Wednesday, 21st March 2018

Recent News

3 weeks ago

ಲೈವ್ ನ್ಯೂಸ್ ನಡೆಯುತ್ತಿದ್ದಾಗ ಆ್ಯಂಕರ್ ಮೇಲೆ ಬಂದು ಕುಳಿತ ಪಕ್ಷಿ – ವಿಡಿಯೋ ವೈರಲ್

ಕ್ಯಾಲಿಫೋರ್ನಿಯಾ: ಟಿವಿ ವಾಹಿನಿಯ ನೇರ ಪ್ರಸಾರದಲ್ಲಿ ತಮಾಷೆಯ ಸಂಗತಿಯೊಂದು ನಡೆದಿದ್ದು, ಪಕ್ಷಿಯೊಂದು ನೇರಪ್ರಸಾರದ ವೇಳೆ ನಿರೂಪಕಿಯ ತಲೆಯ ಮೇಲೆ ಬಂದು ಕುಳಿತುಕೊಂಡಿದೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋ ಮೃಗಾಲಯದ ಪಕ್ಷಿ ಇದಾಗಿದೆ. ಕಾರ್ಯಕ್ರಮಕ್ಕಾಗಿ ಪಕ್ಷಿಯನ್ನ ಸೆಟ್‍ಗೆ ತರಲಾಗಿತ್ತು. ಇಲ್ಲಿನ ಕೆಎಫ್‍ಎಂಬಿ ಟಿವಿಯಲ್ಲಿ ಬೆಳಗಿನ ಸುದ್ದಿ ಪ್ರಸಾರವಾಗುತ್ತಿತ್ತು. ಅಂದು “ಝೂ ಡೇ” ಎಂಬ ಕಾರ್ಯಕ್ರಮ ನಡೆಯುತ್ತಿತ್ತು. ನಿರೂಪಕರಾದ ನಿಚೆಲ್ ಮೆಡೆನಾ ಹಾಗೂ ಎರಿಕ್ ಕಹ್ನೆಟ್ ಸುದ್ದಿ ಓದುತ್ತಿದ್ದರು. ಇಬ್ಬರು ನಿರೂಪಕರು […]

1 month ago

ಒಂದಲ್ಲ, ಎರಡಲ್ಲ ನೂರಾರು ಪಕ್ಷಿಗಳು ರಾತ್ರಿ ಹೊತ್ತು ಪೆಟ್ರೋಲ್ ಬಂಕ್‍ಗೆ ಬಂದು ನೆಲದ ಮೇಲೆ ಕುಳಿತವು!

ವಾಷಿಂಗ್ಟನ್: ರಾತ್ರಿ ಹೊತ್ತಲ್ಲಿ ನೂರಾರು ಸಂಖ್ಯೆಯಲ್ಲಿ ಪಕ್ಷಿಗಳು ಪೆಟ್ರೋಲ್ ಬಂಕ್ ತುಂಬಾ ನೆಲದ ಮೇಲೆ ಕುಳಿತಿರೋ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ಇವು ಗ್ರಾಕಲ್ ಪಕ್ಷಿಗಳಾಗಿದ್ದು, ಟೆಕ್ಸಾಸ್‍ನ ಹೂಸ್ಟನ್ ನಲ್ಲಿರೋ ಎಕ್ಸಾನ್‍ಮೊಬಿಲ್ ಸ್ಟೇಷನ್ ನಲ್ಲಿ ಕುಳಿತಿರೋದು ವಿಡಿಯೋದಲ್ಲಿ ಸೆರೆಯಾಗಿದೆ. ಇಲ್ಲಿನ ಮಾಧ್ಯಮವೊಂದರ ನಿರೂಪಕಿ ಕ್ರಿಸ್ಟೀನ್ ಡೊಬ್ಬಿನ್ ಫೆಬ್ರವರಿ 2ರಂದು ಪೆಟ್ರೋಲ್ ಹಾಕಿಸಲೆಂದು ಬಂಕ್‍ಗೆ ಹೋದಾಗ ಈ...

ವಿದೇಶಿ ವಲಸೆ ಪಕ್ಷಿಗಳ ಸಾವಿಗೆ ಹಕ್ಕಿಜ್ವರ ಕಾರಣವಲ್ಲ-ಪಶುವೈದ್ಯರ ಸ್ಪಷ್ಟನೆ

3 months ago

ಮಂಡ್ಯ: ಮಂಡ್ಯ ಜಿಲ್ಲೆ ಮದ್ದೂರಿನಲ್ಲಿರುವ ಪ್ರಸಿದ್ಧ ಕೊಕ್ಕರೆ ಬೆಳ್ಳೂರಿನ ಪಕ್ಷಿಧಾಮದಲ್ಲಿ ಕೊಕ್ಕರೆಗಳ ಸಾವಿಗೆ ಜಂತುಹುಳು ಕಾರಣ ಎಂದು ವರದಿ ಬಂದಿದೆ. ಕಳೆದ ನಾಲ್ಕು ದಿನಗಳ ಹಿಂದೆ ಮೂರು ಹೆಜ್ಜಾರ್ಲೆ ಜಾತಿಯ ಕೊಕ್ಕರೆಗಳು ಅಸ್ವಸ್ಥಗೊಂಡು ಹಾರಲಾರದೇ ನೆಲಕ್ಕೆ ಬಿದ್ದಿದ್ದವು. ಇವುಗಳಿಗೆ ಚಿಕಿತ್ಸೆ ಕೊಡಿಸಿದರು,...

ತನ್ನ ಪ್ರತಿಬಿಂಬದ ಜೊತೆ ತಾನೇ ಗುದ್ದಾಡಿದ ಹಕ್ಕಿ: ವಿಡಿಯೋ ನೋಡಿ ನಕ್ಕುಬಿಡಿ

5 months ago

ಮೈಸೂರು: ಕನ್ನಡಿಯಲ್ಲಿ ಕಾಣುವ ತನ್ನದೇ ಪ್ರತಿಬಿಂಬವನ್ನು ನೋಡಿ ಇನ್ನೊಂದು ಹಕ್ಕಿ ಎಂದು ಭಾವಿಸಿ ಪಕ್ಷಿಯೊಂದು ಗುದ್ದಾಟ ಮಾಡಿರುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಎಲ್ಲರನ್ನು ನಗಿಸುವಂತೆ ಮಾಡಿದೆ. ಪ್ರತಿದಿನ ಕುವೆಂಪುನಗರ ಪೊಲೀಸ್ ಠಾಣೆಯ ಸಿಬ್ಬಂದಿಯೊಬ್ಬರ ಬೈಕಿನ ಕನ್ನಡಿ ಮುಂದೆ ಕುಳಿತ ಪಕ್ಷಿ...

ಮಂಡ್ಯ: ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ಗರುಡ ಪಕ್ಷಿಯ ರಕ್ಷಣೆ

9 months ago

ಮಂಡ್ಯ: ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ಗರುಡ ಪಕ್ಷಿಯನ್ನು ಮಂಡ್ಯದ ಉರಗ ಪ್ರೇಮಿ ನಾರಾಯಣ್ ರಕ್ಷಣೆ ಮಾಡಿ ಚಿಕಿತ್ಸೆ ನೀಡೋ ಮೂಲಕ ಮಾನವೀಯತೆ ತೋರಿದ್ದಾರೆ. ಬೆಂಗಳೂರು-ಮೈಸೂರು ಹೆದ್ದಾರಿಯ ನಗುವಿನಹಳ್ಳಿ ಬಳಿ ಗರುಡ ಪಕ್ಷಿಗೆ ಬಸ್ಸೊಂದು ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ಪರಿಣಾಮ ಗರುಡ ಪಕ್ಷಿಯ...

ಹಣ್ಣಿನ ತೋಟದ ರಕ್ಷಣೆಗೆ ಹಾಕಿದ್ದ ಬಲೆಗೆ ಸಿಲುಕಿ ನೂರಾರು ಪಕ್ಷಿಗಳ ಸಾವು- ಶ್ರೀರಂಗಪಟ್ಟಣದಲ್ಲಿ ಮನಕಲಕುವ ಘಟನೆ

10 months ago

ಮಂಡ್ಯ: ಹಣ್ಣಿನ ತೋಟಗಳ ರಕ್ಷಣೆಗೆ ಹಾಕಿದ್ದ ಬಲೆಗೆ ಸಿಲುಕಿ ನೂರಾರು ಪಕ್ಷಿಗಳು ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆ, ಶ್ರೀರಂಗಪಟ್ಟಣ ತಾಲೂಕಿನ, ಗಂಜಾಂ ಬಳಿ ನಡೆದಿದೆ. ಟಿಪ್ಪು ಸುಲ್ತಾನ್ ಸಮಾಧಿ ಸ್ಥಳ ಗುಂಬಸ್‍ಗೆ ಕೂಗಳತೆ ದೂರದಲ್ಲಿರುವ ತೋಟದಲ್ಲಿ ಅಂದಾನಯ್ಯ ಎಂಬವರು ಸೀಬೆ ಮತ್ತು...

ಬಳ್ಳಾರಿಯ ಈ ಕಾಲೇಜಿನ ವಿದ್ಯಾರ್ಥಿಗಳು ಪಕ್ಷಿಗಳ ನೀರಡಿಕೆಗೆ ಮಾಡಿದ್ರು ಸೂಪರ್ ಐಡಿಯಾ!

11 months ago

ಬಳ್ಳಾರಿ: ಜಿಲ್ಲೆ ಇದೀಗ ಅಕ್ಷರಶಃ ಕಾಯ್ದ ಕೆಂಡವಾಗಿದೆ. ಬಿರುಬಿಸಿಲಿನಿಂದ ಜನರು ಹೈರಾಣಾಗಿ ಹೋಗಿದ್ದಾರೆ. ಜನರು ಸೇರಿದಂತೆ ಜಾನುವಾರುಗಳು ಕೂಡ ನೀರಿಗೆ ಪರಿತಪಿಸುವಂತಾಗಿದೆ. ಪಕ್ಷಿಗಳ ಪರಿಸ್ಥಿತಿಯಂತೂ ಹೇಳತೀರದೂ, ಹೀಗಾಗಿ ಬಳ್ಳಾರಿಯ ಕಾಲೇಜು ವಿದ್ಯಾರ್ಥಿಗಳು ಈ ಬಾರಿ ಕಾಲೇಜಿನ ಆವರಣದಲ್ಲಿನ ಗಿಡಮರಗಳಲ್ಲಿ ಮಡಿಕೆಯಿಟ್ಟು ಪಕ್ಷಿಗಳಿಗೆ...

ಪಕ್ಷಿಗಳಿಗೆ ಎಲ್ಲಾ ಕಾಲದಲ್ಲೂ ಸಿಗುತ್ತೆ ಆಸರೆ- ಇದು ಬೀದರ್‍ನ ಮಸ್ಕಲ್ ಗ್ರಾಮಸ್ಥರ ಪಕ್ಷಿಪ್ರೇಮ

11 months ago

ಬೀದರ್: ಬೇಸಿಗೆ ಪ್ರಾರಂಭವಾಗಿದ್ದು, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ದಾಖಲೆಯ ಪ್ರಮಾಣದಲ್ಲಿ ಬಿಸಿಲು ದಾಖಲಾಗುತ್ತಿದೆ. ಜನರಿಗೇನೋ ಮಾತು ಬರುತ್ತೆ ಸಂಕಟ, ಸಮಸ್ಯೆಯನ್ನ ಹೇಳ್ಕೊಳ್ತಾರೆ. ಆದ್ರೆ ಪ್ರಾಣಿ-ಪಕ್ಷಿಗಳು ಏನು ಮಾಡ್ಬೇಕು? ಇಂಥ ಪಕ್ಷಿಗಳಿಗೆ ಬೀದರ್‍ನ ಮಸ್ಕಲ್ ಗ್ರಾಮಸ್ಥರು ಒಳ್ಳೇ ಐಡಿಯಾ ಮಾಡಿ ಆಶ್ರಯ ಕೊಟ್ಟಿದ್ದಾರೆ....