Wednesday, 20th June 2018

Recent News

8 months ago

ಹಬ್ಬ, ಮಗನ ಹುಟ್ಟುಹಬ್ಬ ಮುಗಿಸಿ ಬೆಂಗ್ಳೂರಿಗೆ ಮರಳುತ್ತಿದ್ದಾಗ ಬೈಕ್ ಡಿಕ್ಕಿಯಾಗಿ ತಂದೆ ಸಾವು!

ಚಿಕ್ಕಬಳ್ಳಾಪುರ: ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ, ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ನಗರ ಹೊರವಲಯದ ಶೀತಲೀಕರಣ ಕೇಂದ್ರದ ಬಳಿ ನಡೆದಿದೆ. ಅಪಘಾತದಲ್ಲಿ ಆಂಧ್ರದ ಪರಿಗಿ ಮೂಲದ ಬೈಕ್ ಸವಾರ ಕಾರ್ತಿಕ್ ಎಂಬವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಮತ್ತೋರ್ವ ಬೈಕ್ ಸವಾರ ರವಿಕುಮಾರ್ ಅವರ ಕಾಲು ಮುರಿದಿದೆ. ಗಾಯಾಳು ಗೌರಿಬಿದನೂರು ಮೂಲದ ರವಿಕುಮಾರ್ ರನ್ನ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಕಾರ್ತಿಕ್ ಬೆಂಗಳೂರಿನಲ್ಲಿ ಮೆಡಿಕಲ್ ರೆಪ್ರಿಸೆಂಟೀವ್ ಆಗಿ […]

1 year ago

ರಾಜ್ಯದ ಈ ಭಾಗಗಳಲ್ಲಿ ಭಾರೀ ಮಳೆ- ಬೆಂಗಳೂರಿನಲ್ಲಿ ಸಿಡಿಮದ್ದಿಗೆ ಸಿಡಿಲು ಬಡಿದು ಇಬ್ಬರು ಸಾವು

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಸಂಜೆಯಿಂದ ಸುರಿದ ಗುಡುಗು ಸಿಡಿಲು ಸಹಿತ ಧಾರಾಕಾರ ಮಳೆಯಿಂದಾಗಿ ಹಲವೆಡೆ ಮರಗಳು ಧರೆಗಪ್ಪಳಿಸಿವೆ. ಕೆ.ಜಿ.ನಗರ, ವಿದ್ಯಾರಣ್ಯಪುರ, ಆರ್.ಆರ್.ನಗರ, ನಾಗರಬಾವಿ, ಮಾರುತಿ ನಗರ, ಸಿಟಿ ಸಿವಿಲ್ ಕೋರ್ಟ್ ಬಳಿ ಮರಗಳು ಧರೆಗಪ್ಪಳಿಸಿದ್ದವು. ಬಸವೇಶ್ವರನಗರದ ಪುಟ್ಟೇಗೌಡ ಎಂಬವರ ಮನೆ ಮೇಲೆ ಬುಡ ಸಮೇತ ಮರ ಕಿತ್ತು ಬಿದ್ದಿದ್ದರಿಂದ, ಮನೆಯ ವರಾಂಡದಲ್ಲೆಲ್ಲಾ ಮರದ ಕೊಂಬೆಗಳು...