Sunday, 25th February 2018

1 day ago

ತಾನು ಮೆಚ್ಚಿದ ಜನನಾಯಕ ಬರಲಿಲ್ಲವೆಂದು 2 ಬಾರಿ ಮದುವೆ ಕ್ಯಾನ್ಸಲ್ ಮಾಡಿದ ವರ

ಕೊಪ್ಪಳ: ತಾನು ಮೆಚ್ಚಿದ ಜನ ನಾಯಕ ಮದುವೆಗೆ ಬರಲಿಲ್ಲ ಎಂಬ ಕಾರಣಕ್ಕೆ ಅಭಿಮಾನಿಯೊಬ್ಬ ಮದುವೆಯನ್ನೇ ಕ್ಯಾನ್ಸಲ್ ಮಾಡಿದ ಘಟನೆ ಕೊಪ್ಪಳದ ಗಂಗಾವತಿ ತಾಲೂಕಿನ ವಡಕಿ ಎನ್ನುವ ಪುಟ್ಟ ಗ್ರಾಮದಲ್ಲಿ ನಡೆದಿದೆ. ಮಂಜುನಾಥ್ ಹೆಬ್ಬುಲಿ ಮದುವೆ ಕ್ಯಾನ್ಸಲ್ ಮಾಡಿದ ವ್ಯಕ್ತಿ. ಹೆಬ್ಬುಲಿ ಎನ್ನುವುದು ಇವರ ಕುಟುಂಬದ ಅಡ್ಡಹೆಸರು. ಮಂಜುನಾಥ್ ಗಂಗಾವತಿ ತಾಲೂಕಿನ ವಡಕಿ ಗ್ರಾಮದ ನಿವಾಸಿಯಾಗಿದ್ದು, ಬಳ್ಳಾರಿಯ ಬಿಜೆಪಿ ಸಂಸದ ಬಿ. ಶ್ರೀರಾಮುಲು ಅವರ ಅಪ್ಪಟ ಅಭಿಮಾನಿಯಾಗಿದ್ದಾನೆ. ಶ್ರೀರಾಮುಲು ತನ್ನ ಮದುವೆಗೆ ಬಾರದಿದ್ದಕ್ಕೆ ಮದುವೆಯನ್ನೇ ಕ್ಯಾನ್ಸಲ್ ಮಾಡಿ ಎಲ್ಲರೂ […]

2 days ago

ಅಮೆರಿಕದ ಮಹಿಳೆಗೆ ಮಸಾಜ್ ಮಾಡೋ ನೆಪದಲ್ಲಿ ಸೆಕ್ಸ್ ಗೆ ಬೇಡಿಕೆ ಇಟ್ಟ ಕಾಮುಕ ಅರೆಸ್ಟ್

ಕೊಪ್ಪಳ: ವಿದೇಶಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು  ಕೊಪ್ಪಳ ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯ ಹನುಮನ ಹಳ್ಳಿ ನಿವಾಸಿ ಆನಂದ ರೆಡ್ಡಿ ಬಂಧಿತ ಆರೋಪಿ. ಅಮೆರಿಕದ ಮಹಿಳೆಯೊಬ್ಬರು ಈತನ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪ ಮಾಡಿದ್ದಾರೆ. ಏನಿದು ಪ್ರಕರಣ? ವಿದೇಶಿಗರು ತುಂಗಭದ್ರಾ ದಡದ ಕೊಪ್ಪಳದ ಗಂಗಾವತಿ ತಾಲೂಕಿನ ಗ್ರಾಮಗಳಾದ ವಿರುಪಾಪುರ ಗಡ್ಡಿ, ಸಣಾಪುರ್...

ರಾಜ್ಯ ರಾಜಕಾರಣಕ್ಕೆ ಜನಾರ್ದನ ರೆಡ್ಡಿ ರೀಎಂಟ್ರಿ ನಿಚ್ಚಳ- ಕೊಪ್ಪಳದಲ್ಲಿ ಸಿಂಗಲ್ ಬೆಡ್ ರೂಂ ಮನೆ ನೋಡಿದ ಗಣಿಧಣಿ

1 week ago

ಕೊಪ್ಪಳ: ಮಾಜಿ ಸಚಿವ ಜನಾರ್ದನ ರೆಡ್ಡಿ ರಾಜ್ಯ ರಾಜಕಾರಣಕ್ಕೆ ರೀಎಂಟ್ರಿ ಕೊಡುವ ಸಾಧ್ಯತೆ ನಿಚ್ಚಳವಾಗಿದೆ. ಇದಕ್ಕೆ ಪೂರಕ ಎನ್ನುವಂತೆ ರೆಡ್ಡಿ ಬಳ್ಳಾರಿ ಜಿಲ್ಲೆ ಗಡಿಭಾಗದ ಹಳ್ಳಿಗಳಲ್ಲಿ ವಾಸ್ತವ್ಯಕ್ಕೆ ಮನೆ ಶೋಧ ನಡೆಸಿದ್ದಾರೆ. ಈಗಾಗಲೇ ಮೂರ್ನಾಲ್ಕು ಕಡೆ ಮನೆ ನೋಡಿರುವ ಜನಾರ್ದನ ರೆಡ್ಡಿ...

ನೇಣು ಬಿಗಿದು ಗೃಹಿಣಿ ಆತ್ಮಹತ್ಯೆ- ಪತಿ ಮನೆಯ ವಿರುದ್ಧ ಕೊಲೆ ಆರೋಪ

1 week ago

ಕೊಪ್ಪಳ: ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ನೇಣು ಹಾಕಿಕೊಂಡು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಗಂಗಾವತಿ ತಾಲೂಕಿನ ಹಂಪಸ ದುರ್ಗಾ ಗ್ರಾಮದಲ್ಲಿ ನೆಡದಿದೆ. ಲಕ್ಷ್ಮಿ ನೇಣು ಬಿಗಿದುಕೊಂಡು ಮೃತಪಟ್ಟ ಮಹಿಳೆ. ಆಕೆಯ ಗಂಡನ ಮನೆಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ ಲಕ್ಷ್ಮಿಯ ತವರು ಮನೆಯವರು...

20 ವರ್ಷಗಳ ಹಿಂದೆ ಮೃತಪಟ್ಟ ಯುವಕನ ಮೇಲೆ ಚಾರ್ಜ್ ಶೀಟ್ ಸಲ್ಲಿಸಿದ ಪೊಲೀಸರು

1 week ago

ಕೊಪ್ಪಳ: ಇಪ್ಪತ್ತು ವರ್ಷಗಳ ಹಿಂದೆ ಮೃತಪಟ್ಟ ಯುವಕನ ಮೇಲೆ ಗಂಗಾವತಿ ನಗರ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿ ಎಡವಟ್ಟು ಮಾಡಿಕೊಂಡಿದ್ದಾರೆ. ಗಂಗಾವತಿ ತಾಲೂಕಿನ ಹಿರೇಜಂತಕಲ್ ಗ್ರಾಮದ ನಿವಾಸಿ ಮಲ್ಲಿಕಾರ್ಜುನ್ 1998 ರಲ್ಲಿ ಮೃತಪಟ್ಟಿದ್ರು. ಆದರೆ ಈಗ ಅವರ ಮೇಲೆ ಗಂಗಾವತಿ ನಗರ...

ನಾನ್ ವೆಜ್ ತಿಂದು ದೇವಸ್ಥಾನಕ್ಕೆ ಹೋದ್ರಂತೆ ರಾಗಾ – ಬಿಎಸ್‍ವೈ ಗಂಭೀರ ಆರೋಪ

2 weeks ago

ಬೆಂಗಳೂರು: ಸತತ ಮೂರು ದಿನಗಳಿಂದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಜನಾಶೀರ್ವಾದ ಯಾತ್ರೆಯಲ್ಲಿ ಭಾಗಿಯಾಗಿ ಉತ್ತರ ಕರ್ನಾಟಕದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಚುನಾವಣಾ ಪ್ರಚಾರದಲ್ಲಿ ಸಂಚರಿಸುವ ಮಾರ್ಗದಲ್ಲಿ ಬರುವ ಹಿಂದೂ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ. ಮಾಂಸಾಹಾರ ತಿಂದು ದರ್ಶನ ಪಡೆದ್ರಾ ರಾಗಾ?:...

ಒಂದೇ ದಿನದಲ್ಲಿ 5 ವಿಧಾನಸಭಾ ಕ್ಷೇತ್ರಗಳಲ್ಲಿ ರಾಹುಲ್ ಗಾಂಧಿ ಪ್ರವಾಸ

2 weeks ago

ಕೊಪ್ಪಳ: ರಾಜ್ಯದ ಹೈದರಾಬಾದ್ ಕರ್ನಾಟಕ ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂದು ತಮ್ಮ ಎರಡನೇ ದಿನದ ಪ್ರವಾಸ ಮುಗಿಸಿದ್ದಾರೆ. ಇವತ್ತು ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಯಲ್ಲಿ ಬಸ್ ನಲ್ಲಿ ಯಾತ್ರೆ ಮಾಡಿ 6 ಕ್ಕೂ ಹೆಚ್ಚು ಸಮಾವೇಶ ಗಳಲ್ಲಿ ಮಾತನಾಡಿದರು....

ರಾಹುಲ್ ಪ್ರಧಾನಿ ಆಗೋವರೆಗೆ ಚಪ್ಪಲಿಯೇ ಹಾಕಲ್ಲ – ಅಭಿಮಾನಿಯಿಂದ ಶಪಥ

2 weeks ago

ಕೊಪ್ಪಳ: ಕರ್ನಾಟಕ ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಹುಡುಕಿಕೊಂಡು ಹರಿಯಾಣದಿಂದ ಅಭಿಮಾನಿಯೊಬ್ಬರು ಬಂದಿದ್ದಾರೆ. ಇವರು ರಾಹುಲ್ ಗಾಂಧಿ ಪ್ರಧಾನಿಯಾಗುವವರೆಗೂ ಚಪ್ಪಲಿ ಹಾಕಲ್ಲ ಎಂದು ಶಪಥ ಮಾಡಿದ್ದಾರೆ. ಅಭಿಮಾನಿಯ ಹೆಸರು ದಿನೇಶ್ ಶರ್ಮಾ. ಹರಿಯಾಣದ ಕಾಕ್ರೋಡ್ ಗ್ರಾಮದವರು. ಇವರು ರಾಹುಲ್ ಗಾಂಧಿ...