿರುವ ಈ ಕಟ್ಟಡ ಹಳೆಯದಾಗಿತ್ತು....

ಬಿಎಸ್‍ವೈ ನಿವೃತ್ತಿ ಜೀವನ ಸುಖಕರವಾಗಿ 100 ವರ್ಷ ಬಾಳಲಿ- ಸಚಿವ ಎಂಬಿ ಪಾಟೀಲ್

2 weeks ago

ವಿಜಯಪುರ: ಮೇ 17ರಂದು ಪ್ರಮಾಣ ವಚನ ಸ್ವೀಕಾರ ಮಾಡುತ್ತೇನೆ ಅಂತ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ನಿಡಿರುವ ಹೇಳಿಕೆಗೆ ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ಟಾಂಗ್ ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಬಿಎಸ್‍ವೈ ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಯುವಂತೆ...