Tuesday, 19th June 2018

Recent News

12 hours ago

ಪಲ್ಟಿಯಾಗಿ ಧಗಧಗನೆ ಹೊತ್ತಿ ಉರಿಯುತ್ತಿದೆ ಪೆಟ್ರೋಲ್ ಟ್ಯಾಂಕರ್- 5ಕ್ಕೂ ಹೆಚ್ಚು ಮನೆಗಳು ಭಸ್ಮ

ಚಿಕ್ಕಮಗಳೂರು: ಪೆಟ್ರೋಲ್ ಟ್ಯಾಂಕರ್ ಪಲ್ಟಿಯಾಗಿ 5ಕ್ಕೂ ಹೆಚ್ಚು ಮನೆಗಳು ಧಗಧಗನೆ ಹೊತ್ತಿ ಉರಿದು ಘಟನೆ ಚಿಕ್ಕಮಗಳೂರು ಕಡೂರು ತಾಲೂಕು ಗಿರಿಯಾಪುರ ಗ್ರಾಮದಲ್ಲಿ ನಡೆದಿದೆ. ಕಡೂರಿನಿಂದ ಹೊಸದುರ್ಗ ಕಡೆಗೆ ಪೆಟ್ರೋಲ್ ಟ್ಯಾಂಕರ್ ಹೋಗುತ್ತಿತ್ತು. ಈ ವೇಳೆ ಲಾರಿ ಪಕ್ಕದಲ್ಲೇ ಬೈಕ್ ಬಂದಿದ್ದು, ಅಪಘಾತ ತಡೆಯಲು ಹೋಗಿ ಲಾರಿ ಪಲ್ಟಿ ಆಗಿದೆ. ಬೈಕ್ ಮೇಲೆ ಪೆಟ್ರೋಲ್ ಟ್ಯಾಂಕರ್ ಬಿದ್ದಿದೆ. ಬೈಕಿನ ಮೇಲೆ ಬಿದ್ದ ಬಳಿಕ ಟ್ಯಾಂಕರ್ ಹೊತ್ತಿ ಉರಿದಿದೆ. ಹೊತ್ತು ಉರಿಯುತ್ತಿದ್ದಂತೆ ಕ್ಲೀನರ್ ಸ್ಥಳದಲ್ಲೇ ಸಜೀವ ದಹನವಾಗಿದ್ದರೆ. ಚಾಲಕ ಮೈತುಂಬಾ […]

15 hours ago

ವಿರಾಮ ಮುಗಿಸಿ ಮತ್ತೆ ಚಿಕ್ಕಮಗಳೂರು, ಕರಾವಳಿಯಲ್ಲಿ ಆರ್ಭಟಿಸುತ್ತಿದ್ದಾನೆ ಮಳೆರಾಯ!

ಚಿಕ್ಕಮಗಳೂರು/ಉಡುಪಿ/ದಕ್ಷಿಣಕನ್ನಡ: ಒಂದು ವಾರ ವಿರಾಮ ನೀಡಿದ ಬಳಿಕ ಮಳೆರಾಯ ಇಂದು ದಕ್ಷಿಣ ಕನ್ನಡ, ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಆರ್ಭಟ ಮುಂದುವರಿಸಿದ್ದಾನೆ. ಕಾಫಿನಾಡು ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಕಳೆದೊಂದು ವಾರದ ಹಿಂದೆ ಆದ ಅವಾಂತರಗಳಿಂದ ಜನಸಾಮಾನ್ಯರು ಹೊರಬರುವಷ್ಟರಲ್ಲಿ ಮತ್ತೆ ಮಳೆರಾಯನ ಆಗಮನ ಜೋರಾಗಿದೆ. ಜಿಲ್ಲೆಯ ಮಲೆನಾಡು ಭಾಗವಾದ ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ, ಬಾಳೆಹೊನ್ನೂರು, ಕಳಸ...

ಪ್ರವಾಸಿಗರ ಪಾಲಿನ ಸ್ವರ್ಗವಾದ ಚಾರ್ಮಾಡಿ ಘಾಟ್ – ವಿಡಿಯೋ ನೋಡಿ

2 days ago

ಚಿಕ್ಕಮಗಳೂರು: ಪಶ್ಚಿಮ ಘಟ್ಟದ ಚಾರ್ಮಾಡಿ ಘಾಟಿಯಲ್ಲಂತು ನಿಸರ್ಗ ಮಾತೆಯ ನೈಜ ಸೊಬಗು ಅನಾವರಣಗೊಂಡಿದೆ. ಇಳೆಗೆ ಹಸಿರ ಹೊದಿಕೆಯ ಸ್ವಾಗತ. ಹಾದಿಯುದ್ದಕ್ಕೂ ದಟ್ಟ ಮಂಜಿನ ಆಟ. ಹಸಿರ ವನರಾಶಿ ನಡುವಿಂದ ಸಾಗೋ ಬೆಳ್ಮುಗಿಲ ಸಾಲು. ರಸ್ತೆಯುದ್ದಕ್ಕೂ ಧುಮ್ಮಿಕ್ಕಿ ಹರಿಯೋ ಜಲಧಾರೆಯ ಸೊಬಗು ಆವರಿಸಿಕೊಂಡಿದೆ....

ಕರ್ನಾಟಕದ ಮೊದಲ ಫೈಟರ್ ಪೈಲಟ್ – ಕನ್ನಡತಿ ಮೇಘನಾ ಶಾನಭೋಗ್ ಸಾಧನೆ

3 days ago

ನವದೆಹಲಿ: ಕರ್ನಾಟಕ ಮೊದಲ ಯುದ್ಧ ವಿಮಾನ ಮಹಿಳಾ ಪೈಲಟ್ ಆಗಿ ಮೇಘನಾ ಶಾನಭೋಗ್ ಶನಿವಾರ ಆಯ್ಕೆ ಆಗಿದ್ದು, ಇಂತಹ ಸಾಧನೆ ಮಾಡಿದ ಮೊದಲ ಕನ್ನಡತಿ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ಮೂಲತಃ ಕರ್ನಾಟಕ ಚಿಕ್ಕಮಗಳೂರಿನ ಜಿಲ್ಲೆಯವರಾದ ಮೇಘನಾ ಅವರ ಹೆಸರನ್ನು ಹೈದರಾಬಾದ್ ದುಂಡಿಗಲ್...

ಶಿಥಿಲಾವಸ್ಥೆಯಲ್ಲಿದೆ ಹೊರನಾಡಿಗೆ ಸಂಪರ್ಕ ಕಲ್ಪಿಸೋ ಹೆಬ್ಬಾಳೆ ಸೇತುವೆ!

4 days ago

ಚಿಕ್ಕಮಗಳೂರು: ಭದ್ರಾ ನದಿಯ ನೀರಿನ ರಭಸಕ್ಕೆ ಹೊರನಾಡು ಅನ್ನಪೂಣೇಶ್ವರಿ ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ಶಿಥಿಲಾವಸ್ಥೆಯಲ್ಲಿರುವ ಹೆಬ್ಬಾಳೆ ಸೇತುವೆ ಇಕ್ಕೆಲಗಳಲ್ಲಿದ್ದ ತಡೆಗೋಡೆಯ ಕಂಬಗಳು ಮುರಿದು ಬಿದ್ದಿದೆ. ಸೇತುವೆಯೂ ಪಾಳು ಬಿಟ್ಟು, ಸೇತುವೆಯೇ ಮಧ್ಯದಲ್ಲೇ ರಂಧ್ರಗಳಾಗಿವೆ. ಮಳೆ ನಿಂತ ಮೇಲೆ ಭದ್ರೆಯ ರಭಸ ಕಡಿಮೆಯಾದ...

ಶಾಂತನಾದ ವರುಣ – ಚಾರ್ಮಾಡಿ, ಕಳಸ, ಕುದುರೆಮುಖ ರಸ್ತೆಯಲ್ಲಿ ವಾಹನ ಸಂಚಾರ

4 days ago

ಚಿಕ್ಕಮಗಳೂರು/ರಾಮನಗರ: ಕಳೆದೊಂದು ವಾರದಿಂದ ಸುರಿಯುತ್ತಿದ್ದ ಧಾರಾಕಾರ ಮಳೆಗೆ ಚಿಕ್ಕಮಗಳೂರಿನ ಮಲೆನಾಡು ಭಾಗ ಅಕ್ಷರಶಃ ತತ್ತರಿಸಿಹೋಗಿತ್ತು. ಆದರೆ ಶುಕ್ರವಾರದಿಂದ ಮಳೆಯ ಪ್ರಮಾಣ ತಗ್ಗಿದೆ. ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದ ತುಂಗಾ-ಭದ್ರಾ ನದಿಗಳು ಶಾಂತವಾಗಿವೆ. ಭಾರೀ ಮಳೆಯಿಂದ ಬಂದ್ ಆಗಿದ್ದ ಚಾರ್ಮಾಡಿ, ಕಳಸ, ಕುದುರೆಮುಖ...

ತಾನೊಬ್ಬ ಎಸ್ಪಿ ಅನ್ನೋದನ್ನೆ ಮರೆತು ಮಹತ್ವದ ಕೆಲಸ ಮಾಡಿದ್ರು ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ!

5 days ago

ಚಿಕ್ಕಮಗಳೂರು: ಕಳೆದೊಂದು ವಾರದ ಹಿಂದೆ ಕಾಫಿನಾಡಿನ ಚಾರ್ಮಾಡಿ ಘಾಟ್‍ನಲ್ಲಿ ಸುರಿದ ಭಾರೀ ಮಳೆಯಿಂದ ಚಾರ್ಮಾಡಿ ಘಾಟ್‍ನಲ್ಲಿ ಮೂರು ದಿನಗಳ ಕಾಲ ಸಂಚಾರಕ್ಕೆ ಬ್ರೇಕ್ ಹಾಕಲಾಗಿತ್ತು. ಭಾರೀ ಮಳೆ-ಗಾಳಿಯಿಂದ ಚಾರ್ಮಾಡಿಯಲ್ಲಿ ಸುಮಾರು ಒಂಬತ್ತು ಗುಡ್ಡಗಳು ಕುಸಿದು ಮಣ್ಣು ರಸ್ತೆಗೆ ಹರಡಿ ಸಂಚಾರ ಮಾಡದಂತಾಗಿತ್ತು....

30 ಮಂದಿ ಪ್ರಯಾಣಿಕರಿದ್ದ KSRTC ಸ್ಲೀಪರ್ ಬಸ್ ಪಲ್ಟಿ!

5 days ago

ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಸರ್ಕಾರಿ ಸ್ಲೀಪರ್ ಕೋಚ್ ಬಸ್ಸೊಂದು ಹಳ್ಳಕ್ಕೆ ಪಲ್ಟಿಯಾಗಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಗುಡ್ಡೆಹಳ್ಳಿ ಗ್ರಾಮದಲ್ಲಿ ನಡೆದಿದೆ. ಗುರುವಾರ ರಾತ್ರಿ ಬೆಂಗಳೂರಿನಿಂದ ಹೊರಟ ಬಸ್, ಕೊಪ್ಪ-ಶೃಂಗೇರಿ ಮಧ್ಯೆಯ ಗುಡ್ಡೆಹಳ್ಳಿ ಎಂಬ ಗ್ರಾಮದಲ್ಲಿ ಪಲ್ಟಿಯಾಗಿದೆ. ಮುಂಜಾನೆ...