Tuesday, 23rd January 2018

15 hours ago

ಬೀದಿ ಬದಿ ವ್ಯಾಪಾರಿಯನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದ್ರು

ಧಾರವಾಡ: ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಂಡು ಬೀದಿ ಬದಿಯ ವ್ಯಾಪಾರಿಯನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಧಾರವಾಡದ ಜಯನಗರ ಬಡಾವಣೆಯಲ್ಲಿ ನಡೆದಿದೆ. ಪರಮಾನಂದ ಕೆಂಬಾವಿ(25) ಕೊಲೆಯಾದ ವ್ಯಾಪಾರಿ. ಜಯನಗರದಲ್ಲಿ ನಿವಾಸಿಯಾದ ಪರಮಾನಂದ ಪಾನ್ ಶಾಪ್ ನಡೆಸುತ್ತಿದ್ದರು. ಭಾನುವಾರ ಮಧ್ಯರಾತ್ರಿ ಅಂಗಡಿಗೆ ಬಂದ ಹಂತಕರು ಕ್ಷುಲ್ಲಕ ಕಾರಣಕ್ಕೆ ಜಗಳ ತಗೆದು ಮಾರಕಾಸ್ತ್ರಗಳಿಂದ ಕೊಚ್ಚಿ ಪರಮಾನಂದ ಅವರನ್ನ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

18 hours ago

ಮನೆಗೆ ನಡೆದುಕೊಂಡು ಹೋಗ್ತಿದ್ದ ಐಟಿಐ ವಿದ್ಯಾರ್ಥಿಯ ಬರ್ಬರ ಹತ್ಯೆ!

ಚೆನ್ನೈ: ಮನೆಗೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು 18 ವರ್ಷದ ಯುವಕನೊಬ್ಬನನ್ನು ಬರ್ಬರವಾಗಿ ಕೊಲೆಗೈದ ಭಯಾನಕ ಘಟನೆಯೊಂದು ತಮಿಳುನಾಡಿನಲ್ಲಿ ನಡೆದಿದೆ. ಈ ಘಟನೆಯ ದೃಶ್ಯ ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಘಟನೆ ನುಂಗಂಬಕ್ಕಮ್‍ನ ಟ್ಯಾಂಕ್ ಬಂಕ್ ರೋಡಿನಲ್ಲಿ ನಡೆದಿದ್ದು, ಮೃತ ದುರ್ದೈವಿ ಯುವಕನನ್ನು ರಂಜಿತ್ ಎಂದು ಗುರುತಿಸಲಾಗಿದೆ. ಈತ ನಗರದ ಅಪ್ಪು ಸ್ಟ್ರೀಟ್ ನಿವಾಸಿಯಾಗಿದ್ದಾನೆ....

ಪ್ರಿನ್ಸಿಪಾಲ್ ರನ್ನೇ ಗುಂಡಿಟ್ಟು ಕೊಂದ 12ನೇ ತರಗತಿ ವಿದ್ಯಾರ್ಥಿ

2 days ago

ಚಂಡೀಗಢ: ಖಾಸಗಿ ಶಾಲೆಯ 12ನೇ ತರಗತಿಯ ವಿದ್ಯಾರ್ಥಿಯೊಬ್ಬ ಪ್ರಿನ್ಸಿಪಾಲ್ ರನ್ನು ಗುಂಡಿಟ್ಟು ಕೊಲೆ ಮಾಡಿರುವ ಆಘಾತಕಾರಿ ಘಟನೆ ಹರಿಯಾಣದ ಯಮುನಾ ನಗರದಲ್ಲಿ ನಡೆದಿದೆ. ರಿತು ಛಾಬ್ರಾ ಎಂಬವರು ಕೊಲೆಯಾದ ಪ್ರಿನ್ಸಿಪಾಲ್. ಯಮುನಾ ನಗರದ ವಿವೇಕಾನಂದ ಖಾಸಗಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಕಾರ್ಯನಿರ್ವಹಿಸುತ್ತಿದ್ದರು. ಶನಿವಾರ...

ಕಸದ ವಿಚಾರಕ್ಕೆ ಬಿತ್ತು ಹೆಣ- ಬಿಲ್ಡಿಂಗ್ ಮೇಲಿಂದ ಯುವಕನನ್ನು ತಳ್ಳಿ ಕೊಲೆ

3 days ago

ಬೆಂಗಳೂರು: ಕಸ ಎಸೆದ ಯುವಕನನ್ನು ಬಿಲ್ಡಿಂಗ್ ಮೇಲಿನಿಂದ ತಳ್ಳಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಜಿಲ್ಲೆಯ ಹನುಮಂತನಗರ ಬಳಿಯ ಪಿಇಎಸ್ ಕಾಲೇಜ್ ಬಳಿ ನೆಡೆದಿದೆ. ತುಮಕೂರು ಮೂಲದ ದೇವರಾಜ್ 29 ಮೃತ ಯುವಕ. ಮೃತ ದೇವರಾಜ್ ಶುಕ್ರವಾರ ರಾತ್ರಿ ಮನೆಯಲ್ಲಿ ಊಟ...

ದಾನಮ್ಮ ಮೇಲೆ ರೇಪ್ ಆಗಿಲ್ಲ – ಇಡೀ ಪ್ರಕರಣವನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟ ಹಿರಿಯ ಐಪಿಎಸ್

4 days ago

ವಿಜಯಪುರ: ರಾಜ್ಯಾದ್ಯಂತ ಸದ್ದು ಮಾಡಿದ್ದ ಅಪ್ರಾಪ್ತ ಬಾಲಕಿ ದಾನಮ್ಮ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಮೆಗಾ ಟ್ವಿಸ್ಟ್ ಸಿಕ್ಕಿದ್ದು, ದಾನಮ್ಮ ಮೇಲೆ ಅತ್ಯಾಚಾರವೇ ನಡೆದಿಲ್ಲ ಎನ್ನುವ ವಿಚಾರ ಈಗ ಲಭ್ಯವಾಗಿದೆ. ಉತ್ತರ ವಲಯ ಐಜಿಪಿ ಆಗಿದ್ದ ರಾಮಚಂದ್ರರಾವ್ ಫೋನ್...

ಪತ್ನಿಯನ್ನು ಹಗ್ಗದಿಂದ ಬಿಗಿದು ಕೊಲೆ ಮಾಡಿದ ಪತಿ ಈಗ ಪೊಲೀಸರ ವಶಕ್ಕೆ

4 days ago

ಬೆಂಗಳೂರು: ಪತಿಯೇ ತನ್ನ ಪತ್ನಿಯನ್ನು ಹಗ್ಗದಿಂದ ಬಿಗಿದು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಕೆ.ಆರ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಶೀಗೆಹಳ್ಳಿ ಪ್ರಿಯಾಂಕನಗರದಲ್ಲಿ ನಡೆದಿದೆ. ನೀಲ (25) ಕೊಲೆಯಾಗಿರುವ ದುರ್ದೈವಿ. ಇಂದು ಬೆಳಗಿನ ಜಾವ ಘಟನೆ ನಡೆದಿದ್ದು, ಪತಿ ದೊರೆ ಹಗ್ಗದಿಂದ...

14 ವರ್ಷದ ಮಗನನ್ನು ಕೊಲೆ ಮಾಡಿ ಪೀಸ್ ಪೀಸ್ ಮಾಡಿ ಸುಟ್ಟಳು ನಿರ್ದಯಿ ತಾಯಿ!

4 days ago

ತಿರುವಂತನಪುರಂ: ತಾಯಿಯೇ ತನ್ನ 14 ವರ್ಷದ ಮಗನನ್ನು ಕೊಲೆ ಮಾಡಿ ಕತ್ತರಿಸಿ ಪೀಸ್ ಪೀಸ್ ಮಾಡಿ ಸುಟ್ಟು ಹಾಕಿರುವ ಮನಕಲಕುವಂತಹ ಘಟನೆ ಕೇರಳದ ಕೊಲ್ಲಂನಲ್ಲಿ ನಡೆದಿದೆ. ಆರೋಪಿ 45 ವರ್ಷದ ಜಯಮೊಲ್ ಮಗನನ್ನೇ ಕೊಂದ ನಿರ್ದಯಿ ತಾಯಿ. 14 ವರ್ಷದ ಜೀತುಜಾಬ್...

ಫೋನ್ ಮಾಡಿ ಕರೆಸಿಕೊಂಡು ಗ್ರಾಮ ಪಂಚಾಯ್ತಿ ಸದಸ್ಯನ ಕೊಲೆಗೆ ಯತ್ನ

4 days ago

ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ತಾಲೂಕಿನ ಬಾರಂದೂರು ಗ್ರಾಮ ಪಂಚಾಯ್ತಿ ಸದಸ್ಯ ರಾಘವೇಂದ್ರ ಎಂಬವರ ಕೊಲೆಗೆ ಯತ್ನಿಸಿದ ಘಟನೆ ಗುರುವಾರ ರಾತ್ರಿ ನಡೆದಿದೆ. ಈ ಘಟನೆಯಲ್ಲಿ ಮಚ್ಚಿನೇಟಿನಿಂದ ತೀವ್ರವಾಗಿ ಗಾಯಗೊಂಡಿರುವ ರಾಘವೇಂದ್ರ ಅವರಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ...