Monday, 19th March 2018

3 days ago

6 ದಶಕಗಳ ನಂತ್ರ ಸಿಕ್ತು ಸರ್ಕಾರಿ ಮನೆ – ಕುಟುಂಬ ಸಮೇತರಾಗಿ ಗೃಹ ಪ್ರವೇಶ ಮಾಡಿದ ಮಾಜಿ ಪ್ರಧಾನಿ

ಹಾಸನ: ಹೆಚ್ಚು ಕಡಿಮೆ 6 ದಶಕಗಳ ಕಾಲ ರಾಜಕೀಯ ಹಾದಿ ಸವೆಸಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಈಗಷ್ಟೇ ತವರು ಜಿಲ್ಲೆಯಲ್ಲಿ ಸರ್ಕಾರಿ ಮನೆ ಸಿಕ್ಕಿದೆ. ಹಾಸನದ ಎಸ್‍ಪಿ ಕಚೇರಿ ಪಕ್ಕದಲ್ಲಿ ಸರ್ಕಾರದ ಕಡೆಯಿಂದ ವಿಶಾಲ ಮನೆಯೊಂದನ್ನು ನಿರ್ಮಿಸಲಾಗಿದ್ದು, ಗೌಡರು ಕುಟುಂಬ ಸಮೇತರಾಗಿ ಹೊಸ ಮನೆಯ ಗೃಹ ಪ್ರವೇಶ ಮಾಡಿದ್ದಾರೆ. 1960ರ ದಶಕದಲ್ಲಿ ಸಕ್ರೀಯ ರಾಜಕೀಯದಲ್ಲಿರುವ ಗೌಡರು, ಬಾಡಿಗೆ ಮನೆ, ಸರ್ಕಾರಿ ಪ್ರವಾಸಿ ಮಂದಿರದಲ್ಲೇ ಹೆಚ್ಚು ದಿನ ಕಳೆದಿದ್ದರು. ಇತ್ತೀಚೆಗೆ ಪುತ್ರ ಹಾಗೂ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೊಳೆನರಸೀಪುರದಲ್ಲಿ […]

1 month ago

ನೀಚ ಸಿಎಂ ಬೆಳೆಸಿ ನಾನು ಮಹಾ ಅಪರಾಧ ಮಾಡಿದೆ: ಕನ್ನಡಿಗರಲ್ಲಿ ಕ್ಷಮೆ ಕೇಳಿದ ಎಚ್‍ಡಿಡಿ

ಬೆಂಗಳೂರು: ಸಿದ್ದರಾಮಯ್ಯ ನಂತಹ ನೀಚ ಮುಖ್ಯಮಂತ್ರಿಯನ್ನು ಬೆಳೆಸಿ ನಾನು ಜೀವನದಲ್ಲಿ ಮಹಾ ಅಪರಾಧವನ್ನು ಮಾಡಿದೆ. ಸಿದ್ದರಾಮಯ್ಯನವರನ್ನು ಬೆಳೆಸಿದ್ದಕ್ಕೆ ನಾನು ಅಂದಿನ 5 ಕೋಟಿ ಜನರಲ್ಲಿ ಕ್ಷಮೆ ಕೇಳುತ್ತೇನೆ ಎಂದು ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಹೇಳಿದ್ದಾರೆ. ಕೆಂಗೇರಿಯಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ನಿಮ್ಮ ಅಧಿಕಾರ ಎಷ್ಟು ದಿವಸ ಇರುತ್ತೆ ಅಂತ ನಾನು ನೋಡ್ತೀನಿ....

ಇಂದು ದೇವೇಗೌಡರ `ಸಾಧನೆಯ ಶಿಖರಾರೋಹಣ’ ಪುಸ್ತಕ ಬಿಡುಗಡೆ

3 months ago

ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡ ಅವರ ಕುರಿತಾದ `ಸಾಧನೆಯ ಶಿಖರಾರೋಹಣ’ ಎಂಬ ಪುಸ್ತಕ ಇಂದು ಬಿಡುಗಡೆಯಾಗುತ್ತಿದೆ. ಪುಸ್ತಕ ಬಿಡುಗಡೆಗಾಗಿ ಕೃಷಿ ವಿಶ್ವವಿದ್ಯಾಲಯದಲ್ಲಿ ಸಮಾರಂಭವನ್ನು ಆಯೋಜಿಸಲಾಗಿದೆ. ಸುಪ್ರೀಂಕೋರ್ಟ್ ನಿವೃತ್ತ ಮುಖ್ಯನ್ಯಾಯಾಧೀಶ ಎಂ.ಎನ್. ವೆಂಕಟಾಚಲಯ್ಯ ಅವರು ಈ ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ. ಡಾ.ಪ್ರಧಾನ್ ಗುರುದತ್ತ,...

ಸೊಂಟ ಮುರಿದಿಲ್ಲ ಎಂದಿದ್ದ ಪರಮೇಶ್ವರ್ ಗೆ ದೇವೇಗೌಡರ ತಿರುಗೇಟು

3 months ago

ತುಮಕೂರು: ದೇವೇಗೌಡರ ಸೊಂಟದ ಬಗ್ಗೆ ಮಾತನಾಡಿದ್ದ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‍ಗೆ ತವರೂರಿನಲ್ಲೇ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರು ತಿರುಗೇಟು ಕೊಟ್ಟಿದ್ದಾರೆ. ತುಮಕೂರು ಜಿಲ್ಲೆ ಕೊರಟಗೆರೆ ಯಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಎಚ್‍ಡಿ ದೇವೇಗೌಡರು ಪರಮೇಶ್ವರ ವಿರುದ್ಧ ಹರಿಹಾಯ್ದರು. ಕೆಪಿಸಿಸಿ ರಾಜ್ಯಾಧ್ಯಕ್ಷರು...

ಬೇಲೂರು ವಿಧಾನಸಭಾ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಕಣಕ್ಕೆ?

4 months ago

ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ರಾಜಕೀಯ ಪ್ರವೇಶ ನಿಶ್ಚಿತ ಎಂಬ ಮಾತುಗಳು ಕೇಳಿಬರುತ್ತಿವೆ. ವಿಧಾನಸಭಾ ಚುನಾವಣೆಗೆ ಪ್ರಜ್ವಲ್ ರೇವಣ್ಣ ಸ್ಪರ್ಧೆ ಬಹುತೇಕ ಖಚಿತ. ಬೇಲೂರು ವಿಧಾನಸಭಾ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ಸಿನ ಹಾಲಿ...

ದೇವೇಗೌಡರ ಒಂದು ಕಾಲದ ಶಿಷ್ಯ ಬಾಲಕೃಷ್ಣರಿಂದ ಗುರುವಿಗೆ ತಿರುಮಂತ್ರ?

4 months ago

ಬೆಂಗಳೂರು: ಜೆಡಿಎಸ್ ವರಿಷ್ಠ ದೇವೇಗೌಡರ ಒಂದು ಕಾಲದ ಶಿಷ್ಯ, ಜೆಡಿಎಸ್ ಬಂಡಾಯ ಶಾಸಕ ಹೆಚ್.ಸಿ ಬಾಲಕೃಷ್ಣ ಗುರುವಿಗೆ ತಿರುಮಂತ್ರ ಹಾಕಿದ್ದಾರೆ ಎಂಬ ಚರ್ಚೆ ಶುರುವಾಗಿದೆ. ಕೇರಳಕ್ಕೆ ತೆರಳಿ ದೇವೇಗೌಡರ ವಿರುದ್ಧವೇ ಬಾಲಕೃಷ್ಣ ಶತ್ರು ಸಂಹಾರ ಯಾಗ ನಡೆಸಿದ್ದಾರೆ ಅಂತ ಗೊತ್ತಾಗಿದೆ. ತಮ್ಮ...

ಸರ್ಕಾರಿ ಆಸ್ಪತ್ರೆ ಚೆನ್ನಾಗಿದ್ರೆ ಖಾಸಗಿ ಆಸ್ಪತ್ರೆಗೆ ಯಾರು ಹೋಗ್ತಾರೆ: ಎಚ್‍ಡಿಡಿ ಪ್ರಶ್ನೆ

4 months ago

ಹಾಸನ: ಸರ್ಕಾರಿ ಆಸ್ಪತ್ರೆ ಚೆನ್ನಾಗಿದ್ದರೆ ಖಾಸಗಿ ಆಸ್ಪತ್ರೆಗೆ ಯಾರು ಹೋಗುತ್ತಾರೆ ಎಂದು ರಾಜ್ಯ ಸರ್ಕಾರವನ್ನು ಮಾಜಿ ಪ್ರಧಾನಿ ದೇವೇಗೌಡ ಪ್ರಶ್ನಿಸಿದ್ದಾರೆ. ರಾಜ್ಯ ಸರ್ಕಾರದ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ಮಸೂದೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಸರ್ಕಾರಕ್ಕೆ ಈಗ ಮಸೂದೆ ತರುವ...

ಮುಂದಿನ ಚುನಾವಣೆಯಲ್ಲಿ ರೇವಣ್ಣ ಪುತ್ರ ಪ್ರಜ್ವಲ್ ಸ್ಪರ್ಧೆ ಖಚಿತ

4 months ago

ಹಾಸನ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪುತ್ರ ಪ್ರಜ್ವಲ್ ರೇವಣ್ಣ ಸ್ಪರ್ಧಿಸುವುದು ಖಚಿತ ಅಂತ ಭವಾನಿ ರೇವಣ್ಣ ಹೇಳಿದ್ದಾರೆ. ಹಾಸನ ಜಿಲ್ಲೆಯ ಹರದನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪುತ್ರ ಪ್ರಜ್ವಲ್ ಸ್ಪರ್ಧೆ ಖಚಿತವಾಗಿದ್ದು, ಇದಕ್ಕೆ ಮಾಜಿ ಪ್ರಧಾನಿ ದೇವೇಗೌಡರು...