Tuesday, 26th September 2017

2 days ago

ಪ್ರೀತಿಸಿ ಮದುವೆಯಾದ ಜೋಡಿಗೆ ಗ್ರಾಮದಿಂದ ಬಹಿಷ್ಕಾರ

ಕೊಪ್ಪಳ: ಪ್ರೀತಿಸಿ ಮದುವೆಯಾದ ಜೋಡಿಗೆ ಗ್ರಾಮದಿಂದ ಬಹಿಷ್ಕಾರ ಹಾಕಿದ ಘಟನೆ ತಡವಾಗಿ ಕೊಪ್ಪಳದಲ್ಲಿ ಬೆಳಕಿಗೆ ಬಂದಿದೆ. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಡ್ಡಿರಾಂಪೂರ ನಿವಾಸಿಗಳಾದ ಪರಶುರಾಮ್ ಮತ್ತು ಸ್ವರೂಪಾರಾಣಿ ದಂಪತಿಯನ್ನ ಕಳೆದ ಎರಡು ತಿಂಗಳನಿಂದ ಗ್ರಾಮದಿಂದ ಬಹಿಷ್ಕಾರ ಹಾಕಿದ್ದಾರೆ. ಬಹಿಷ್ಕಾರ ಹಾಕಿದ್ದರಿಂದ ದಂಪತಿ ಸದ್ಯ ಗಂಗಾವತಿ ಪಟ್ಟಣದಲ್ಲಿ ವಾಸವಾಗಿದ್ದಾರೆ. ಪರಶುರಾಮ ಮತ್ತು ಸ್ವರೂಪಾರಾಣಿ ಹಲವು ವರ್ಷಗಳಿಂದ ಒಬ್ಬರನೊಬ್ಬರನ್ನು ಪ್ರೀತಿಸುತ್ತಿದ್ದರು. ಎರಡು ವರ್ಷಗಳ ಹಿಂದೆ ಇಬ್ಬರೂ ಮದುವೆಯನ್ನು ಮಾಡಿಕೊಂಡಿದ್ದಾರೆ. ಇಬ್ಬರ ಜಾತಿ ಬೇರೆ ಬೇರೆ ಎಂಬ ಕಾರಣಕ್ಕೆ, ನಿಮ್ಮನ್ನು […]

2 weeks ago

ಈ ಸಹನಟಿಯ ಎಂಟ್ರಿಯಿಂದಾಗಿ ಕಪಿಲ್ & ಗಿನ್ನಿ ಬ್ರೇಕ್ ಅಪ್!

ಮುಂಬೈ: ಕಾಮಿಡಿಯನ್ ಕಪಿಲ್ ಶರ್ಮಾ ಮತ್ತು ಗೆಳತಿ ಗಿನ್ನಿ ಚಾತ್ರಥ್ ನಡುವೆ ಬ್ರೇಕ್ ಆಗಿದೆ ಎಂದು ಪತ್ರಿಕೆಯೊಂದು ಪ್ರಕಟಿಸಿದೆ. ಕಪಿಲ್ ಶರ್ಮಾ ಶೋ ಮೂಲಕ ಜನರ ಮನಸೆಳದಿದ್ದ ಕಪಿಲ್ ಜೀವನದಲ್ಲಿ ಕೆಲವೊಂದು ದಿನಗಳಿಂದ ಒಂದಾದ ನಂತರ ತೊಂದರೆಗಳು ಬರತೊಡಗಿವೆ. ಇತ್ತೀಚಿನ ಕೆಲವು ದಿನಗಳಲ್ಲಿ ಕಪಿಲ್ ಮತ್ತು ಗಿನ್ನಿ ನಡುವೆ ಎಲ್ಲವೂ ಸರಿಯಿಲ್ಲ. ಇಬ್ಬರೂ ಬೇರೆಯಾಗಲು ತೀರ್ಮಾನಿಸಿದ್ದಾರೆ...

ಪ್ರೀತಿಗೆ ಕಂಟಕವಾಯ್ತು ಜಾತಿ- ದೂರವಾದ ಪ್ರಿಯತಮೆಗಾಗಿ ಯುವಕನ ಹುಡುಕಾಟ

3 weeks ago

ಬೆಂಗಳೂರು: ಪ್ರೀತಿಗೆ ಕಂಟಕವಾಯ್ತು ಜಾತಿ. ಪೋಷಕರಿಗೆ ಮರ್ಯಾದೆ ಪ್ರಶ್ನೆ. ಪ್ರೇಮಿಗಳಿಗೆ ತಮ್ಮ ಪ್ರೀತಿಯ ಉಳಿವಿನ ಪ್ರಶ್ನೆ. ದಿಕ್ಕು ಕಾಣದ ಪ್ರೇಮಿ ಈಗ ಪ್ರಿಯತಮೆಯ ಹುಡುಕಾಟದಲ್ಲಿದ್ದಾರೆ. ಮೂರು ವರ್ಷಗಳಿಂದ 23 ವರ್ಷದ ಕುಮಾರ್ ಹಾಗೂ 18 ವರ್ಷದ ಕಲ್ಪನಾ ಲಕ್ಷ್ಮಿದೇವಿ ಪರಸ್ಪರ ಲವ್...

ಈಕೆಯದ್ದು ಸರ್ಕಾರಿ ವೃತ್ತಿ, ಪ್ರೀತಿ ಹೆಸ್ರಲ್ಲಿ ಚೀಟ್ ಮಾಡೋದು ಪ್ರವೃತ್ತಿ!

4 weeks ago

ತುಮಕೂರು: ಫೇಸ್‍ಬುಕ್‍ನಲ್ಲಿ ಶ್ರೀಮಂತ ಯುವಕರನ್ನು ಪರಿಚಯ ಮಾಡಿಕೊಂಡು ಪ್ರೀತಿಯ ನಾಟಕವಾಡಿ ಹಣ ವಸೂಲಿ ಮಾಡುತ್ತಿದ್ದ ಬೆಸ್ಕಾಂ ನ ಮಹಿಳಾ ಎಫ್‍ಡಿಎ ಯನ್ನು ತುಮಕೂರು ಜಿಲ್ಲೆ ಕೊರಟಗೆರೆ ಪೊಲೀಸರು ಬಂಧಿಸಿದ್ದಾರೆ. ಕೊರಟಗೆರೆ ತಾಲೂಕಿನ ದೊಗ್ಗನಳ್ಳಿಯ ನಿವಾಸಿ ದೊಡ್ಡಮಣಿ ಬಂಧಿತ ಆರೋಪಿ. ದೊಡ್ಡಮಣಿ ಕಳೆದ...

ಗೋವಾ ಹುಡ್ಗಿ ಜೊತೆ ಕೊಪ್ಪಳದ ಹುಡ್ಗನಿಗೆ ಜಾತ್ರೆಯಲ್ಲಿ ಲವ್ವಾಯ್ತು- ಸುಂದರ ಪ್ರೇಮ್ ಕಹಾನಿಯಲ್ಲೊಬ್ಬ ವಿಲನ್

1 month ago

ಕೊಪ್ಪಳ: ವರ್ಷಕ್ಕೊಮ್ಮೆ ಜಾತ್ರೆಗೆ ಬರುವ ಗೋವಾ ಯುವತಿ ಹಾಗು ಯುವಕನ ನಡುವೆ ಪ್ರೇಮಾಂಕುರವಾಗಿದ್ದು, ಇಬ್ಬರೂ ಒಬ್ಬರನೊಬ್ಬರನ್ನು ಮೆಚ್ಚಿಕೊಂಡು ಮದುವೆಯನ್ನು ಸಹ ಆಗಿದ್ದಾರೆ. ಆದರೆ ಸದ್ಯ ಈ ಸುಂದರ ಪ್ರೇಮ ಕಹಾನಿಯಲ್ಲಿ ಯುವತಿ ಪೋಷಕರೇ ವಿಲನ್ ಗಳಾಗಿದ್ದಾರೆ. ಗಂಗಾವತಿ ತಾಲೂಕಿನ ಡಣಾಪುರ ಗ್ರಾಮದ...

ಎಂಗೇಜ್‍ಮೆಂಟ್ ಆದ್ರೂ ತನ್ನ ಜೊತೆ ಎಂಗೇಜ್ ಆಗೆಂದ ಹುಡ್ಗ-ಮುಂದೆ ಏನ್ ಮಾಡ್ದಾ ಗೊತ್ತಾ?

2 months ago

ತುಮಕೂರು: ಜಿಲ್ಲೆಯ ಶಿರಾ ಪಟ್ಟಣದಲ್ಲಿ ಪ್ರೀತಿಸಿದ ಯುವತಿಗೆ ಬೇರೊಬ್ಬನ ಜೊತೆ ಎಂಗೇಜ್‍ಮೆಂಟ್ ಆಗಿದ್ದರಿಂದ ರೊಚ್ಚಿಗೆದ್ದ ಪಾಗಲ್ ಪ್ರೇಮಿಯೊಬ್ಬ ತಮ್ಮಿಬ್ಬರ ಪ್ರೇಮ ಸಲ್ಲಾಪದ ದೃಶ್ಯಾವಳಿಯನ್ನು ಯೂಟ್ಯೂಬ್ ಗೆ ಅಪ್ಲೋಡ್ ಮಾಡಿದ್ದಾನೆ. ಮಂಜುನಾಥ್ ಎಂಬಾತನೇ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಯುವಕ. ಮಂಜುನಾಥ್ ಯುವತಿಯೋರ್ವಳನ್ನು...

ಅನುಷ್ಕಾ ಜೊತೆ ಮದುವೆ ಆಗ್ತೀರಾ ಪ್ರಶ್ನೆಗೆ ಪ್ರಭಾಸ್ ಹೀಗಂದ್ರು

2 months ago

ಹೈದರಾಬಾದ್: ಬಾಹುಬಲಿ ಸಿನಿಮಾ ಬಿಡುಗಡೆಯಾದ ಬಳಿಕ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ನಡುವೆ ಪ್ರೀತಿಯಿದ್ದು, ಇಬ್ಬರು ಸ್ಟಾರ್‍ಗಳು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿಗಳಿಗೆ ಪ್ರಭಾಸ್ ಕೊನೆಗೂ ತಮ್ಮ ಮೌನ ಮುರಿದಿದ್ದಾರೆ. ಸದ್ಯಕ್ಕೆ ನಾನು ಮದುವೆಯಾಗುತ್ತಿಲ್ಲ, (ಮಹಿಳಾ) ಅಭಿಮಾನಿಗಳು ಬೇಜಾರು ಮಾಡಿಕೊಳ್ಳಬೇಕಿಲ್ಲ. ನನ್ನ...

ವಿವಾಹಿತನ ಪ್ರೀತಿ ಮಾಡಿದ ತಪ್ಪಿಗೆ ಯುವತಿ ಆತ್ಮಹತ್ಯೆ

2 months ago

ಶಿವಮೊಗ್ಗ: ವಿವಾಹಿತನ ಪ್ರೀತಿ ಮಾಡಿದ ತಪ್ಪಿಗೆ ಯುವತಿ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಶಿಕಾರಿಪುರದಲ್ಲಿ ನಡೆದಿದೆ. ಮೂಲತಃ ದಾವಣಗೆರೆಯ ಸಂಧ್ಯಾ ಆತ್ಮಹತ್ಯೆ ಮಾಡಿಕೊಂಡ ಯುವತಿ. ಈಕೆ ಶಿವಮೊಗ್ಗದ ನಂಜಪ್ಪ ಆಸ್ಪತ್ರೆಯಲ್ಲಿ ನರ್ಸಿಂಗ್ ಓದುತ್ತಿದ್ದಳು. ಶಿಕಾರಿಪುರದಲ್ಲಿದ್ದ ಸಂಬಂಧಿಗಳ ಮನೆಗೆ ಹೋದಾಗ ಪರಿಚಯ...