Friday, 25th May 2018

Recent News

7 days ago

ಸತತ 4 ಗಂಟೆ ಸುರಿದ ಮಳೆ – ದೇವಸ್ಥಾನದಲ್ಲಿ ನದಿಯಂತೆ ಹರಿದ ನೀರು

ಬೆಳಗಾವಿ: ಜಿಲ್ಲೆಯಾದ್ಯಂತ ಗುರುವಾರ ರಾತ್ರಿ ಭಾರೀ ಮಳೆಯಾಗಿದ್ದು, ದೇವಸ್ಥಾನದ ಒಳಗಡೆ ನೀರು ನುಗ್ಗಿ ಭಕ್ತರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಜಿಲ್ಲೆಯಲ್ಲಿ ಸತತ 4 ಗಂಟೆಗಳಿಂದ ಮಳೆ ಸುರಿದಿದೆ. ಪರಿಣಾಮ ಜಿಲ್ಲೆಯ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ನೀರು ನುಗ್ಗಿದೆ. ಇದರಿಂದ ದೇವರ ದರ್ಶನಕ್ಕೆ ಬಂದಿದ್ದ ಭಕ್ತರು ದೇವಾಸ್ಥಾನದ ಒಳಗೆ ಪ್ರವೇಶಿಸಿದ್ದರಿಂದ ಭಕ್ತರಲ್ಲಿ ಆತಂಕ ಹೆಚ್ಚಾಗಿತ್ತು. ದೇವಾಸ್ಥಾನದ ಒಳಗೆ ನೀರು ನದಿಯಂತೆ ಹರಿದಿದ್ದು, ಜನರಲ್ಲಿ ಕೆಲಕಾಲ ಆತಂಕ ಸೃಷ್ಟಿಸಿತ್ತು. ಅಷ್ಟೇ ಅಲ್ಲದೇ ದೇವಾಲಯದ ಆವರಣದಲ್ಲಿ ನೀರು ಹರಿದು, ದೇವಾಲಯದ ಹೊರಗಡೆ […]

2 months ago

ಸಹಸ್ರಾರು ಭಕ್ತರ ಮಧ್ಯೆ ವಿಜೃಂಭಣೆಯಿಂದ ನಡೆದ ಚನ್ನಕೇಶವ ಸ್ವಾಮಿ ಬ್ರಹ್ಮರಥೋತ್ಸವ

ಹಾಸನ: ಶಾಂತಿ, ಸಹಬಾಳ್ವೆ ಜೊತೆಗೆ ಸರ್ವಧರ್ಮ ಸಮನ್ವಯ ಸಾರುವ ಜಿಲ್ಲೆಯ ಬೇಲೂರಿನ ಐತಿಹಾಸಿಕ ಶ್ರೀ ಚನ್ನಕೇಶವ ಸ್ವಾಮಿ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ಜರುಗಿದೆ. ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ಸೇರಿದಂತೆ ಸಹಸ್ರಾರು ಭಕ್ತರು ಆಗಮಿಸಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಚನ್ನಕೇಶವ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ರಥೋತ್ಸವದ ವಿಶೇಷತೆ ಎಂದರೆ ಶಾಂತಿ-ಸಹಬಾಳ್ವೆ ಸಾರುವ...

ಸಾಲು ಸಾಲು ರಜೆ: ಕುಕ್ಕೆ ಸುಬ್ರಹ್ಮಣ್ಯಕ್ಕೆ ಹರಿದು ಬಂತು ಭಕ್ತ ಸಾಗರ

5 months ago

ಮಂಗಳೂರು: ನಿರಂತರವಾಗಿ ಸರ್ಕಾರಿ ರಜೆ ಇರುವ ಹಿನ್ನೆಲೆಯಲ್ಲಿ ದಕ್ಷಿಣ ಭಾರತದ ಪ್ರಸಿದ್ಧ ನಾಗಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಜನ ಸಾಗರವೇ ಹರಿದು ಬಂದಿದೆ. ಕ್ರಿಸ್‍ಮಸ್ ಹಬ್ಬದ ಪ್ರಯುಕ್ತ ರಜೆ ಇರುವುದರಿಂದ ಶನಿವಾರದಿಂದಲೇ ಭಕ್ತರ ದಂಡು ಕ್ಷೇತ್ರದತ್ತ ಹರಿದು ಬರುತ್ತಿದ್ದು, ಲಕ್ಷಾಂತರ ಭಕ್ತರು ದೇಶದ...

ಶ್ರೀಕ್ಷೇತ್ರ ಗೊರವನಹಳ್ಳಿಯಲ್ಲಿ ಹಳಸಿದ ಅನ್ನ, ಸಾಂಬಾರ್ ಕಲಸಿ ಪ್ರಸಾದವೆಂದು ನೀಡಿದ್ರು- ಭಕ್ತರು ಕಿಡಿ

6 months ago

ತುಮಕೂರು: ಜಿಲ್ಲೆಯ ಶ್ರೀಕ್ಷೇತ್ರ ಗೊರವನಹಳ್ಳಿ ದೇವಸ್ಥಾನದಲ್ಲಿ ಅಷ್ಟೊಂದು ಬಡತನ ಇದೆಯಾ. ಶ್ರೀ ಲಕ್ಷ್ಮೀ ಆಸ್ಥಾನದಲ್ಲಿ ಪ್ರಸಾದಕ್ಕೂ ಬರ ಉಂಟಗಿದ್ಯಾ ಅನ್ನೋ ಅನುಮಾನ ಇದೀಗ ಕಾಡುತ್ತಿದೆ. ಹೌದು, ಕಾರ್ತಿಕ ಮಾಸದ ದೀಪೋತ್ಸವಕ್ಕೆ ಬಂದ ಭಕ್ತಾಧಿಗಳಿಗೆ ಕೊಡಲು ದೇವಸ್ಥಾನದಲ್ಲಿ ಪ್ರಸಾದವೇ ಇರಲಿಲ್ಲ. ಹಳಸಿದ ಅನ್ನ-...

ತಲಕಾವೇರಿಯಲ್ಲಿ ಇಂದು ಪವಿತ್ರ ತೀರ್ಥೋದ್ಭವ

7 months ago

ಮಡಿಕೇರಿ: ಜೀವನದಿ ತಲಕಾವೇರಿಯ ಪವಿತ್ರ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ಇಂದು ಮಧ್ಯಾಹ್ನ 12.33 ನಿಮಿಷಕ್ಕೆ ತೀರ್ಥೋದ್ಭವವಾಗಲಿದೆ. ಒಂದು ತಿಂಗಳ ಕಾಲ ನಡೆಯುವ ಈ ಕಾವೇರಿ ತುಲಾಸಂಕ್ರಮಣ ಜಾತ್ರೆಗೆ ಜಿಲ್ಲಾಡಳಿತ ಸಕಲಸಿದ್ಧತೆ ಮಾಡಿಕೊಂಡಿದ್ದು, ಸಹಸ್ರಾರು ಭಕ್ತರು ತೀರ್ಥಸ್ವರೂಪಿಣಿ ಕಾವೇರಿ...

ಗಂಡನನ್ನು ಕೊಂದು ನನ್ನ ವಿಧವೆ ಮಾಡು, ವಾಟ್ಸಪ್ uninstall ಮಾಡ್ತೀನಿ ಅತ್ತೆಮಗಳ ಬಗ್ಗೆ ಯೋಚಿಸಲ್ಲ- ಬನಶಂಕರಿದೇವಿಗೆ ಭಕ್ತರ ವಿಚಿತ್ರ ಪತ್ರ

8 months ago

ಬೆಂಗಳೂರು: ನಗರದ ಬನಶಂಕರಿ ದೇವಿ ದೇವಸ್ಥಾನದಲ್ಲಿ ಭಕ್ತರ ವಿಚಿತ್ರ ಬೇಡಿಕೆಯ ಪತ್ರಗಳು ಸಿಕ್ಕಿವೆ. ಮಾಂಗಲ್ಯ ಉಳಿಸಲು ದೇವಿಗೆ ಹರಕೆ ನೀಡುತ್ತಾರೆ. ಆದ್ರೇ ಇಲ್ಲೊಬ್ಬ ಭಕ್ತೆ ನನ್ನ ಗಂಡನನ್ನು ಕೊಲ್ಲಮ್ಮ. ನನ್ನ ವಿಧವೆ ಮಾಡು ಅಂತಾ ಪತ್ರ ಬರೆದು ದೇವಿ ಹುಂಡಿಗೆ ಹಾಕಿದ್ದಾರೆ....

ಮಂತ್ರಾಲಯ: ಗುರುರಾಯರ ಸನ್ನಿಧಿಯಲ್ಲಿ ರಾಯರ ಆರಾಧನೆ- ಫೋಟೋಗಳಲ್ಲಿ ನೋಡಿ

10 months ago

ರಾಯಚೂರು: ಗುರುರಾಯರ ಆರಾಧನೆಯ ಕೊನೆಯ ದಿನವಾದ ಇಂದು ಮಂತ್ರಾಲಯದಲ್ಲಿ ಉತ್ತರಾರಾಧನೆ ಅದ್ಧೂರಿಯಾಗಿ ನಡೆಯಲಿದೆ. ಬೆಳಗ್ಗೆ 10 ಗಂಟೆ ವೇಳೆಗೆ ಮಹಾರಥೋತ್ಸವ ಜರುಗಲಿದೆ. ಮಠದ ಬೀದಿಯಲ್ಲಿ ಮೆರವಣಿಗೆ ನಡೆಯಲಿದ್ದು, ದೇಶದ ಮೂಲೆ ಮೂಲೆಯಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದಾರೆ. ಮಹಾರಥೋತ್ಸವದ ವೇಳೆ ರಥಕ್ಕೆ...

ಚಿಂಚಲಿಯಲ್ಲಿ ಶಕ್ತಿದೇವತೆ ಮಾಯಕ್ಕದೇವಿಯ ಜಾತ್ರಾ ಮಹೋತ್ಸವ

1 year ago

ಚಿಕ್ಕೋಡಿ: ಕರ್ನಾಟಕ ಹಾಗೂ ಮಹಾರಾಷ್ಟ್ರದ ಪ್ರಸಿದ್ಧ ಶಕ್ತಿದೇವತೆ ಎಂದೇ ಖ್ಯಾತಿಯ ಶ್ರೀ ಮಾಯಕ್ಕದೇವಿಯ ಜಾತ್ರಾ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ಜಿಲ್ಲೆಯ ರಾಯಭಾಗ ತಾಲೂಕಿನ ಚಿಂಚಲಿ ಗ್ರಾಮದಲ್ಲಿ ಪ್ರಾರಂಭಗೊಂಡಿದೆ. ಭರತ ಹುಣ್ಣಿಮೆಯ ಐದು ದಿನಗಳ ನಂತರ ನಡೆಯುವ ಈ ಜಾತ್ರಾ ಮಹೋತ್ಸವ ಅನಾದಿಕಾಲದ...