Friday, 27th April 2018

Recent News

5 days ago

ಬಾದಾಮಿಯಿಂದ ಕಣಕ್ಕೆ ಇಳಿಯುತ್ತಿರೋದು ಯಾಕೆ: ರಿವೀಲ್ ಮಾಡಿದ್ರು ಸಿಎಂ

ಮೈಸೂರು: ನನಗೆ ಉತ್ತರ ಕರ್ನಾಟಕದಿಂದ ನಿಲ್ಲುವಂತೆ ಒತ್ತಡ ಇತ್ತು. ಈ ಕಾರಣಕ್ಕೆ ನಾನು ಬಾದಾಮಿ ಕ್ಷೇತ್ರದಿಂದ ಕಣಕ್ಕೆ ಇಳಿಯುತ್ತಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಹಿಂದೆ ನನಗೆ ಉತ್ತರ ಕರ್ನಾಟಕದಿಂದ ನಿಲ್ಲುವಂತೆ ಇಷ್ಟೊಂದು ಒತ್ತಾಯ ಕೇಳಿಬಂದಿರಲ್ಲ. ಆದರೆ ಆರ್.ಬಿ. ತಿಮ್ಮಾಪುರ, ಎಸ್.ಆರ್. ಪಾಟೀಲ್ ಎರಡು ದಿನ ಮೈಸೂರಿನಲ್ಲಿ ಉಳಿದುಕೊಂಡು ಒತ್ತಾಯ ಮಾಡಿದ್ದಾರೆ ಈ ಕಾರಣಕ್ಕಾಗಿ ನಾನು ಆ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದಾರೆ. ಚಾಮುಂಡೇಶ್ವರಿಯಲ್ಲಿ ಸೋಲುವ ಭಯದಿಂದ ಬಾದಾಮಿಗೆ ಹೋಗುತ್ತಿದ್ದಾರೆ ಎಂಬ ಜೆಡಿಎಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ […]

6 days ago

ಸಿದ್ದರಾಮಯ್ಯರಿಗೆ ಬನಶಂಕರಿ ಆಶೀರ್ವಾದ ದಕ್ಕಲ್ಲ ಅಂದ್ರು ಹೆಚ್‍ಡಿಕೆ

ಬಾಗಲಕೋಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಚಾಮುಂಡೇಶ್ವರಿ ಆಶೀರ್ವಾದ ಸಿಕ್ಕಿಲ್ಲ. ಆದ್ದರಿಂದ ಬನಶಂಕರಿ ದೇವಿಯ ಆಶೀರ್ವಾದ ಪಡೆಯಲು ಬರುತ್ತಿದ್ದಾರೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಲೇವಡಿ ಮಾಡಿದರು. ಬಾಗಲಕೋಟೆ ಜಿಲ್ಲೆ ಬಾದಾಮಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಬನಶಂಕರಿ ಆಶೀರ್ವಾದ ಪಡೆಯೋಕೆ ಬರುತ್ತಿದ್ದಾರೆ. ಆದರೆ ಬನಶಂಕರಿ ದೇವಿ ಆಶೀರ್ವಾದ ಕೂಡ ಸಿದ್ದರಾಮಯ್ಯಗೆ ದಕ್ಕೋದಿಲ್ಲ. ಬಾದಾಮಿ...

ಚಾಮುಂಡೇಶ್ವರಿಯಲ್ಲಿ 50 ಸಾವಿರ ಮತಗಳಲ್ಲಿ ಸಿಎಂ ವಿನ್ ಆಗ್ತಾರೆ: ಎಂ ಬಿ ಪಾಟೀಲ್ ಭವಿಷ್ಯ

2 weeks ago

ವಿಜಯಪುರ: ಮೈಸೂರಿನ ಚಾಮುಂಡೇಶ್ವರಿ ಮತಕ್ಷೇತ್ರದಲ್ಲಿ 50 ಸಾವಿರ ಮತಗಳ ಅಂತರದಲ್ಲಿ ಸಿದ್ದರಾಮಯ್ಯ ಗೆಲುವು ನಿಶ್ಚಿತ ಅಂತ ಜಲ ಸಂಪನ್ಮೂಲ ಸಚಿವ ಎಂ ಬಿ ಪಾಟೀಲ್ ಭವಿಷ್ಯ ನುಡಿದಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ಬಾದಾಮಿಯಿಂದ ಸ್ಪರ್ಧೆ ಮಾಡ್ತೀನಿ...

ಸಿಎಂ ಸೋಲಿಸಲು ಎಲ್‍ಡಿಎನ್, ಜಿಎಲ್‍ಡಿಎನ್ ತಂತ್ರ ಹೆಣೆದ ಶ್ರೀನಿವಾಸ ಪ್ರಸಾದ್!

2 weeks ago

ಮೈಸೂರು: ನಂಜನಗೂಡು ಉಪಚುನಾವಣೆಯಲ್ಲಿ ಆಗಿರುವ ಸೋಲಿಗೆ ಸಿಎಂ ವಿರುದ್ಧ ಪ್ರತೀಕಾರವನ್ನು ತೀರಿಸಿಕೊಳ್ಳಲು ಮಾಜಿ ಸಚಿವ ಶ್ರೀನಿವಾಸಪ್ರಸಾದ್ ಚಾಮುಂಡೇಶ್ವರಿಯಲ್ಲಿ ಎಲ್‍ಡಿಎನ್ ಮತ್ತು ವರುಣಾ ಕ್ಷೇತ್ರದಲ್ಲಿ ಜಿಎಲ್‍ಡಿಎನ್ ತಂತ್ರವನ್ನು ಹೆಣೆದಿದ್ದಾರೆ. ಬಿಜೆಪಿಯ ಗೆಲುವಿಗೆ ವರುಣಾದಲ್ಲಿ ಲಿಂಗಾಯತ, ದಲಿತ, ನಾಯಕ(ಎಲ್‍ಡಿಎನ್) ಮತಗಳನ್ನು ಕ್ರೋಢೀಕರಿಸುವುದು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ...

ಸಿಎಂಗೆ ನಮ್ ವೋಟ್ ಎಂದಿದ್ದಕ್ಕೇ ವೀರಶೈವ ಮಹಾಸಭಾದಿಂದಲೇ ವಜಾ!

2 weeks ago

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನಮ್ಮ ವೋಟ್ ಎಂದಿದ್ದ ಮೈಸೂರು ಜಿಲ್ಲಾ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಹಿನಕಲ್ ಬಸವರಾಜ್ ಅವರನ್ನು ಆಡಳಿತ ಮಂಡಳಿಯಿಂದಲೇ ವಜಾಗೊಳಿಸಲಾಗಿದೆ. ಜಿಲ್ಲಾಧ್ಯಕ್ಷ ಹಿನಕಲ್ ಬಸವರಾಜ್, ಸಂಘಟನಾ ಕಾರ್ಯದರ್ಶಿ ಟಿ.ಎಸ್. ಲೋಕೇಶ್, ಪದಾಧಿಕಾರಿಗಳಾದ ಸಿ.ಗುರುಸ್ವಾಮಿ, ಹಡಜನ ಚಂದ್ರಶೇಖರ್ ಅವರನ್ನು ಮಹಾಸಭಾದ...

ಚಾಮುಂಡೇಶ್ವರಿ ಕ್ಷೇತ್ರ ಗೆಲ್ಲಲು ಯಾರು ಊಹಿಸದ ರೀತಿಯಲ್ಲಿ ರಾಜಕೀಯ ದಾಳ ಉರುಳಿಸಿದ ಸಿಎಂ!

2 weeks ago

ಮೈಸೂರು: ಈ ಬಾರಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲವು ಸಾಧಿಸಬೇಕೆಂದು ಪಣ ತೊಟ್ಟಿರುವ ಸಿಎಂ ಸಿದ್ದರಾಮಯ್ಯ ಯಾರು ಊಹಿಸದ ರೀತಿಯಲ್ಲಿ ರಾಜಕೀಯ ದಾಳವನ್ನ ಉರುಳಿಸಿದ್ದಾರೆ. ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಸಂಬಂಧಿಸಿದಂತೆ ರಾಜ್ಯದ ಹಲವೆಡೆ ವೀರಶೈವ ನಾಯಕರು ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ರಾಜ್ಯದೆಲ್ಲೆಡೆ ವಿರೋಧವಿದ್ದರೂ ಮೈಸೂರಿನಲ್ಲಿ...

ನಾನು ಪ್ರಚಾರ ಮಾಡದೇ ಇದ್ರೂ ಗೆಲ್ತೀನಿ – ಸಿಎಂಗೆ ಯಡಿಯೂರಪ್ಪ ತಿರುಗೇಟು

3 weeks ago

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿಯವರನ್ನು ಸೋಲಿಸಲು ನಾನು ಒಂದು ದಿನ ಕ್ಯಾಂಪೇನ್ ಮಾಡಿದ್ರೆ ಸಾಕು ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಬಿಎಸ್‍ವೈ ತಿರುಗೇಟು ನೀಡಿದ್ದಾರೆ. ನಗರದ ಡಾಲರ್ಸ್ ಕಾಲೋನಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,...

ಬಿಎಸ್‍ವೈ, ಎಚ್‍ಡಿಕೆಯನ್ನು ಸೋಲಿಸಲು ನಾನು ಒಂದು ದಿನ ಪ್ರಚಾರ ಮಾಡಿದ್ರೆ ಸಾಕು: ಸಿಎಂ

3 weeks ago

ಮೈಸೂರು: ಯಡಿಯೂರಪ್ಪ ಹಾಗೂ ಕುಮಾರಸ್ವಾಮಿಯನ್ನು ನಾನೂ ಸೋಲಿಸುತ್ತೇನೆ. ನನಗೂ ಆ ಶಕ್ತಿ ಇದೆ. ಅವರನ್ನ ಸೋಲಿಸಲು ನಾನೂ ಒಂದು ದಿನ ಕ್ಯಾಂಪೇನ್ ಮಾಡಿದರೆ ಸಾಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನನ್ನ ಸ್ಪರ್ಧೆ ಚಾಮುಂಡೇಶ್ವರಿಯಲ್ಲೇ, ಚಾಮುಂಡೇಶ್ವರಿಯಲ್ಲೇ, ಚಾಮುಂಡೇಶ್ವರಿಯಲ್ಲೇ ಎಂದು ಮೂರು ಬಾರಿ...