Sunday, 24th June 2018

Recent News

1 week ago

ಮಗನ ಹತೈಗೈದ ಉಗ್ರರನ್ನು 72 ಗಂಟೆಯೊಳಗೆ ಕೊಲ್ಲಿ: ಮೃತ ಸೈನಿಕನ ತಂದೆ ಆಗ್ರಹ

ಶ್ರೀನಗರ: ಮಗನನ್ನು ಅಪಹರಿಸಿ ಕೊಂದ ಉಗ್ರರನ್ನು 72ಗಂಟೆಯೊಳಗೆ ಹತ್ಯೆ ಮಾಡಿ ಎಂದು ಮೃತ ಯೋಧ ಔರಂಗಜೇಬ್‍ನ ತಂದೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಯೋಧನ ಸಾವಿಗೆ ಕಾರಣರಾದವರನ್ನು ಹಿಡಿದು ಶಿಕ್ಷೆಗೆ ಗುರಿಪಡಿಸಲು ಸರ್ಕಾರ ತಡಮಾಡುತ್ತಿದೆ ಯಾಕೆ? 72 ಗಂಟೆಯೊಳಗೆ ಸರ್ಕಾರ ಯಾವ ನಿರ್ಧಾರವನ್ನು ಪ್ರಕಟಿಸದಿದ್ದಲ್ಲಿ ನನ್ನ ಮಗನ ಸಾವಿಗೆ ಕಾರಣರಾದವರ ವಿರುದ್ಧ ನಾನೇ ಸೇಡು ತೀರಿಸಿಕೊಳ್ಳುತ್ತೇನೆ ಎಂದು ನಿವೃತ್ತ ಯೋಧ ಮೃತ ಯೋಧನ ತಂದೆ ಹೇಳಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಯೋಧರ ಸಾವಲ್ಲಿ ರಾಜಕೀಯ ಮಾಡುವವರ ವಿರುದ್ಧ ಹರಿಹಾಯ್ದಿರುವ […]

1 month ago

ರೈಲಿನಡಿ ಸಿಲುಕುತ್ತಿದ್ದ ಬಾಲಕಿಯನ್ನ ರಕ್ಷಿಸಿದ್ರು ಭಾರತೀಯ ಯೋಧ – ವಿಡಿಯೋ ವೈರಲ್

ಮುಂಬೈ: ರೈಲಿನಡಿ ಸಿಲುಕುತ್ತಿದ್ದ ಬಾಲಕಿಯನ್ನು ತನ್ನ ಪ್ರಾಣವನ್ನು ಲೆಕ್ಕಿಸದೆ ಭಾರತೀಯ ಯೋಧರೊಬ್ಬರು ರಕ್ಷಣೆ ಮಾಡಿರುವ ಘಟನೆ ಮುಂಬೈನ ಮಹಾಲಕ್ಷ್ಮಿ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಮಹಾರಾಷ್ಟ್ರ ರಕ್ಷಣಾ ಪಡೆಯ ಸಚಿನ್ ಪೋಲ್ ಎಂಬವರೇ ಬಾಲಕಿಯನ್ನು ರಕ್ಷಿಸಿದ ಯೋಧ. ಇವರು ಐದು ವರ್ಷದ ಬಾಲಕಿ ರೈಲಿನ ಅಡಿಯಲ್ಲಿ ಸಿಲುಕಿದಾಗ ಓಡಿ ಹೋಗಿ ಪ್ರಾಣಾಪಾದಿಂದ ಕಾಪಾಡಿದ್ದಾರೆ. ಘಟನೆಯ ವಿವರ: ಶುಕ್ರವಾರ...

ತನ್ನ ಪ್ರಾಣ ಲೆಕ್ಕಿಸದೇ ಭಯೋತ್ಪಾದಕರ ವಿರುದ್ಧ ಹೋರಾಡಿ ಬಂದ ಯೋಧನಿಗೆ ತವರೂರಲ್ಲಿ ಸಿಕ್ತು ಅದ್ಧೂರಿ ಸ್ವಾಗತ

3 months ago

ಮಂಗಳೂರು: ಭಯೋತ್ಪಾದಕರ ದಾಳಿಯಲ್ಲಿ ಉಗ್ರರ ವಿರುದ್ಧ ಹೋರಾಡಿ ಬಂದ ಸಿಆರ್‍ಪಿಎಫ್ ಯೋಧರೊಬ್ಬರಿಗೆ ತವರೂರಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ. ಫೆಬ್ರವರಿ ತಿಂಗಳಲ್ಲಿ ಜಮ್ಮು ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಉಗ್ರರನ್ನು ಹೊಡೆದುರುಳಿಸಿದ್ದ ಸೇನಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಸಿಆರ್ ಪಿಎಫ್ ಯೋಧ, ದಕ್ಷಿಣ ಕನ್ನಡ...

ಹಗ್ಗದಿಂದ ಬಿಗಿದು ಚಾಕುವಿನಿಂದ ಕತ್ತು ಕೊಯ್ದು ಯೋಧರಿಂದಲೇ ಯೋಧನ ಕೊಲೆ!

3 months ago

ಬೆಂಗಳೂರು: ಯೋಧರೊಬ್ಬರನ್ನು ಹಗ್ಗದಿಂದ ಕತ್ತು ಬಿಗಿದು ನಂತರ ಚಾಕುವಿನಿಂದ ಕತ್ತು ಕೊಯ್ದು ಇಬ್ಬರು ಯೋಧರೇ ಕೊಲೆ ಮಾಡಿದ ಘಟನೆ ಬೆಂಗಳೂರಿನ ವಿವೇಕನಗರದ ಎಎಸ್‍ಸಿ ಸೆಂಟರ್ ಮತ್ತು ಕಾಲೇಜು ಕ್ಯಾಂಪಸ್ ನಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಪಂಕಜ್ ಕೊಲೆಯಾದ ಯೋಧ....

ಎದೆ ಭಾಗಕ್ಕೆ ಗನ್‍ನಿಂದ ಶೂಟ್ ಮಾಡಿಕೊಂಡು ನಿವೃತ್ತ ಯೋಧ ಆತ್ಮಹತ್ಯೆ!

3 months ago

ಧಾರವಾಡ: ನಿವೃತ್ತ ಯೋಧರೊಬ್ಬರು ಗನ್‍ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡದಲ್ಲಿ ನಡೆದಿದೆ. ನಗರದ ಮೋರೆ ಪ್ಲಾಟ್‍ನ ಚನ್ನಮಲ್ಲಯ್ಯ(43) ಹಿರೇಮಠ ಗನ್‍ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡ ನಿವೃತ್ತ ಯೋಧ. ಇವರು ಕಳೆದ ಎರಡು ದಿನಗಳಿಂದ ಮಾನಸಿಕ ಖಿನ್ನತೆಯಾದವರಂತೆ ವರ್ತಿಸುತ್ತಿದ್ದರು...

ಬರೋಬ್ಬರಿ 9 ಗುಂಡುಗಳು ಹೊಕ್ಕಿ ಕೋಮಾಗೆ ಜಾರಿದ್ದ ಯೋಧ ಮತ್ತೆ ಕೆಲಸಕ್ಕೆ ಹಾಜರ್!

3 months ago

ನವದೆಹಲಿ: ಜಮ್ಮು-ಕಾಶ್ಮೀರದ ಬಂಡಿಪೋರ್ ಎನ್‍ಕೌಂಟರ್ ವೇಳೆ ಒಂಭತ್ತು ಗುಂಡುಗಳು ತಾಗಿ ಕೋಮಾ ಸ್ಥಿತಿಗೆ ಜಾರಿದ್ದ ಸಿಆರ್‍ಪಿಎಫ್ ಕಮಾಂಡರ್ ಚೇತನ್ ಕುಮಾರ್ ಚೀತಾ ಅವರು ಸಂಪೂರ್ಣವಾಗಿ ಗುಣಮುಖರಾಗಿ ಮತ್ತೆ ಕೆಲಸಕ್ಕೆ ಹಾಜರಾಗಿದ್ದಾರೆ. ಕಳೆದ ವರ್ಷ ಫೆಬ್ರವರಿ 14ರಂದು ಜಮ್ಮು-ಕಾಶ್ಮೀರದ ಬಂಡಿಪೋರಾನಲ್ಲಿ ಉಗ್ರದ ವಿರುದ್ಧದ...

ಛತ್ತೀಸ್‍ಗಢ ನಕ್ಸಲ್ ದಾಳಿ – ಹಾಸನ ಮೂಲದ ಸಿಆರ್‌ಪಿಎಫ್ ಯೋಧ ಹುತಾತ್ಮ

3 months ago

ಹಾಸನ: ಛತ್ತೀಸ್‍ಗಢದ ಸುಕ್ಮಾ ಪ್ರದೇಶದಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ನಕ್ಸಲರು ನಡೆಸಿದ ದಾಳಿಯಲ್ಲಿ ಹಾಸನ ಮೂಲದ ಯೋಧ ವೀರ ಮರಣವನ್ನಪ್ಪಿದ್ದಾರೆ. ಜಿಲ್ಲೆಯ ಅರಕಲಗೂಡು ತಾಲೂಕಿನ ಹರದೂರು ಗ್ರಾಮದ ಎಚ್ ಎಸ್ ಚಂದ್ರ (29) ಹುತಾತ್ಮರಾದ ಯೋಧ. ಯೋಧನ ಸಾವಿನ ಸುದ್ದಿ ತಿಳಿದ ಕುಟುಂಬದಲ್ಲಿ ಮೌನ...

ರಿವಾಲ್ವರ್ ನಿಂದ ಶೂಟ್ ಮಾಡಿಕೊಂಡು ಬೆಂಗ್ಳೂರಿನಲ್ಲಿ ನಿವೃತ್ತ ಯೋಧ ಆತ್ಮಹತ್ಯೆ

4 months ago

ಬೆಂಗಳೂರು: ಖಿನ್ನತೆಗೆ ಒಳಗಾಗಿದ್ದ ನಿವೃತ್ತ ಯೋಧರೊಬ್ಬರು ತನ್ನ ಬಳಿಯಿದ್ದ ರಿವಾಲ್ವರ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಹೊರಮಾವಿನಲ್ಲಿ ನಡೆದಿದೆ. ಇಲ್ಲಿನ ಎಲೈಟ್ ಅಪಾರ್ಟ್‍ಮೆಂಟ್ ನಿವಾಸಿಯಾಗಿದ್ದ ಅನಿಲ್ ಅಹುಜಾ ಎಂಬವರು ಕಳೆದ ಕೆಲ ದಿನಗಳಿಂದ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ....