Friday, 27th April 2018

Recent News

4 months ago

ಜೇಡವನ್ನು ಸುಡಲು ಹೋಗಿ ತನ್ನ ಮನೆಯನ್ನೇ ಸುಟ್ಟುಕೊಂಡ!

ವಾಷಿಂಗ್ಟನ್: ವ್ಯಕ್ತಿಯೊಬ್ಬ ಜೇಡವನ್ನು ಕೊಲ್ಲಲು ಹೋಗಿ ಕೊನೆಗೆ ತನ್ನ ಮನೆಯನ್ನೇ ಸುಟ್ಟುಕೊಂಡು ಎಡವಟ್ಟು ಮಾಡಿಕೊಂಡಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. ಭಾನುವಾರ ಅಮೆರಿಕದ ಉತ್ತರ ಕ್ಯಾಲಿಫೋನಿರ್ಯಾದ ರೆಡಿಂಗ್ ನಲ್ಲಿರುವ ನಿವಾಸದಲ್ಲಿ ಈ ಘಟನೆ ನಡೆದಿದೆ. ಜೇಡಕ್ಕೆ ಬೆಂಕಿ ನೀಡಿ ಕೊಲ್ಲಲು ಯತ್ನಿಸಿದ್ದಾಗ ನನ್ನ ಮನೆ ಕೂಡ ಬೆಂಕಿಗೆ ಆಹುತಿಯಾಗಿದೆ ಎಂದು ನಿವಾಸಿ ಲಿಂಡ್ಸೆ ವಿಸ್ಗರ್ವರ್ ತಿಳಿಸಿದ್ದಾರೆ. ದೊಡ್ಡ ಗಾತ್ರದಲ್ಲಿದ್ದ ಜೇಡವನ್ನು ಕೊಲ್ಲಲು ಹೋದಾಗ ಮನೆಗೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಗೆ ಕಾರಣವೇನು ಹಾಗೂ ಅದರಿಂದ ಮನೆಗೆ ಹೇಗೆ ವ್ಯಾಪಿಸಿತು ಎನ್ನುವುದರ […]

4 months ago

ಬಾಂಬ್ ಅಲ್ಲ, ಮೈಸೂರಿನಲ್ಲಿ ಪತ್ತೆಯಾಗಿದ್ದು ಯುಪಿಎಸ್ ಬಾಕ್ಸ್!

ಮೈಸೂರು: ಗ್ರಾಮಾಂತರ ಬಸ್ ನಿಲ್ದಾಣದ ಬಳಿ ಪತ್ತೆ ಆಗಿರುವುದು ಸ್ಫೋಟಕ ವಸ್ತು ಅಲ್ಲ. ಬ್ಯಾಟರಿ ಹಾಗೂ ಸರ್ಕ್ಯೂಟ್ ಬೋರ್ಡ್ ಹೊಂದಿರುವ ಯುಪಿಎಸ್ ಪವರ್ ಬ್ಯಾಂಕ್ ನೋಡಿ ಜನ ಆತಂಕಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದು ಯುಪಿಎಸ್ ಮಾದರಿಯ ಪವರ್ ಬ್ಯಾಂಕ್. ಇದರಲ್ಲಿ ಸರ್ಕ್ಯೂಟ್ ಇದೆ. ಇದರಿಂದ ಸ್ಫೋಟ ಸಾಧ್ಯವಿಲ್ಲ. ಸ್ಫೋಟಕ್ಕೆ ಇಷ್ಟೊಂದು ಶೆಲ್ ಅಗತ್ಯವಿಲ್ಲ. ಈ...

ಜಮ್ಮು-ಕಾಶ್ಮೀರದಲ್ಲಿ ಬೆಂಗ್ಳೂರು ಯೋಧ ಆತ್ಮಹತ್ಯೆ – ತನಿಖೆಗೆ ಪೋಷಕರ ಆಗ್ರಹ

7 months ago

ಶ್ರೀನಗರ: ಬೆಂಗಳೂರು ಮೂಲದ ಸೈನಿಕರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಮ್ಮು-ಕಾಶ್ಮೀರದ ಪಹಗಾಮ್ ಸೈನಿಕ ನೆಲೆಯಲ್ಲಿ ನಡೆದಿದೆ. ಆರ್. ನರೇಂದ್ರ ಆತ್ಮಹತ್ಯೆ ಮಾಡಿಕೊಂಡಿರುವ ಸೈನಿಕ ಎಂದು ತಿಳಿದುಬಂದಿದ್ದು, ಇವರು ಜಮ್ಮು-ಕಾಶ್ಮೀರದ ಪಹಗಾಮ್ ಪ್ರದೇಶದಲ್ಲಿ ಸೇವೆಗೆ ನಿಯೋಜನೆಗೊಂಡಿದ್ದರು. ಯೋಧ ನರೇಂದ್ರ ಅವರು ಭಾನುವಾರ ಮಧ್ಯಾಹ್ನದ...

ಆತ್ಮರಕ್ಷಣೆಗಾಗಿ ರೇಪಿಸ್ಟ್ ಕಾಮಿ ಅಪ್ಪನನ್ನು ಕೊಂದ್ಳು ಅಪ್ರಾಪ್ತ ಮಗಳು!

7 months ago

ಲಕ್ನೋ: ನಿರಂತರವಾಗಿ ಅತ್ಯಾಚಾರ ಎಸಗುತ್ತಿದ್ದ ಹಿನ್ನೆಲೆಯಲ್ಲಿ ರೋಸಿ ಹೋಗಿದ್ದ ಮಗಳು ತನ್ನ ತಂದೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಸಾಂಭಾಲ್ ಜಿಲ್ಲೆಯಲ್ಲಿ ನಡೆದಿದೆ. ಕಳೆದ ಎರಡು ವರ್ಷಗಳಿಂದ ಪಾಪಿ ತಂದೆ ನಿರಂತರವಾಗಿ ಮಗಳ ಮೇಲೆ ಅತ್ಯಾಚಾರ ಮಾಡುತ್ತಾ ಬಂದಿದ್ದ....

ಟ್ರೋಲ್ ಆಗ್ತಿದೆ ಗೃಹಸಚಿವರು, ಶಾಸಕರು, ಮೋಹನ್ ಆಳ್ವ ಮಾತುಕತೆಯ ಫೋಟೋ

7 months ago

ಮಂಗಳೂರು: ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಆಳ್ವಾಸ್‍ನ ವಿದ್ಯಾರ್ಥಿನಿ ಕಾವ್ಯ ಪೂಜಾರಿ ನಿಗೂಢ ಸಾವಿನ ಪ್ರಕರಣಕ್ಕೆ ದಿನದಿಂದ ದಿನಕ್ಕೆ ಹೊಸ ತಿರುವು ಸಿಗುತ್ತಿದೆ. ಪೊಲೀಸ್ ಇಲಾಖೆಯ ಮುಖ್ಯಸ್ಥರಾಗಿರುವ ಗೃಹ ಸಚಿವರು ಮತ್ತು ಸ್ಥಳೀಯ ಶಾಸಕರು ಆಳ್ವಾಸ್ ಸಂಸ್ಥೆಯ ಮಾಲೀಕರೊಂದಿಗೆ ಕಾಣಿಸಿಕೊಂಡಿದ್ದಾರೆ. ಗೃಹ ಸಚಿವ...

ಗೌರಿ ಲಂಕೇಶ್ ಹಂತಕರ ಪತ್ತೆಗೆ ಶೋಧ ತೀವ್ರ- ಇಂದು ಪತ್ರಕರ್ತೆಯ ಮನೆಗೆ ಎಸ್‍ಐಟಿ ಭೇಟಿ

8 months ago

ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ತೀವ್ರಗೊಂಡಿದೆ. ಎಸ್‍ಐಟಿ ಹಾಗೂ ಪೊಲೀಸರ ತಂಡ ಆರೋಪಿಗಳಿಗೆ ಬಲೆ ಬೀಸಿದೆ. ಐಜಿ ಬಿಕೆ ಸಿಂಗ್ ನೇತೃತ್ವದಲ್ಲಿ 3 ವಿಶೇಷ ತಂಡ ರಚನೆ ಮಾಡಲಾಗಿದೆ. ಇನ್ನೂ ಹಂತಕರ ಜಾಡು ಹಿಡಿದು...