Saturday, 24th February 2018

Recent News

2 days ago

ಬಣವೆ ಬಳಿ ಆಟವಾಡುತ್ತಿದ್ದ ಬಾಲಕ ಬೆಂಕಿಗಾಹುತಿಯಾದ

ಧಾರವಾಡ: ಆಕಸ್ಮಿಕ ಬೆಂಕಿ ಅನಾಹುತಕ್ಕೆ ಬಾಲಕ ಬಲಿಯಾಗಿರುವ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲುಕಿನ ಕುರುವಿನಕೊಪ್ಪ ಗ್ರಾಮದಲ್ಲಿ ನಡೆದಿದೆ. 7 ವರ್ಷದ ಬಾಲಕ ಚಂದನ ಸಂಗೊಳ್ಳಿ ಮೃತ ದುರ್ದೈವಿ. ದ್ಯಾಮಣ್ಣ ಕೊಂಕಣ್ಣವರ ಅವರಿಗೆ ಸೇರಿದ ಬಣವೆಗೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಬಣವೆಯ ಬಳಿ ಆಟವಾಡುತ್ತಿದ್ದ ಬಾಲಕ ಚಂದನ ಸಂಗೊಳ್ಳಿ ಬೆಂಕಿಗೆ ಆಹುತಿಯಾಗಿದ್ದಾನೆ. ಬೆಂಕಿ ನಂದಿಸಲು ಅಗ್ನಿಶಾಮಕ ದಳ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ. ಕಲಘಟಗಿ ಪೊಲೀಸರು ಬಣವೆಗೆ ಬೆಂಕಿ ಹೊತ್ತಿಕೊಂಡ ಬಗ್ಗೆ ಮಹಿತಿ ಕಲೆ ಹಾಕುತ್ತಿದ್ದಾರೆ.

3 days ago

ಟೈರ್ ಸ್ಫೋಟಗೊಂಡು ದೇವಸ್ಥಾನಕ್ಕೆ ಗುದ್ದಿದ ಲಾರಿ- ತಪ್ಪಿದ ಭಾರೀ ಅನಾಹುತ

ಧಾರವಾಡ: ಟೈರ್ ಸ್ಫೋಟಗೊಂಡು ಲಾರಿಯೊಂದು ದೇವಸ್ಥಾನಕ್ಕೆ ಗುದ್ದಿದ್ದು, ಭಾರೀ ಅನಾಹುತವೊಂದು ತಪ್ಪಿದ ಘಟನೆ ಧಾರವಾಡ ಜಿಲ್ಲೆಯ ಗುಳೇದಕೊಪ್ಪ ಗ್ರಾಮದಲ್ಲಿ ನಡೆದಿದೆ. ಬೆಳಗಾವಿಯಿಂದ ಧಾರವಾಡಕ್ಕೆ ತೆರಳುತ್ತಿದ್ದಾಗ ಲಾರಿ ಐತಿಹಾಸಿಕ ಈಶ್ವರ ದೇವಸ್ಥಾನಕ್ಕೆ ಹಿಂದಿನಿಂದ ಗುದ್ದಿದೆ. ಅಕ್ಕಪಕ್ಕದಲ್ಲಿ ಮನೆಗಳಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ಕ್ಕೆ ಹೊಂದಿಕೊಂಡಿರುವ ದೇವಸ್ಥಾನ ಇದಾಗಿದೆ. ಇಂದು ಬೆಳಗಿನ ಜಾವ 7ಗಂಟೆ...

ಮೋದಿ, ಅಮಿತ್ ಶಾ ತಲೆಯಲ್ಲಿ ಏನು ಇಲ್ಲ ಅನ್ನೋದಕ್ಕೆ ಪುರಾವೆ ನನ್ನಲ್ಲಿದೆ: ಪ್ರಕಾಶ್ ರೈ

1 week ago

ಧಾರವಾಡ: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಪಕೋಡಾ ಮಾಡುವುದನ್ನು ಉದ್ಯೋಗ ಎನ್ನುತ್ತಿದೆ. ಏಕೆಂದರೆ ಅವರು ರೈತರ ಸಮಸ್ಯೆ ಎಂದರೆ ಟೊಮೆಟೊ, ಪೊಟ್ಯಾಟೋ, ಆನಿಯನ್ ಅಷ್ಟೇ ಎಂದು ತಿಳಿದುಕೊಂಡಿದ್ದಾರೆ. ಅವರ ತಲೆಯಲ್ಲಿ ಅಷ್ಟೇ ಇದೇ ಎಂದು ಮತ್ತೊಮ್ಮೆ ನಟ ಪ್ರಕಾಶ್ ರೈ ವಾಗ್ದಾಳಿ...

ಜೀನ್ಸ್ ಪ್ಯಾಂಟ್, ಚೂಡಿದಾರ ಬಿಟ್ಟು ಇಳಕಲ್ ಸೀರೆ ತೊಟ್ಟ ವಿದ್ಯಾರ್ಥಿನಿಯರು

2 weeks ago

ಧಾರವಾಡ: ಜೀನ್ಸ್ ಪ್ಯಾಂಟ್ ಹಾಗೂ ಚೂಡಿದಾರ ಹಾಕೋದನ್ನು ಬಿಟ್ಟು ಸ್ವಲ್ಪ ಡಿಫ್ರೆಂಟಾಗಿ ಡ್ರೆಸ್ಸಿಂಗ್ ಮಾಡಿಕೊಂಡು ಧಾರವಾಡ ನಗರದ ಜಿಗಳೂರ ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಮಿಂಚಿದ್ದಾರೆ. ಕಾಲೇಜಿನಲ್ಲಿ ಶನಿವಾರ ಸಾಂಪ್ರದಾಯಿಕ ದಿನ ಆಚರಣೆ ಮಾಡಿದ್ದಾರೆ. ಆದ್ದರಿಂದ ವಿದ್ಯಾರ್ಥಿನಿಯರೆಲ್ಲರೂ ಸೇರಿ ಚೂಡಿದಾರ ಹಾಗೂ ಜೀನ್ಸ್...

ಟ್ರಾನ್ಸ್ ಫಾರ್ಮರ್ ಗೆ ತಾಗಿದ ಟ್ರ್ಯಾಕ್ಟರ್ – ಬೆಂಕಿಗೆ ಮೇವು ಭಸ್ಮ

4 weeks ago

ಧಾರವಾಡ: ಒಣ ಮೇವು ಸಾಗಿಸುತ್ತಿದ್ದ ಟ್ರ್ಯಾಕ್ಟರ್‍ಗೆ ಬೆಂಕಿ ಹೊತ್ತಿಕೊಂಡು ಪರಿಣಾಮ ಟ್ರ್ಯಾಕ್ಟರ್ ನಲ್ಲಿದ್ದ ಸುಮಾರು 30 ಸಾವಿರ ರೂಪಾಯಿ ಮೌಲ್ಯದ ಮೇವು ಭಸ್ಮವಾದ ಘಟನೆ ನಡೆದಿದೆ. ಧಾರವಾಡದ ಕೋರ್ಟ್ ವೃತ್ತದ ಬಳಿ ಈ ಘಟನೆ ನಡೆದಿದ್ದು, ಟ್ರ್ಯಾಕ್ಟರ್ ನಲ್ಲಿ ಮೇವು ತುಂಬಿಕೊಂಡು...

ಬೀದಿ ಬದಿ ವ್ಯಾಪಾರಿಯನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದ್ರು

1 month ago

ಧಾರವಾಡ: ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಂಡು ಬೀದಿ ಬದಿಯ ವ್ಯಾಪಾರಿಯನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಧಾರವಾಡದ ಜಯನಗರ ಬಡಾವಣೆಯಲ್ಲಿ ನಡೆದಿದೆ. ಪರಮಾನಂದ ಕೆಂಬಾವಿ(25) ಕೊಲೆಯಾದ ವ್ಯಾಪಾರಿ. ಜಯನಗರದಲ್ಲಿ ನಿವಾಸಿಯಾದ ಪರಮಾನಂದ ಪಾನ್ ಶಾಪ್ ನಡೆಸುತ್ತಿದ್ದರು. ಭಾನುವಾರ ಮಧ್ಯರಾತ್ರಿ ಅಂಗಡಿಗೆ...

ಜಾನಪದ ಗೀತೆಗಳ ಮಾಧುರ್ಯದೊಂದಿಗೆ ಸಂಕ್ರಾಂತಿ ಆಚರಣೆ

1 month ago

ಧಾರವಾಡ: ನಮ್ಮಲ್ಲಿನ ಬಹುತೇಕ ಹಬ್ಬಗಳಿಗೆ ಒಂದೊಂದು ಪ್ರಾಕೃತಿಕ ಹಿನ್ನೆಲೆಯನ್ನು ಹೊಂದಿವೆ. ಆಯಾ ಸಮಯದಲ್ಲಿನ ವಿಶೇಷತೆಗೆ ಅನುಗುಣವಾಗಿ ಹಬ್ಬಗಳನ್ನ ಆಚರಿಸಲಾಗುತ್ತೆ. ಧಾರವಾಡದಲ್ಲಿ ಸಂಕ್ರಮಣ ಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಾರೆ. ಈ ಹಬ್ಬವನ್ನ ಧಾರವಾಡದಲ್ಲಿ ಅತ್ಯಂತ ವಿಷೇಶವಾಗಿ ಆಚರಣೆ ಮಾಡಲಾಗಿದೆ. ಮೈತುಂಬಾ ಚಿನ್ನದ ಆಭರಣ ಧರಿಸಿರುವ...

ಮುಸ್ಲಿಂರನ್ನು ಅನುಮಾನದಿಂದ ನೋಡುತ್ತಾರೆ ಹೇಳಿಕೆಗೆ ಕ್ಷಮೆ ಕೋರಿದ ಸಚಿವ ಯು.ಟಿ.ಖಾದರ್

1 month ago

ಧಾರವಾಡ: ವಿಮಾನ ನಿಲ್ದಾಣದಲ್ಲಿ ಪ್ರಯಾಣಿಸುವ ವೇಳೆ ನನ್ನ ಹೆಸರು ಯು.ಟಿ.ಖಾದರ್ ಎಂದು ಹೇಳಿದ ತಕ್ಷಣ ಒಂದು ಸಾರಿ ಅಲ್ಲ, ಬದಲಾಗಿ ಎರಡು ಸಾರಿ ತಪಾಸಣೆ ಮಾಡಲಾಗುತ್ತೆ ಎಂದು ವಿವಾದತ್ಮಕ ಹೇಳಿಕೆ ನೀಡಿದ್ದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ಯು.ಟಿ....