Tuesday, 19th September 2017

Recent News

5 hours ago

ಇಬ್ಬರು ಹೆಣ್ಣುಮಕ್ಕಳ ಜೊತೆ ದಂಪತಿ ವಿಷ ಸೇವನೆ- ತಂದೆ, ಮಗಳು ಸಾವು

ಮುಂಬೈ: ಒಂದೇ ಕುಟುಂಬದ ನಾಲ್ವರು ಇಂದು ಬೆಳಗ್ಗೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮುಂಬೈನಲ್ಲಿ ನಡೆದಿದ್ದು, ತಂದೆ ಹಾಗೂ ಮಗಳು ಸಾವನ್ನಪ್ಪಿದ್ದಾರೆ. ಮನೀಷ್(30) ಹಾಗೂ ಪುತ್ರಿ ಪ್ರಗತಿ (7) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಅಲ್ಲದೇ ಪತ್ನಿ ಪಿಂಕಿ(28) ಹಾಗೂ ಮಗಳು ಪ್ರತಿಕ್ಷಾ(3) ಬದುಕುಳಿದಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಬೆಳಗ್ಗೆ 5.30ರ ಸುಮಾರಿಗೆ ಈ ಘಟನೆ ಜರುಗಿದೆ. ಮೃತ ಮನೀಷ್ ನಲಸೋಪಾರದಲ್ಲಿ ವಾಸವಾಗಿದ್ದು ಆತನ ಮನೆಯ ಸಮೀಪವೇ ಪೋಷಕರು ವಾಸವಾಗಿದ್ದರು. ಇಂದು ಬೆಳಗ್ಗೆ ತಂದೆ […]

6 hours ago

ಓಡಾಡುವ ಜಾಗಕ್ಕೆ ಸಂಬಂಧಿಸಿದಂತೆ ಗಲಾಟೆ: ಓರ್ವ ಸಾವು, ಇಬ್ಬರಿಗೆ ಗಂಭೀರ ಗಾಯ

ಮಂಡ್ಯ: ಓಡಾಡುವ ಜಾಗಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದ ಹಿನ್ನೆಲೆಯಲ್ಲಿ ಇಬ್ಬರಿಗೆ ಗಂಭೀರ ಗಾಯವಾಗಿದ್ದು ಓರ್ವ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ನಿಟ್ಟೂರು ಹೊಸದೊಡ್ಡಿ ಗ್ರಾಮದಲ್ಲಿ ನಡೆದಿದೆ. ನಾಗರಾಜು(55) ಮೃತ ದುರ್ದೈವಿ. ನಾಗರಾಜು ಪತ್ನಿ ಗೌರಮ್ಮ(44), ಮಗ ನಾರಾಯಣಸ್ವಾಮಿ(27) ಗಂಭೀರವಾಗಿ ಗಾಯಗೊಂಡವರು. ಚಲುವರಾಜು ಮತ್ತು ನಾಗರಾಜು ಮನೆ ಅಕ್ಕಪಕ್ಕದಲ್ಲಿತ್ತು. ಮನೆಯ ಸಮೀಪ ಓಡಾಡುವ ಜಾಗದ...

ಅತ್ತೆ, ಮಾವನಿಗೆ ಸಟ್ಟುಗ ಬಿಸಿಮಾಡಿ ಬರೆ ಹಾಕಿ ಚಿತ್ರಹಿಂಸೆ ಕೊಟ್ಟಿದ್ದ ಸೊಸೆ ಅರೆಸ್ಟ್

23 hours ago

ಉಡುಪಿ: ಅತ್ತೆ ಮಾವನನ್ನು ಚಿತ್ರಹಿಂಸೆ ಕೊಲೆಯತ್ನ ನಡೆಸಿದ್ದ ಸೊಸೆಯನ್ನ ಮಲ್ಪೆ ಠಾಣಾ ವ್ಯಾಪ್ತಿಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೌದು, ಹಲ್ಲೆಗೊಳಗಾದವರ ಮಕ್ಕಳಿಂದ ಅಶ್ವಿನಿ ಪೈ ವಿರುದ್ಧ ಕೇಸ್ ದಾಖಲಾಗಿತ್ತು. ದೂರಿನ ಹಿನ್ನೆಲೆಯಲ್ಲಿ ಮಲ್ಪೆಯ ನಿವಾಸದಲ್ಲಿದ್ದ ಅಶ್ವಿನಿಯನ್ನು ಪೊಲೀಸರು ಬಂಧಿಸಿದ್ದಾರೆ. ಏನು ಇದು...

12ನೇ ಕ್ಲಾಸ್ ವಿದ್ಯಾರ್ಥಿನಿಯ ಮೇಲೆ ಶಾಲೆಯ ನಿರ್ದೇಶಕ, ಶಿಕ್ಷಕನಿಂದ ಗ್ಯಾಂಗ್ ರೇಪ್

24 hours ago

ಜೈಪುರ: ಶಾಲಾ ನಿರ್ದೇಶಕ ಮತ್ತು ಶಿಕ್ಷಕ ಇಬ್ಬರು ಸೇರಿ 12 ನೇ ತರಗತಿ ವಿದ್ಯಾರ್ಥಿನಿಯ ಮೇಲೆ ನಿರಂತರವಾಗಿ ಅತ್ಯಾಚಾರ ಮಾಡಿರುವುದಲ್ಲದೇ ಗರ್ಭಪಾತ ಮಾಡಿಸಿರುವಂತಹ ಹೃದಯ ಕಲಕುವಂತಹ ಘಟನೆ ರಾಜಸ್ಥಾನದ ಸಿಕಾರ್ ಜಿಲ್ಲೆಯಲ್ಲಿ ನಡೆದಿದೆ. ಸಿಕರ್ ಜಿಲ್ಲೆಯ ಜನತಾ ಬಾಲ್ ನಿಕೇತನ್ ಶಾಲೆಯ...

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರದ ನಿರ್ಮಾಪಕ ಆನಂದ ಅಪ್ಪುಗೋಳ್ ಅರೆಸ್ಟ್

1 day ago

ಬೆಳಗಾವಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಹಕಾರಿ ಬ್ಯಾಂಕ್ ದಿವಾಳಿ ಪ್ರಕರಣದ ಹಿನ್ನೆಯಲ್ಲಿ ತಲೆಮರೆಸಿಕೊಂಡಿದ್ದ ಖ್ಯಾತ ನಿರ್ಮಾಪಕ ಆನಂದ ಅಪ್ಪುಗೋಳ್ ಅವರನ್ನು ಮುಂಬೈನಲ್ಲಿ ಪೊಲೀಸರು ಬಂಧಿಸಿದ್ದಾರೆ. ಸಾರ್ವಜನಿಕರ ಠೇವಣಿ ಹಣವನ್ನ ಸಕಾಲಕ್ಕೆ ಪಾವತಿಸಿಲ್ಲ. ಹೀಗಾಗಿ ಠೇವಣಿದಾರರಿಗೆ ನಂಬಿಕೆ ದ್ರೋಹ, ಮೋಸ, ವಂಚನೆ ಮಾಡಿದ...

ಫೇಸ್‍ಬುಕ್‍ನಲ್ಲಿ ಶಾಸಕರ ವಿರುದ್ಧ ಕಮೆಂಟ್ ಮಾಡಿದ್ದಕ್ಕೆ ಯುವಕನ ಮೇಲೆ ಹಲ್ಲೆ

1 day ago

ರಾಯಚೂರು: ಹದಗೆಟ್ಟ ರಸ್ತೆಯ ಬಗ್ಗೆ ಫೇಸ್ ಬುಕ್‍ನಲ್ಲಿ ಬೆಳಕು ಚೆಲ್ಲಿದ್ದಕ್ಕೆ ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಅವರ ಬೆಂಬಲಿಗರು ಹಾಗೂ ಪೊಲೀಸರು ಯುವಕರೊಬ್ಬರಿಗೆ ಥಳಿಸಿರುವ ಘಟನೆ ಸಿಂಧನೂರಿನಲ್ಲಿ ನಡೆದಿದೆ. ದುರಂತ ಅಂದರೆ ತಮ್ಮ ಬೆಂಬಲಿಗರ ಕೃತ್ಯವನ್ನು ಶಾಸಕ ಪ್ರತಾಪ್ ಗೌಡ...

45 ವರ್ಷದ ಮಗನಿಂದ ನಿರಂತರ ಅತ್ಯಾಚಾರ- 70ರ ತಾಯಿಯಿಂದ ಪೊಲೀಸರಿಗೆ ದೂರು

1 day ago

ಚಂಡೀಘಢ: 70 ವರ್ಷದ ಮಹಿಳೆಯ ಮೇಲೆ 45 ವರ್ಷ ವಯಸ್ಸಿನ ತನ್ನ ಮಗನೇ ನಿರಂತರ ಅತ್ಯಾಚಾರ ನಡೆಸಿರುವ ಆರೋಪ ಕೇಳಿಬಂದಿದೆ. ಪಂಜಾಬ್ ರಾಜ್ಯದ ಬಾತಲಾ ಗ್ರಾಮದ ನಿವಾಸಿಯಾದ ವೃದ್ಧೆ ಈ ಬಗ್ಗೆ ಶುಕ್ರವಾರದಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನಗೆ ನಾಲ್ಕು...

ಜನ್ರ ಮುಂದೆ ಮಾರಕಾಸ್ತ್ರಗಳಿಂದ ಕತ್ತು ಸೀಳಿ ಯುವಕನ ಬರ್ಬರ ಕೊಲೆ!

2 days ago

ಬೆಂಗಳೂರು: ನಗರದ ತುಮಕೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಜನರ ಎದುರೇ ಕಾರಿನಲ್ಲಿದ್ದ ಯುವಕನೊಬ್ಬನನ್ನ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕತ್ತು ಸೀಳಿ ಬರ್ಬರ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ನಗರದಲ್ಲಿ ನಡೆದಿದೆ. ಈ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಚಿಕ್ಕಬಿದರಕಲ್ಲು ಗ್ರಾಮದ ಬಸ್...