Tuesday, 20th February 2018

Recent News

3 months ago

ಉತ್ತರಾಖಂಡ್‍ನಲ್ಲಿ 5.5 ತೀವ್ರತೆಯ ಭೂಕಂಪನ- ದೆಹಲಿಯಲ್ಲಿ ಕಂಪನದ ಅನುಭವ

ನವದೆಹಲಿ: ಉತ್ತರಾಖಂಡ್‍ನಲ್ಲಿ 5.5 ತೀವ್ರತೆಯ ಭೂಕಂಪನ ಸಂಭವಿಸಿದ ನಂತರ ಬುಧವಾರದಂದು ದೆಹಲಿ ಹಾಗೂ ರಾಷ್ಟ್ರರಾಜಧಾನಿ ಪ್ರದೇಶದಲ್ಲಿ ಪ್ರಬಲ ಭೂಕಂಪನದ ಅನುಭವವಾಗಿದೆ. ಉತ್ತರಾಖಂಡ್‍ನ ಪೂರ್ವ ಡೆಹ್ರಾಡೂನ್ ನಿಂದ 121 ಕಿ.ಮೀ ದೂರದ ರುದ್ರಪ್ರಯಾಗದಲ್ಲಿ ಭೂಕಂಪದ ಕೇಂದ್ರ ಬಿಂದು ವರದಿಯಾಗಿದೆ. ಭಾರತೀಯ ಹವಾಮಾನ ಇಲಾಖೆ ತಿಳಿಸಿರುವಂತೆ ರಾತ್ರಿ 8:49 ರ ಸಮಯದಲ್ಲಿ 30 ಕಿ.ಮೀ ಭೂ ಆಳದಲ್ಲಿ ಭೂಕಂಪನ ಸಂಭವಿಸಿದೆ. Just felt Earthquake tremors in Delhi. Hope everything is safe ! — Madhur Verma […]

3 months ago

ಪ್ರಬಲ ಭೂಕಂಪಕ್ಕೆ 140ಕ್ಕೂ ಹೆಚ್ಚು ಜನ ಬಲಿ – ಇರಾನ್, ಇರಾಕ್ ಗಡಿಯಲ್ಲಿ ಮಹಾ ದುರಂತ

ಇರಕ್/ಇರಾನ್: ಇರಾನ್-ಇರಾಕ್ ಗಡಿಭಾಗಗಳಲ್ಲಿ 7.3 ರಿಕ್ಟರ್ ಮಾಪಕದಲ್ಲಿ ಭೂಕಂಪ ಸಂಭವಿಸಿದ್ದು, 140 ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ ಹಾಗೂ 860 ಹೆಚ್ಚು ಜನರಿಗೆ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಭೂಕಂಪನದ ಅನುಭವವಾಗುತ್ತಿದ್ದಂತೆಯೇ ಉತ್ತರ ಇರಾನ್ ನ ಸುಲಯೈಮನಿಯಾದ ಕಟ್ಟಡದಲ್ಲಿ ನೆಲೆಸಿದ್ದ ಜನರು ಆತಂಕಗೊಳಗಾಗಿ ಅಲ್ಲಿಂದ ಓಡಿ ಹೋಗಿದ್ದಾರೆ. ದರ್ಬಾದಿಖಾನ್ ನಗರದಲ್ಲಿ ಗಾಜಿನ ಗೋಡೆ ಹಾಗೂ ಕಾಂಕ್ರೀಟ್ ಸ್ಟ್ರಕ್ಷರ್...

ಚಿತ್ರದುರ್ಗ, ತುಮಕೂರಲ್ಲಿ ಭೂಮಿ ಕಂಪಿಸಿದ ಅನುಭವ

11 months ago

– ಕೋಟೆ ನಾಡಲ್ಲಿ ಬಿರುಕು ಬಿಟ್ಟ ದೇವಸ್ಥಾನ ಚಿತ್ರದುರ್ಗ/ತುಮಕೂರು: ಇಂದು ಬೆಳ್ಳಂಬೆಳಗ್ಗೆ ಚಿತ್ರದುರ್ಗ ಹಾಗೂ ತುಮಕೂರಿನಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಚಿತ್ರದುರ್ಗದ ಹೊಸದುರ್ಗ ತಾಲೂಕಿನ ಚಿಕ್ಕಬ್ಯಾಲದಕೆರೆ ಗ್ರಾಮ ಹಾಗೂ ಗೇಟ್‍ನಲ್ಲಿ ಇಂದು ಬೆಳಗ್ಗೆ 6.45ರ ವೇಳೆಗೆ ಭೂಕಂಪನದ ಅನುಭವವಾಗಿದ್ದು, ಜನ ಗಾಬರಿಗೊಳಗಾಗಿದ್ದಾರೆ....

ಉತ್ತರ ಭಾರತದಲ್ಲಿ ಪ್ರಬಲ ಭೂಕಂಪನ

1 year ago

ನವದೆಹಲಿ: ದೇಶದ ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತದಾದ್ಯಂತ ಸೋಮವಾರ ರಾತ್ರಿ 10.35ರ ಸುಮಾರಿಗೆ ಪ್ರಬಲ ಭೂಕಂಪ ಸಂಭವಿಸಿದೆ. ಸುಮಾರು 30 ಸೆಕೆಂಡ್‍ಗಳ ಭೂಮಿ ಕಂಪಿಸಿದ ಅನುಭವವಾಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಉತ್ತರಾಖಂಡದ ಪಿಥೌರಾಗಢ ಭೂಕಂಪನದ ಕೇಂದ್ರ ಬಿಂದು ಎನ್ನಲಾಗಿದ್ದು, ರಿಕ್ಟರ್...