Friday, 19th January 2018

Recent News

3 days ago

ಸ್ಯಾಂಡಲ್ ವುಡ್ ನಲ್ಲಿ ಫಸ್ಟ್ ಟೈಂ ಲ್ಯಾಂಬೋರ್ಗಿನಿಗೆ ಒಡೆಯರಾದ ದರ್ಶನ್: ವಿಡಿಯೋ ನೋಡಿ

ಬೆಂಗಳೂರು: ಚಾಲೆಜಿಂಗ್ ಸ್ಟಾರ್ ದರ್ಶನ್ ಅವರನ್ನು ಸ್ಯಾಂಡಲ್‍ವುಡ್ ನ ದುಬಾರಿ ನಟ ಎಂದು ಕರೆಯುತ್ತಾರೆ. ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಕೂಡ ಪಡೆಯುತ್ತಾರೆ. ಆದರೆ ಈಗ ದರ್ಶನ್ ಲ್ಯಾಂಬೋರ್ಗಿನಿ ಕಾರು ಖರೀದಿಸುವ ಮೂಲಕ ಅದನ್ನು ನಿರೂಪಿಸಿದ್ದಾರೆ. ಸಂಕ್ರಾಂತಿ ಹಬ್ಬದ ದಿನದಂದು ದರ್ಶನ್ ಲ್ಯಾಂಬೋರ್ಗಿನಿ ಕಾರು ಖರೀದಿಸಿದ್ದರು. ಮೈಸೂರಿಗೆ ಹೊಸ ಕಾರಿನಲ್ಲಿ ಆಗಮಿಸಿ ನಂತರ ಚಾಮುಂಡಿ ಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬೆಟ್ಟದ ಅರ್ಚಕರಿಂದ ಪೂಜೆ ಮಾಡಿಸಿ ಚಾಮುಂಡಿ ತಾಯಿಯ ದರ್ಶನ ಪಡೆದಿದ್ದಾರೆ. ದರ್ಶನ್ ಅವರ […]

7 days ago

1 ಜೊತೆ ಸಾಕ್ಸ್ ಖರೀದಿಗೆ 85 ಸಾವಿರ ರೂ. ಖರ್ಚು ಮಾಡಿದ ಪಾಪ್ ಗಾಯಕಿ

ವಾಷಿಂಗ್ಟನ್: ಅಮೆರಿಕದ ಖ್ಯಾತ ಗಾಯಕಿ ಜೆನ್ನಿಫರ್ ಲೋಪೇಜ್ ಅವರು ದುಬಾರಿ ಬೆಲೆಯ ಸಾಕ್ಸ್ ಖರೀದಿಸಿ ಈಗ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದಾರೆ. ಅಮೇರಿಕಾದ ಖ್ಯಾತ ಗಾಯಕಿ ಜೆನ್ನಿಫರ್ ಲೋಪೇಜ್ 1 ಜೊತೆ ಸಾಕ್ಸ್ ಗಾಗಿ ಬರೋಬ್ಬರಿ 85 ಸಾವಿರ ರೂ. ಗಳನ್ನು ಖರ್ಚು ಮಾಡಿದ್ದಾರೆ. ಈಗ ಆ ಸಾಕ್ಸ್ ಹಾಕಿಕೊಂಡಿರುವ ಫೋಟೋವನ್ನು ತಮ್ಮ ಇನ್‍ ಸ್ಟಾಗ್ರಾಂನಲ್ಲಿ ಹಾಕಿದ್ದು, ಅದಕ್ಕೆ...