Thursday, 24th May 2018

Recent News

7 hours ago

ದಾವಣಗೆರೆ, ಕೊಪ್ಪಳದಲ್ಲಿ ವರುಣನ ಆರ್ಭಟ – ಜೋಳಿಗೆಯಲ್ಲಿದ್ದ ಮಗು 20 ಮೀಟರ್ ಹಾರಿ ಬದುಕುಳೀತು

ದಾವಣಗೆರೆ/ಕೊಪ್ಪಳ: ಜಿಲ್ಲೆಯ ಎರಡು ಕಡೆ ಭಾರೀ ಬಿರುಗಾಳಿ ಸಹಿತ ಮಳೆಯಾಗಿದ್ದು, ಮಳೆಗೆ ಜೋಳಿಗೆಯಲ್ಲಿ ಹಾಕಿದ್ದ ಮಗುವೊಂದು ಮನೆಯಿಂದ 20 ಮೀಟರ್ ಹಾರಿ ಹೋಗಿ ಬಿದ್ದು, ಪವಾಡಸದೃಶ ರೀತಿಯಲ್ಲಿ ಪಾರಾಗಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ. ತಾಲೂಕಿನ ಆಚಲಾಪೂರ ತಾಂಡಾದಲ್ಲಿ ಈ ಘಟನೆ ನಡೆದಿದೆ. ಮಂಗಳವಾರ ರಾತ್ರಿ ಏಕಾಏಕಿ ಭಾರೀ ಬಿರುಗಾಳಿ ಬಿಸಿದೆ. ಈ ವೇಳೆಯಲ್ಲಿ ಶಿವಪ್ಪ ಅನ್ನೋರ ಮಗ ಒಂದೂವರೆ ವರ್ಷದ ಸಾಗರ್ ಮನೆಯಲ್ಲಿ ಕಬ್ಬಿಣದ ಪಟ್ಟಿಗೆ ಜೋಳಿಗೆ ಕಟ್ಟಿ ಅದರಲ್ಲಿ ಮಲಗಿಸಲಾಗಿತ್ತು. ಬೀಸಿದ ಬಿರುಗಾಳಿಗೆ ಮನೆಯ ಮೇಲ್ಛಾವಣಿ […]

1 day ago

ಬೆಂಗ್ಳೂರಲ್ಲಿ ಸಿಡಿಲಿಗೆ ಕ್ಷಣಾರ್ಧದಲ್ಲಿ ಮರ ಭಸ್ಮ!

ಬೆಂಗಳೂರು: ಕಳೆದ ನಾಲ್ಕು ದಿನಗಳಿಂದ ಬೆಂಗಳೂರು ಸುತ್ತಮುತ್ತ ಸಂಜೆ ವೇಳೆಗೆ ಭರ್ಜರಿ ಮಳೆಯಾಗುತ್ತಿದೆ. ಸೋಮವಾರ ಗುಡುಗು ಸಿಡಿಲು ಸಹಿತ ಮಳೆಯಾಗಿದ್ದು, ಸಿಡಿಲು ಬಡಿದು ಮರವೊಂದು ಭಸ್ಮವಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಬಿದರಗುಪ್ಪೆ ಗ್ರಾಮದ ಅಂಬೇಡ್ಕರ್ ಕಾಲೋನಿ ಬಳಿ ಈ ಘಟನೆ ಸಂಭವಿಸಿದೆ. ಗುಡುಗು ಸಿಡಿಲು ಸಹಿತ ಭಾರೀ ಮಳೆಯಾಗಿದ್ದು, ಇದೇ...

ಗಾಳಿ, ಮಳೆಗೆ ಹೋಟೆಲ್ ಮೇಲೆ ಬಿತ್ತು ಭಾರೀ ಗಾತ್ರದ ಮರ!

2 weeks ago

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅರಟಾಳ ಗ್ರಾಮದಲ್ಲಿ ಭಾರೀ ಗಾತ್ರದ ಮರವೊಂದು ಹೊಟೇಲ್ ಮೇಲೆ ಬಿದ್ದಿದ್ದು, ಅನಾಹುತವೊಂದು ತಪ್ಪಿದೆ. ಗುರುವಾರ ತಡರಾತ್ರಿ ಸುರಿದ ಭಾರೀ ಮಳೆ ಗಾಳಿಯಿಂದಾಗಿ ಮರ ಅರಟಾಳ ಕ್ರಾಸ್ ಬಳಿಯಿರುವ ಹೋಟೆಲ್ ಮೇಲೆ ಬಿದ್ದಿದೆ. ಘಟನೆಯಿಂದ ಯಾವುದೇ...

ಬಿಸಿಲಿನ ಧಗೆಗೆ ತಂಪೆರೆದ ಪೂರ್ವ ಮುಂಗಾರು – ಬೆಂಗ್ಳೂರಿನ ಹಲವೆಡೆ ಧರೆಗುರುಳಿದ ಮರಗಳು

3 weeks ago

ಬೆಂಗಳೂರು/ ಮಂಡ್ಯ: ಬಿಸಿಲಿನಿಂದ ಬೆಂದ ಜನರಿಗೆ ಪೂರ್ವ ತಂಪೆರೆದಿದ್ದು, ಮುಂಗಾರು ನಗರದ ಹಲವೆಡೆ ಸಂಜೆಯ ವೇಳೆಗೆ ಬಿರುಗಾಳಿ ಸಹಿತ ಸಾಧಾರಣ ಮಳೆಯಾಗಿದೆ. ನಗರದ ಹಲವೆಡೆ ಸಂಜೆ ವೇಳೆಗೆ ಆರಂಭವಾದ ಬಿರುಗಾಳಿಯಿಂದ ಕುಡಿದ ಮಳೆಗೆ ಮರಗಳು ಧರೆಗುರುಳಿ ಹಲವು ಅವಂತರಗಳನ್ನು ಸೃಷ್ಟಿಸಿತು. ಬಾಣಸವಾಡಿಯಲ್ಲಿ...

ಅಬ್ಬರಿಸಿದ ಮಳೆಗೆ ತತ್ತರಿಸಿದ ಸಿಲಿಕಾನ್ ಸಿಟಿ – ನೆಲಕ್ಕುರುಳಿದ ಮರಗಳು, ನೀರು ತುಂಬಿದ ಬಸ್ ಸ್ಟ್ಯಾಂಡ್

1 month ago

ಬೆಂಗಳೂರು: ಬೆಂಗಳೂರಿನ ಹಲವೆಡೆ ಮಂಗಳವಾರ ಮಧ್ಯಾಹ್ನ ಗಾಳಿ ಸಹಿತ ಭಾರೀ ಮಳೆಯಾಗಿದ್ದು, ಜನರು ಪರದಾಡಿದ್ದಾರೆ. ರಾಜಾಜಿನಗರ, ಮಲ್ಲೇಶ್ವರಂ, ಶೇಷಾದ್ರಿಪುರಂ, ಯಶವಂತಪುರ, ಗೊರಗುಂಟೆಪಾಳ್ಯ, ಜಾಲಹಳ್ಳಿ ಸೇರಿದಂತೆ ನಗರದ ಹಲವೆಡೆ ಮಳೆಯಾಗಿದೆ. ಮಳೆಯಿಂದಾಗಿ ಸರ್ಕಲ್ ಮಾರಮ್ಮ ಮತ್ತು ಟಾಟಾ ಇನ್ಸ್ ಸ್ಟಿಟ್ಯೂಟ್ ರಸ್ತೆಯಲ್ಲಿ ಫುಲ್...

ಮರದ ಕೊಂಬೆಗಳ ಮಧ್ಯೆ ಕುತ್ತಿಗೆ ಸಿಲುಕಿ ಗಂಡು ಜಿರಾಫೆ ಸಾವು

1 month ago

ಬೀಜಿಂಗ್: ಮರದ ಕೊಂಬೆಗಳ ಮಧ್ಯೆ ಕುತ್ತಿಗೆ ಸಿಲುಕಿ ಜಿರಾಫೆ ಸಾವನ್ನಪ್ಪಿರೋ ಘಟನೆ ಚೀನಾದ ಪ್ರಾಣಿ ಸಂಗ್ರಹಾಲಯದಲ್ಲಿ ನಡೆದಿದೆ. ಮರದ ಕೊಂಬೆಗಳ ಮಧ್ಯೆ ಸಿಲುಕಿ ಒದ್ದಾಡುತ್ತಿದ್ದ ಜಿರಾಫೆಯನ್ನು ರಕ್ಷಿಸಲು ಮೃಗಾಲಯದ ಸಿಬ್ಬಂದಿ ಸತತ 5 ಗಂಟೆಗಳ ಕಾಲ ಹರಸಾಹಸಪಟ್ಟಿದ್ದಾರೆ. ಕೊನೆಗೆ ಮರದ ಒಂದು...

ರಾಜ್ಯದೆಲ್ಲೆಡೆ ಬಿರುಗಾಳಿ ಸಹಿತ ಭಾರೀ ಮಳೆ – ಸಿಡಿಲು ಬಡಿದು ಮೂವರ ದುರ್ಮರಣ

1 month ago

ಬೆಂಗಳೂರು: ಬಿಸಿಲಿನ ಜಳಕ್ಕೆ ಬಳಲಿ ಬೆಂಡಾಗಿದ್ದ ಸಿಲಿಕಾನ್ ಮಂದಿಗೆ ವರುಣ ತಂಪೆರೆದಿದ್ದಾನೆ. ಸಿಲಿಕಾನ್ ಸಿಟಿ ಸೋಮವಾರ ರಾತ್ರಿ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ದಿಢೀರ್ ಸುರಿದ ಮಳೆಗೆ ವಾಹನ ಸವಾರರು ಪರದಾಡಿದ್ದಾರೆ. ನಗರದ ಸದಾಶಿವನಗರ, ಯಶವಂತಪುರ, ರಾಜಾಜಿನಗರ, ಮೆಜೆಸ್ಟಿಕ್ ,ಮೈಸೂರು ರೋಡ್,...

ಮರಕ್ಕೆ ಖಾಸಗಿ ಬಸ್ ಡಿಕ್ಕಿ- ಓರ್ವ ಸ್ಥಳದಲ್ಲೇ ದುರ್ಮರಣ

1 month ago

ಹಾವೇರಿ: ಮರಕ್ಕೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟು, 25ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ನಾಕೂರು ಕ್ರಾಸ್ ಬಳಿ ಘಟನೆ ನಡೆದಿದೆ. ಬೆಂಗಳೂರಿನಿಂದ ಶಿರಸಿಯತ್ತ ತೆರಳುತ್ತಿದ್ದ ಬಸ್ ಮರಕ್ಕೆ...