Tuesday, 24th April 2018

Recent News

8 hours ago

ನಾಮಪತ್ರ ಸಲ್ಲಿಸಿದ್ದ ಬಿಜೆಪಿ ಅಭ್ಯರ್ಥಿ ಕಾರ್ ಗೆ ಬೆಂಕಿ- ಸುಟ್ಟು ಕರಕಲಾಯ್ತು ಇನ್ನೋವಾ!

ಕೋಲಾರ: 2018ರ ವಿಧಾನಸಭೆ ಚುನಾವಣೆಯ ನಾಮಪತ್ರ ಸಲ್ಲಿಕೆ ಕಾರ್ಯ ಆರಂಭವಾಗುತ್ತಿದ್ದಂತೆ ಕೋಲಾರದಲ್ಲಿ ದ್ವೇಷದ ರಾಜಕಾರಣ ಶುರುವಾಗಿದೆ. ಕೋಲಾರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಇನ್ನೋವಾ ಕಾರ್ ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು, ಪರಿಣಾಮ ಮನೆಮುಂದೆ ನಿಲ್ಲಿಸಿದ್ದ ಇನ್ನೋವಾ ಹೊತ್ತಿ ಉರಿದಿದೆ. ಜೊತೆಗೆ ಇನ್ನೋವಾ ಕಾರ್ ಪಕ್ಕದಲ್ಲಿದ್ದ ಮತ್ತೊಂದು ಮಾರುತಿ-800 ಕಾರ್ ಗೂ ಬೆಂಕಿ ಆವರಿಸಿ ಎರಡು ಕಾರ್ ಗಳು ಸುಟ್ಟು ಕರಕಲಾಗಿವೆ. ಕೋಲಾರ ನಗರದ ಕಠಾರಿಪಾಳ್ಯದಲ್ಲಿ ಮುಂಜಾನೆ 3 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ಬಿಜೆಪಿ ಅಭ್ಯರ್ಥಿ […]

3 days ago

ಮತ್ತೆ ಜಮೀನಿನಲ್ಲಿದ್ದ ಮೇವಿನ ಬಣವೆಗೆ ಕಿಡಿಕೇಡಿಗಳಿಂದ ಬೆಂಕಿ- ರೈತ ಕಂಗಾಲು

ರಾಯಚೂರು: ಜಮೀನಿನಲ್ಲಿದ್ದ ಮೇವಿನ ಬಣವೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರಿಂದ ಎರಡು ಬಣವೆಗಳು ಸಂಪೂರ್ಣ ಭಸ್ಮವಾಗಿರುವ ಘಟನೆ ರಾಯಚೂರಿನ ಲಿಂಗಸುಗೂರಿನ ಕನ್ನಾಪುರಹಟ್ಟಿಯಲ್ಲಿ ನಡೆದಿದೆ. ಮೇಗಳಪೇಟೆಯ ಹನುಮಂತ ಎಂಬ ರೈತನ ಜಮೀನಿನಲ್ಲಿ ಜಾನುವಾರುಗಳಿಗಾಗಿ ಸಂಗ್ರಹಿಸಿಟ್ಟಿದ್ದ ಮೇವಿನ ಬಣವೆಗಳಿಗೆ ಬೆಂಕಿ ಹಚ್ಚಲಾಗಿದೆ. ಲಿಂಗಸ್ಗೂರು ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವ ಹೊತ್ತಿಗೆ ಬಣವೆಗಳು ಸುಟ್ಟುಹೋಗಿದ್ದವು. 15 ದಿನಗಳ ಹಿಂದೆ ಇದೇ...

ಸಿಗರೇಟ್‍ನಿಂದಾಗಿ ನೋಡ ನೋಡುತ್ತಲೇ ಸುಟ್ಟು ಹೋಯ್ತು ಕಾರು- ವಿಡಿಯೋ ನೋಡಿ

1 week ago

ಬೀಜಿಂಗ್: ಟ್ರಾಫಿಕ್ ಸಿಗ್ನಲ್‍ನಿಂದಾಗಿ ನಿಂತಿದ್ದ ಕಾರು ಸಿಗರೇಟ್‍ನಿಂದಾಗಿ ಸುಟ್ಟುಹೋದ ಘಟನೆ ಚೀನಾದಲ್ಲಿ ನಡೆದಿದೆ. ಚೀನಾದ ಯೆಝೆಯಾಂಗ್ ಪ್ರಾಂತ್ಯದ ಯೆವಿಯ ವೃತ್ತ ಒಂದರಲ್ಲಿ ನಿಂತಿದ್ದ ಕೆಂಪು ಕಾರಿನಲ್ಲಿ ವ್ಯಕ್ತಿಯೊಬ್ಬರು ಸಿಗರೇಟ್ ಸೇವನೆ ಮಾಡಿದ್ದ ಪರಿಣಾಮ ಕಾರಿಗೆ ಬೆಂಕಿ ತಗುಲಿದೆ. ಪ್ರಾರಂಭದಲ್ಲಿ ಪ್ರಯಾಣಿಕರು ಕುಳಿತ...

ಅಗ್ನಿಕೊಂಡದಲ್ಲಿ ಬಿದ್ದು ಗಾಯಗೊಂಡಿದ್ದ ಅರ್ಚಕ ಸಾವು

1 week ago

ರಾಮನಗರ: ಇತ್ತೀಚೆಗೆ ಜಿಲ್ಲೆಯ ಕನಕಪುರ ತಾಲೂಕಿನ ಉಯ್ಯಂಬಳ್ಳಿ ಗ್ರಾಮದ ಮಾರಮ್ಮ ದೇವಿ ಜಾತ್ರೆಯ ವೇಳೆ ಅಗ್ನಿಕೊಂಡದಲ್ಲಿ ಬಿದ್ದು ಗಾಯಗೊಂಡಿದ್ದ ಅರ್ಚಕ ರವಿ ಪೂಜಾರಿ ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಏಪ್ರಿಲ್ 11ರಂದು ಉಯ್ಯಂಬಳ್ಳಿ ಗ್ರಾಮದ ಮಾರಮ್ಮದೇವಿ ಜಾತ್ರೆಯಲ್ಲಿ ಅಗ್ನಿಕೊಂಡ ಹಾಯುವ ವೇಳೆ...

4 ಅಂತಸ್ತಿನ ಕಟ್ಟಡದಲ್ಲಿ ಅಗ್ನಿ ಅವಘಡ- ಒಂದೇ ಕುಟುಂಬದ ನಾಲ್ವರ ದುರ್ಮರಣ

2 weeks ago

ನವದೆಹಲಿ: ಇಲ್ಲಿನ ಕೊಹಾತ್ ಎನ್ಕ್ಲೇವ್ ನಲ್ಲಿ ನಡೆದ ಭಾರೀ ಅಗ್ನಿ ದುರುಂತಕ್ಕೆ ಒಂದೇ ಕುಟುಂಬದ ನಾಲ್ವರು ಬಲಿಯಾದ ಆಘಾತಕಾರಿ ಘಟನೆ ನಡೆದಿದೆ. ಈ ಘಟನೆ ಇಂದು ಮುಂಜಾನೆ ನಡೆದಿದ್ದು, ಶಾರ್ಟ್ ಸರ್ಕ್ಯೂಟ್  ನಿಂದಾಗಿ ಈ ಅವಘಡ ಸಂಭವಿಸಿದೆ ಎಂದು ಅಗ್ನಿಶಾಮಕ ಇಲಾಖೆಯ...

ವಿಡಿಯೋ: ಉರಿಯುತ್ತಿದ್ದ ಕಟ್ಟಿಗೆಗೆ ಮತ್ತಷ್ಟು ಬೆಂಕಿ ಸುರಿದ ವ್ಯಕ್ತಿ-ಕ್ಷಣ ಮಾತ್ರದಲ್ಲಿ ಜ್ವಾಲೆಯಿಂದ ಪಾರು!

2 weeks ago

ಸಿಡ್ನಿ: ಮನೆಯ ಹಿಂಭಾಗದಲ್ಲಿ ಅಳವಡಿಸಲಾಗಿದ್ದ ಬೆಂಕಿಯ ತೊಟ್ಟಿಗೆ ವ್ಯಕ್ತಿಯೊಬ್ಬ ಮತ್ತಷ್ಟು ಬೆಂಕಿ ಸುರಿಯಲು ಯತ್ನಿಸಿ ಬೆಂಕಿಯ ಜ್ವಾಲೆಯಿಂದ ಕ್ಷಣ ಮಾತ್ರದಲ್ಲಿ ತಪ್ಪಿಸಿಕೊಂಡಿರುವ ಘಟನೆ ವಾಯುವ್ಯ ಸಿಡ್ನಿಯಲ್ಲಿ ನಡೆದಿದೆ. ಈ ಘಟನೆ ಏಪ್ರಿಲ್ 1 ರಂದು ನಡೆದಿದ್ದು, ಬೆಂಕಿ ಸಂಪೂರ್ಣವಾಗಿ ವ್ಯಕ್ತಿಯನ್ನು ಆವರಿಸುವ...

ಬೈಕ್, ಖಾಸಗಿ ಬಸ್ ಡಿಕ್ಕಿ: ಅಪಘಾತದ ರಭಸಕ್ಕೆ ಹೊತ್ತಿ ಉರಿಯಿತು ಎರಡು ವಾಹನ

2 weeks ago

ತುಮಕೂರು: ಬೈಕ್ ಹಾಗೂ ಖಾಸಗಿ ಬಸ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಅಪಘಾತದ ತೀವ್ರತೆ ಎರಡು ವಾಹನ ಧಗಧಗನೆ ಉರಿದು ಸಂಪೂರ್ಣ ಭಸ್ಮವಾದ ಘಟನೆ ಜಿಲ್ಲೆಯ ಚಿಕ್ಕನಾಯಕನಹಳ್ಳಿ ಬರಕನಾಳ್ ಗೇಟ್ ಬಳಿ ನಡೆದಿದೆ. ರಂಗಸ್ವಾಮಿ(20) ಸಾವನಪ್ಪಿದ್ದ ಬೈಕ್ ಸವಾರ. ಹುಳಿಯಾರಿನಿಂದ ಚಿಕ್ಕನಾಯ್ಕನಹಳ್ಳಿಯತ್ತ...

ಪಾಳು ಬಾವಿಗೆ ಬಿದ್ದ ಕರಡಿಗೆ ಬೆಂಕಿಯಿಟ್ಟ ಕಿಡಿಗೇಡಿಗಳು!

2 weeks ago

ಬಳ್ಳಾರಿ: ಹೊಲದ ಬಾವಿಯಲ್ಲಿ ಬಿದ್ದಿದ್ದ ಕರಡಿಯೊಂದು ಸಾರ್ವಜನಿಕರ ಆಕ್ರೋಶಕ್ಕೆ ಜೀವಂತವಾಗಿ ದಹನವಾಗಿರುವ ಘಟನೆ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕಡೇಕೊಳ್ಳದ ಬಳಿ ಜರಿಮಲೆ ಆರಣ್ಯದಲ್ಲಿ ನಡೆದಿದೆ. ಆಹಾರ ಹುಡುಕಿಕೊಂಡು ಕರಡಿಯೊಂದು ಸಮೀಪದ ರೈತರ ವೀಳ್ಯದೆಲೆ ತೋಟಕ್ಕೆ ಭಾನುವಾರ ಮಧ್ಯಾಹ್ನ ಬಂದಿದೆ. ಈ...