Monday, 18th June 2018

Recent News

4 months ago

ಚಿಕ್ಕಬಳ್ಳಾಪುರದಲ್ಲಿ 1.2 ತೀವ್ರತೆಯ ಭೂಕಂಪನ- ಮನೆಯಲ್ಲಿನ ಪಾತ್ರೆಗಳು ಚೆಲ್ಲಾಪಿಲ್ಲಿ

ಚಿಕ್ಕಬಳ್ಳಾಪುರ: ಕಳೆದ ರಾತ್ರಿ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಹಲವು ಹಳ್ಳಿಗಳಲ್ಲಿ ಭೂಕಂಪನವಾಗಿದೆ. ಆಂಧ್ರದ ಗಡಿಗೆ ಹೊಂದಿಕೊಂಡಿರುವ ಐವಾರಪಲ್ಲಿ, ಲಘು ಮದ್ದೇಪಲ್ಲಿ, ಚಿಕ್ಕ ತಿಮ್ಮನಹಳ್ಳಿ, ಪಾಕು ಪಟ್ಲಪಲ್ಲಿ ಸೇರಿದಂತೆ ತುಮಕೇಪಲ್ಲಿ ಹಾಗೂ ಹತ್ತು ಹಲವು ಹಳ್ಳಿಗಳಲ್ಲಿ ಭೂಮಿ ಕಂಪಿಸಿದ ಅನುಭವ ಆಗಿದೆ. ಎರಡು ಬಾರಿ 5-6 ಸೆಕೆಂಡ್‍ಗಳ ಕಾಲ ಭೂಮಿ ಕಂಪಿಸಿದ್ದು, ಮನೆಗಳಲ್ಲಿನ ಪಾತ್ರೆ ಸಾಮಾನುಗಳು ಕೆಳಗೆ ಬಿದ್ದಿವೆ. ಈ ವೇಳೆ ಕರ್ಕಶ ಶಬ್ಧ ಕೂಡ ಕೇಳಿಬಂದಿದೆ ಎನ್ನಲಾಗಿದ್ದು, ರಾತ್ರಿಯಿಡೀ ಗ್ರಾಮಸ್ಥರು ಭಯದಲ್ಲೇ ಕಾಲ ಕಳೆದು ನಿದ್ದೆಗೆಟ್ಟಿದ್ದಾರೆ. […]

6 months ago

ಉತ್ತರಾಖಂಡ್‍ನಲ್ಲಿ 5.5 ತೀವ್ರತೆಯ ಭೂಕಂಪನ- ದೆಹಲಿಯಲ್ಲಿ ಕಂಪನದ ಅನುಭವ

ನವದೆಹಲಿ: ಉತ್ತರಾಖಂಡ್‍ನಲ್ಲಿ 5.5 ತೀವ್ರತೆಯ ಭೂಕಂಪನ ಸಂಭವಿಸಿದ ನಂತರ ಬುಧವಾರದಂದು ದೆಹಲಿ ಹಾಗೂ ರಾಷ್ಟ್ರರಾಜಧಾನಿ ಪ್ರದೇಶದಲ್ಲಿ ಪ್ರಬಲ ಭೂಕಂಪನದ ಅನುಭವವಾಗಿದೆ. ಉತ್ತರಾಖಂಡ್‍ನ ಪೂರ್ವ ಡೆಹ್ರಾಡೂನ್ ನಿಂದ 121 ಕಿ.ಮೀ ದೂರದ ರುದ್ರಪ್ರಯಾಗದಲ್ಲಿ ಭೂಕಂಪದ ಕೇಂದ್ರ ಬಿಂದು ವರದಿಯಾಗಿದೆ. ಭಾರತೀಯ ಹವಾಮಾನ ಇಲಾಖೆ ತಿಳಿಸಿರುವಂತೆ ರಾತ್ರಿ 8:49 ರ ಸಮಯದಲ್ಲಿ 30 ಕಿ.ಮೀ ಭೂ ಆಳದಲ್ಲಿ ಭೂಕಂಪನ...

ಧಾರವಾಡ ನಗರದಲ್ಲಿ ಭೂಕಂಪನದ ಅನುಭವ – ರಾತ್ರಿಯಿಡೀ ಜನರಿಗೆ ಜಾಗರಣೆ

1 year ago

ಧಾರವಾಡ: ನಗರದ ಹಲವು ಕಡೆ ಭೂಕಂಪನದ ಅನುಭವವಾಗಿದೆ. ನಗರದ ನಾರಾಯಣಪುರ, ಕುಮಾರೇಶ್ವರನಗರ ಸೇರಿದಂತೆ 5 ಕ್ಕೂ ಹೆಚ್ಚು ಬಡಾವಣೆಯಲ್ಲಿ ಭೂಕಂಪನ ಅನುಭವದಿಂದ ಜನರು ಆತಂಕಗೊಂಡ ಘಟನೆ ನಡೆದಿದೆ. ಶನಿವಾರ ರಾತ್ರಿ 12 ಗಂಟೆ ಸುಮಾರಿಗೆ ಭೂಮಿ ಕಂಪಿಸಿದ್ದು, ಈ ವೇಳೆ ಮನೆಯಲ್ಲಿದ್ದ...

ಚಿತ್ರದುರ್ಗ, ತುಮಕೂರಲ್ಲಿ ಭೂಮಿ ಕಂಪಿಸಿದ ಅನುಭವ

1 year ago

– ಕೋಟೆ ನಾಡಲ್ಲಿ ಬಿರುಕು ಬಿಟ್ಟ ದೇವಸ್ಥಾನ ಚಿತ್ರದುರ್ಗ/ತುಮಕೂರು: ಇಂದು ಬೆಳ್ಳಂಬೆಳಗ್ಗೆ ಚಿತ್ರದುರ್ಗ ಹಾಗೂ ತುಮಕೂರಿನಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಚಿತ್ರದುರ್ಗದ ಹೊಸದುರ್ಗ ತಾಲೂಕಿನ ಚಿಕ್ಕಬ್ಯಾಲದಕೆರೆ ಗ್ರಾಮ ಹಾಗೂ ಗೇಟ್‍ನಲ್ಲಿ ಇಂದು ಬೆಳಗ್ಗೆ 6.45ರ ವೇಳೆಗೆ ಭೂಕಂಪನದ ಅನುಭವವಾಗಿದ್ದು, ಜನ ಗಾಬರಿಗೊಳಗಾಗಿದ್ದಾರೆ....

ಉತ್ತರ ಭಾರತದಲ್ಲಿ ಪ್ರಬಲ ಭೂಕಂಪನ

1 year ago

ನವದೆಹಲಿ: ದೇಶದ ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತದಾದ್ಯಂತ ಸೋಮವಾರ ರಾತ್ರಿ 10.35ರ ಸುಮಾರಿಗೆ ಪ್ರಬಲ ಭೂಕಂಪ ಸಂಭವಿಸಿದೆ. ಸುಮಾರು 30 ಸೆಕೆಂಡ್‍ಗಳ ಭೂಮಿ ಕಂಪಿಸಿದ ಅನುಭವವಾಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಉತ್ತರಾಖಂಡದ ಪಿಥೌರಾಗಢ ಭೂಕಂಪನದ ಕೇಂದ್ರ ಬಿಂದು ಎನ್ನಲಾಗಿದ್ದು, ರಿಕ್ಟರ್...