Tuesday, 23rd January 2018

Recent News

14 hours ago

ಮಾಜಿ ಸಚಿವ ಪರಮೇಶ್ವರ್ ನಾಯ್ಕ್ ಕೃಪಾಕಟಾಕ್ಷ -ಗನ್ ಮ್ಯಾನ್‍ಗೂ ಸರ್ಕಾರಿ ಕಾಮಗಾರಿ ಗುತ್ತಿಗೆ

ಬಳ್ಳಾರಿ: ರಾಜಕಾರಣಿಗಳಿಗೆ ಗನ್ ಮ್ಯಾನ್ ಗಳು ಭದ್ರತೆ ಕೊಡೋದನ್ನ ನೀವು ನೋಡಿರ್ತೀರಿ, ಕೇಳಿರ್ತೀರಿ. ಆದ್ರೆ ಮಾಜಿ ಸಚಿವ, ಹಾಲಿ ಶಾಸಕರಿಗೆ ಭದ್ರತೆ ನೀಡೋ ಗನ್ ಮ್ಯಾನ್ ಒಬ್ಬರಿಗೆ ಸರ್ಕಾರಿ ಕಾಮಗಾರಿಗಳ ಗುತ್ತಿಗೆ ಭಾಗ್ಯ ದೊರೆತಿದೆ. ಭದ್ರೆತೆ ನೀಡಿದ್ದಕ್ಕಾಗಿ ಶಾಸಕರು ಮೂರು ಕಾಮಗಾರಿಗಳ ಕೆಲಸವನ್ನು ಗನ್ ಮ್ಯಾನ್ ಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಮಾಜಿ ಸಚಿವ, ಹಡಗಲಿಯ ಹಾಲಿ ಶಾಸಕ ಪರಮೇಶ್ವರ ನಾಯ್ಕ್ ರ ಭ್ರಷ್ಟತನ ಈಗಾಗಲೇ ರಾಜ್ಯದ ಜನರಿಗೆ ತಿಳಿದಾಗಿದೆ. ಆದ್ರೆ ಇದೂವರೆಗೂ ಸರ್ಕಾರದಿಂದ ಬರೋ ಯೋಜನೆಗಳು, […]

1 day ago

ಜನಾರ್ದನ ರೆಡ್ಡಿ ರಾಜಕೀಯ ರೀಎಂಟ್ರಿಗೆ ಹಿನ್ನಡೆ – ಬಳ್ಳಾರಿಗೆ ಭೇಟಿ ನೀಡುವಂತಿಲ್ಲ

ಬೆಂಗಳೂರು: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ರಾಜಕೀಯ ಮರುಪ್ರವೇಶಕ್ಕೆ ಹಿನ್ನಡೆಯಾಗಿದೆ. ಬಳ್ಳಾರಿಯಿಂದ ಮತ್ತೆ ರಾಜಕೀಯ ಜೀವದಾನ ಪಡೆಯುವ ಗಣಿಧಣಿಯ ಕನಸಿಗೆ ಕಲ್ಲು ಬಿದ್ದಂತಾಗಿದೆ. ರೆಡ್ಡಿ ಜಾಮೀನು ಮಾರ್ಪಾಡಿಗೆ ಸುಪ್ರೀಂಕೋರ್ಟ್ ನಿರಾಕರಿಸಿದೆ. ಈ ಹಿಂದಿನ ಷರತ್ತು ಬದಲಾವಣೆಗೆ ಒಪ್ಪದ ಸುಪ್ರೀಂ ಕೋರ್ಟ್, ಬಳ್ಳಾರಿಗೆ ಹೋಗದಂತೆ ವಿಧಿಸಿದ್ದ ಷರತ್ತಿನಲ್ಲಿ ಸಡಿಲಿಕೆ ಇಲ್ಲ ಎಂದು ಹೇಳಿದೆ. ಷರತ್ತಿನ ಪ್ರಕಾರ...

ಗಣಿನಾಡಲ್ಲಿ ಜನ್ಯ ಮ್ಯೂಸಿಕ್ ಗೆ ಜನ್ರು ಫಿದಾ – ಬಾಲ ಗಾಯಕಿ ಆದ್ಯಾ ಹಾಡಿಗೆ ಮನಸೋತ ಪ್ರೇಕ್ಷಕರು

3 days ago

ಬಳ್ಳಾರಿ: ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾಡಿಗೆ ಗಣಿನಾಡಿನ ಪೇಕ್ಷಕರು ಹುಚ್ಚೆದ್ದು ಕುಣಿದು ಕುಪ್ಪಳಿಸಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ವತಿಯಿಂದ ಗಡಿನಾಡ ಕನ್ನಡಿಗರ ಸಮಾವೇಶದ ಸಮಾರೋಪ ಸಮಾರಂಭವನ್ನು ಶನಿವಾರ ಹಮ್ಮಿಕೊಳ್ಳಲಾಗಿತ್ತು. ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅರ್ಜುನ ಜನ್ಯ...

ಬೊಗಳುವ ನಾಯಿಗಳಿಗೆ ನಾವು ತಲೆಕೆಡಿಸಿಕೊಳ್ಳಲ್ಲ, ನಾವು ಹಠವಾದಿಗಳು: ಅನಂತ್ ಕುಮಾರ್ ಹೆಗ್ಡೆ

3 days ago

ಬಳ್ಳಾರಿ: ನಾವು ನಿಜವಾಗಿಯೂ ಹಠವಾದಿಗಳು. ಯಾವುದೋ ನಾಯಿ ಬೀದಿಯಲ್ಲಿ ನಿಂತೂ ಬೊಗಳಿದ್ರೆ ನಾವೂ ತಲೆಕೆಡಿಸಿಕೊಳ್ಳಲ್ಲ ಅಂತ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ಅವರು ತಮ್ಮ ವಿರೋಧಿಗಳಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ನಗರದಲ್ಲಿ ಉದ್ಯೋಗ ಮೇಳ ಉದ್ಘಾಟನೆ ಮಾಡಿ ಮಾತನಾಡಿದ...

ಬಳ್ಳಾರಿಯಲ್ಲಿ ನಾಲ್ವರು ಕಾಲೇಜು ವಿದ್ಯಾರ್ಥಿಗಳು ನಾಪತ್ತೆ- ಪೋಷಕರ ಆತಂಕ

6 days ago

ಬಳ್ಳಾರಿ: ನಾಲ್ವರು ಕಾಲೇಜು ವಿದ್ಯಾರ್ಥಿಗಳು ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ದೇವರಾಜ್, ಶ್ರೀನಿವಾಸ್, ಇಂದ್ರಸೇನಾ ಮತ್ತು ಸಂಜೀವ ನಾಪತ್ತೆಯಾದ ವಿದ್ಯಾರ್ಥಿಗಳು. ಬಳ್ಳಾರಿಯ ವಿ.ವಿ ಸಂಘದ ಕಾಲೇಜು ಮತ್ತು ಇತರೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ನಾಲ್ವರು ಸ್ನೇಹಿತರು ಕಳೆದ...

ಬಳ್ಳಾರಿ ರಾಜಕೀಯಕ್ಕೆ ಗಾಲಿ ಜನಾರ್ದನ ರೆಡ್ಡಿ ರಿಟರ್ನ್?

1 week ago

ಬಳ್ಳಾರಿ: ಮಾಜಿ ಸಚಿವ, ಗಣಿ ಧಣಿ ಗಾಲಿ ಜನಾರ್ದನ ರೆಡ್ಡಿ ಸಕ್ರೀಯ ರಾಜಕಾರಣಕ್ಕೆ ಬರಬೇಕು ಅಂತಾ ಸಂಸದ ಶ್ರೀರಾಮುಲು ಹೇಳಿದ್ದಾರೆ. ಬಳ್ಳಾರಿಯಲ್ಲಿ ಮಾತನಾಡಿದ ಸಂಸದ ಶ್ರೀರಾಮುಲು, ಜನಾರ್ದನ ರೆಡ್ಡಿ ರಾಜಕಾರಣಕ್ಕೆ ಬಂದರೆ ಬಳ್ಳಾರಿ, ರಾಯಚೂರು, ಕೊಪ್ಪಳ, ಗದಗ ಜಿಲ್ಲೆಯಲ್ಲಿ ಬಿಜೆಪಿ ಭರ್ಜರಿ...

ಹೊಸಪೇಟೆಯ ತುಂಗಭದ್ರಾ ಸ್ಟೀಲ್ ಫ್ಯಾಕ್ಟರಿ ಇನ್ನು ನೆನಪು ಮಾತ್ರ

1 week ago

ಬಳ್ಳಾರಿ: ಉದ್ಯೋಗ ಸೃಷ್ಠಿಯ ಹೆಸರಿನಲ್ಲಿ ಕೇಂದ್ರ ಸರ್ಕಾರ ಕಾರ್ಖಾನೆಗಳ ಸ್ಥಾಪನೆಗೆ ಅವಕಾಶ ನೀಡುತ್ತೆ. ಆದ್ರೆ ಸ್ವಂತ ಕೇಂದ್ರ ಸರ್ಕಾರಿ ಸ್ವಾಮ್ಯದ ಉಕ್ಕಿನ ಕಾರ್ಖಾನೆಗೇ ಇದೀಗ ಕೇಂದ್ರ ಸರ್ಕಾರ ಬೀಗ ಜಡಿದಿದೆ. ಹೌದು, ಆರ್ಥಿಕ ಮುಗ್ಗಟ್ಟಿನಿಂದ ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿರುವ ತುಂಗಭದ್ರಾ ಸ್ಟೀಲ್...