Thursday, 21st September 2017

Recent News

4 hours ago

ತಂದೆ ಸಾವಿನಿಂದ ಖಿನ್ನತೆಗೊಳಗಾಗಿ ಯುವಕ ಆತ್ಮಹತ್ಯೆ

ಕೋಲಾರ: ತಂದೆ ಸಾವಿನಿಂದ ಖಿನ್ನತೆಗೆ ಒಳಗಾಗಿದ್ದ ಯುವಕ ನೇಣು ಬಿಗುದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ ತಾಲೂಕು ಮುದವತ್ತಿ ಗ್ರಾಮದಲ್ಲಿ ಘಟನೆ. ಇಲ್ಲಿನ ಛತ್ರಕೋಡಿಹಳ್ಳಿ ನಿವಾಸಿಯಾದ 27 ವರ್ಷದ ನಾಗೇಶ್ ಆತ್ಮಹತ್ಯೆ ಮಾಡಿಕೊಂಡ ಯುವಕ. ಕೆಲವು ದಿನಗಳ ಹಿಂದೆ ನಾಗೇಶ್ ತಂದೆ ಸಾವನ್ನಪ್ಪಿದ್ದರು. ಇದರಿಂದ ಆತ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದೆ. ಕಳೆದ ರಾತ್ರಿ ಊರಾಚೆ ಇರುವ ಹುಣಸೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

3 days ago

ಸಭೆಯಲ್ಲಿ ಸಿಎಂ ಸಿದ್ದರಾಮಯ್ಯನವರನ್ನು ಹಾಡಿ ಹೊಗಳಿದ ರಮೇಶ್ ಕುಮಾರ್

ಕೋಲಾರ: ಇಷ್ಟು ವರ್ಷದವರೆಗೂ ಯಾವ ಮುಖ್ಯಮಂತ್ರಿಗಳು ರೈತರ ಸಾಲವನ್ನು ಮನ್ನಾ ಮಾಡಿರಲಿಲ್ಲ. ಜಿಲ್ಲೆಗೆ ನಿರ್ಧಿಷ್ಟ ನೀರಾವರಿ ಯೋಜನೆಯನ್ನೂ ಮಾಡುವ ಗಂಡಸ್ತನವನ್ನು ಹೊಂದಿರಲಿಲ್ಲ. ಆದರೆ ನಮ್ಮ ಸಿಎಂ ರೈತರ ಸಾಲಮನ್ನಾ ಹಾಗೂ ಜಿಲ್ಲೆಗೆ ನಿರ್ಧಿಷ್ಟ ನೀರಾವರಿ ಯೋಜನೆ ಮಾಡಿದ್ದಾರೆ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಸಿದ್ದರಾಮಯ್ಯ ಅವರನ್ನು ಹಾಡಿ ಹೊಗಳಿದ್ದಾರೆ. ಸೋಮವಾರ ನಗರದ ಪ್ರವಾಸಿ ಮಂದಿರದಲ್ಲಿ...

100ಕ್ಕೂ ಹೆಚ್ಚು ದಲಿತ ಕುಟುಂಬಗಳಿರೋ ಕೋಲಾರದ ಈ ಗ್ರಾಮಕ್ಕೆ ಬೇಕಿದೆ ರಸ್ತೆಯ ಕಾಯಕಲ್ಪ

2 weeks ago

ಕೋಲಾರ: ಕನಿಷ್ಠ ಸೌಲಭ್ಯಗಳಿಂದ ವಂಚಿತವಾಗಿರುವ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಗ್ರಾಮದ ಹೆಸರು ಕಂಬಿಪುರ. ಗ್ರಾಮದಲ್ಲಿ 80 ಕ್ಕೂ ಹೆಚ್ಚು ಮನೆಗಳಿವೆ. ಇಲ್ಲಿ ಶೇ. 100ರಷ್ಟು ದಲಿತ ಕುಟುಂಬಗಳೇ ವಾಸವಾಗಿವೆ. ದುರಂತ ಅಂದ್ರೆ ಸ್ವಾತಂತ್ರ್ಯ ಸಿಕ್ಕಿ 70 ವರ್ಷಗಳೇ ಕಳೆದ್ರೂ ಈ...

ಮತಗಟ್ಟೆ ಬಳಿ ಕಾಂಗ್ರೆಸ್, ವರ್ತೂರ್ ಪ್ರಕಾಶ್ ಬೆಂಬಲಿಗರಿಂದ ಲಾಂಗು-ಮಚ್ಚು ಪ್ರದರ್ಶನ ಪ್ರಕರಣ: ಕೇಸ್ ಖುಲಾಸೆ

2 weeks ago

ಕೋಲಾರ: 2013ರ ವಿಧಾನಸಭಾ ಚುನಾವಣೆ ವೇಳೆ ಮತಗಟ್ಟೆ ಬಳಿ ಕೋಲಾರ ನಗರದಲ್ಲಿ ಲಾಂಗು ಮಚ್ಚು ಪ್ರದರ್ಶಿಸಿದ ಪ್ರಕರಣವನ್ನ ಖುಲಾಸೆಗೊಳಿಸಿ 1ನೇ ಜಿಲ್ಲಾ ಸತ್ರ ನ್ಯಾಯಾಲಯ ತೀರ್ಪು ನೀಡಿದೆ. 2013ರ ಮೇ 5ರಂದು ವಿಧಾನಸಭಾ ಚುನಾವಣೆ ವೇಳೆ ಕೋಲಾರದ ಜೂನಿಯರ್ ಕಾಲೇಜು ಮತಗಟ್ಟೆ...

ಇಂದಿರಾ ಆಯ್ತು.. ಅಪ್ಪಾಜಿ ಆಯ್ತು ಈಗ ಶೆಟ್ಟಿ ಕ್ಯಾಂಟೀನ್-ಬೆಳಗ್ಗೆ ಇಲ್ಲಿ ಉಪಹಾರ ಉಚಿತ

3 weeks ago

ಕೋಲಾರ: ಕರ್ನಾಟಕದಲ್ಲಿ ಕ್ಯಾಂಟೀನ್ ಪಾಲಿಟಿಕ್ಸ್ ಸದ್ದು ಜೋರಾಗಿದೆ. ಕಾಂಗ್ರೆಸ್ ಇಂದಿರಾ ಕ್ಯಾಂಟೀನ್ ಆಯ್ತು. ಜೆಡಿಎಸ್‍ನ ಅಪ್ಪಾಜಿ ಕ್ಯಾಂಟೀನ್ ಆಯ್ತು. ಈಗ ಬಿಜೆಪಿ ಮುಖಂಡ ಕೃಷ್ಣಯ್ಯ ಶೆಟ್ಟಿ ಕ್ಯಾಂಟೀನ್ ಶುರು ಮಾಡಿದ್ದಾರೆ. ಕೋಲಾರ ಜಿಲ್ಲೆ ಮಾಲೂರು ತಾಲೂಕು ಟೇಕಲ್ ಗ್ರಾಮದ ರೈಲ್ವೆ ನಿಲ್ದಾಣದ...

ಗಮನಿಸಿ: ಮಕ್ಕಳನ್ನು ಹಾಸ್ಟೇಲ್ ಗೆ ಸೇರಿಸೋ ಮುನ್ನ ಈ ಸ್ಟೋರಿ ಓದಿ

3 weeks ago

ಕೋಲಾರ: ಜಿಲ್ಲೆಯ ಬಂಗಾರಪೇಟೆಯ ಸರ್ಕಾರಿ ಹಾಸ್ಟೇಲೊಂದರಲ್ಲಿ ಐದನೇ ತರಗತಿ ವಿದ್ಯಾರ್ಥಿನಿ ಮೇಲೆ 50 ವರ್ಷದ ಅಡುಗೆ ಸಾಹಾಯಕನೊಬ್ಬ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ವಸತಿ ನಿಲಯದ ಅಡುಗೆ ಸಹಾಯಕ ನಾರಾಯಣಪ್ಪ ಎಂಬಾತ ಕಳೆದ ಕೆಲವು ದಿನಗಳಿಂದ ಅಪ್ರಾಪ್ತ ವಿದ್ಯಾರ್ಥಿನಿ...

ಮಿಸ್ ಇಂಡಿಯಾ ಕಿರೀಟ ತನ್ನದಾಗಿಸಿಕೊಂಡ ಕೋಲಾರದ ಬೆಡಗಿ

3 weeks ago

ಕೋಲಾರ: ಹೈದರಾಬಾದ್ ನಲ್ಲಿ ನಡೆದ ಪ್ರತಿಷ್ಠಿತ ರಿಲಯನ್ಸ್ ಜ್ಯುವೆಲ್-2017 ನ ಮಿಸ್ ಇಂಡಿಯಾ ಕಿರೀಟವನ್ನ ಕೋಲಾರದ ರಮ್ಯಾ ಸರಣ್ ತನ್ನದಾಗಿಸಿಕೊಂಡಿದ್ದಾರೆ. ಈ ಸ್ಪರ್ಧೆಯಲ್ಲಿ ದೇಶ-ವಿದೇಶಗಳಿಂದ ಬಂದಿದ್ದ 80 ಮಂದಿ ಮಾಡೆಲ್‍ಗಳನ್ನು ಹಿಂದಿಕ್ಕಿ 5 ದಿನಗಳ ಕಾಲ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತಳಾಗುವ...

ಹಾವು ಕಚ್ಚಿ ಸಾವು ಬದುಕಿನ ಮಧ್ಯೆ ಹೋರಾಡ್ತಿದ್ದಾನೆ ಬಾಲಕ

4 weeks ago

ಕೋಲಾರ: ಮಧ್ಯ ರಾತ್ರಿ ಮನೆಗೆ ಬಂದಾತ ಸುಮ್ಮನೆ ಹೋಗಿದ್ರೆ ಆತನು ಬದುಕುತ್ತಿದ್ದ. ಆ ಮನೆಯಲ್ಲಿದ್ದವರು ನಿಶ್ಚಿಂತೆಯಿಂದ ಮನೆಯಲ್ಲಿರುತ್ತಿದ್ದರು. ಆದರೆ ಆ ‘ಅತಿಥಿ’ ಮುಟ್ಟಿದ ಪರಿಣಾಮ ಬಾಲಕ ಸಾವು ಬದುಕಿನ ನಡುವೆ ಆಸ್ಪತ್ರೆಯಲ್ಲಿ ಹೋರಾಡುತ್ತಿದ್ದಾನೆ. ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದ್ದು ಜುಲೈ 5 ರಂದು...