Friday, 15th December 2017

Recent News

4 days ago

ನಿಮ್ಮ ಸ್ವ ಸಾಮರ್ಥ್ಯ ದಿಂದ ಚುನಾವಣೆ ಗೆಲ್ಲಿ, ನಮ್ಮನ್ನು ತರಬೇಡಿ: ಮೋದಿಗೆ ಪಾಕ್ ಟಾಂಗ್

ಅಹಮದಾಬಾದ್: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಪಾಕಿಸ್ತಾನ ಹಸ್ತಕ್ಷೇಪ ಮಾಡುತ್ತಿದೆ ಎನ್ನುವ ಪ್ರಧಾನಿ ಮೋದಿ ಆರೋಪಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಪಾಕಿಸ್ತಾನ, ವಿನಾಕಾರಣ ಭಾರತ ಚುನಾವಣೆಯಲ್ಲಿ ನಮ್ಮನ್ನು ಎಳೆಯುವುದನ್ನು ನಿಲ್ಲಿಸಿ, ನಿಮ್ಮ ಸ್ವಸಾಮರ್ಥ್ಯದಿಂದ ಚುನಾವಣೆಯಲ್ಲಿ ಗೆಲುವು ಪಡೆಯಿರಿ ಎಂದು ಪ್ರತಿಕ್ರಿಯಿಸಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿ ಟ್ವೀಟ್ ಮಾಡಿರುವ ಪಾಕಿಸ್ತಾನ ವಿದೇಶಾಂಗ ಸಚಿವಾಲಯದ ವಕ್ತಾರ ಮಹ್ಮದ್ ಫೈಸಲ್, ಭಾರತ ಚುನಾವಣೆಯಲ್ಲಿ ಪಾಕಿಸ್ತಾನವನ್ನು ವಿನಾಕಾರಣ ಎಳೆದು ತರುವುದನ್ನು ನಿಲ್ಲಿಸಿ, ಸ್ವಸಾಮರ್ಥ್ಯದ ಮೇಲೆ ಚುನಾವಣೆಯಲ್ಲಿ ಗೆಲುವು ಪಡೆಯಿರಿ. ಪಾಕಿಸ್ತಾನದ […]

7 days ago

ಲಂಕಾ ಪರ ಬ್ಯಾಟ್ ಮಾಡಲು ಹೋಗಿ ಟ್ರೋಲ್ ಆದ ರಸೆಲ್ ಅರ್ನಾಲ್ಡ್

ನವದೆಹಲಿ: ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿ ಗೆಲುವು ಪಡೆದಿರುವ ಭಾರತ, ಮುಂಬರುವ ಏಕದಿನ ಸರಣಿಯಲ್ಲಿ ವೈಟ್‍ವಾಶ್ ಮಾಡಲು ಸಾಧ್ಯವಿಲ್ಲ ಎಂದು ಟ್ವೀಟ್ ಮಾಡಿದ್ದ ಶ್ರೀಲಂಕಾ ಮಾಜಿ ಆಟಗಾರ ರಸೆಲ್ ಅರ್ನಾಲ್ಡ್ ಅವರಿಗೆ ಟೀಂ ಇಂಡಿಯಾ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ಮರುಟ್ವೀಟ್ ಮಾಡಿ ಕಾಲೆಳೆದಿದ್ದಾರೆ. ಭಾರತ- ಶ್ರೀಲಂಕಾ ನಡುವಿನ ಟೆಸ್ಟ್ ಸರಣಿ 1-0 ಮುಕ್ತಾಯವಾಗಿದೆ. ಆದರೆ...

ಕೊಡದಲ್ಲಿ ಸಿಲುಕಿಕೊಂಡಿದ್ದ ನಾಯಿಯನ್ನು ರಕ್ಷಿಸಿದ್ರು ಬೆಂಗ್ಳೂರು ಪೊಲೀಸರು

3 weeks ago

ಬೆಂಗಳೂರು: ಕೊಡದಲ್ಲಿ ಸಿಲುಕಿಕೊಂಡಿದ್ದ ನಾಯಿಯನ್ನು 15 ಮಂದಿ ಕೆಎಸ್ಆರ್‌ಪಿ  ಸಿಬ್ಬಂದಿ ರಕ್ಷಣೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ. ಈ ಘಟನೆ ಇದೇ ತಿಂಗಳ 24 ರ ಶುಕ್ರವಾರದಂದು ನಡೆದಿದ್ದು, ನಾಯಿಯನ್ನು ಕಾಪಾಡುತ್ತಿರುವ ಫೋಟೋವನ್ನು ಪೂರ್ವ ವಲಯದ ಡಿಸಿಪಿ ಅಭಿಷೇಕ್ ಗೋಯಲ್ ಟ್ವೀಟ್...

ಬಿಜೆಪಿ ಸಂಸದನಿಗೆ ಹಳೆಯ ಟ್ವೀಟ್‍ಗಳ ಕಾಟ- ಪ್ರತಾಪ್ ಸಿಂಹಗೆ ಟ್ಯಾಗ್ ಮಾಡಿ ಕಾಂಗ್ರೆಸ್ ಟ್ರೋಲ್

3 weeks ago

ಬೆಂಗಳೂರು: ನಟ ಪ್ರಕಾಶ್ ರೈ ವಿರುದ್ಧ ಟ್ವಿಟ್ಟರ್‍ನಲ್ಲಿ ಕಾಲೆಳೆದು ಮಾನನಷ್ಟ ಮೊಕದ್ದಮೆ ನೋಟಿಸ್ ಪಡೆದಿರುವ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರಿಗೆ ಈಗ ಅವರ ಹಳೆಯ ಟ್ವೀಟ್‍ಗಳು ಕಾಡ ತೊಡಗಿವೆ. 2012ರ ಅವಧಿಯಲ್ಲಿ ಆಗಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ನಿತಿನ್ ಗಡ್ಕರಿ,...

ಮಂತ್ರಿಗಳು, ಸರ್ಕಾರಿ ಅಧಿಕಾರಿಗಳ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದುವುದು ಕಡ್ಡಾಯ!

3 weeks ago

ಬೆಂಗಳೂರು: ಕನ್ನಡ ಉಳಿಸುವ ನಿಟ್ಟಿನಲ್ಲಿ ಸರ್ಕಾರದ ಮಂತ್ರಿಗಳ ಮಕ್ಕಳು ಕಡ್ಡಾಯವಾಗಿ ಸರ್ಕಾರಿ ಶಾಲೆಯಲ್ಲಿ ಓದುವ ಮಸೂದೆಯನ್ನು ಮಂಡಿಸಲು ರಾಜ್ಯಸರ್ಕಾರ ಮುಂದಾಗಿದೆ. ಸರ್ಕಾರಿ ನೌಕರರ, ರಾಜ್ಯದ ಮುಖ್ಯಮಂತ್ರಿಗಳ ಮತ್ತು ಕ್ಯಾಬಿನೆಟ್ ಸಚಿವರ ಮಕ್ಕಳು ಕಡ್ಡಾಯವಾಗಿ ಸರ್ಕಾರಿ ಶಾಲೆಯಲ್ಲಿ ಓದಿಸುವ ಮಸೂದೆಯನ್ನು ಪರಿಷತನ್ ನಲ್ಲಿ...

ಕನ್ನಡದ ಮನೆಮಗಳು ದೀಪಿಕಾಗೆ ರಕ್ಷಣೆ ನೀಡುವಂತೆ ಹರ್ಯಾಣ ಸಿಎಂಗೆ ಸಿದ್ದರಾಮಯ್ಯ ಕರೆ

4 weeks ago

ಬೆಂಗಳೂರು: ದೇಶಾದ್ಯಂತ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅಭಿನಯದ `ಪದ್ಮಾವತಿ’ ಚಿತ್ರ ಬಿಡುಗಡೆಗೆ ಮುನ್ನವೇ ಒಂದಿಲ್ಲೊಂದು ವಿಚಾರದಲ್ಲಿ ಭಾರೀ ಸುದ್ದಿ ಮಾಡುತ್ತಿದೆ. ಈ ಹೊತ್ತಲ್ಲಿ ನಟಿ ದೀಪಿಕಾ ಪಡುಕೋಣೆಗೆ ರಕ್ಷಣೆ ನೀಡುವಂತೆ ಕೋರಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸಿಎಂ ಸಿದ್ದರಾಮಯ್ಯಗೆ ಪತ್ರ...

ಟ್ವಿಟ್ಟರ್‍ನಲ್ಲಿ ಸೈಲೆಂಟ್ ಆದ ಮಾಜಿ ಸಂಸದೆ ರಮ್ಯಾ

4 weeks ago

ಮಂಡ್ಯ: ಅತ್ಯಂತ ಕಡಿಮೆ ಅವಧಿಯಲ್ಲೇ ಕಾಂಗ್ರೆಸ್‍ನ ಮನೆ ಮಾತಾಗಿದ್ದ ನಟಿ, ಮಾಜಿ ಸಂಸದೆ ರಮ್ಯಾ ಯಾಕೋ ಟ್ವಿಟ್ಟರ್‍ನಲ್ಲಿ ಮೌನವಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್‍ಗೆ ಬದಲಾವಣೆ ಕಟ್ಟಿಕೊಡುವ ಹೊಣೆಗಾರಿಕೆ ಹೊತ್ತಿದ್ದ ರಮ್ಯಾ ಟ್ವಿಟ್ಟರ್‍ನಲ್ಲಿ ದಿಢೀರನೇ ಸೈಲೆಂಟಾಗಿರೋದು ಭಾರೀ ಚರ್ಚೆಗೆ ಗ್ರಾಸವಾಗಿದೆ. ನವೆಂಬರ್ 8ನೇ...

ಪತ್ನಿ ಪ್ರಿಯಾಗೆ ಶುಭ ಕೋರಿದ ಸುದೀಪ್

1 month ago

ಬೆಂಗಳೂರು: ಕಿಚ್ಚ ಸುದೀಪ್ ಯಾವಾಗಲೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುತ್ತಾರೆ. ತಮ್ಮ ಅಭಿಮಾನಿಗಳು ಮಾಡುವ ಟ್ವೀಟ್ ಗೆ ರೀ-ಟ್ವೀಟ್ ಮಾಡಿ ಅವರಿಗೆ ಸಂತೋಷಪಡಿಸುತ್ತಾರೆ. ಈಗ ಅವರ ಪತ್ನಿ ಪ್ರಿಯಾ ರಾಧಾ ಕೃಷ್ಣನ್ ಅವರಿಗೆ ಶುಭಾಶಯ ಕೋರಿದ್ದಾರೆ. ಹೌದು. ಸುದೀಪ್ ಅವರ ಪತ್ನಿ ಪ್ರಿಯಾ...