Wednesday, 23rd May 2018

Recent News

4 months ago

ಮೋದಿ-ಜಶೋದಾ ಬೆನ್ ಬಗ್ಗೆ ಸಹೋದರ ಪ್ರಹ್ಲಾದ್ ಮೋದಿ ಹೀಗಂದ್ರು

ಬೆಂಗಳೂರು: ಕಾಂಗ್ರೆಸ್ಸಿಗರಿಗೆ ನರೇಂದ್ರ ಮೋದಿಯವರನ್ನು ಟೀಕಿಸಲು ಯಾವುದೇ ವಿಷಯ ಸಿಗುತ್ತಿಲ್ಲ. ಹೀಗಾಗಿ ಪದೇ ಪದೇ ಅತ್ತಿಗೆ ಯಶೋದಾ ಬೆನ್ ವಿಷಯವನ್ನು ಎಳೆದು ತರುವ ಪ್ರಯತ್ನ ಮಾಡುತ್ತಿದ್ದಾರೆ ಅಂತ ಮೋದಿ ಸಹೋದರ ಪ್ರಹ್ಲಾದ್ ಮೋದಿ ಸಿಡಿಮಿಡಿಗೊಂಡಿದ್ದಾರೆ. ಬನಶಂಕರಿ ಬಳಿಯ ಶ್ರೀ ಕೃಷ್ಣ ಗ್ರೂಪ್ ಆಪ್ ಇನ್ಸ್ ಟ್ಯೂಟ್ ನಡೆದ ರಾಷ್ಟ್ರೀಯ ಯುವ ದಿನಾಚರಣೆಯಲ್ಲಿ ಅವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಟೀಕಿಸಲು ತಮಗೆ ಬೇರೆ ಯಾವುದೇ ವಿಷಯ ಸಿಗದ ಕಾರಣ ಹೀಗಾಗಿ ಕಾಂಗ್ರೆಸ್ ನವರು ಪದೇ ಪದೇ […]

4 months ago

ಟಿಪ್ಪು ಜಯಂತಿ ಆಚರಿಸಿದ ಸರ್ಕಾರದಿಂದ ಸ್ವಾಮಿ ವಿವೇಕಾನಂದರ ಜಯಂತಿ ಯಾಕಿಲ್ಲ: ಸಿಟಿ ರವಿ

ಬೆಂಗಳೂರು: ಶಾಂತಿ ಸಂದೇಶ ಸಾರಿದ ಸ್ವಾಮಿ ವಿವೇಕಾನಂದರ ಹುಟ್ಟುಹಬ್ಬ ಆಚರಿಸಲು ರಾಜ್ಯ ಸರ್ಕಾರ ಮರೆತಿದೆ ಅಂತ ಬಿಜೆಪಿ ನಾಯಕ ಸಿಟಿ ರವಿ ಕಿಡಿಕಾರಿದ್ದಾರೆ. ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರದಿಂದ ಎಲ್ಲೂ ಅಧಿಕೃತವಾಗಿ ವಿವೇಕಾನಂದ ಹುಟ್ಟುಹಬ್ಬ ಆಚರಣೆ ಇಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಯಾವ ಇಲಾಖೆಗಳಿಂದಲೂ ವಿವೇಕಾನಂದರ ಜಯಂತಿ ಆಚರಣೆ...