Thursday, 22nd March 2018

Recent News

7 hours ago

ಚೀಟಿ ಹರಿದ ಪ್ರಕರಣದಲ್ಲಿ ಜಾಮೀನು ಮಂಜೂರು- ಸಚಿವ ಡಿಕೆ ಶಿವಕುಮಾರ್ ಗೆ ಬಿಗ್ ರಿಲೀಫ್

ಬೆಂಗಳೂರು: ಐಟಿ ದಾಳಿಗೆ ಸಂಬಂಧಿಸಿದಂತೆ ಈಗಲ್‍ ಟನ್ ರೆಸಾರ್ಟ್‍ನಲ್ಲಿ ಸಾಕ್ಷ್ಯ ನಾಶ ಮಾಡಿದ ಪ್ರಕರಣದಲ್ಲಿ ಇಂಧನ ಸಚಿವ ಡಿಕೆ ಶಿವಕುಮಾರ್ ಗೆ ಜಾರಿ ನಿರ್ದೇಶನಾಲಯ ಕೋರ್ಟ್ ಜಾಮೀನು ಮಂಜೂರು ಮಾಡಿದೆ. 25 ಸಾವಿರ ರೂ. ಶ್ಯೂರಿಟಿ, ಸಾಕ್ಷಿ ನಾಶ ಮಾಡಬಾರದು, ತನಿಖಾಧಿಕಾರಿಗಳ ಮುಂದೆ ಸರಿಯಾಗಿ ವಿಚಾರಣೆಗೆ ಹಾಜರಾಗಬೇಕು ಎಂಬ ಷರತ್ತುಗಳೊಂದಿಗೆ ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿದ್ದಾರೆ. ಇಬ್ಬರು ಶ್ಯೂರಿಟಿಗೆ ಕೋರ್ಟ್ ಸೂಚನೆ ನೀಡಿದೆ. ಡಿಕೆಶಿ ಪರ ವಕೀಲರ ವಾದವೇನು?: ಡಿಕೆ ಶಿವಕುಮಾರ್ ಅವರಿಗೆ ಸಾಕ್ಷ್ಯ ನಾಶ ಮಾಡುವ […]

13 hours ago

ಬಿಜೆಪಿ ಶಾಸಕ ಸತೀಶ್ ರೆಡ್ಡಿ ಬಾಮೈದ ಎಂದು ಹೇಳಿಕೊಂಡು ಗೂಂಡಾಗಿರಿ- ಕಾರ್ ಗೆ ಸೈಡ್ ಬಿಡ್ಲಿಲ್ಲವೆಂದು ಚಾಲಕನ ಮೇಲೆ ಮರಣಾಂತಿಕ ಹಲ್ಲೆ

ಬೆಂಗಳೂರು: ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಬಾಮೈದ ಅಂತ ಹೇಳಿಕೊಂಡು ದುಷ್ಕರ್ಮಿಯೊಬ್ಬ ಅಟ್ಟಹಾಸ ಮೆರೆದಿದ್ದಾನೆ. ಕೋರಮಂಗಲದ ಬಳಿ ಕಾರು ಮುಂದೆ ಹೋಗಲು ಬೇಗ ಸ್ಥಳಾವಕಾಶ ಮಾಡಿಕೊಡಲಿಲ್ಲ ಅಂತ ಚಾಲಕನನ್ನ ಅಡ್ಡಗಟ್ಟಿ ಮರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ನಾನು ಯಾರು ಗೊತ್ತಾ? ನನಗೆ ಸೈಡ್ ಬಿಡಲು ವಿಳಂಬ ಮಾಡ್ತಿಯಾ ಅಂತೆಲ್ಲಾ ಧಮ್ಕಿ ಹಾಕಿದ್ದಾನೆ. ಹಲ್ಲೆಯಿಂದಾಗಿ ಗಂಭೀರವಾಗಿ ಗಾಯಗೊಂಡ ಚಾಲಕ...

ಪಾವಗಡದಲ್ಲಿರೋ ಬೃಹತ್ ಸೋಲಾರ್ ಪಾರ್ಕ್ ಗೆ ಹಾಲಿವುಡ್ ನಟ ಮೆಚ್ಚುಗೆ

1 day ago

ಬೆಂಗಳೂರು: ತುಮಕೂರು ಜಿಲ್ಲೆಯ ಪಾವಗಡದಲ್ಲಿ ನಿರ್ಮಾಣವಾಗುತ್ತಿರುವ ಬೃಹತ್ ಸೋಲಾರ್ ಪಾರ್ಕ್‍ಗೆ ವಿಶ್ವ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಈ ಕುರಿತು ಹಾಲಿವುಡ್‍ನ ಖ್ಯಾತ ನಟ ಲಿಯೊನಾರ್ಡೊ ಡಿ ಕಾಪ್ರಿಯೊ ಸಹ ಟ್ವಿಟ್ಟರ್‍ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಸೋಲಾರ್ ಪಾರ್ಕ್ ಕುರಿತು ಅಮೆರಿಕದ ಲಾಸ್ ಏಂಜಲೀಸ್...

ಪತ್ನಿ ಕುತ್ತಿಗೆಗೆ ಚಾಕುವಿನಿಂದ ಇರಿದು ಬಾಗಿಲು ಹಾಕಿಕೊಂಡು ಹೋದ ಪತಿ!

2 days ago

ಬೆಂಗಳೂರು: ಪತ್ನಿ ಕುತ್ತಿಗೆಗೆ ಚಾಕು ಇರಿದು ಪತಿ ಬಾಗಿಲು ಹಾಕಿಕೊಂಡು ಹೋದ ಘಟನೆ ಬೆಂಗಳೂರಿನ ಚೋಳೂರುಪಾಳ್ಯದ ಮಂಜುನಾಥನಗರದಲ್ಲಿ ನಡೆದಿದೆ. ಮಂಜುನಾಥ್ ಚಾಕು ಇರಿದ ಆರೋಪಿ. ಸೋಮವಾರ ತಡರಾತ್ರಿ ಮಂಜುನಾಥ್ ತನ್ನ ಪತ್ನಿ ವೇದಕುಮಾರಿಗೆ ಚಾಕುವಿನಿಂದ ಇರಿದಿದ್ದನು. ಕುತ್ತಿಗೆಗೆ ಚಾಕುವಿನಿಂದ ಇರಿದು ಬಾಗಿಲು...

ಮಾರ್ಚ್ 22ರಂದು ಮೆಟ್ರೊ ಮುಷ್ಕರ ಇರಲ್ಲ

2 days ago

ಬೆಂಗಳೂರು: ಮಾರ್ಚ್ 22 ರಂದು ನಡೆಯಲು ಉದ್ದೇಶಿಸಿದ್ದ ನಮ್ಮ ಮೆಟ್ರೊ ನೌಕರರ ಮುಷ್ಕರ ತಾತ್ಕಾಲಿಕವಾಗಿ ಮುಂದೂಡಿಕೆಯಾಗಿದೆ. ಎಸ್ಮಾ ತಡೆಯಾಜ್ಞೆ ತೆರವುಗೊಳಿಸುವಂತೆ ಬಿಎಂಆರ್ ಸಿಎಲ್ ಹಾಕಿದ್ದ ವಿಚಾರಣೆಯನ್ನು ನಡೆಸಿದ ಹೈಕೋರ್ಟ್ ಇಂದು ಎರಡು ಕಡೆಯವರೆಗೆ ಕುಳಿತು ಸಂಧಾನ ನಡೆಸುವಂತೆ ಸೂಚನೆ ನೀಡಿದೆ. ಎರಡು...

ನಲಪಾಡ್ ಹಲ್ಲೆ ಪ್ರಕರಣ- ಯುಬಿ ಸಿಟಿಯ ಫರ್ಜಿ ಕೆಫೆಗೆ ರೀ ಓಪನ್ ಭಾಗ್ಯ

2 days ago

ಬೆಂಗಳೂರು: ಶಾಸಕ ಹ್ಯಾರಿಸ್ ಪುತ್ರ ನಲಪಾಡ್, ಉದ್ಯಮಿ ಲೋಕನಾಥ್ ಪುತ್ರ ವಿದ್ವತ್ ಮೇಲೆ ಹಲ್ಲೆ ನಡೆಸಿದ್ದ ಯುಬಿ ಸಿಟಿಯ ಫರ್ಜಿ ಕೆಫೆಯ ರೆಸ್ಟೋರೆಂಟ್ ರೀ ಓಪನ್ ಮಾಡಲು ಪೊಲೀಸರು ಅನುಮತಿ ನೀಡಿದ್ದಾರೆ. ನಲಪಾಡ್ ಪ್ರಕರಣದ ವಿವಾದಿತ ಕೇಂದ್ರಬಿಂದು ಯುಬಿ ಸಿಟಿಯ ಫರ್ಜಿ...

ರಾಜ್ಯದ ಹಲವೆಡೆ ಬೆಳ್ಳಂಬೆಳಗ್ಗೆ ಎಸಿಬಿ ಶಾಕ್

3 days ago

ಬೆಂಗಳೂರು: ರಾಜ್ಯದ ಹಲವೆಡೆ ಇಂದು ಬೆಳಂಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸುವ ಮೂಲಕ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ. ಬೆಳಗಾವಿ, ಧಾರವಾಡ, ಚಿತ್ರದುರ್ಗ, ತುಮಕೂರು ಹಾಗೂ ದಾವಣಗೆರೆಯಲ್ಲಿ ಎಸಿಬಿ ದಾಳಿ ನಡೆದಿದೆ. ಬೆಳಗಾವಿಯ ಎಇಇ ಕಿರಣ್ ಸುಬ್ಬರಾವ್ ಮನೆ, ಕಚೇರಿ ಸೇರಿ 6...

ಕೈಕಾಲು ಕಟ್ಟಿ ಹಾಕಿ ಚಿನ್ನಾಭರಣ ದೋಚಿದ ದರೋಡೆಕೋರರು

3 days ago

ಬೆಂಗಳೂರು: ದರೋಡೆಕೋರರು ಶಿಕ್ಷಕರೊಬ್ಬರ ಮನೆಗೆ ನುಗ್ಗಿ, ಮನೆಯಲ್ಲಿದ್ದವರ ಕೈಕಾಲು ಕಟ್ಟಿಹಾಕಿ ಚಿನ್ನಾಭರಣ ದೋಚಿರುವ ಘಟನೆ ಬೆಂಗಳೂರಿನ ಕೊತ್ತನೂರಿನಲ್ಲಿ ನಡೆದಿದೆ. ಸೋಮವಾರ ರಾತ್ರಿ 8.30ರ ಸುಮಾರಿಗೆ 8 ರಿಂದ 10 ಜನ ದುಷ್ಕರ್ಮಿಗಳ ತಂಡ ಕೊತ್ತನೂರಿನ ಶಬರಿ ನಗರದಲ್ಲಿರೋ ಶಿಕ್ಷಕಿ ಅನಿತಾ ಅವರ...