Wednesday, 28th June 2017

Recent News

1 month ago

ಶೂಟಿಂಗ್ ವೇಳೆ ದೊಡ್ಡಣ್ಣ ಅಸ್ವಸ್ಥ: ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ದಾಖಲು

ಬೆಂಗಳೂರು: ಶೂಟಿಂಗ್ ವೇಳೆ ಅಸ್ವಸ್ಥರಾಗಿ ವಿಜಯಪುರದ ಆಸ್ಪತ್ರೆಗೆ ದಾಖಲಾಗಿದ್ದ ಕನ್ನಡದ ಹಿರಿಯ ನಟ ದೊಡ್ಡಣ್ಣ ಈಗ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಸುಗುಣಾ ಆಸ್ಪತ್ರೆ ದಾಖಲಾಗಿದ್ದಾರೆ. ಡಿ ಹೈಡ್ರೇಷನ್‍ನಿಂದ ಬಳಲುತ್ತಿದ್ದ ದೊಡ್ಡಣ್ಣನವರಿಗೆ ವಿಜಯಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಇಂದು ದೊಡ್ಡಣ್ಣ ಅವರನ್ನು ವಿಶೇಷ ಅಂಬುಲೆನ್ಸ್ ಮೂಲಕ ಬೆಂಗಳೂರಿಗೆ ಕರೆತರಲಾಗಿದೆ. ದೊಡ್ಡಣ್ಣ ಆಪ್ತರಾದ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಸಲಹೆಯ ಮೇರೆಗೆ ಬೆಂಗಳೂರಿನ ಆಸ್ಪತ್ರೆಗೆ ಮಧ್ಯಾಹ್ನ ದೊಡ್ಡಣ್ಣ ದಾಖಲಾಗಿದ್ದಾರೆ. ಕುಟುಂಬ ವೈದ್ಯರಾದ ವೈಎ ಸುರೇಶ್ ದೊಡ್ಡಣ್ಣ ಅವರಿಗೆ ಚಿಕಿತ್ಸೆ ಚಿಕಿತ್ಸೆ ನೀಡುತ್ತಿದ್ದಾರೆ. […]

1 month ago

ಹಿರಿಯ ನಟ ದೊಡ್ಡಣ್ಣ ಅಸ್ವಸ್ಥ: ಆಸ್ಪತ್ರೆಗೆ ದಾಖಲು

ವಿಜಯಪುರ: ಶೂಟಿಂಗ್ ವೇಳೆ ಹಿರಿಯ ಪೋಷಕ ನಟ ದೊಡ್ಡಣ್ಣ ಅಸ್ವಸ್ಥಗೊಂಡಿದ್ದು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ತೆಲುಗು ಚಿತ್ರದ ಶೂಟಿಂಗ್ ನಡೆಸಲು ಬುಧವಾರ ದೊಡ್ಡಣ್ಣ ಬೆಂಗಳೂರಿನಿಂದ ನಗರಕ್ಕೆ ಆಗಮಿಸಿದ್ದರು. ನಗರದಿಂದ 40 ಕಿಲೋ ದೂರದ ಸೋಲ್ಹಾಪುರ ರಸ್ತೆಯಲ್ಲಿ ಚಿತ್ರೀಕರಣ ನಡೆಸುತ್ತಿದ್ದಾಗ ಅಸ್ವಸ್ಥಗೊಂಡಿದ್ದು ಈಗ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ. ಡಿಹೈಡ್ರೇಷನ್‍ನಿಂದ ಬಳಲುತ್ತಿರುವ ದೊಡ್ಡಣ್ಣ ಚಿತ್ರೀಕರಣದ ವೇಳೆ...