Monday, 19th March 2018

Recent News

2 days ago

ಸರ್ಕಲ್‍ಗೆ ಮೋದಿ ಹೆಸರು ಇಟ್ಟಿದ್ದಕ್ಕೆ ತಕರಾರು- 70ರ ವ್ಯಕ್ತಿಯ ಶಿರಚ್ಛೇದನ

ಪಾಟ್ನಾ: 70 ವರ್ಷದ ವ್ಯಕ್ತಿಯ ಶಿರಚ್ಛೇದನ ಮಾಡಿರುವ ಆಘಾತಕಾರಿ ಘಟನೆ ಬಿಹಾರದಲ್ಲಿ ನಡೆದಿದೆ. ನಗರದ ಚೌಕಕ್ಕೆ ನರೇಂದ್ರ ಮೋದಿ ಚೌಕ್ ಎಂದು ಹೆಸರಿಟ್ಟ ಕಾರಣ ಕೊಲೆ ಮಾಡಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಬಿಜೆಪಿ ಬೆಂಬಲಿಗರಾಗಿದ್ದ ರಾಮಚಂದ್ರ ಯಾದವ್ ಮೃತ ದುರ್ದೈವಿ. ಇಲ್ಲಿನ ದರ್ಭಂಗಾ ಜಿಲ್ಲೆಯಲ್ಲಿ ಗುರುವಾರದಂದು 40-50 ಜನರ ಗುಂಪು ಯಾದವ್ ಅವರ ಮೇಲೆ ದಾಳಿ ಮಾಡಿ ಕೊಲೆ ಮಾಡಿದ್ದಾರೆ. ಸುಮಾರು 25-30 ಬೈಕ್‍ಗಳಲ್ಲಿ ಬಂದಿದ್ದ ತಂಡ ಹಾಕಿ ಸ್ಟಿಕ್ ಹಾಗೂ ಕತ್ತಿಗಳಿಂದ ದಾಳಿ ನಡೆಸಿದ್ದಾರೆ ಎಂದು […]

3 days ago

ಮೊಯ್ಲಿ ಅವರು ಸುಮ್ ಸುಮ್ನೆ ಏನೂ ಹೇಳಲ್ಲ, ಸಾಕಷ್ಟು ಯೋಚಿಸಿ ಅಳೆದು ತೂಗಿ ಮಾತಾಡ್ತಾರೆ- ಪ್ರತಾಪ್ ಸಿಂಹ

ನವದೆಹಲಿ: ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಅವರು ಕಾಂಗ್ರೆಸ್ ಪಕ್ಷದ ವಿರುದ್ಧವೇ ಟ್ವೀಟ್ ಮಾಡಿರುವುದು ಇದೀಗ ಸಾಕಷ್ಟು ಚರ್ಚೆಗೆ ಒಳಗಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ಪ್ರತಾಪ್ ಸಿಂಹ ಅವರು ಪ್ರತಿಕ್ರಿಯಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹಿರಿಯ ನಾಯಕ ಮೊಯ್ಲಿ ಅವರು ಸುಮ್ ಸುಮ್ನೆ ಏನೂ ಮಾತನಾಡುವುದಿಲ್ಲ. ಸಾಕಷ್ಟು ಯೋಚಿಸಿ ಅಳೆದು...

ರೋಹಿಣಿ ಸಿಂಧೂರಿ ವಿಚಾರವನ್ನು ಕೇಳಿದ್ದಕ್ಕೆ ಹಾದಿಬೀದಿಯಲ್ಲಿ ಚರ್ಚೆ ಮಾಡೋಕ್ಕಾಗಲ್ಲ ಎಂದ ಸಿಎಂ

1 week ago

ಮೈಸೂರು: ಆಡಳಿತಾತ್ಮಕ ವಿಚಾರವನ್ನ ಬೀದಿಯಲ್ಲಿ ನಿಂತು ಮಾತನಾಡೋಲ್ಲ ಎಂದು ಹಾಸನ ಡಿಸಿ ರೋಹಿಣಿ ಸಿಂಧೂರಿ ವರ್ಗಾವಣೆ ವಿಚಾರದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ ಆಗಿ ಪ್ರತಿಕ್ರಿಯಿಸಿದ್ದಾರೆ. ನಗರದ ಪಿರಿಯಾಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೆರವು ಮಾಡಿಸುತ್ತೇವೆ. ವರ್ಗಾವಣೆಗೆ ತಡೆಯಾಜ್ಞೆ ತಂದಿದ್ದರಿಂದ ನಮಗೆ...

ಸಿದ್ದರಾಮಯ್ಯ ತಾಯಿ ಸೋನಿಯಾಗಾಂಧಿ, ಸಿಎಂ ದೇಹದಲ್ಲಿ ಹರಿಯುತ್ತಿರೋದು ಟಿಪ್ಪು ರಕ್ತ: ಈಶ್ವರಪ್ಪ

2 weeks ago

ಉಡುಪಿ: ತಾಯಿ ಚಾಮುಂಡಿ ಮೇಲೆ ಆಣೆ ಮಾಡಿ, ಪ್ರಧಾನಿ ಮೋದಿಯನ್ನು ಟೀಕಿಸುವ ಬದಲು ನೋಡಿ ಕಲಿಯಿರಿ ಅಂತ ಬಿಜೆಪಿ ನಾಯಕ ಈಶ್ವರಪ್ಪ ವಾಗ್ದಾಳಿ ನಡೆಸಿದರು. ಜಿಲ್ಲೆಯ ಬೈಂದೂರಲ್ಲಿ ನಡೆದ ಜನ ಸುರಕ್ಷಾ ಯಾತ್ರೆಯಲ್ಲಿ ಭಾಗಿಯಾದ ಅವರು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು....

ಮುಂದಿನ ಟಾರ್ಗೆಟ್ ಕರ್ನಾಟಕ: ಮೋದಿ, ಶಾ ಕರ್ನಾಟಕದ ಬಗ್ಗೆ ಹೇಳಿದ್ದು ಏನು?

2 weeks ago

ನವದೆಹಲಿ: ನಿನ್ನೆಯ ಹೋಳಿ ಹಬ್ಬಕ್ಕೆ ಹಲವು ಬಣ್ಣಗಳಿತ್ತು. ಇವತ್ತು ಒಂದೇ ಬಣ್ಣ ಅದೇ ಕೇಸರಿ. ಮುಳುಗುವ ಸೂರ್ಯನೂ ಕೇಸರಿಯಾಗಿದ್ದಾನೆ ಎಂದು ವ್ಯಾಖ್ಯಾನಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಈಶಾನ್ಯ ರಾಜ್ಯಗಳ ಗೆಲುವನ್ನು ಬಣ್ಣಿಸಿದ್ದಾರೆ. ಸಂಜೆ ದೆಹಲಿಯ ಪ್ರಧಾನ ಕಚೇರಿಯಲ್ಲಿ ಪ್ರಧಾನಿ ಮೋದಿ...

ಕಮ್ಯುನಿಸ್ಟ್ ಕೋಟೆಯಲ್ಲಿ ಅರಳಿತು ಕಮಲ- ನಾಗಾಲ್ಯಾಂಡ್‍ನಲ್ಲಿ ಬಿಜೆಪಿ ಮೈತ್ರಿ ಕಮಾಲ್ – ಮೇಘಾಲಯದಲ್ಲಿ `ಹಸ್ತ’ವ್ಯಸ್ತ

2 weeks ago

ನವದೆಹಲಿ: ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣಕ್ಕೆ ದಂಡಯಾತ್ರೆ ಹೊರಟಿರೋ ಪ್ರಧಾನಿ ನರೇಂದ್ರ ಮೋದಿ, ಈಗ ಎಡಪಕ್ಷಗಳ ಬೆನ್ನುಮೂಳೆ ಕೂಡ ಮುರಿದಿದ್ದಾರೆ. ತ್ರಿಪುರಾದಲ್ಲಿ 25 ವರ್ಷಗಳ ಕಮ್ಯುನಿಸ್ಟರ ಪಾರುಪತ್ಯ ಅಂತ್ಯಗೊಂಡಿದ್ದು, ಎಡಪಕ್ಷಗಳ ಭದ್ರಕೋಟೆಯಲ್ಲಿ ಮೊದಲ ಬಾರಿಗೆ ಕಮಲ ಅರಳಿದೆ. 65 ವರ್ಷಗಳ ರಾಜಕೀಯ...

ಸಾಮಾನ್ಯ ಗೆಲುವಲ್ಲ, ಕಾರ್ಯಕರ್ತರಿಂದ ಶೂನ್ಯದಿಂದ ಶಿಖರದವರೆಗೆ ಬೆಳೆದಿದ್ದೇವೆ: ಮೋದಿ

2 weeks ago

ನವದೆಹಲಿ: ಈಶಾನ್ಯ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಸರಣಿ ಟ್ವೀಟ್ ಮಾಡಿ ಸಂತಸವನ್ನು ಹಂಚಿಕೊಡಿದ್ದಾರೆ. ಬಿಜೆಪಿಯ ಈ ಭರ್ಜರಿ ಗೆಲುವಿಗೆ ಸಾಥ್ ನೀಡಿದ ಮೇಘಾಲಯಾ, ನಾಗಲ್ಯಾಂಡ್ ಮತ್ತು ತ್ರಿಪುರಾ ರಾಜ್ಯಗಳ ಜನರಿಗೆ ನಾನು...

ತ್ರಿಪುರಾ ಗೆಲುವು : ಯೋಗಿ ಆದಿತ್ಯನಾಥ್‍ಗೆ ಬಹುಪರಾಕ್ ಎಂದ ಜನ!

2 weeks ago

ಅಗರ್ತಲಾ: ಈ ಸಾಲಿನ ತ್ರಿಪುರ ವಿಧಾನಸಭೆ ಚುನಾವಣೆಯ ಫಲಿತಾಂಶ ತೀವ್ರ ಕುತೂಹಲ ಮೂಡಿಸಿದ್ದು, ಆಡಳಿತಾರೂಢ ಸಿಪಿಎಂ ಪಕ್ಷಕ್ಕೆ ಭಾರಿ ಮುಖಭಂಗವಾಗಿದೆ. ಬಿಜೆಪಿ ಮೈತ್ರಿಕೂಟ ಅಭೂತಪೂರ್ವ ಮುನ್ನಡೆಯನ್ನ ಪಡೆದು, ಭರ್ಜರಿ ಜಯಭೇರಿ ಬಾರಿಸಿದೆ. ಬಿಜೆಪಿಯ ಈ ಭರ್ಜರಿ ಗೆಲುವಿಗೆ ಉತ್ತರ ಪ್ರದೇಶದ ಸಿಎಂ...