Wednesday, 23rd May 2018

Recent News

3 weeks ago

ರಸ್ತೆ ಮಧ್ಯೆಯೇ ಶಾಸಕ ವರ್ತೂರ್ ಪ್ರಕಾಶ್ ಚಳಿಬಿಡಿಸಿದ ಮಹಿಳೆಯರು!

ಕೋಲಾರ: ಶಾಸಕ ವರ್ತೂರ್ ಪ್ರಕಾಶ್ ಅವರನ್ನು ಚಲುವನಹಳ್ಳಿ ಗ್ರಾಮದ ಮಹಿಳೆಯರು ಇಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಶಾಸಕರು ಇಂದು ಚಲುವನಹಳ್ಳಿಯಲ್ಲಿ ಪ್ರಚಾರ ನಡೆಸುತ್ತಿದ್ದ ಸಂದರ್ಭದಲ್ಲಿ ಕೆಲ ಮಹಿಳೆಯರು ಸೇರಿ ರಸ್ತೆ ಮಧ್ಯೆ ಶಾಸಕರನ್ನು ತಡೆದು ವಾಗ್ದಾಳಿ ನಡೆಸಿದ್ದಾರೆ. ಇಷ್ಟು ದಿನದಿಂದ ಏನು ಮಾಡಿದ್ದೀರಿ? ನಮ್ಮ ಊರಿಗೆ 2 ತಿಂಗಳಿನಿಂದ ನೀರಿಗಾಗಿ ಪರದಾಡಿದ್ದರೂ ಕ್ಯಾರೇ ಎಂದಿಲ್ಲ. ನೀರು ಕೊಡಲಿಲ್ಲ ಎಂದು ವರ್ತೂರ್ ಪ್ರಕಾಶ್‍ನ ಅಡ್ಡಗಟ್ಟಿ ಮಹಿಳೆಯರು ದಬಾಯಿಸಿದ್ದಾರೆ. ಈ ವೇಳೆ ಅಡ್ಡಿಪಡಿಸಲು ಬಂದ ವರ್ತೂರ್ ಬೆಂಬಲಿಗರ ಮೇಲೂ ಮಹಿಳೆಯರು ಆಕ್ರೋಶಗೊಂಡರು. […]

4 weeks ago

ಪ್ರೀತಿ ಮಾಡಿ ನೇಣಿಗೆ ಶರಣಾದ ಪದವಿ ವಿದ್ಯಾರ್ಥಿ

ಕೋಲಾರ: ಪ್ರೇಮ ವೈಫಲ್ಯಕ್ಕೆ ಬೇಸತ್ತು ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಮಾಲೂರು ತಾಲೂಕಿನ ಕೂರಂಡಳ್ಳಿ ಗ್ರಾಮದಲ್ಲಿ ನಡೆದಿದೆ. ಕೂರಂಡಳ್ಳಿ ಗ್ರಾಮದ ನಿವಾಸಿ ನವೀನ್ (20) ಆತ್ಮಹತ್ಯೆ ಗೆ ಶರಣಾದ ಭಗ್ನ ಪ್ರೇಮಿ. ಈತ ಮಾಲೂರು ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದನು. ಆದರೆ ಇಂದು ಮಧ್ಯಾಹ್ನ...

ಗಂಡಂದಿರನ್ನು ಗೆಲ್ಲಿಸಲು ಪ್ರಚಾರದ ಕಣಕ್ಕಿಳಿದ ಪತ್ನಿಯರು

4 weeks ago

ಕೋಲಾರ: ಚುನಾವಣೆ ಬಂದರೆ ಸಾಕು ಅಭಿಮಾನಿಗಳು, ಕಾರ್ಯಕರ್ತರು ಮನೆ ಮನೆ ತೆರಳಿ ಮತ ಕೇಳುತ್ತಾರೆ. ಆದರೆ ಕೋಲಾರದಲ್ಲೊಂದು ಕ್ಷೇತ್ರ ತದ್ವಿರುದ್ದ ತಮ್ಮ ಗಂಡನನ್ನ ಗೆಲ್ಲಿಸಿ ಅಂತಾ ಗಂಡಂದಿರ ಪರವಾಗಿ ಹೆಂಡತಿಯರು ಹಗಲು ರಾತ್ರಿ ಮತ ಪ್ರಚಾರದಲ್ಲಿ ತೊಡಗಿದ್ದಾರೆ. ಮಾಲೂರು ಜೆಡಿಎಸ್ ಶಾಸಕ...

ರಾಜ್ಯದ ವಿವಿಧೆಡೆ ಮುಂದುವರಿದ ಬೇಸಿಗೆ ಮಳೆ – ಕಾರಿನ ಮೇಲೆ ಮರ ಬಿದ್ದು ತಾಯಿ, ಮಗಳ ಸಾವು

1 month ago

ಬೆಂಗಳೂರು: ಬಿಸಿಲ ಬೇಗೆಯಿಂದ ತತ್ತರಿಸಿದ ರಾಜ್ಯದ ಜನರಿಗೆ ಮಳೆ ತಂಪೆರೆದಿದ್ದರೆ, ಹಲವು ಕಡೆ ಅಪಾರ ನಷ್ಟವನ್ನು ಉಂಟು ಮಾಡಿದೆ. ಇಂದು ಸಂಜೆ ವೇಳೆಗೆ ರಾಜಧಾನಿ ಬೆಂಗಳೂರು, ಸೇರಿದಂತೆ ಕೋಲಾರ, ಹಾಸನ, ಶಿವಮೊಗ್ಗ, ಬೆಳಗಾವಿ ಜಿಲ್ಲೆಗಳ ಕೆಲ ಪ್ರದೇಶಗಳಲ್ಲಿ ಮಳೆಯಾಗಿದ್ದು, ಅಕಾಲಿಕ ಮಳೆಯಿಂದ...

ಶಾಸಕ ವರ್ತೂರ್ ಪ್ರಕಾಶ್ ರನ್ನು ಮಣಿಸಲು ಪಣ- ಕಾಂಗ್ರೆಸ್-ಜೆಡಿಎಸ್ ನಿಂದ ಸಿದ್ಧವಾಗಿದೆ `ಟಾರ್ಗೆಟ್ ವರ್ತೂರು’ ಟೀಂ

1 month ago

ಕೋಲಾರ: ಚುನಾವಣೆಗೆ ದಿನಗಣನೆ ಆರಂಭವಾಗಿದ್ರೂ, ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಆಯ್ಕೆ ಗೊಂದಲಕ್ಕೆ ಮಾತ್ರ ತೆರೆಬಿದ್ದಿಲ್ಲ. ಈ ಮಧ್ಯೆ ಹಾಲಿ ಶಾಸಕರನ್ನು ಸೋಲಿಸಲು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಅತೃಪ್ತರ ತಂಡವೊಂದು ಸಿದ್ಧವಾಗಿದೆ. ಟಾರ್ಗೆಟ್ ವರ್ತೂರು ಅನ್ನೋ ಹೆಸರಲ್ಲಿ ಟೀಂ ಒಂದು...

ವೈದ್ಯರ ಎಡವಟ್ಟಿಗೆ 10 ದಿನದ ಗಂಡು ಮಗು ಸಾವು

1 month ago

ಕೋಲಾರ: ವೈದ್ಯರ ನಿರ್ಲಕ್ಷ್ಯದ ಪರಿಣಾಮ ಹತ್ತು ದಿನದ ಗಂಡು ಮಗುವೊಂದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮಾಲೂರು ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಮಾಲೂರು ತಾಲೂಕು ಮಾಸ್ತಿ ಹೋಬಳಿಯ ಪ್ರವೀಣ್ ಹಾಗೂ ಶೈಲಜಾ ದಂಪತಿಯ ಗಂಡು ಮಗು ಸಾವನ್ನಪ್ಪಿದೆ. ಹತ್ತು ದಿನದ ಹಿಂದೆ ಹುಟ್ಟಿದ...

ಕೆರೆಯಲ್ಲಿ ಬಿದ್ದು ಅಕ್ಕ-ತಂಗಿ ಸಾವು- ಈಜಲು ಹೋಗಿದ್ದ ಮೂವರು ಬಾಲಕರು ನೀರುಪಾಲು!

1 month ago

ಕೋಲಾರ/ಚಿತ್ರದುರ್ಗ: ಕೆರೆಯಲ್ಲಿ ಬಿದ್ದು ಅಕ್ಕ-ತಂಗಿ ಸಾವನ್ನಪ್ಪಿದ ಘಟನೆ ಕೋಲಾರ ತಾಲೂಕಿನ ಹೊಳಲಿ ಗ್ರಾಮದಲ್ಲಿ ನಡೆದಿದೆ. ಭವ್ಯ (10) ಮತ್ತು ಶಿಲ್ಪಾ(7) ಮೃತ ಸಹೋದರಿಯರು. ಶಾಲೆಗೆ ರಜೆ ಹಿನ್ನೆಲೆಯಲ್ಲಿ ಗುರುವಾರ ಆಟವಾಡಲು ಹೋದಾಗ ಇಬ್ಬರು ಕೆರೆಯಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ. ಶಿಲ್ಪಾಳ ಶವ ದೊರಕಿದ್ದು,...

ಟ್ರಕ್ಕಿಂಗ್ ಗೆ ಬಂದಿದ್ದ 80 ಪ್ರವಾಸಿಗರನ್ನ ವಶಕ್ಕೆ ಪಡೆದ ಅರಣ್ಯ ಹಾಗು ಪೊಲೀಸ್ ಇಲಾಖೆ ಅಧಿಕಾರಿಗಳು!

1 month ago

ಕೋಲಾರ: ಜಿಲ್ಲೆಯಲ್ಲಿ ಬೃಹತ್ ಆನ್ ಲೈನ್‍ಟ್ರಿಪ್ ಚೀಟಿಂಗ್ ಪ್ರಕರಣವೊಂದನ್ನ ಬೇಧಿಸುವಲ್ಲಿ ಅರಣ್ಯ ಇಲಾಖೆ ಹಾಗು ಪೊಲೀಸ್ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಕೋಲಾರ ಹೊರವಲಯದ ಅಂತರಗಂಗೆ ಬೆಟ್ಟದಲ್ಲಿ 80 ಮಂದಿ ಅತಿಕ್ರಮ ಪ್ರವೇಶ ಮಾಡಿ ಚಾರಣಕ್ಕಾಗಿ ಬಂದಿದ್ದ ಪ್ರವಾಸಿಗರನ್ನು ಕೋಲಾರ ಗ್ರಾಮಾಂತರ ಪೊಲೀಸರು...