Monday, 22nd January 2018

9 hours ago

ಜ.25ರ ಬಂದ್ ಅವಶ್ಯಕತೆಯಿಲ್ಲ, ಮೈಸೂರ್ ಗೂ ಮಹದಾಯಿಗೂ ಏನ್ ಸಂಬಂಧ- ಬಿಎಸ್‍ವೈ ಪ್ರಶ್ನೆ

ಮೈಸೂರು: ಮಹದಾಯಿ ವಿಚಾರದಲ್ಲಿ ಕನ್ನಡ ಪರ ಸಂಘಟನೆಗಳು ಜನವರಿ 25 ರಂದು ನಡೆಸುತ್ತಿರುವ ಕರ್ನಾಟಕ ಬಂದ್ ಅವಶ್ಯಕತೆ ಇಲ್ಲ. ಮೈಸೂರು ಭಾಗಕ್ಕೂ ಮಹಾದಾಯಿ ಬಂದ್ ಗೂ ಏನ್ ಸಂಬಂಧ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಪ್ರಶ್ನಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಜನವರಿ 25 ರಂದು ಮೈಸೂರಿನಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆ ಮುಕ್ತಾಯವಾಗುತ್ತದೆ. ಅಂದು ಮೈಸೂರಿನಲ್ಲಿ ಬಂದ್ ನಡೆದರೆ ಯಾತ್ರೆ ಯಶಸ್ವಿ ಕಷ್ಟವಾಗಬಹುದು. ಈ ಹಿನ್ನೆಲೆಯಲ್ಲಿ ಬಿಎಸ್ ವೈ ಮೈಸೂರು ಭಾಗದಲ್ಲಿನ ಬಂದ್ ಔಚಿತ್ಯವನ್ನೇ ಪ್ರಶ್ನೆ ಮಾಡಿಬಿಟ್ಟರು […]

15 hours ago

ದೂರು ನೀಡಲು ಹೋದ ವಕೀಲನನ್ನೇ ಪೊಲೀಸರು ಬಂಧಿಸಿದ್ರು- ಬಿಜೆಪಿಯಿಂದ ಅಹೋರಾತ್ರಿ ಧರಣಿ

ಮೈಸೂರು: ದೂರು ನೀಡಲು ಹೋದ ವಕೀಲನನ್ನು ಬಂಧಿಸಿದ್ದನ್ನು ಖಂಡಿಸಿ ಮೈಸೂರಿನ ನಜರ್‍ಬಾದ್ ಠಾಣೆ ಬಳಿ ಬಿಜೆಪಿ ರಾತ್ರೋರಾತ್ರಿ ಪ್ರತಿಭಟನೆ ನಡೆಸಿತು. ನಜರ್‍ಬಾದ್ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದ್ದ ವಕೀಲ, ನಗರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಗೋಕುಲ್ ಗೋವರ್ಧನ್‍ನನ್ನು ಪೊಲೀಸರು ಬಂಧಿಸಿದ್ದರು. ಮುಡಾ ಖಾಲಿ ನಿವೇಶನ ಸಂಬಂಧ ಗೋಕುಲ್ ದೂರು ನೀಡಲು ತೆರಳಿದ್ದಾಗ ಇನ್ಸ್...

ಜೆಡಿಎಸ್‍ಗೆ ಮತ ಹಾಕಿ ಕಾಂಗ್ರೆಸ್ ಸೋಲಿಸಿದ ಪ್ರತಾಪ್ ಸಿಂಹ

3 days ago

ಮೈಸೂರು: ಜಿಲ್ಲೆಯ ಹುಣಸೂರು ನಗರಸಭೆ ಜೆಡಿಎಸ್ ತೆಕ್ಕೆಗೆ ಸೇರಿದ್ದು, ಕಾಂಗ್ರೆಸ್‍ನಿಂದ ಜೆಡಿಎಸ್‍ಗೆ ವಲಸೆ ಹೋಗಿದ್ದ ಶಿವಕುಮಾರ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಸಂಸದ ಪ್ರತಾಪ್ ಸಿಂಹ ಅವರು ಜೆಡಿಎಸ್ ಬೆಂಬಲಿತ ಅಭ್ಯರ್ಥಿಯ ಪರವಾಗಿ ಮತ ಚಲಾಯಿಸಿ ಗೆಲುವಿಗೆ ಕಾರಣರಾದರು. ನಗರಸಭೆ ಸಭಾಂಗಣದಲ್ಲಿ ಹಿಂದಿನ ಅಧ್ಯಕ್ಷ...

10 ಕ್ಕೂ ಹೆಚ್ಚು ತಲೆಬುರುಡೆಗಳು ಪ್ರತ್ಯಕ್ಷ- ಬೆಚ್ಚಿ ಬಿದ್ದ ಮೈಸೂರು ಜನ

3 days ago

ಮೈಸೂರು: ಮೈಸೂರಿನ ವಿಜಯನಗರದ ಎರಡನೇ ಹಂತದ ಮುಖ್ಯ ರಸ್ತೆಯಲ್ಲಿ 10 ಕ್ಕೂ ಹೆಚ್ಚು ತಲೆ ಬುರುಡೆಗಳು ಪ್ರತ್ಯಕ್ಷವಾಗಿವೆ. ಇದರಿಂದ ನಗರದ ಜನರು ಭಯಗೊಂಡಿದ್ದಾರೆ. ರಸ್ತೆ ಬದಿ ಕಸ ಹಾಕುವ ಜಾಗದಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ತಲೆ ಬುರುಡೆಗಳನ್ನು ಇಲ್ಲಿ ಎಸೆಯಲಾಗಿದೆ. ಮಾಟ...

ಮೈಸೂರು ವಿವಿಯಿಂದ ಸಿಎಂ ಗೆ ಗೌರವ ಡಾಕ್ಟರೇಟ್ ನೀಡುವಂತೆ ಶಿಫಾರಸ್ಸು

3 days ago

ಮೈಸೂರು: ಸಿಎಂ ಸಿದ್ದರಾಮಯ್ಯ ಅವರಿಗೆ ಮೈಸೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ನೀಡುವಂತೆ ವಿವಿಯ ಸಿಂಡಿಕೇಟ್ ಸದಸ್ಯರೊಬ್ಬರು ಶಿಫಾರಸ್ಸು ಮಾಡಿದ್ದಾರೆ. ವಿವಿಯ ಸಿಂಡಿಕೇಟ್ ಸದಸ್ಯ ಎಂಎಸ್‍ಎಸ್ ಕುಮಾರ್ ಎಂಬವರು ಮೈಸೂರು ವಿವಿಯ ಕುಲಪತಿಗಳಿಗೆ ಈ ಕುರಿತು ಪತ್ರ ಬರೆದಿದ್ದಾರೆ. 2018ನೇ ಸಾಲಿನ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ...

ವೇಲ್ ನಲ್ಲಿ ಮುಖ ಮುಚ್ಕೊಂಡು ಬೆಂಕಿ ಹಾಕ್ತಾನೆ- ಮೈಸೂರಿನಲ್ಲೊಬ್ಬ ವಿಚಿತ್ರ ವ್ಯಕ್ತಿ

5 days ago

ಮೈಸೂರು: ನಗರದಲ್ಲೊಬ್ಬ ಆಗುಂತಕನೊಬ್ಬ ತನ್ನ ಮುಖವನ್ನು ವೇಲ್‍ನಲ್ಲಿ ಮುಚ್ಚಿಕೊಂಡು ಬಂದು ಅದ್ವಾಯ ಫಿಲ್ಮ್ ಇನ್ಸಿಟ್ಯೂಟ್ ಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ಮೈಸೂರಿನ ಟಿ.ಕೆ.ಲೇಔಟ್‍ನಲ್ಲಿರುವ ಅದ್ವಾಯ ಇನ್ಸಿಟ್ಯೂಟ್ ಕಚೇರಿಯ ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ಈ ಎಲ್ಲ ದೃಶ್ಯಾವಳಿಗಳು ಕಚೇರಿಯ ಸಿಸಿಟಿವಿಯಲ್ಲಿ ಸೆರೆಯಾಗಿವೆ....

‘ವೆನಿಲ್ಲಾ’ ಟ್ರೇಲರ್ ನೋಡಿ ಹೊಸ ನಟ-ನಟಿಯರಿಗೆ ಕಿವಿಮಾತು ಹೇಳಿದ ದರ್ಶನ್

5 days ago

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮಂಗಳವಾರ ಸಂಜೆ ಚಾಲೆಂಜಿಂಗ್ ಸ್ಟಾರ್ ದರ್ಶನ್ `ವೆನಿಲ್ಲಾ’ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದರು. ಟ್ರೇಲರ್ ವೀಕ್ಷಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್, ವೆನಿಲಾ ಚಿತ್ರ ತಂಡದ ಶ್ರಮವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ನನಗೆ ಮೊದಲು ಬಣ್ಣ ಹಚ್ಚಿದ...

ತಾಯಿ ಸಾವಿನಿಂದ ಮನನೊಂದು ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾದ ಮಗ

6 days ago

ಮೈಸೂರು: ತಾಯಿಯ ಸಾವಿನಿಂದ ಮನನೊಂದು ಮಗ ಸೆಲ್ಫಿ ವಿಡಿಯೋ ಮಾಡಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನ ವಾಜಮಂಗಲದಲ್ಲಿ ನಡೆದಿದೆ. ವಾಜಮಂಗಲದ ರತ್ನಮ್ಮ(55) ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಎರಡು ದಿನಗಳ ಹಿಂದೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು. ತಾಯಿ ಮೃತಪಡುವುದು ಸ್ಪಷ್ಟವಾಗುತ್ತಿದ್ದಂತೆ ಮಗ ಸತೀಶ್...