Friday, 23rd February 2018

Recent News

1 month ago

ನೀರಿನ ಪೈಪ್‍ ಲೈನ್ ಅಳವಡಿಸುವ ವಿಷಯದಲ್ಲಿ ಗುಂಪು ಘರ್ಷಣೆ – 5 ಮಹಿಳೆಯರು ಸೇರಿ 8 ಮಂದಿಗೆ ಗಾಯ

ಕೋಲಾರ: ನೀರಿನ ಪೈಪ್ ಲೈನ್ ಅಳವಡಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆಯಾಗಿರುವ ಘಟನೆ ಕೋಲಾರದಲ್ಲಿ ಸೋಮವಾರ ನಡೆದಿದೆ. ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಖಾದ್ರಿಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮನೆಯ ಬಳಿ ನೀರಿನ ಪೈಪ್ ಲೈನ್ ಹಾಕುವ ವಿಚಾರದಲ್ಲಿ ಪರಸ್ಪರ ಪೈಪ್ ಗಳಿಂದ ಹಲ್ಲೆ ಮಾಡಿಕೊಂಡಿರುವ ಎರಡು ಗುಂಪಿನವರು ಸದ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶಂಕರಪ್ಪ ಮತ್ತು ಗಂಗಾಧರ ಎಂಬ 2 ಗುಂಪುಗಳ ನಡುವೆ ಈ ಘರ್ಷಣೆ ನಡೆದಿದೆ. ಗಂಗಾಧರ ಗುಂಪಿನ ಐವರು ಮಹಿಳೆಯರು ಸೇರಿದಂತೆ […]

1 month ago

ಅಂಧ ಯುವತಿಗೆ ಬಾಳು ಕೊಟ್ಟ ಯುವಕ -ಸಂಭ್ರಮದಿಂದ ನಡೆಯಿತು ಮದುವೆ

ಕೋಲಾರ: ತಾನು ಮದುವೆಯಾಗುವ ಹುಡುಗಿ ಸುಂದರವಾಗಿರಬೇಕು, ಕೈ ತುಂಬಾ ಹಣ-ಅಂತಸ್ತು ತರಬೇಕು ಎನ್ನುವ ಜನಗಳ ನಡುವೆ ಯಾವುದನ್ನು ಲೆಕ್ಕಿಸದೆ ಅಂಧ ಹುಡುಗಿಯನ್ನು ಮದುವೆಯಾಗುವ ಮೂಲಕ ಸಮಾಜಕ್ಕೆ ವ್ಯಕ್ತಿಯೊಬ್ಬರು ಮಾದರಿಯಾದ್ದಾರೆ. ಹೌದು, ಕೋಲಾರದ ಬಯಲು ಬಸವೇಶ್ವರ ದೇವಾಲಯದಲ್ಲಿಂದು ಜಿಲ್ಲೆಯ ಮಾಲೂರು ತಾಲೂಕಿನ ಅರಳೇರಿ ಗ್ರಾಮದ ರುದ್ರಮ್ಮ ಹಾಗೂ ಬಾಗಲಕೋಟೆ ಮೂಲದ ಸಂಗಮೇಶ ಮದುವೆ ಸಂಭ್ರಮದ ನಡೆಯಿತು. ಹುಟ್ಟಿನಿಂದ...

ಗರ್ಭಿಣಿ ಅಕ್ಕನಿಗೆ ಸಹಾಯ ಮಾಡಲು ಬಂದಿದ್ದ ಬಾಲಕಿಯ ಕೈ, ಕಾಲು ಕಟ್ಟಿ ಅತ್ಯಾಚಾರಕ್ಕೆ ಯತ್ನ

1 month ago

ಕೋಲಾರ: 32 ವರ್ಷದ ಇಬ್ಬರು ಮಕ್ಕಳ ತಂದೆ 16 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರದ ಮಾಲೂರು ತಾಲೂಕಿನ ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಭಾನುವಾರ...

ಅಧಿಕಾರಕ್ಕೆ ಬಂದ ಕೂಡಲೇ ಸಿದ್ದರಾಮಯ್ಯ ಸರ್ಕಾರದ ಹಗರಣ ಬಯಲಿಗೆ: ಯಡಿಯೂರಪ್ಪ ಶಪಥ

1 month ago

ಕೋಲಾರ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಸಿದ್ದರಾಮಯ್ಯ ವಿರುದ್ಧದ ಹಗರಣಗಳನ್ನು ಬಯಲಿಗೆಳೆಯದಿದ್ದರೆ ನನ್ನ ಹೆಸರು ಯಡಿಯೂರಪ್ಪನೆ ಅಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿದ್ದಾರೆ. ಜಿಲ್ಲೆಯ ಬಂಗಾರಪೇಟೆ ಕ್ಷೇತ್ರದಲ್ಲಿ ಆಯೋಜನೆ ಮಾಡಲಾಗಿದ್ದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಬಿಎಸ್‍ವೈ,...

ಪ್ರೀತಿಸಿ ಮದ್ವೆಯಾಗಿ 2 ತಿಂಗಳು ಕಳೆಯುವ ಮುನ್ನವೇ ಪತಿ ನಾಪತ್ತೆ

1 month ago

ಕೋಲಾರ: ಪ್ರೀತಿಸಿ ಮದುವೆಯಾಗಿ ಎರಡು ತಿಂಗಳು ಕಳೆಯುವ ಮುನ್ನವೇ ನಾಪತ್ತೆಯಾದ ಪತಿಗಾಗಿ ಪತ್ನಿ ಏಕಾಂಗಿ ಹೋರಾಟಕ್ಕೆ ಮುಂದಾಗಿದ್ದು, ಈಗ ದಯಾಮರಣಕ್ಕೆ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಬಂಟಹಳ್ಳಿ ಗ್ರಾಮದ ಪ್ರತಿಮಾ ಹೋರಾಟ ಮಾಡುತ್ತಿರುವ ಗೃಹಿಣಿ. ಶಶಿಕುಮಾರ್ ಮತ್ತು...

ಬಂಗಾರಪೇಟೆಯಲ್ಲಿ ವರ್ಷ ಪೂರ್ತಿ ಕನ್ನಡ ಹಬ್ಬ ಆಚರಿಸ್ತಾರೆ ಕೋಲಾರದ ಸುಬ್ರಮಣಿ

1 month ago

ಕೋಲಾರ: ತೆಲುಗು-ತಮಿಳು ಪ್ರಭಾವ ಹೆಚ್ಚಾಗಿರೋ ಕೋಲಾರದ ಬಂಗಾರಪೇಟೆಯಲ್ಲಿ ಬರೀ ನವೆಂಬರ್ ಅಲ್ಲ, ವರ್ಷಪೂರ್ತಿ ಕನ್ನಡ ರಾಜ್ಯೋತ್ಸವ ನಡೆಯುತ್ತೆ. ಇದಕ್ಕೆ ಕಾರಣ ಇಂದಿನ ನಮ್ಮ ಪಬ್ಲಿಕ್ ಹೀರೋ ಸುಬ್ರಮಣಿ. ಕೋಲಾರ ಜಿಲ್ಲೆ ಬಂಗಾರಪೇಟೆ ಪಟ್ಟಣದ ನಿವಾಸಿಯಾಗಿರೋ ಡಾ.ಎಂ. ಸುಬ್ರಮಣಿ ಕನ್ನಡಾಭಿಮಾನಿ. ಇವರು ತೆಲುಗು,...

ಆಪೆ ಆಟೋ ಮರಕ್ಕೆ ಡಿಕ್ಕಿ- ಶನಿಮಹಾತ್ಮ ದೇವಾಲಯದಿಂದ ಹಿಂದಿರುಗ್ತಿದ್ದ ಒಂದೇ ಕುಟುಂಬದ ಮೂವರ ದುರ್ಮರಣ

1 month ago

ಕೋಲಾರ: ಚಾಲಕನ ನಿಯಂತ್ರಣ ತಪ್ಪಿ ಆಪೆ ಆಟೋ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಆಟೋದಲ್ಲಿದ್ದ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಆಟೋದಲ್ಲಿದ್ದ ಭಾಸ್ಕರ್(35), ಪಾರ್ವತಮ್ಮ(38), ಗೌರಮ್ಮ(33) ಮೃತಪಟ್ಟ ದುರ್ದೈವಿಗಳು. ಜಿಲ್ಲೆಯ ಮುಳಬಾಗಿಲು...

ನೀರಿನ ಟ್ಯಾಂಕರ್, ಲಾರಿ ಮುಖಾಮುಖಿ ಡಿಕ್ಕಿ – ಓರ್ವ ಸಾವು, ಮೂವರಿಗೆ ಗಂಭೀರ ಗಾಯ

1 month ago

ಕೋಲಾರ: ಮಾಲೂರು ತಾಲೂಕಿನ ಸೀತನಾಯಕನಹಳ್ಳಿ ಗ್ರಾಮದ ಬಳಿ ಇಂದು ಬೆಳಂಬೆಳಗ್ಗೆ ಲಾರಿ ಮತ್ತು ನೀರಿನ ಟ್ಯಾಂಕರ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಓರ್ವ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ. ತಮಿಳುನಾಡು ಮೂಲದ ಪಳನಿ(38) ಸಾವನ್ನಪ್ಪಿದ ಲಾರಿ ಚಾಲಕ. ಪಳನಿ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ...