Tuesday, 23rd January 2018

15 hours ago

ಬೀದಿ ಬದಿ ವ್ಯಾಪಾರಿಯನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದ್ರು

ಧಾರವಾಡ: ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಂಡು ಬೀದಿ ಬದಿಯ ವ್ಯಾಪಾರಿಯನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಧಾರವಾಡದ ಜಯನಗರ ಬಡಾವಣೆಯಲ್ಲಿ ನಡೆದಿದೆ. ಪರಮಾನಂದ ಕೆಂಬಾವಿ(25) ಕೊಲೆಯಾದ ವ್ಯಾಪಾರಿ. ಜಯನಗರದಲ್ಲಿ ನಿವಾಸಿಯಾದ ಪರಮಾನಂದ ಪಾನ್ ಶಾಪ್ ನಡೆಸುತ್ತಿದ್ದರು. ಭಾನುವಾರ ಮಧ್ಯರಾತ್ರಿ ಅಂಗಡಿಗೆ ಬಂದ ಹಂತಕರು ಕ್ಷುಲ್ಲಕ ಕಾರಣಕ್ಕೆ ಜಗಳ ತಗೆದು ಮಾರಕಾಸ್ತ್ರಗಳಿಂದ ಕೊಚ್ಚಿ ಪರಮಾನಂದ ಅವರನ್ನ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

2 months ago

ಕುಡಿದು ಬಂದು ವಾಹನಗಳ ಪುಡಿಪುಡಿ – ಕೇಳಿದವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ

-ಪುಂಡರಿಂದ ಬೆಂಗಳೂರು ಜನ ತತ್ತರ ಬೆಂಗಳೂರು: ನಗರದಲ್ಲಿ ದಿನೇ ದಿನೇ ಪುಂಡರ ಹಾವಳಿ ಹೆಚ್ಚಾಗುತ್ತಿದೆ. ಈ ಪುಂಡರ ಹಾವಳಿ ತಡೆಯೋದೇ ಪೊಲೀಸರಿಗೊಂದು ಸವಾಲಾಗಿ ಪರಿಣಮಿಸಿದೆ. ಬುಧವಾರ ತಡರಾತ್ರಿ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯ ಯಡಿಯೂರಿನ ಕಾಲೋನಿಯಲ್ಲಿ ಪುಂಡರು ತಮ್ಮ ಆಟಾಟೋಪ ಮೆರೆದಿದ್ದಾರೆ. ಮೂರು ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ರಸ್ತೆಯ ಅಕ್ಕ ಪಕ್ಕದಲ್ಲಿ ನಿಲ್ಲಿಸಿದ್ದ ಇಪ್ಪತ್ತಕ್ಕೂ...