Monday, 23rd April 2018

Recent News

1 day ago

5 ದಿನ 15 ರ‍್ಯಾಲಿಯಲ್ಲಿ ಮೋದಿ ಭಾಗಿ – ಯಾವ ದಿನ ಎಲ್ಲೆಲ್ಲಿ ಕಾರ್ಯಕ್ರಮ?

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಕೆಲ ದಿನಗಳು ಬಾಕಿ ಇದ್ದು, ರಾಜ್ಯದಲ್ಲಿ ಬಿಜೆಪಿ ಪರ ಪ್ರಚಾರ ನಡೆಸಲು ಪ್ರಧಾನಿ ನರೇಂದ್ರ ಮೋದಿ ಅವರ ರಾಜ್ಯ ಪ್ರವಾಸದ ಪಟ್ಟಿ ತಯಾರಾಗಿದೆ. ಮೇ 1 ರಂದು ರಾಜ್ಯಕ್ಕೆ ಪ್ರಧಾನಿ ಮೋದಿ ಆಗಮಿಸಲಿದ್ದು, 5 ದಿನ ವಿವಿಧ ಜಿಲ್ಲೆಗಳಲ್ಲಿ ನಡೆಯುವ 15 ಕಾರ್ಯಕ್ರಮಗಳಲ್ಲಿ ಪ್ರಧಾನಿ ಮೋದಿ ಭಾಗಿಯಾಗಲಿದ್ದಾರೆ. ವಿಶೇಷ ಏನೆಂದರೆ ಬೆಂಗಳೂರಿನಲ್ಲಿ ಎರಡು ಬೃಹತ್ ರ‍್ಯಾಲಿಗಳಲ್ಲಿ ಮೋದಿ ಭಾಗಿಯಾಗಲಿದ್ದಾರೆ. ಫೆಬ್ರವರಿ ಮೊದಲ ವಾರದಲ್ಲಿ ಮೋದಿ ಬೆಂಗಳೂರಿನಲ್ಲಿ ನಡೆದ ಪರಿವರ್ತನಾ ಯಾತ್ರೆಯ ಸಮಾರೋಪ […]

1 day ago

ರಾಹುಲ್ ಬಾರದ ಕೃಷ್ಣಮಠಕ್ಕೆ ಮೋದಿ ಭೇಟಿ – ಮೇ 1 ರಂದು ಉಡುಪಿಗೆ ಪ್ರಧಾನಿ

ಉಡುಪಿ: ಪ್ರಧಾನಿ ನರೇಂದ್ರ ಮೋದಿ ಮೇ 1 ರಂದು ಉಡುಪಿಗೆ ಆಗಮಿಸಲಿದ್ದಾರೆ. ಪ್ರಧಾನಿಯಾದ ನಂತರ ಮೊದಲ ಬಾರಿಗೆ ಉಡುಪಿಗೆ ಬರುತ್ತಿರುವ ಮೋದಿ, ಮೊದಲು ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಲಿದ್ದಾರೆ. ಮುಖ್ಯಪ್ರಾಣ ದೇವರ ದರ್ಶನಗೈಯ್ಯಲಿದ್ದಾರೆ. ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಿ ಪರ್ಯಾಯ ಪಲಿಮಾರುಶ್ರೀ, ಮತ್ತು ಪೇಜಾವರ ಶ್ರೀಗಳ ಆಶೀರ್ವಾದ ಪಡೆದು ಮಾತುಕತೆ ಮಾಡಲಿದ್ದಾರೆ. ನಂತರ ಎಂಜಿಎಂ...

ದೇಶದ ಮಹಿಳೆಯರ ಸುರಕ್ಷತೆ ಬಗ್ಗೆ ಮೋದಿ ಗಮನ ಹರಿಸಬೇಕು- ಐಎಂಎಫ್ ಮುಖ್ಯಸ್ಥೆ

4 days ago

ವಾಷಿಂಗ್ಟನ್: ಇತ್ತೀಚೆಗೆ ಜಮ್ಮು ಕಾಶ್ಮೀರದಲ್ಲಿ 8 ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಬಗ್ಗೆ ಐಎಂಎಫ್ ಮುಖ್ಯಸ್ಥೆ ಕ್ರಿಸ್ಟೀನ್ ಲಗಾರ್ಡೆ ವೈಯಕ್ತಿಕವಾಗಿ ಆತಂಕ ವ್ಯಕ್ತಪಡಿಸಿದ್ದಾರೆ. ಜಮ್ಮು ಕಾಶ್ಮೀರದ ಕಥುವಾ ಮತ್ತು ಉತ್ತರ ಪ್ರದೇಶದ ಉನ್ನಾವೋ ದಲ್ಲಿ ನಡೆದ ಅತ್ಯಾಚಾರವನ್ನು...

ಕರ್ನಾಟಕದಲ್ಲಿ ಈ ಬಾರಿ ಅತಂತ್ರ ಸರ್ಕಾರ!

4 days ago

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣಾ ಕಣ ಕಾವೇರಿದೆ. ಚುನಾವಣೆಗೆ ಇನ್ನೂ 23 ದಿನಗಳು ಬಾಕಿ ಉಳಿದಿವೆ. ಮತದಾರರ ಮನ ಗೆಲ್ಲಲು ಅಭ್ಯರ್ಥಿಗಳು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ. ತಂತ್ರ-ಪ್ರತಿತಂತ್ರದಲ್ಲಿ ತೊಡಗಿದ್ದಾರೆ. ಪಬ್ಲಿಕ್‍ಟಿವಿ ಕೂಡ ಮಿನಿ ಸರ್ವೇ ನಡೆಸಿದೆ. ಈ ಸರ್ವೆ ವೇಳೆ ಹಲವಾರು...

ಬುಡಕಟ್ಟು ಜನಾಂಗದ ಮಹಿಳೆಗೆ ಪಾದರಕ್ಷೆ ತೊಡಿಸಿದ ಪ್ರಧಾನಿ ಮೋದಿ

1 week ago

ರಾಯ್‍ಪುರ: ಛತ್ತೀಸಘಡ್ ರಾಜ್ಯದ ಬಿಜಾಪುರದಲ್ಲಿ ನಡೆದ ಕಾರ್ಯಕ್ರಮಮೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಬುಡಕಟ್ಟು ಜನಾಂಗದ ಮಹಿಳೆಗೆ ಪಾದರಕ್ಷೆ ತೊಡಿಸುವ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇಲ್ಲಿನ ಅರಣ್ಯ ಪ್ರದೇಶದಲ್ಲಿ ಟೆಂಡು ಎಲೆಗಳ ಸಂಗ್ರಹಣೆಗಾಗಿ ಅಲೆಯುವ ಬುಡಕಟ್ಟು ಜನರಿಗಾಗಿ ರೂಪಿಸಿರುವ ‘ಚರಣ್ ಪಾದುಕಾ’ (ಪಾದರಕ್ಷೆ...

ಮೋದಿ ಜೊತೆ ರಾಜ್ಯಕ್ಕೆ ಬರಲಿದ್ದಾರೆ ಸ್ಟಾರ್ ಪ್ರಚಾರಕರು

2 weeks ago

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಪ್ರಚಾರ ಕಾರ್ಯ ಜೋರಾಗುತ್ತಿದ್ದರೂ ಫೆಬ್ರವರಿಯಲ್ಲಿ ಮಾತ್ರ ಬಂದಿದ್ದ ಪ್ರಧಾನಿ ಮೋದಿ ಪ್ರಚಾರಕ್ಕೆ ಬರ್ತಿಲ್ಲ ಯಾಕೆ ಅನ್ನೋ ಚರ್ಚೆ ವ್ಯಾಪಕವಾಗುತ್ತಿದೆ. ಈ ಪ್ರಶ್ನೆಗೆ ಉತ್ತರ ಎಂಬಂತೆ ಏಪ್ರಿಲ್ ಕೊನೆಯ ವಾರದಲ್ಲಿ ಪ್ರಧಾನಿ ಮೋದಿ ರಾಜ್ಯಕ್ಕೆ ಬರುತ್ತಿದ್ದು, ಬೆಂಗಳೂರು,...