Thursday, 24th May 2018

Recent News

4 days ago

ರಸ್ತೆ ಅಪಘಾತ – ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋದ 5 ಮಂದಿ ಸಾವು

ಹೈದರಾಬಾದ್: ಬೊಲೆರೋ ಐಚರ್ ಗೆ ಬೊಲೆರೋ ವಾಹನ ಡಿಕ್ಕಿಯಾಗಿ 5 ಜನ ಸ್ಥಳದಲ್ಲೇ ಮೃತಪಟ್ಟು ನಾಲ್ಕು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಆಂಧ್ರ ಪ್ರದೇಶದ ತಿರುಪತಿ ಸಮೀಪದ ಮಂಡೂರು ಬಳಿ ನಡೆದಿದೆ. ಬೊಲೆರೋ ತಿರುಪತಿಯಿಂದ ಮಹಾರಾಷ್ಟ್ರ ಕಡೆ ಹೊರಟಿದ್ದಾಗ ರಸ್ತೆಗೆ ವೈಟ್ ಲೈನ್ ಪೈಂಟ್ ಮಾಡುತ್ತಿದ್ದ ಐಚರ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ 5 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಓರ್ವನ ಸ್ಥಿತಿ ಚಿಂತಾಜನಕವಾಗಿದೆ. ಸ್ಥಳಕ್ಕೆ ರೇಣುಗುಂಟ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ.

1 week ago

ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿ ವೃದ್ಧನಿಗೆ ಡಿಕ್ಕಿ ಹೊಡೆದ ಯುವಕರು!

ಮಂಡ್ಯ: ಹೊಸಬೂದನೂರು ಗ್ರಾಮದ ಬಳಿ ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸುತ್ತಿದ್ದ ಯುವಕರು ಪಾದಚಾರಿಗೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಪಾದಚಾರಿ ವೃದ್ಧ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಾಗಪ್ಪ(64) ಎಂಬವರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಬೆಂಗಳೂರಿನಿಂದ ಕಾರಿನಲ್ಲಿ ಲಾಂಗ್ ಡ್ರೈವ್‍ಗೆ ಬಂದಿದ್ದ ಯುವಕರು ಅಪಘಾತ ನಡೆಸಿದ್ದಾರೆ. ಇದರಿಂದ ಆಕ್ರೋಶಗೊಂಡ ಸ್ಥಳೀಯರು ಕಾರಿನ ಗ್ಲಾಸ್ ಒಡೆದು ಯುವಕರಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆಯಲ್ಲಿ...

ಕಾರು ತಪಾಸಣೆ ವೇಳೆ ಗೂಡ್ಸ್ ಲಾರಿ ಡಿಕ್ಕಿ- ಕರ್ತವ್ಯ ನಿರತ ಮುಖ್ಯಪೇದೆ ದುರ್ಮರಣ

1 month ago

ರಾಮನಗರ: ಚುನಾವಣೆ ಹಿನ್ನೆಲೆಯಲ್ಲಿ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ನಿರತ ಮುಖ್ಯಪೇದೆಗೆ ಗೂಡ್ಸ್ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟ ಘಟನೆ ರಾಮನಗರ ತಾಲೂಕಿನ ಹೆಜ್ಜಾಲ ಬಳಿ ನಡೆದಿದೆ. ಮಹಾಲಿಂಗ(39) ಸಾವನ್ನಪ್ಪಿದ ಪೇದೆಯಾಗಿದ್ದು, ಇವರು ಬಿಡದಿ ಪೊಲೀಸ್ ಠಾಣೆಯ ಮುಖ್ಯಪೇದೆ. ಚುನಾವಣೆ...

ರಸ್ತೆ ಬದಿ ಗೋಡೆಗೆ ಕಾರು ಡಿಕ್ಕಿ – ವೈದ್ಯ ದಂಪತಿ ಸೇರಿ ಒಂದೇ ಕುಟುಂಬದ ನಾಲ್ವರ ಸಾವು

1 month ago

ಬಳ್ಳಾರಿ: ರಸ್ತೆ ಬದಿ ಗೋಡೆಗೆ ಕಾರು ಡಿಕ್ಕಿಯಾಗಿ ವೈದ್ಯ ದಂಪತಿ ಸೇರಿದಂತೆ ಕುಟುಂಬದ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದ ಘಟನೆ ಬಳ್ಳಾರಿಯ ಸೋಮಸಮುದ್ರ ಗ್ರಾಮದ ಹೊರವಲಯದ ರಸ್ತೆ ಬಳಿ ನಡೆದಿದೆ. ವೈದ್ಯ ಸಂತೋಷ್, ಅವರ ಪತ್ನಿ ಅರ್ಚನಾ, ಮಗಳು ಲಕ್ಷ್ಮಿ, ತಂದೆ ಸಿದ್ರಾಮಪ್ಪ...

ಕಾರು, ಬೈಕ್ ಮುಖಾಮುಖಿ ಡಿಕ್ಕಿ- ಅಯ್ಯೋ ಕಾಪಾಡಿ ಎಂದು ಗಾಯಾಳು ಅಂಗಲಾಚಿದ್ದರು ಸುಮ್ಮನೇ ನಿಂತ ಜನ!

1 month ago

ಹಾಸನ: ಕಾರು-ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಕಾಲು ಮುರಿದುಕೊಂಡು ಗಂಟೆಗಟ್ಟಲೆ ನರಳಾಡಿದರೂ ಯಾರೊಬ್ಬರು ನೆರವಿಗೆ ಬಾರದೆ ಅಮಾನವೀಯತೆ ತೋರಿದ ಘಟನೆ ಹಾಸನ ಜಿಲ್ಲೆ ಆಲೂರು ಬಳಿ ನಡೆದಿದೆ. ಪ್ರಸನ್ನ ಅಪಘಾತದಲ್ಲಿ ಕಾಲು ಮುರಿದುಕೊಂಡ ಬೈಕ್ ಸವಾರ. ಬೇಲೂರು ತಾಲೂಕು...

ಹೆಲ್ಮೆಟ್ ಹಾಕದಕ್ಕೆ ಫೈನ್ ಕಟ್ಟಬೇಕೆಂದು, ಟ್ರಾಫಿಕ್ ಪೊಲೀಸರ ಮೇಲೆಯೇ ಬೈಕ್ ಹರಿಸಿದ ಸವಾರ

2 months ago

ಬೆಂಗಳೂರು: ತಪಾಸಣೆ ವೇಳೆ ಬೈಕ್ ಸವಾರನೊಬ್ಬ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗೆ ಡಿಕ್ಕಿ ಹೊಡೆದು ಪರಾರಿಯಾಗಿರುವ ಘಟನೆ ನಗರದ ಹೆಚ್‍ಎಸ್‍ಆರ್ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಹೆಚ್‍ಎಸ್‍ಆರ್ ಲೇಔಟ್ ಸಂಚಾರಿ ಠಾಣೆ ಪಿಎಸ್‍ಐ ರವೀಂದ್ರ...

ರಸ್ತೆಯಲ್ಲಿ ಕೆಟ್ಟು ನಿಂತಿದ್ದ ಲಾರಿಗೆ KSRTC ಬಸ್ ಡಿಕ್ಕಿ – 12 ಜನರಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ

2 months ago

ಬೆಂಗಳೂರು: ರಸ್ತೆಯಲ್ಲಿ ಕೆಟ್ಟು ನಿಂತಿದ್ದ ಲಾರಿಗೆ ಕೆಎಸ್‍ಆರ್ ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸೇರಿದಂತೆ 12 ಜನ ಪ್ರಯಾಣಿಕರಿಗೆ ಗಾಯಗಳಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಹೊಸಕೋಟೆ ಯಲ್ಲಿ ನಡೆದಿದೆ. ಹೊಸಕೋಟೆ ಫ್ಲೈಓವರ್ ಮೇಲೆ ಗೂಡ್ಸ್ ಲಾರಿ ಕೆಟ್ಟು ನಿಂತಿದ್ದಾಗ...

ಸರಕು ಹಡಗುಗಳ ನಡುವೆ ಡಿಕ್ಕಿ-ಬೆಲೆಬಾಳುವ ಕಾರುಗಳಿದ್ದ 21 ಕಂಟೈನರ್ ಸಮುದ್ರಕ್ಕೆ ಬೀಳೋದನ್ನು ನೋಡಿ

2 months ago

ಲಾಹೋರ್: ಕಾರ್, ಬಸ್, ಬೈಕ್ ಗಳು ಮುಖಾಮುಖಿ ಡಿಕ್ಕಿಯಾಗುವುದು ಸಾಮಾನ್ಯ. ಆದರೆ ಸಮುದ್ರದಲ್ಲಿ ಹಡಗಗಳು ಒಂದಕ್ಕೊಂದು ಡಿಕ್ಕಿಯಾಗಿರುವ ಘಟನೆ ಪಾಕಿಸ್ತಾನದ ಕರಾಚಿ ಬಂದರಿನಲ್ಲಿ ನಡೆದಿದೆ . ದಕ್ಷಿಣ ಏಷ್ಯಾದ ದೊಡ್ಡ ಬಂದರುಗಳಲ್ಲಿ ಒಂದಾಗಿರುವ ಕರಾಚಿಯ ಬಂದರಿನಲ್ಲಿ ಎರಡು ಕಾರ್ಗೊ ಹಡಗುಗಳು ನಿಲ್ಲುವ...