Wednesday, 23rd May 2018

Recent News

1 month ago

ರಸ್ತೆ ಬದಿ ಅನುಮಾನಾಸ್ಪದವಾಗಿ ಚಿರತೆ ಸಾವು

ಕಾರವಾರ: ಅನುಮಾನಾಸ್ಪದವಾಗಿ ಚಿರತೆಯೊಂದು ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ. ನಗರದ ಹುತ್ಗಾರ್ ರಸ್ತೆ ಪಕ್ಕದಲ್ಲಿ ಎರಡು ವರ್ಷದ ಚಿರತೆ ಮೃತಪಟ್ಟಿದೆ. ಚಿರತೆ ರಸ್ತೆ ಬದಿ ಬಿದ್ದಿರುವುದನ್ನು ನೋಡಿದ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ನಂತರ ಕೂಡಲೇ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಶವಪರೀಕ್ಷೆ ನಡೆಸಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಆದರೆ ಚಿರತೆ ಸಾವು ಹಲವು ಅನುಮಾನ ಹುಟ್ಟಿಸಿದ್ದು, ಈ ಭಾಗದಲ್ಲಿ ಈ ತಿಂಗಳು ಸಾವನ್ನಪ್ಪಿದ ಮೂರನೇ ಚಿರತೆ ಇದಾಗಿದೆ. ಮರ […]

2 months ago

ಪ್ರವಾಸಿಗನ ಜೀಪ್ ಏರಿ ಕುಳಿತ ಚಿರತೆ- ಮುಂದೇನಾಯ್ತು ವಿಡಿಯೋ ನೋಡಿ

ಕೇಪ್‍ಟೌನ್: ಚಿರತೆಯೊಂದು ಸಫಾರಿಗೆ ಬಂದಿದ್ದ ಪ್ರವಾಸಿಗನ ಜೀಪ್ ಒಳಗಡೆ ನುಗ್ಗಿ ಕುಳಿತಿದ್ದು, ಪ್ರವಾಸಿಗ ಬೆಚ್ಚಿಬಿದ್ದ ಘಟನೆ ಆಫ್ರಿಕಾದಲ್ಲಿ ನಡೆದಿದೆ. ಅಫ್ರಿಕಾದ ಸಿರೆನ್ಗಟಿಯಲ್ಲಿ ಈ ಘಟನೆ ನಡೆದಿದ್ದು, ಮೂರ್ನಾಲ್ಕು ಪ್ರವಾಸಿಗರಿದ್ದ ವಾಹನವೊಂದು ಸಫಾರಿಗೆ ತೆರಳಿತ್ತು. ಈ ವೇಳೆ ಮಾರ್ಗ ಮಧ್ಯೆ ಆನೇಕ ವನ್ಯಜೀವಿಗಳನ್ನು ಕಂಡು ರೋಮಾಂಚನಗೊಂಡಿದ್ದ ಪ್ರವಾಸಿಗರಿಗೆ ಚಿರತೆಯೊಂದು ಎದುರಾಗಿದೆ. ಅಮೇರಿಕದ ಪ್ರವಾಸಿ ಬ್ರಿಟನ್ ಹಯೆಸ್ ತಂಡ...

ಅಪರಿಚಿತ ವಾಹನ ಡಿಕ್ಕಿಯಾಗಿ ಮರಿಚಿರತೆ ಬಲಿ- ಕಂದನನ್ನು ಕಳೆದುಕೊಂಡು, ಗಾಯಗೊಂಡ ತಾಯಿ ಚಿರತೆಯ ರೋಧನೆ

2 months ago

ತುಮಕೂರು: ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ಚಿರತೆ ಮರಿಯೊಂದು ಸಾವನ್ನಪ್ಪಿದ ಘಟನೆ ತುಮಕೂರು ಜಿಲ್ಲೆಯ ಹೆಬ್ಬೂರಿನಲ್ಲಿ ನಡೆದಿದೆ. ಚಿರತೆ ಹಾಗೂ ಅದರ ಮರಿ ರಸ್ತೆ ದಾಟುವಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಮರಿ...

ವಂಡರ್ ಲಾಗೆ ನುಗ್ಗಿದ ಚಿರತೆ- ಆತಂಕದಲ್ಲಿ ಪ್ರವಾಸಿಗರು

3 months ago

ರಾಮನಗರ: ಮಂಚನಾಯಕನಹಳ್ಳಿ ಬಳಿಯಿರುವ ವಂಡರ್ ಲಾ ಅಮ್ಯೂಸ್ ಮೆಂಟ್ ಪಾರ್ಕ್ ಗೆ ಚಿರತೆಯೊಂದು ನುಗ್ಗಿದ್ದು ಪ್ರವಾಸಿಗರು ಮತ್ತು ಸಿಬ್ಬಂದಿ ಆತಂಕದಲ್ಲಿದ್ದಾರೆ. ವಂಡರ್ ಲಾ ಸಮೀಪದ ಅರಣ್ಯಕ್ಕೆ ಬೆಂಕಿ ಬಿದ್ದಿತ್ತು. ಬೆಂಕಿಯಿಂದ ಪಾರಾಗಲು ಚಿರತೆ ವಂಡರ್ ಲಾ ಗೆ ನುಗ್ಗಿದೆ ಎನ್ನುವ ಪ್ರಾಥಮಿಕ...

ಮನೆಯೊಳಗೆ ಚಿರತೆ ನುಗಿದ್ದ ವೇಳೆ ಶೌಚಾಲಯದಲ್ಲಿ ಬಂಧಿಯಾಗಿದ್ದ ಅತ್ತೆ-ಸೊಸೆಗೆ ಸನ್ಮಾನ!

3 months ago

ತುಮಕೂರು: ಮನೆಯೊಳಗೆ ಇದ್ದ ಚಿರತೆಗೆ ಸೆಡ್ಡುಹೊಡೆದು ಸತತ 7 ಗಂಟೆ ಕಾಲ ಶೌಚಾಲಯದಲ್ಲಿ ಬಂಧಿಯಾಗಿ ಸುರಕ್ಷಿತವಾಗಿ ಹೊರಕ್ಕೆ ಬಂದ ತುಮಕೂರಿನ ಗಟ್ಟಿಗಿತ್ತಿ ಅತ್ತೆ-ಸೊಸೆಗೆ ಅಭಿನಂದನೆಯ ಮಾಹಾಪೂರ ಹರಿದು ಬರುತಿದೆ. ಅತ್ತೆ ವನಜಾಕ್ಷಿ ಸೊಸೆ ವಿನುತಾ ಹಾಗೂ ಮಾವ ರಂಗನಾಥ್ ಅವರು ತೋರಿದ...

ಈಜಿ..ಈಜಿ.. ಬಾವಿಯಲ್ಲಿ ಮುಳುಗಿ ಸತ್ತ ಚಿರತೆ

3 months ago

ಉಡುಪಿ: ಆಹಾರ ಅರಸುತ್ತಾ ಕಾಡಿಂದ ನಾಡಿಗೆ ಬಂದ ಚಿರತೆ ಕತ್ತಲಲ್ಲಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಕುಂದಾಪುರ ತಾಲೂಕಿನ ಮಂದಾರ್ತಿಯಲ್ಲಿ ನಡೆದಿದೆ. ಕಳೆದ ರಾತ್ರಿ ಕತ್ತಲಿನಲ್ಲಿ ಬಾವಿಗೆ ಬಿದ್ದಿದ್ದ ಚಿರತೆಯನ್ನು ಇಂದು ಬೆಳಗ್ಗೆ ಸ್ಥಳೀಯರು ನೋಡಿದ್ದಾರೆ. ಬೆಳಗ್ಗಿನ ಜಾವದವರೆಗೆ ಪ್ರಾಣ ಉಳಿಸಿಕೊಳ್ಳಲು...

ನಾಯಿ ತಿನ್ನಲು ಹೋಗಿ ದನದ ಕೊಟ್ಟಿಗೆಯಲ್ಲಿ ಸಿಕ್ಕಿಬಿದ್ದ ಚಿರತೆ

4 months ago

ರಾಮನಗರ: ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಚಿರತೆಯೊಂದು ನಾಯಿಯನ್ನು ಹಿಡಿಯಲು ಹೋಗಿ ದನದ ಕೊಟ್ಟಿಗೆಯಲ್ಲಿ ಸಿಕ್ಕಿಬಿದ್ದ ಘಟನೆ ರಾಮನಗರ ತಾಲೂಕಿನ ಸಂಗಬಸವನದೊಡ್ಡಿ ಗ್ರಾಮದಲ್ಲಿ ನಡೆದಿದೆ. ಇಂದು ಬೆಳಗಿನ ಜಾವದ ವೇಳೆಗೆ ಆಹಾರ ಹುಡುಕಿ ಬಂದ ಚಿರತೆ ನಾಯಿಯನ್ನು ತಿನ್ನಲು ಮುಂದಾಗಿದೆ....

ಅರಣ್ಯ ಇಲಾಖೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಬೆಳ್ತಂಗಡಿಯಲ್ಲಿ ಚಿರತೆ ದುರಂತ ಸಾವು

4 months ago

ಮಂಗಳೂರು: ಅರಣ್ಯ ಇಲಾಖೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಚಿರತೆ ದುರಂತ ಸಾವು ಕಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಗುಂಡೂರಿನಲ್ಲಿ ನಡೆದಿದೆ. ವೇಣೂರು ಬಳಿ ಸೆರೆ ಸಿಕ್ಕಿದ್ದ ಚಿರತೆಯನ್ನು ಅರಣ್ಯ ಸಿಬ್ಬಂದಿ ಜನವಸತಿ ಇರುವ ಪ್ರದೇಶದಲ್ಲಿ ಬಿಟ್ಟಿದ್ದರು. ಆದರೆ ಅಲ್ಲಿ ಕಾಡು...