Thursday, 22nd March 2018

Recent News

12 hours ago

ದೊಡ್ಡಪ್ಪನಿಂದ ಲೈಂಗಿಕ ಕಿರುಕುಳ- ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿ, ಎಫ್‍ಐಆರ್ ದಾಖಲು

ದಾವಣಗೆರೆ: ದೊಡ್ಡಪ್ಪನೇ ಯುವತಿಗೆ ಲೈಂಗಿಕ ಕಿರುಕುಳ ನೀಡಿರೋ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಚಿಕ್ಕ ವಯಸ್ಸಿನಲ್ಲೇ ತಂದೆ- ತಾಯಿಯನ್ನು ಕಳೆದುಕೊಂಡ ಯುವತಿ ದೊಡ್ಡಪ್ಪನ ಮನೆಯಲ್ಲಿ ಇದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದರು. ಕಳೆದ ಮೂರು ವರ್ಷಗಳಿಂದ ಸ್ವಂತ ದೊಡ್ಡಪ್ಪನೇ ಯುವತಿ ಮೇಲೆ ಮಾನಸಿಕವಾಗಿ ಹಾಗೂ ಲೈಂಗಿಕವಾಗಿ ದೌರ್ಜನ್ಯ ಎಸಗುತ್ತಿದ್ದರು. ದೊಡ್ಡಪ್ಪನ ವರ್ತನೆಯಿಂದ ಬೇಸತ್ತು ಯುವತಿ ಎರಡು ದಿನಗಳ ಹಿಂದೆ ಆತ್ಮಹತ್ಯೆಗೆ ಮುಂದಾಗಿದ್ದಾಗ ಸ್ಥಳೀಯರು ರಕ್ಷಣೆ ಮಾಡಿದ್ದರು. ಯುವತಿಯ ದೊಡ್ಡಪ್ಪ ಸಿ.ವಿ ಪ್ರಭಾಕರ್ ಬೀಜ ನಿಗಮದ ಅಧಿಕಾರಿಯಾಗಿ ದಾವಣಗೆರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸಿ.ವಿ […]

3 days ago

ರಾಜ್ಯದ ಹಲವೆಡೆ ಬೆಳ್ಳಂಬೆಳಗ್ಗೆ ಎಸಿಬಿ ಶಾಕ್

ಬೆಂಗಳೂರು: ರಾಜ್ಯದ ಹಲವೆಡೆ ಇಂದು ಬೆಳಂಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸುವ ಮೂಲಕ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ. ಬೆಳಗಾವಿ, ಧಾರವಾಡ, ಚಿತ್ರದುರ್ಗ, ತುಮಕೂರು ಹಾಗೂ ದಾವಣಗೆರೆಯಲ್ಲಿ ಎಸಿಬಿ ದಾಳಿ ನಡೆದಿದೆ. ಬೆಳಗಾವಿಯ ಎಇಇ ಕಿರಣ್ ಸುಬ್ಬರಾವ್ ಮನೆ, ಕಚೇರಿ ಸೇರಿ 6 ಕಡೆ ದಾಳಿ ನಡೆದಿದೆ. ತುಮಕೂರು ಉಪವಿಭಾಗಧಿಕಾರಿ ತಿಪ್ಪೇಸ್ವಾಮಿ ಮನೆ, ಚಿತ್ರದುರ್ಗದಲ್ಲಿ ಎರಡು ಮನೆ...

ಯುಪಿ ಮೂಲದ ವ್ಯಕ್ತಿ ಸಾವು- ಸ್ವಗ್ರಾಮಕ್ಕೆ ಶವ ರವಾನಿಸಲು 73 ಸಾವಿರ ರೂ. ಸಂಗ್ರಹಿಸಿ ನೆರವು ನೀಡಿದ ದಾವಣಗೆರೆಯ ಮುಸ್ಲಿಮರು

1 week ago

ದಾವಣಗೆರೆ: ಐಸ್ ಕ್ರೀಂ ಮಾಡುತ್ತಾ ದಾವಣಗೆರೆಯಲ್ಲಿ ನೆಲೆಸಿದ್ದ ಉತ್ತರ ಪ್ರದೇಶದ ಮೂಲದ ಶಕ್ತಿ ರಾಮ್ ಎಂಬ ವ್ಯಕ್ತಿ ಮೃತಪಟ್ಟಿದ್ದು, ಮೃತನ ಶವವನ್ನು ಸ್ವಗ್ರಾಮಕ್ಕೆ ರವಾನಿಸಲು ಅವರ ಕುಟುಂಬಕ್ಕೆ ಮಸ್ಲಿಮರು ಸಹಾಯ ಹಸ್ತ ಚಾಚಿ ಮಾನವೀಯತೆ ಮೆರೆದಿದ್ದಾರೆ. ಇಲ್ಲಿನ ಬಾಷಾ ನಗರದಲ್ಲಿ ಕಳೆದ...

ದಾವಣಗೆರೆಯಲ್ಲಿ ದೇಶದ ಅತ್ಯಂತ ದೊಡ್ಡ ಗಾಜಿನ ಅರಮನೆ ಇಂದು ಲೋಕಾರ್ಪಣೆ

1 week ago

ದಾವಣಗೆರೆ: ದೇಶದ ಅತ್ಯಂತ ದೊಡ್ಡ ಗಾಜಿನ ಅರಮನೆ ಲೋಕಾರ್ಪಣೆಗೆ ಸಿದ್ಧಗೊಂಡಿದೆ. ಸ್ವರ್ಗವನ್ನೇ ಧರೆಗಿಳಿಸುವ ಗಾಜಿನ ಅರಮನೆಯನ್ನ ಸಿಎಂ ಸಿದ್ದರಾಮಯ್ಯ ಇಂದು ಅನಾವರಣಗೊಳಿಸಲಿದ್ದಾರೆ. ಕೆರೆಯ ದಡದಲ್ಲಿ ಸುಂದರವಾಗಿ ಕಾಣುತ್ತಿರುವ ಗಾಜಿನ ಮನೆ, ಲಾಲ್ ಬಾಗ್ ನಲ್ಲಿರುವ ಗ್ಲಾಸ್ ಹೌಸ್ ಅನ್ನೇ ನಾಚಿಸುವಂತೆ ರೆಡಿಯಾಗುತ್ತಿರುವ...

ಮೀಸಲು ಅರಣ್ಯ ಪ್ರದೇಶದಲ್ಲಿ ಮಾಂಸಕ್ಕಾಗಿ ನವಿಲುಗಳ ಮಾರಣಹೋಮ

1 week ago

ದಾವಣಗೆರೆ: ಮೀಸಲು ಅರಣ್ಯ ಪ್ರದೇಶದಲ್ಲಿ ರಾಷ್ಟ್ರೀಯ ಪಕ್ಷಿಗಳ ಮಾರಣಹೋಮ ನಡೆಯುತ್ತಿರುವ ಘಟನೆ ಜಿಲ್ಲೆಯ ಜಗಳೂರು ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಗೋಪಗೊಂಡನಹಳ್ಳಿಯ ಸುತ್ತಮುತ್ತಲಿನ ಮೀಸಲು ಅರಣ್ಯ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ನವಿಲುಗಳು ಸಾವನ್ನಪ್ಪುತ್ತಿವೆ. ಜಗಳೂರು ಸುತ್ತಮುತ್ತಾ ನವಿಲು ಸಂತತಿ ಹೆಚ್ಚಿನ ಪ್ರಮಾಣದಲ್ಲಿದ್ದು, ಬೇಟೆಗಾರರು ಮಾಂಸಕ್ಕಾಗಿ...

ಆಸ್ಪತ್ರೆಗೆ ದಾಖಲಾಗಿ 2 ದಿನವಾದ್ರೂ ಹೆರಿಗೆ ಮಾಡಿಸದ ವೈದ್ಯರು- ಅಮ್ಮನ ಹೊಟ್ಟೆಯಲ್ಲೇ ಅಸುನೀಗಿದ ಕಂದಮ್ಮ

1 week ago

ದಾವಣಗೆರೆ: ವೈದ್ಯರ ನಿರ್ಲಕ್ಷ್ಯದಿಂದ ಗರ್ಭಿಣಿಯ ಹೊಟ್ಟೆಯಲ್ಲಿಯೇ ಮಗು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸರ್ಕಾರಿ ಹಳೇ ಹೆರಿಗೆ ಆಸ್ಪತ್ರೆಯಲ್ಲಿ ನಡೆದಿದೆ. ಚನ್ನಗಿರಿ ತಾಲೂಕಿನ ತ್ಯಾವಣಗಿ ಗ್ರಾಮದ ರೇಣುಕಾ(22) ವೈದ್ಯರ ನಿರ್ಲಕ್ಷ್ಯಕ್ಕೊಳಗಾದ ಗರ್ಭಿಣಿ. ಹರಿಗೆಗಾಗಿ ರೇಣುಕಾ ಶನಿವಾರ ಮಧ್ಯಾಹ್ನವೇ ಸರ್ಕಾರಿ ಹೆರಿಗೆ ಅಸ್ಪತ್ರೆಗೆ ದಾಖಲಾಗಿದ್ದರು....

ಮುಷ್ಯಗಳ ದಾಳಿಯಿಂದ 10ಕ್ಕೂ ಹೆಚ್ಚು ಮಂದಿಗೆ ಗಾಯ – ಬಡಿಗೆ ಹಿಡ್ಕೊಂಡು ಗ್ರಾಮಸ್ಥರ ಓಡಾಟ, ಶಾಲಾ ಮಕ್ಕಳ ಪರದಾಟ

2 weeks ago

ದಾವಣಗೆರೆ: ಮುಷ್ಯಗಳ ಹಾವಳಿಯಿಂದ ಗ್ರಾಮಸ್ಥರೆಲ್ಲ ಭಯದ ವಾತಾವರಣದಲ್ಲಿ ಜೀವನ ಮಾಡುತ್ತಿರುವ ಘಟನೆ ದಾವಣಗೆರೆ ಹರಿಹರ ತಾಲೂಕಿನ ನಂದಿತಾವರೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ತುಂಬೆಲ್ಲ ನೂರಾರು ಮುಷ್ಯಗಳು ಇದ್ದು, ಜನರು ನೆಮ್ಮದಿಯಿಂದ ಗ್ರಾಮದಲ್ಲಿ ಅಡ್ಡಾಡದಂತಾಗಿದೆ. ನಾಲ್ಕೈದು ದಿನಗಳಿಂದ ಒಂದೇ ಮುಷ್ಯ 11 ಕ್ಕಿಂತ...

ಜಪಾನ್ ನ ರೈಸ್ ಆರ್ಟ್ ಕಲೆಯ ಮಾದರಿಯಲ್ಲಿ ಭತ್ತದಲ್ಲಿ ಸ್ವಚ್ಛ ಭಾರತ ಲಾಂಛನ ರಚಿಸಿದ ದಾವಣಗೆರೆಯ ರೈತ

2 weeks ago

ದಾವಣಗೆರೆ: ಜಪಾನ್ ನಲ್ಲಿ ಪ್ರವಾಸಿಗರನ್ನು ಸೆಳೆಯಲು ಮಾಡುವ ರೈಸ್ ಆರ್ಟ್ ಕಲೆಯ ಮಾದರಿಯಲ್ಲಿ ಭಾರತದ ದೇಶಿ ಭತ್ತದ ತಳಿ ಬಳಸಿ ಜನರಿಗೆ ಸ್ವಚ್ಛತೆ ಹಾಗೂ ಶೌಚಾಲಯದ ಮಹತ್ವ ಸಾರುವ ಸ್ವಚ್ಛ ಭಾರತ ಮಿಷನ್ ನ ಲಾಂಛನ ರಚಿಸುವ ಮೂಲಕ ಜಿಲ್ಲೆಯ ಪ್ರಗತಿಪರ...