Wednesday, 19th July 2017

7 hours ago

ಹೊಸಕಾಡಿನಲ್ಲಿ ಹೊನ್ನಿನಂಥ ಬೆಳೆ ಬೆಳೆದ ಕೊಡಗಿನ ಗಿರಿಜನ ಕುಟುಂಬದ ರೈತ ಮಹೇಶ್

ಮಡಿಕೇರಿ: ಗಿರಿಜನರು ಎಂದಾಕ್ಷಣ ಸಾಮಾನ್ಯವಾಗಿ ನೆನಪಾಗೋದು ಸಂಕಷ್ಟದ ಬದುಕು. ಮುರುಕಲು ಗುಡಿಸಲು, ಕೂಲಿ ಮಾಡಿಕೊಂಡು ಒಪ್ಪತ್ತಿನ ಊಟಕ್ಕೂ ಪರದಾಡುವ ಅವರ ಸ್ಥಿತಿಗತಿ. ಆದ್ರೆ, ಮಡಿಕೇರಿಯ ಇವತ್ತಿನ ಪಬ್ಲಿಕ್ ಹೀರೋ ಆಗಿರೋ ಮಹೇಶ್ ಅನ್ನೋವ್ರು ಸ್ವಾವಲಂಬಿ ಬದುಕು ಕಟ್ಟಿಕೊಂಡು ಮಾದರಿ ರೈತರಾಗಿದ್ದಾರೆ. ಹೌದು. ಮಡಿಕೇರಿಯ ಕುಶಾಲನಗರದ ಬಳಿಯ ಹೊಸಕಾಡು ಗ್ರಾಮದ ಮಹೇಶ್ ಕುಟುಂಬ ಗಿರಿಜನರಿಗೆ ಪುನರ್ವಸತಿಗಾಗಿ ಮೂರು ದಶಕದ ಹಿಂದೆ ಸರ್ಕಾರ ನೀಡಿದ ಎರಡು ಎಕರೆ ಜಮೀನನಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ವಿವಿಧ ಬಗೆಯ ಜೋಳದ ಜೊತೆಗೆ ಹೈನುಗಾರಿಕೆ ನಡೆಸಿ […]

1 week ago

ಅಂಧರಾದ್ರೂ ಅನ್ಯರ ಬಾಳಿನ ಆಶಾಕಿರಣ-ಕಣ್ಣಿಲ್ಲದವರಿಗೆ ಸ್ವಾವಲಂಬಿ ಪಾಠ

ತುಮಕೂರು: ದೇಹದ ಎಲ್ಲಾ ಭಾಗಗಳು ಸರಿಯಿದ್ದರೂ ನಾವುಗಳು ಬೇರೆಯವರಿಗೆ ಸಹಾಯ ಮಾಡಲು ಯೋಚನೆ ಮಾಡುತ್ತವೆ, ಆದ್ರೆ ಇವತ್ತಿನ ನಮ್ಮ ಪಬ್ಲಿಕ್ ಹೀರೋ ಅಂಧರಾದ್ರೂ ಇತರರಿಗೆ ಮಾದರಿಯಾಗಿದ್ದಾರೆ. ತುಮಕೂರು ನಿವಾಸಿ ಶಿವಕುಮಾರ್ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಅಂಧ ಮಕ್ಕಳು ಹೆತ್ತವರಿಗೆ ಹೊರೆಯಾಗಬಾರದು, ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಬೇಕು ಅನ್ನೋ ಶಿವಕುಮಾರ್ 2008ರಲ್ಲಿ ಸ್ನೇಹಿತರ ಜೊತೆಗೂಡಿ ಅಂಧರ ಕ್ಷೇಮಾಭಿವೃದ್ಧಿ...

ಹಾಡಿನ ಮೂಲಕ ವಿಜ್ಞಾನದ ಕಲಿಕೆ- ಜಾಗೃತಿ ಜೊತೆ ಪಠ್ಯ ಬೋಧನೆ ಮಾಡುವ ವೀರೇಂದ್ರ ಪಾಟೀಲ್ ಮೇಷ್ಟ್ರು

2 weeks ago

ರಾಯಚೂರು: ಶಾಲೆಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಸರ್ಕಾರ ಹಾಕಿಕೊಳ್ಳೋ ಎಷ್ಟೋ ಯೋಜನೆಗಳು ಹಳ್ಳ ಹಿಡಿದಿವೆ. ಆದರೆ ಇವತ್ತಿನ ನಮ್ಮ ಪಬ್ಲಿಕ್ ಹೀರೋ ಹಾಡಿನ ಮೂಲಕ ಮಕ್ಕಳಿಗೆ ಶಿಕ್ಷಣ ಕೊಡಿಸೋ ಜೊತೆಗೆ ಪರಿಸರ ಜಾಗೃತಿ ಮೂಡಿಸ್ತಿದ್ದಾರೆ.   ನಗರದ ಗಾಜಗಾರಪೇಟೆ ಪ್ರೌಢಶಾಲೆ ವಿಜ್ಞಾನ...

ಹಾರೆ ಹಿಡಿದ್ರೆ ಕೃಷಿಕ, ಮುಂಡಾಸು ಕಟ್ಟಿದ್ರೆ ಗೋಪಾಲಕ- ಉಡುಪಿಯ ವಿಶ್ವಪ್ರಸನ್ನ ತೀರ್ಥರು ನಮ್ಮ ಪಬ್ಲಿಕ್ ಹೀರೋ

3 weeks ago

ಉಡುಪಿ: ಹಾರೆ ಹಿಡಿದು ಹೊರಟರೆ ಕೃಷಿಕ. ಮುಂಡಾಸು ಕಟ್ಟಿ ನಿಂತರೆ ಗೋಪಾಲಕ. ಆರತಿ ಹಚ್ಚಿ ಕುಳಿತರೆ ಶ್ರೀಕೃಷ್ಣನ ಸೇವಕ. ಹೌದು. ಉಡುಪಿಯ ಪೇಜಾವರ ಮಠದ ಕಿರಿಯ ಯತಿ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ನಮ್ಮ ಪಬ್ಲಿಕ್ ಹೀರೋ. ಮೂರು ಹೊತ್ತು ಪೂಜೆ ಮಾಡೋದು, ಭಕ್ತರು...

ಬರದ ನಾಡಲ್ಲಿ ಬಂಗಾರದ ಬೆಳೆ ಬೆಳೆದ ರೈತ ಚಂದ್ರಪ್ಪ- ಪ್ಲಾಸ್ಟಿಕ್ ಬದಲಿಗೆ ನ್ಯೂಸ್‍ಪೇಪರ್ ಹೊದಿಕೆ

4 weeks ago

ಕೋಲಾರ: ಹನಿ ನೀರಿಗೂ ಪರದಾಡ್ತಿರೋ ಕೋಲಾರದಲ್ಲಿ ಪರಿಸರ ಸ್ನೇಹಿ ಕೃಷಿ ವಿಧಾನದಿಂದ ಅತ್ಯಧಿಕ ಇಳುವರಿ ಪಡೆದಿದ್ದಾರೆ. ಅದರಲ್ಲೂ ಪ್ಲಾಸ್ಟಿಕ್ ಬದಲಿಗೆ ನ್ಯೂಸ್‍ಪೇಪರ್ ಬಳಸಿ ಮಾದರಿ ರೈತನಾಗಿದ್ದಾರೆ. ಇವತ್ತಿನ ಪಬ್ಲಿಕ್ ಹೀರೋದಲ್ಲಿ ಚಂದ್ರಪ್ಪ ಅವರ ಯಶೋಗಥೆ ಇದು. ಹೌದು. ಕ್ಯಾಪ್ಸಿಕಂ ಬೆಳೆಗೆ ನ್ಯೂಸ್...

ಜೀವಜಲಕ್ಕಾಗಿ ಗ್ರಾಮಸ್ಥರಲ್ಲಿ ಒಗ್ಗಟ್ಟು – ಸ್ವಂತ ಖರ್ಚಿನಲ್ಲಿ ಕೆರೆಗೆ ಕಾಯಕಲ್ಪ ನೀಡಿದ ಹಾವೇರಿಯ ರುದ್ರೇಶ್

4 weeks ago

ಹಾವೇರಿ: ರಾಜ್ಯದಲ್ಲಿ ಮಳೆ ಕೊರತೆ ಮತ್ತು ಬರಗಾಲಕ್ಕೆ ಕಾರಣ ಏನು ಅನ್ನೋದು ಎಲ್ಲರ ಅರಿವಿಗೆ ಬಂದಿದೆ. ಅದ್ರಲ್ಲೂ ರೈತಾಪಿ ವರ್ಗ ಭಾರೀ ಕಾಳಜಿ ವಹಿಸಿದೆ. ಹೀಗಾಗಿ, ರೈತರು, ಸ್ಥಳೀಯರು, ಸಂಘ ಸಂಸ್ಥೆಗಳು ಮೊದಲಿಗೆ ಹೂಳೆತ್ತುವ ಮೂಲಕ ಕೆರೆಗಳಿಗೆ ಕಾಯಕಲ್ಪ ನೀಡ್ತಿವೆ. ಹೀಗೆ...

ಸರ್ಕಾರಿ ಆಸ್ಪತ್ರೆಯಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸ್ತಿರೋ ಹಾಸ್ಟೆಲ್ ಸೂಪರಿಂಟೆಂಡೆಂಟ್ ರಾಜೇಂದ್ರ ಚಕ್ರವರ್ತಿ

4 weeks ago

ಚಿತ್ರದುರ್ಗ: ಇವತ್ತಿನ ನಮ್ಮ ಪಬ್ಲಿಕ್ ಹೀರೋ ಸರ್ಕಾರಿ ಆಸ್ಪತ್ರೆಯನ್ನ ಮಾದರಿ ಆಸ್ಪತ್ರೆಯನ್ನಾಗಿ ಮಾಡ್ತಿದ್ದಾರೆ. ಆದರೆ ಆಸ್ಪತ್ರೆಯನ್ನ ಬದಲು ಮಾಡ್ತೀರೋದು ಡಾಕ್ಟರ್ ಅಲ್ಲ, ಬದಲಿಗೆ ಒಬ್ಬ ಸಾಮಾನ್ಯ ವ್ಯಕ್ತಿ. ಚಿತ್ರದುರ್ಗದ ಸರ್ಕಾರಿ ಕಲಾ ಕಾಲೇಜು ಹಾಸ್ಟೆಲ್‍ನ ಸುಪರಿಂಟೆಂಡೆಂಟ್ ರಾಜೇಂದ್ರ ಚಕ್ರವರ್ತಿ ಇವತ್ತಿನ ನಮ್ಮ...

ಹೆಚ್‍ಐವಿ ಬಾಧಿತ ಮಕ್ಕಳ ಪಾಲಿನ ಬೆಳಕು ಬೆಳಗಾವಿ ಮಹೇಶ್!

1 month ago

ಬೆಳಗಾವಿ: ಹೆಚ್‍ಐವಿ ಎನ್ನುವ ಪದ ಕೇಳಿದರೆ ಸಾಕು ಜನ ದೂರ ಸರಿಯುತ್ತಾರೆ. ಇನ್ನು ಹೆಚ್‍ಐವಿ ಬಾಧಿತ ಮಕ್ಕಳು ಕಥೆ ಏನಾಗ್ಬೇಡಾ? ಆದರೆ, ಬೆಳಗಾವಿಯ ಪಬ್ಲಿಕ್ ಹೀರೋ ಒಬ್ಬರು ಇಂಥ ಮಕ್ಕಳ ಭವಿಷ್ಯಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ಕಣಬರ್ಗಿ ನಿವಾಸಿ ಮಹೇಶ್ ಜಾಧವ್ ವೃತ್ತಿಯಲ್ಲಿ...