Saturday, 25th January 2020

2 months ago

ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಸರ್ಕಾರಕ್ಕೂ ಮುನ್ನ ಪುಟ್ಟ ಕಂದಮ್ಮಗಳ ನೆರವಿಗೆ ನಿಂತ ಎಚ್‍ಡಿಕೆ

ಕೊಪ್ಪಳ/ಚಿಕ್ಕಬಳ್ಳಾಪುರ: ಗಂಗಾವತಿಯಲ್ಲಿ ಬಡ ಕುಟುಂಬವೊಂದರ ಎರಡು ಮಕ್ಕಳು ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಕುರಿತು ಪಬ್ಲಿಕ್ ಟಿವಿ ವರದಿ ಮಾಡಿತ್ತು. ಈ ವರದಿಗೆ ಆರೋಗ್ಯ ಸಚಿವರು ಸ್ಪಂದಿಸುವ ಮೊದಲೇ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಸ್ಪಂದಿಸಿ ಮಾನವೀಯತೆ ಮೆರದಿದ್ದಾರೆ. ಗಂಗಾವತಿ ನಗರದ ದುರ್ಗಪ್ಪ ಮತ್ತು ಸಣ್ಣ ಮರೆಕ್ಕ ದಂಪತಿಗೆ ಎರಡು ಮಕ್ಕಳು ಇದ್ದಾರೆ. ಆದರೆ ದುರಾದೃಷ್ಟವಶಾತ್ ಮಕ್ಕಳು ಜನಿಸುತ್ತಲೆ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಹನುಮೇಶ್‍ನಿಗೆ(3) ಹೃದಯದಲ್ಲಿ ತೊಂದರೆ ಇದ್ದರೆ, 11 ತಿಂಗಳ ದೀಪಿಕಾಗೆ ದೇಹದಲ್ಲಿ ಸಕ್ಕರೆ ಅಂಶ ಇಲ್ಲದ ಕಾರಣ […]