Tuesday, 23rd January 2018

Recent News

1 day ago

ಕಂಠ ಪೂರ್ತಿ ಕುಡಿದು ಪಾರ್ಟಿ ಮಾಡ್ದ- ನಶೆಯಲ್ಲಿ ನಾಲ್ಕನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ

ಬೆಂಗಳೂರು: ಸ್ನೇಹಿತರ ಜೊತೆ ಪಾರ್ಟಿ ಮಾಡಿದ ಯುವಕ ಮದ್ಯದ ಅಮಲಿನಲ್ಲಿ ನಾಲ್ಕನೇ ಮಹಡಿ ಮೇಲಿಂದ ಆಯತಪ್ಪಿ ಬಿದ್ದು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಸಾದರಮಂಗಲ ಸ್ಲಂಬೋರ್ಡ್ ನಲ್ಲಿ ನಡೆದಿದೆ. ರಾಜಶೇಖರ್ (22) ಮೃತ ದುರ್ದೈವಿ. ಮೃತ ರಾಜಶೇಖರ್ ಬೆಂಗಳೂರಿನ ಬಯ್ಯಪ್ಪನಹಳ್ಳಿ ನಿವಾಸಿಯಾಗಿದ್ದು, ಪೇಂಟರ್ ಕೆಲಸ ಮಾಡಿಕೊಂಡು ಸ್ಲಂ ಬೋರ್ಡ್ ನಲ್ಲಿ ನೆಲೆಸಿದ್ದ ಎನ್ನಲಾಗಿದೆ. ಇಂದು ಬೆಳಗ್ಗೆ ಕೆಲಸದ ನಿಮಿತ್ತ ಚೆನ್ನೈಗೆ ತೆರಳಬೇಕಿದ್ದ ರಾಜಶೇಖರ್ ಭಾನುವಾರ ರಾತ್ರಿ ಸ್ನೇಹಿತರ ಜೊತೆ ಗುಂಡು ಪಾರ್ಟಿ ಮಾಡಿದ್ದು, […]

3 weeks ago

ಮಲಗಿದ್ದಾಗ ಹೊದಿಕೆಯಿಂದ್ಲೇ ಕುತ್ತಿಗೆ ಬಿಗಿದು ಹೆತ್ತ ತಾಯಿಯನ್ನೇ ಕೊಲೆಗೈದ!

ಚಿತ್ತೂರು: ಮದ್ಯಪಾನಕ್ಕೆ ಹಣ ನೀಡಲು ನಿರಾಕರಿಸಿದ ತಾಯಿಯನ್ನೇ 29 ವರ್ಷದ ಯುವಕನೊಬ್ಬ ಕೊಲೆಗೈದ ಆಘಾತಕಾರಿ ಘಟನೆಯೊಂದು ಆಂಧ್ರಪ್ರದೇಶದಲ್ಲಿ ನಡೆದಿದೆ. ಈ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಶಿವಿನಿ ಕುಪ್ಪಂ ಎಂಬಲ್ಲಿ ಸೋಮವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ತಾಯಿ ಬೆಲ್ಲಮ್ಮ(50) ತನ್ನ ಮಗ ಜೆ ಸುಬ್ರಹ್ಮಣ್ಯಂ ಕೈಯಿಂದ್ಲೇ ಕೊಲೆಯಾಗಿದ್ದಾರೆ. ಏನಿದು ಘಟನೆ?: ಆರೋಪಿ ಸುಬ್ರಹ್ಮಣ್ಯಂಗೆ ಕುಡಿತದ...

ಮದ್ಯಪಾನ ಮಾಡದ ಸಸ್ಯಹಾರಿ ವಿದ್ಯಾರ್ಥಿಗೆ ಮಾತ್ರ ವಿವಿಯ ರ‍್ಯಾಂಕ್‌ ಚಿನ್ನದ ಪದಕ!

2 months ago

ಪುಣೆ: ಸಸ್ಯಹಾರಿ ಆಗಿರುವ, ಮದ್ಯಪಾನ ಮಾಡದ ವಿದ್ಯಾರ್ಥಿಗೆ ಮಾತ್ರ ರ‍್ಯಾಂಕ್‌ ನೀಡುವುದಾಗಿ ಪುಣೆ ವಿಶ್ವವಿದ್ಯಾಲಯ ನಿಯಮ ರೂಪಿಸಿದ್ದು ಈಗ ವಿವಾದಕ್ಕೆ ಕಾರಣವಾಗಿದೆ. ಹೌದು, ಪುಣೆಯ ಸಾವಿತ್ರಿಭಾಯಿ ಪುಲೆ ವಿಶ್ವವಿದ್ಯಾಲಯ ಚಿನ್ನದ ಪದಕ ನೀಡುವ ವಿದ್ಯಾರ್ಥಿ ಹೇಗಿರಬೇಕು ಎನ್ನುವುದಕ್ಕೆ ಕೆಲ ನಿಯಮಗಳನ್ನು ರೂಪಿಸಿ ಸುತ್ತೋಲೆ...

ಜೆಡಿಎಸ್ ಬಂಡಾಯ ಶಾಸಕರು ಗೆಲ್ತಾರೋ? ಇಲ್ವೋ?: ವೈರಲ್ ಆಯ್ತು ರಾಮನಗರದ ಬೆಟ್ಟಿಂಗ್ ವಿಡಿಯೋ

3 months ago

ರಾಮನಗರ: ಈಗಿನಿಂದಲೇ ರಾಮನಗರ ಜಿಲ್ಲೆಯಲ್ಲಿ ಚುನಾವಣೆಯ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ರಾಮನಗರ ಜಿಲ್ಲೆ ಮಾಗಡಿಯ ಖಾಸಗಿ ಡಾಬಾವೊಂದರಲ್ಲಿ ಬಂಡಾಯ ಶಾಸಕರ ಬಗ್ಗೆ ಬೆಟ್ಟಿಂಗ್ ನಡೆದಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಾಗಡಿ ಶಾಸಕ ಬಂಡಾಯ ಶಾಸಕ ಎಚ್.ಸಿ...

ಬ್ಯಾಗ್‍ ನಲ್ಲಿ ಕಂತೆ ಕಂತೆ ಹಣ, ಅನುಮಾನಾಸ್ಪದವಾಗಿ ಓಡಾಡ್ತಿದ್ದ 3 ಯುವಕರು ಮಂಡ್ಯ ಪೊಲೀಸರ ವಶಕ್ಕೆ

3 months ago

– ಬೆಂಗ್ಳೂರು ಎಟಿಎಂ ಪ್ರಕರಣಕ್ಕೆ ನಂಟು? ಮಂಡ್ಯ: ದಾಖಲೆಯಿಲ್ಲದ ಲಕ್ಷಾಂತರ ರೂಪಾಯಿ ಹಣ ಇಟ್ಟುಕೊಂಡಿದ್ದ ಮೂವರು ಯುವಕರನ್ನು ಮಂಡ್ಯ ಜಿಲ್ಲೆ ಮಳವಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೂವರು ಯುವಕರು ಬ್ಯಾಗ್ ನಲ್ಲಿ ಲಕ್ಷಾಂತರ ರೂಪಾಯಿ ಹಣ ಇಟ್ಟುಕೊಂಡು ಮಳವಳ್ಳಿಯಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು....

ಜಂಕ್ಷನ್ ನಲ್ಲಿ ಮೂತ್ರ ವಿಸರ್ಜಿಸಿ ಆಫ್ರಿಕಾ ಪ್ರಜೆಯಿಂದ ಅಸಭ್ಯ ವರ್ತನೆ

3 months ago

ಬೆಂಗಳೂರು: ನಗರದಲ್ಲಿ ವಿದೇಶಿಯರ ಪುಂಡಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸೋಮವಾರ ರಾತ್ರಿ ಆಫ್ರಿಕಾ ಪ್ರಜೆಯೊಬ್ಬ ಜಂಕ್ಷನ್ ನಲ್ಲಿ ಮೂತ್ರ ವಿಸರ್ಜನೆ ಮಾಡಿ ತನ್ನ ಪುಂಡಾಟ ಮೆರೆದಿದ್ದಾನೆ. ಯಲಹಂಕದ ಕೋಗಿಲು ಕ್ರಾಸ್ ಜಂಕ್ಷನ್ ಬಳಿ ರಾತ್ರಿ 10ರ ಸುಮಾರಿಗೆ ಈ ಘಟನೆ ನಡೆದಿದೆ....

ಚಾಲೆಂಜ್ ಹಾಕಿ 5 ಕ್ವಾಟರ್ ಮದ್ಯ ಕುಡಿದ ವ್ಯಕ್ತಿ ಸಾವು!

4 months ago

ಚಿಕ್ಕಬಳ್ಳಾಪುರ: ಸ್ನೇಹಿತರೊಂದಿಗೆ ಕುಡಿತದ ಪಾರ್ಟಿ ವೇಳೆ ಚಾಲೆಂಜ್ ಕಟ್ಟಿ 5 ಕ್ವಾಟರ್ ಮದ್ಯ ಸೇವಿಸಿ ವ್ಯಕ್ತಿ ಮೃತಪಟ್ಟ ಘಟನೆ ಚಿಕ್ಕಬಳ್ಳಾಪುರ ತಾಲೂಕು ದೊಡ್ಡತಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ಬುಶೆಟ್ಟಿಹಳ್ಳಿ ಗ್ರಾಮದ ನಿವಾಸಿ ಪುರಷೋತ್ತಮ್ (45) ಮೃತ ವ್ಯಕ್ತಿ. ಶನಿವಾರ ರಾತ್ರಿ ಗುಂಡಿನ ಪಾರ್ಟಿ...

ಗಾಂಧಿ ಜಯಂತಿಯಂದೇ ಕುಡಿದು ನಡುರಸ್ತೆಯಲ್ಲಿ ತೂರಾಡಿದ ಶಿಕ್ಷಕ

4 months ago

ತುಮಕೂರು: ಗಾಂಧಿ ಜಯಂತಿ ಆಚರಣೆಗೆಂದು ಶಾಲೆಗೆ ಹೊರಟ ಶಿಕ್ಷಕ ಕಂಠ ಪೂರ್ತಿ ಕುಡಿದು ನಡುರಸ್ತೆಯಲ್ಲಿ ತೂರಾಡಿದ ಘಟನೆ ತುಮಕೂರು ಜಿಲ್ಲೆ ಪಾವಗಡ ಪಟ್ಟಣದಲ್ಲಿ ನಡೆದಿದೆ. ಭೂಪುರ ಸರ್ಕಾರಿ ಶಾಲೆಯ ಶಿಕ್ಷಕ ರಾಮಾಂಜಿಪ್ಪ ಕುಡಿದು ತೂರಾಡಿದ ಶಿಕ್ಷಕ. ಬೆಳಗಿನ ಜಾವ ಎದ್ದ ಶಿಕ್ಷಕ...