Tuesday, 10th December 2019

10 hours ago

ಕಾವೇರಿ ಒಡಲಿಗೆ ಕಲ್ಲು ಬೀಳುತ್ತಿದ್ದರೂ ಕಣ್ಮುಚ್ಚಿ ಕುಳಿತ ಅಧಿಕಾರಿಗಳು

ಕೊಡಗು: ಕಾವೇರಿ ನದಿಗೆ ಸಾವಿರಾರು ಲೋಡ್ ಕಲ್ಲು, ಮಣ್ಣು ಸುರಿದು ಸಮತಟ್ಟು ಮಾಡುತ್ತಿದ್ದರೂ ಪಂಚಾಯ್ತಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತ್ತಿದ್ದಾರೆ. ಕೊಡಗಿನಲ್ಲಿ ಕಳೆದ ಎರಡು ವರ್ಷಗಳಿಂದ ಕಾವೇರಿ ನದಿ ಉಕ್ಕಿ ಹರಿದು ಸಾವಿರಾರು ಜನರು ಮನೆಮಠ ಕಳೆದುಕೊಂಡಿದ್ದಾರೆ. ನದಿಪಾತ್ರದ ಜಾಗ ದಿನದಿಂದ ದಿನಕ್ಕೆ ಕಿರಿದಾಗುತ್ತಿರುವುದು ಕಾವೇರಿ ನದಿ ಉಕ್ಕಿ ಹರಿಯೋದಕ್ಕೆ ಕಾರಣ ಎನ್ನೋದು ಸಾಬೀತಾಗಿದೆ. ಇಷ್ಟೆಲ್ಲಾ ಆದರೂ ಜನರು ಮಾತ್ರ ಬುದ್ಧಿ ಕಲಿತಿಲ್ಲ. ಕೆಲ ಮಂದಿ ಕಾವೇರಿ ನದಿಗೆ ಸಾವಿರಾರು ಲೋಡ್ ಕಲ್ಲು, […]

3 days ago

ಕೊಯ್ಲಿಗೆ ಬಂದ ಭತ್ತದ ಫಸಲು- ರೈತರಲ್ಲಿ ಆತಂಕ

ಮಡಿಕೇರಿ: ಕೊಡಗು ಜಿಲ್ಲೆಯ ಮೂರು ತಾಲೂಕುಗಳಲ್ಲಿ ಭತ್ತದ ಫಸಲು ಕೊಯ್ಲಿಗೆ ಬಂದಿದ್ದು ಕಟಾವು ಮಾಡಲು ಸಾಧ್ಯವಾಗದೆ ರೈತರು ಆಕಾಶ ನೋಡುವಂತಾಗಿದೆ. ಜಿಲ್ಲೆಯ ಎಲ್ಲಾ ಭಾಗದ ಭತ್ತದ ಬೆಳೆ ಕಟಾವು ಮಾಡಲು ಬಂದಿದ್ದು, ಮಳೆಯ ಕಾರಣದಿಂದ ಉದುರಲು ಆರಂಭವಾಗಿದೆ. ಇತ್ತೀಚಿನ ದಿನಗಳಲ್ಲಿ 4 ತಿಂಗಳ ಬೆಳೆಗಳು ಹೈಬ್ರೀಡ್ ತಳಿಗಳು 4 ತಿಂಗಳೊಳಗೆ ಕಟಾವು ಮಾಡಲೇ ಬೇಕು. ಇಲ್ಲವಾದಲ್ಲಿ...

15 ಅಡಿ ಉದ್ದದ ಕಾಳಿಂಗ ಸರ್ಪ ರಕ್ಷಣೆ- ಅಚ್ಚರಿಯಿಂದ ನೋಡಿದ ಸ್ಥಳೀಯರು

1 week ago

ಮಡಿಕೇರಿ: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನಲ್ಲಿ ಸುಮಾರು 15 ಅಡಿ ಉದ್ದದ ಕಾಳಿಂಗ ಸರ್ಪವವೊಂದನ್ನು ಸೆರೆ ಹಿಡಿಯಲಾಗಿದೆ. ವಿರಾಜಪೇಟೆ ತಾಲೂಕಿನ ಬಿ.ಶೆಟ್ಟಿಗೇರಿ ಗ್ರಾಮದ ನಾಮೇರ ಬೋಸು ಎಂಬವರ ಮನೆಯ ಬಳಿ ಕಾಳಿಂಗ ಸರ್ಪ ಕಾಣಿಸಿಕೊಂಡಿತ್ತು. ಇದನ್ನು ಕಂಡು ಗಾಬರಿಗೊಂಡ ನಾಮೇರ ಅವರ...

ಬಾಲಕನ ಕೆನ್ನೆಯ ಮೇಲೆ ಮೂಡಿದೆ ಕರ್ನಾಟಕ ಭೂಪಟದ ಮಚ್ಚೆ

1 week ago

ಕೊಡಗು: ಬಾಲಕನ ಕೆನ್ನೆಯ ಮೇಲೆ ಕರ್ನಾಟಕ ಭೂಪಟದ ಮಚ್ಚೆ ಮೂಡಿದೆ. ಬಾಲಕನ ಕೆನ್ನೆಯ ಮೇಲೆ ಕರ್ನಾಟಕದ ಆಕೃತಿ ಕಂಡ ಜಿಲ್ಲೆಯ ಜನ ಹಾಗೂ ಸ್ನೇಹಿತರು ಆಶ್ಚರ್ಯಚಕಿತರಾಗಿದ್ದಾರೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕುಶಾಲನಗರ ಸಮೀಪದ ಗುಮ್ಮನ ಕೊಲ್ಲಿಯ ನಿವಾಸಿ ದೇವರಾಜು ಹಾಗೂ...

ಮಂಜಿನ ನಗರಿ ಜಾತ್ರೆಯಲ್ಲಿ ದೇಶಿ ಬಂಡಿಗಳ ಕಮಾಲ್ – ಕಿಕ್ಕಿರಿದು ಸೇರಿದ ಜನಸ್ತೋಮ

2 weeks ago

ಮಡಿಕೇರಿ: ಮಂಜಿನ ನಗರಿ ಎಂದೇ ಖ್ಯಾತವಾಗಿರುವ ಕೊಡಗಿನಲ್ಲಿ ಇದೀಗ ಜಾತ್ರಾ ಮಹೋತ್ಸವಗಳ ಕಲರವ ಜೋರಾಗಿದೆ. ಆಧುನಿಕತೆಯ ಅಬ್ಬರದ ನಡುವೆ ಅನ್ನದಾತರ ಅವಿಭಾಜ್ಯ ಅಂಗವಾಗಿರುವ ರಾಸುಗಳ ಪ್ರದರ್ಶನ ಹಾಗೂ ದೇಶಿ ಬಂಡಿಗಳ ಸ್ಪರ್ಧೆಯ ಗಮ್ಮತ್ತು ಮೇಳೈಸುತ್ತಿದೆ. ಸೋಮವಾರಪೇಟೆ ತಾಲೂಕಿನ ಹೆಬ್ಬಾಲೆ ಗ್ರಾಮ ದೇವತೆ...

ವಿದೇಶಿ ಪ್ರಜೆ ಅನುಮಾನಾಸ್ಪದ ಸಾವು- ಕೊಲೆ ಶಂಕೆ

2 weeks ago

ಮಡಿಕೇರಿ: ವಿದೇಶಿ ಪ್ರಜೆಯೊಬ್ಬರು ಅನುಮಾನಾಸ್ಪದ ರೀತಿ ಸಾವನ್ನಪ್ಪಿದ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕುಶಾಲನಗರದಲ್ಲಿ ನಡೆದಿದೆ. ಸ್ಪೇನ್ ದೇಶದ ಕಾರ್ಲೋಸ್(65) ಮೃತ ವಿದೇಶ ಪ್ರಜೆ. ಕಾರ್ಲೋಸ್ ಸೋಮೇಶ್ವರ ಬಡಾವಣೆಯ ಐಟಿಐ ಕಾಲೇಜು ಕಟ್ಟಡದ ಮೇಲ್ಭಾಗದಲ್ಲಿ ಕಳೆದ ಎಂಟು ತಿಂಗಳಿನಿಂದ ಬಾಡಿಗೆಗೆ ವಾಸವಿದ್ದರು....

ನಕಲಿ ನಾಗಾ ಸಾಧುಗಳ ಕೈ ಚಳಕ – ವಶೀಕರಣ ಮಾಡಿ ಯಾಮಾರಿಸ್ತಾರೆ ಕಾವಿ ಕಳ್ಳರು

2 weeks ago

ಕೊಡಗು: ಭಕ್ತಿಯ ಪರಾಕಾಷ್ಠೆತೆಯೋ ಅಥವಾ ವಶೀಕರಣವೋ ಗೊತ್ತಿಲ್ಲ. ಆದರೆ ಕೊಡಗಿನ ಕುಶಾಲನಗರದಲ್ಲಿ ಫೈನಾನ್ಸ್ ಮಾಲೀಕರೊಬ್ಬರು ನಕಲಿ ನಾಗಾ ಸಾಧುಗಳಿಬ್ಬರ ವಂಚನೆ ವಿದ್ಯೆಗೆ ಬಲಿಯಾಗಿದ್ದಾರೆ. ಕುಶಾಲನಗರದ ಐಬಿ ರಸ್ತೆಯ ಮಹಿಳಾ ಸಮಾಜದ ಬಿಲ್ಡಿಂಗ್‍ನಲ್ಲಿರುವ ಜನಶ್ರೀ ಮೈಕ್ರೋ ಫೈನಾನ್ಸ್ ಮಾಲೀಕನಿಗೆ ನಾಗಾ ಸಾಧುಗಳ ವೇಷದಲ್ಲಿ...

ಮನೆಯವರೊಂದಿಗೆ ಆತ್ಮೀಯತೆಯ ಜೊತೆಗೆ ಮಾತೂ ಆಡ್ತಾನೆ ಗಿಣಿ ರಾಮ

3 weeks ago

– 5 ವರ್ಷದ ಹಿಂದೆ ಸಿಕ್ಕ ಗಿಣಿ – ಕೊಡಗು ವಾಲಗ ಸೌಂಡ್ ಕೇಳಿದ್ರೆ ಡ್ಯಾನ್ಸ್ ಮಾಡ್ತಾನೆ ಮಡಿಕೇರಿ: ಪಕ್ಷಿಗಳಲ್ಲಿ ಬಹುತೇಕ ಜನರಿಗೆ ಅತೀ ಆಕರ್ಷಣೀಯವಾದುದು ಗಿಳಿ. ಅಂತದರಲ್ಲಿ ಮನೆಯಲ್ಲೊಂದು ಗಿಳಿಯಿದ್ದು, ಅದು ನಮ್ಮೊಂದಿಗೆ ಆತ್ಮೀಯ ಒಡನಾಟ ಬೆಳೆಸಿಕೊಂಡರೆ ಎಷ್ಟು ಚಂದ....