Sunday, 17th December 2017

Recent News

7 days ago

ಎಂಎಲ್‍ಎ ಯಿಂದ ‘ಕಿಸ್ಸಿಂಗ್ ಕಾಂಪಿಟೇಶನ್’ ಆಯೋಜನೆ- ಸ್ಪರ್ಧೆ ನೋಡಲು ಭಾರೀ ಸಂಖ್ಯೆಯಲ್ಲಿ ಸೇರಿದ ಜನ

ರಾಂಚಿ: ಜಾರ್ಖಂಡ್‍ನ ಲಿಟ್ಟಿಪಾಡಾ ವಿಧಾನಸಭಾ ಕ್ಷೇತ್ರದ ಜಾರ್ಖಂಡ್ ಮುಕ್ತಿ ಮೋರ್ಚಾ(ಜೆಎಂಎಂ) ಪಕ್ಷದ ಶಾಸಕ ಸೈಮನ್ ಮರಂಡಿ ಮೊದಲ ಬಾರಿಗೆ ‘ಕಿಸ್ಸಿಂಗ್ ಕಾಂಪಿಟೇಶನ್’ ಸ್ಪರ್ಧೆಯನ್ನು ಆಯೋಜನೆ ಮಾಡಿದ್ದು ಈಗ ಸುದ್ದಿಯಾಗಿದೆ. ರಾಜ್ಯದ ಪಾಕುರ್ ಜಿಲ್ಲೆಯ ಲಿಟ್ಟಿಪಾಡಾ ಬ್ಲಾಕ್ ನ ದುಮರೈ ಎಂಬ ಗ್ರಾಮದ ಸಿಡೋ-ಕನ್ಹೂ ಜಾತ್ರೆಯಲ್ಲಿ ಈ ಚುಂಬನ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಜಾತ್ರೆಯಲ್ಲಿ ಸಾವಿರಾರು ಜನರ ಮುಂದೆ ಸ್ಪರ್ಧಿಗಳು ತಮ್ಮ ಸಂಗಾತಿಗೆ ಲಿಪ್ ಲಾಕ್ ಮಾಡಿದ್ರು.   ಸ್ಪರ್ಧೆಯ ಷರತ್ತು: 18 ವರ್ಷ ಮೇಲ್ಪಟ್ಟ ಬುಡಕಟ್ಟು ಜನಾಂಗದ ದಂಪತಿಗಳು […]

4 weeks ago

ಈ ಗ್ರಾಮದಲ್ಲಿ ದೇವಿ ಜಾತ್ರೆಯ ದಿನ ಊರಿಗೆ ಊರೇ ಮೌನ

ಗದಗ: ಒಬ್ಬರು ಇಬ್ಬರೂ ದೇವರಿಗಾಗಿ ಮೌನ ವ್ರತ ಮಾಡುತ್ತಾರೆ. ಆದರೆ ಈ ಗ್ರಾಮದಲ್ಲಿ ದೇವಿ ಜಾತ್ರೆಯ ಬಂದರೆ ಸಾಕು ಅಂದು ಊರಿಗೆ ಊರೇ ಮೌನ ಹಾಗೂ ನಿಶಬ್ಧವಾಗಿರುತ್ತೆ. ವರ್ಷದಲ್ಲಿ ಒಂದು ದಿನ ಊರಲ್ಲಿರುವ ಎಲ್ಲಾ ಮನೆಗಳಿಗೆ ಬೀಗ ಹಾಕಿ ದೇವಿ ದರ್ಶನಕ್ಕೆ ಹೋಗುತ್ತಾರೆ. ಇದು ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮ. ಈ ಗ್ರಾಮದಲ್ಲಿ...

ಅನ್ನ ಪ್ರಸಾದ ಸೇವಿಸಿ ಮಕ್ಕಳೂ ಸೇರಿ 60ಕ್ಕೂ ಹೆಚ್ಚು ಮಂದಿ ಅಸ್ವಸ್ಥ

2 months ago

ಧಾರವಾಡ: ಜಾತ್ರೆಯಲ್ಲಿ ಅನ್ನ ಪ್ರಸಾದ ಸೇವಿಸಿದ 60 ಕ್ಜೂ ಹೆಚ್ಚು ಜನರು ಅಸ್ವಸ್ಥರಾದ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ದಾಸ್ರಿಕೊಪ್ಪ ಗ್ರಾಮದಲ್ಲಿ ಶುಕ್ರವಾರ ಮೈಲಾರಲಿಂಗ ದೇವರ ಜಾತ್ರೆ ಹಿನ್ನೆಲೆಯಲ್ಲಿ ಅನ್ನ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಈ ಸಮಯದಲ್ಲಿ...

ಐತಿಹಾಸಿಕ ಹಾಸನಾಂಬೆ ದೇವಾಲಯದ ಬಾಗಿಲು ಓಪನ್: ಫೋಟೋಗಳಲ್ಲಿ ನೋಡಿ

2 months ago

ಹಾಸನ: ಒಂದು ವರ್ಷಕೊಮ್ಮೆ ಬಾಗಿಲು ತೆಗೆಯುವ ಮತ್ತು ಪವಾಡ ಮಹಿಮೆಗಳಿಂದ ಮನೆಮಾತಾಗಿರುವ ಹಾಸನಾಂಬೆಯ ಗರ್ಭಗುಡಿಯ ಬಾಗಿಲನ್ನು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಗುರುವಾರ ಮಧ್ಯಾಹ್ನ ತೆರೆಯಲಾಗಿದೆ. ನಗರದ ಹೃದಯ ಭಾಗದಲ್ಲಿರುವ ದೇವಾಲಯದ ಬಾಗಿಲನ್ನು ಇಂದು ಮಧ್ಯಾಹ್ನ ಶಾಸ್ತ್ರೋಕ್ತವಾಗಿ ತೆರೆಯಲಾಗಿದ್ದು, ಸಿದ್ದೇಶ್ವರ ಜಾತ್ರೆ ಹಾಗೂ...

ಜಾತ್ರೆಯಲ್ಲಿ ಪಕ್ಕಕ್ಕೆ ಸರಿ ಅಂತ ಹೇಳಿದ್ದಕ್ಕೆ ಒಂದೇ ಕುಟುಂಬದ 7 ಜನರ ಮೇಲೆ ಮಾರಣಾಂತಿಕ ಹಲ್ಲೆ

6 months ago

ಕಲಬುರಗಿ: ಜಾತ್ರೆಯಲ್ಲಿ ಪಕ್ಕಕ್ಕೆ ಸರಿ ಅಂತ ಹೇಳಿದ್ದಕ್ಕೆ ಒಂದೇ ಕುಟುಂಬದ ಏಳು ಜನರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಕಲಬುರಗಿಯಲ್ಲಿ ನಡೆದಿದೆ. ಜಿಲ್ಲೆಯ ಹತಗುಂದ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮಹಾದೇವಪ್ಪ ಕುಟುಂಬದ ಏಳು ಜನ ಹಲ್ಲೆಗೊಳಗಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ....

ದಲಿತರು ದೇವಾಲಯ ಪ್ರವೇಶಿಸಿದ್ದಕ್ಕೆ ಜಾತ್ರೆಯನ್ನ ಅರ್ಧಕ್ಕೆ ನಿಲ್ಸಿದ್ರು- ಆಹಾರ ನೀರು ಬಿಟ್ಟು ಮೂಕಪ್ರಾಣಿಯ ರೋಧನೆ

7 months ago

ತುಮಕೂರು: ಗೃಹ ಸಚಿವರ ಹಾಗೂ ಕಾನೂನು ಸಚಿವರ ತವರಲ್ಲೇ ದಲಿತರ ದೇವಾಲಯ ಪ್ರವೇಶ ನಿಷೇಧಕ್ಕೆ ಮೂಕ ಪ್ರಾಣಿಯೊಂದು ಆಹಾರ ನೀರು ಬಿಟ್ಟು ರೋಧಿಸುತ್ತಿದೆ. ತುಮಕೂರು ತಾಲೂಕಿನ ಕೊತ್ತಿಹಳ್ಳಿ ಹಾಗೂ ಮಲ್ಲಸಂದ್ರಪಾಳ್ಯ ಎನ್ನುವ ಎರಡು ಗ್ರಾಮಗಳ ದೇವತೆಯಾಗಿರೋ ಕುಚ್ಚಂಗಿಯಮ್ಮನ ಜಾತ್ರೆ ಅರ್ಧಕ್ಕೆ ನಿಂತು...

ವಿಡಿಯೋ: ಕೊಂಡ ಹಾಯುವಾಗ ಆಯತಪ್ಪಿ ಬಿದ್ದ ದೇವರ ಪಲ್ಲಕ್ಕಿ ಹೊತ್ತ ಭಕ್ತ

7 months ago

ಧಾರವಾಡ: ಜಿಲ್ಲೆಯ ಕಲಘಟಗಿ ತಾಲೂಕಿನ ಬೀರವಳ್ಳಿ ಗ್ರಾಮದ ಕಲ್ಮೇಶ್ವರನ ಜಾತ್ರೆಯಲ್ಲಿ ಪಲ್ಲಕ್ಕಿ ಹೊತ್ತಿದ್ದ ವ್ಯಕ್ತಿ ಕೆಂಡ ಹಾಯುವಾಗ ಆಯತಪ್ಪಿ ಬಿದ್ದ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿವೆ. ಪ್ರತಿ ವರ್ಷದಂತೆ ಗ್ರಾಮದಲ್ಲಿ ಕಲ್ಮೇಶ್ವರ ದೇವರ ಪಲ್ಲಕ್ಕಿ ಉತ್ಸವದ ಜೊತೆಯಲ್ಲಿ ಕೆಂಡದೋಕುಳಿ ನಡೆಯುತ್ತದೆ. ಈ ಜಾತ್ರೆಯಲ್ಲಿ...

ಈ ಜಾತ್ರೆಯಲ್ಲಿ ಕಬ್ಬಿಣದ ಸರಪಳಿ ಬೆನ್ನಿಗೆ ಚುಚ್ಕೊಂಡು ರಥ ಎಳೀತಾರೆ!

8 months ago

ಕೊಪ್ಪಳ: ಜಿಲ್ಲೆಯ ಹೊಸಲಿಂಗಾಪುರ ಗ್ರಾಮದ ಕರಿಮಾರಿಯಮ್ಮ ದೇವಿಯ ಜಾತ್ರಾಮಹೋತ್ಸವ ಅದ್ಧೂರಿಯಾಗಿ ನೆರವೇರಿತು. ಭಕ್ತಾದಿಗಳು ದೇಹದಂಡನೆ ಮೂಲಕ ಭಕ್ತಿಯ ಪರಾಕಾಷ್ಠೆ ಮೆರೆದ್ರು. ವಿಚಿತ್ರ ಅಂದ್ರೆ ಕಬ್ಬಿಣದ ಸರಪಳಿಯನ್ನು ಬೆನ್ನಿಗೆ ಚುಚ್ಚಿಕೊಂಡು ದೇವರ ರಥ ಎಳೆದಿದ್ದು ನೋಡುಗರನ್ನ ನಿಬ್ಬೆರಗಾಗಿಸಿತು. ಇನ್ನೂ ಕೆಲವರು ಕಾರು ಎಳೆದ್ರೆ...