Saturday, 22nd July 2017

Recent News

4 weeks ago

ಜೀವಜಲಕ್ಕಾಗಿ ಗ್ರಾಮಸ್ಥರಲ್ಲಿ ಒಗ್ಗಟ್ಟು – ಸ್ವಂತ ಖರ್ಚಿನಲ್ಲಿ ಕೆರೆಗೆ ಕಾಯಕಲ್ಪ ನೀಡಿದ ಹಾವೇರಿಯ ರುದ್ರೇಶ್

ಹಾವೇರಿ: ರಾಜ್ಯದಲ್ಲಿ ಮಳೆ ಕೊರತೆ ಮತ್ತು ಬರಗಾಲಕ್ಕೆ ಕಾರಣ ಏನು ಅನ್ನೋದು ಎಲ್ಲರ ಅರಿವಿಗೆ ಬಂದಿದೆ. ಅದ್ರಲ್ಲೂ ರೈತಾಪಿ ವರ್ಗ ಭಾರೀ ಕಾಳಜಿ ವಹಿಸಿದೆ. ಹೀಗಾಗಿ, ರೈತರು, ಸ್ಥಳೀಯರು, ಸಂಘ ಸಂಸ್ಥೆಗಳು ಮೊದಲಿಗೆ ಹೂಳೆತ್ತುವ ಮೂಲಕ ಕೆರೆಗಳಿಗೆ ಕಾಯಕಲ್ಪ ನೀಡ್ತಿವೆ. ಹೀಗೆ ಹೂಳೆತ್ತಿರುವವರ ಪೈಕಿ ಇವತ್ತಿನ ಹಾವೇರಿಯ ರುದ್ರೇಶ್ ಸಹ ಒಬ್ರು. ವಿಶಾಲವಾದ ಕೆರೆಯಲ್ಲಿ ಬೆಳೆದಿರೋ ಮುಳ್ಳು-ಕಂಟಿಗಳು. ಹೂಳು ತೆಗೆಯುತ್ತಿರೋ ಜೆಸಿಬಿಗಳು. ಜೊತೆಗೆ ಕೆರೆಯನ್ನ ತೋರಿಸ್ತಿರೋ ಇವರೇ ಇವತ್ತಿನ ಪಬ್ಲಿಕ್ ಹೀರೋ. ಹೆಸರು ರುದ್ರೇಶ್ ಚಿನ್ನಣ್ಣವರ್. ಹಾವೇರಿ […]

1 month ago

ಈ ಊರಿನ ಜನ್ರಿಗೆ ಚಿಕೂನ್ ಗುನ್ಯಾ- ಚುನಾವಣೆಯಲ್ಲಿ ವೋಟ್ ಕೊಡಿ, ನೀರು ಕೊಡ್ತೀವಿ ಎಂದ ಕಾಂಗ್ರೆಸ್ ನಾಯಕರು ನಾಪತ್ತೆ

ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದಲ್ಲಿ ಸುಮಾರು 1000ಕ್ಕೂ ಅಧಿಕ ಜನರು ಚಿಕೂನ್ ಗುನ್ಯಾ ರೋಗದಿಂದ ಬಳಲುತ್ತಿದ್ದಾರೆ. ಇದುವರೆಗೂ ಯಾವ ಆರೋಗ್ಯ ಅಧಿಕಾರಿಗಳು ಇತ್ತ ಗಮನ ಹರಿಸಿಲ್ಲ. ಕಲುಷಿತ ನೀರಿನ ಸೇವನೆಯಿಂದ ಗ್ರಾಮಸ್ಥರು ಚಿಕೂನ್ ಗುನ್ಯಾದಿಂದ ಬಳಲುವಂತಾಗಿದೆ. ಗುಂಡ್ಲುಪೇಟೆ ಉಪಚುನಾವಣೆಯ ವೇಳೆಯಲ್ಲಿ ಗ್ರಾಮಕ್ಕೆ ಬಂದಿದ್ದ ಎಲ್ಲ ರಾಜಕೀಯ ನಾಯಕರು ನಮಗೆ ವೋಟ್ ಕೊಡಿ, ನಾವು...

ಶಾಲೆಗೆ ರಜೆಯೆಂದು ಈಜಲು ಹೋದ ಬಾಲಕರಿಬ್ಬರ ದುರ್ಮರಣ

2 months ago

ಚಿಕ್ಕಬಳ್ಳಾಪುರ: ಇಂದು ಭಾನುವಾರ ಶಾಲೆಗೆ ರಜೆಯೆಂದು ಕೆರೆಗೆ ಈಜಲು ಹೋಗಿದ್ದ ಬಾಲಕರಿಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಕುರಬರಹಳ್ಳಿ ಗ್ರಾಮದಲ್ಲಿ ನಡೆದಿದೆ. ಮುಬಾರಕ್ (13) ಮತ್ತು ಮನ್ಸೂರ್ (12) ಮೃತ ಬಾಲಕರು. ಕುರಬರಹಳ್ಳಿಯ ಮುಬಾರಕ್ ಮತ್ತು ಬುರ್ಜಾನಕುಂಟೆ ಗ್ರಾಮದ ಮನ್ಸೂರು...

ರಾತ್ರೋರಾತ್ರಿ ಸುಬ್ರಹ್ಮಣ್ಯಪುರ ಕೆರೆ ಎಡದಂಡೆ ಒಡೆದ ಕಿಡಿಗೇಡಿಗಳು- ಕೆರೆ ಒತ್ತುವರಿ ಯತ್ನ ಆರೋಪ

2 months ago

ಬೆಂಗಳೂರು: ಗುರುವಾರ ರಾತ್ರಿ ಬೆಂಗಳೂರಿನ ಉತ್ತರಹಳ್ಳಿಯಲ್ಲಿರುವ ಸುಬ್ರಹ್ಮಣ್ಯಪುರ ಕೆರೆಯ ಎಡದಂಡೆಯನ್ನು ಯಾರೋ ಕಿಡಿಗೇಡಿಗಳು ಒಡೆದುಹಾಕಿದ್ದಾರೆ. ನೀರು ಖಾಲಿ ಮಾಡಿದ್ರೆ ಕೆರೆ ಒತ್ತುವರಿ ಮಾಡಿಕೊಳ್ಳಬಹುದು ಅಂತ ರಾತ್ರೋರಾತ್ರಿ ಈ ಕೃತ್ಯ ನಡೆದಿದೆ. ಈಗಾಗಲೇ ರಾಸಾಯನಿಕಯುಕ್ತ ನೊರೆಯಿಂದಾಗಿ ಕೆರೆ ಹಾಳಾಗಿದ್ದು, ಈಗ ಕೆರೆ ಕಟ್ಟೆ...

ವರ್ತೂರು ಕೋಡಿಯಲ್ಲಿ ನೊರೆಯ ಆರ್ಭಟ- ನೊರೆಯಲ್ಲಿ ಫೋಟೊ ಕ್ಲಿಕಿಸಿಕೊಳ್ಳಲು ಮುಂದಾದ ಜನ

2 months ago

ಬೆಂಗಳೂರು: ಕಳೆದ ರಾತ್ರಿ ಸುರಿದ ಮಳೆಗೆ ವರ್ತೂರು ಕೋಡಿ ಕೆರೆಯಲ್ಲಿ ನೊರೆಯ ಆರ್ಭಟ ಹೆಚ್ಚಾಗಿದೆ. ಇನ್ನೂ ನೊರೆಯ ಒಂದೆಡೆ ಶೇಖರಣೆಯಾಗಿ ಹಿಮಾಲಯದಂತೆ ಕಾಣಿಸುತ್ತಿದ್ದು, ಸೆಲ್ಫೀ ಪ್ರಿಯರು ನೊರೆಯ ಮುಂಭಾಗದಲ್ಲಿ ಫೋಟೋ ಕ್ಲಿಕಿಸಿಕೊಳ್ಳುತ್ತಿದ್ದಾರೆ. ನೊರೆಯ ಸಮಸ್ಯೆಯನ್ನು ತಡೆಗಟ್ಟುವ ಸಲುವಾಗಿ ಬಿಡಿಎ ವತಿಯಿಂದ 20...

ಧಾರಾಕಾರ ಮಳೆಗೆ ತುಂಬಿ ತುಳುಕುತ್ತಿದೆ ಗದಗದ ಐತಿಹಾಸಿಕ ಕೆರೆ- ಜನರ ಮೊಗದಲ್ಲಿ ಹರ್ಷದ ಕಳೆ

2 months ago

ಗದಗ: ವಿದೇಶಿ ಬಾನಾಡಿಗಳ ಆಗಮನದಿಂದ ಹೆಸರುವಾಸಿಯಾದ ಐತಿಹಾಸಿಕ ಕೆರೆ, ಬರಗಾಲಕ್ಕೆ ಬತ್ತಿಹೊಗಿತ್ತು. ಕಳೆದೆರೆಡು ದಿನಗಳಿಂದ ಸುರಿದ ಭಾರೀ ಮಳೆಗೆ ಕೆರೆ ಭರ್ತಿಯಾಗಿದೆ. ಇದರಿಂದ ಈ ಭಾಗದ ಪ್ರಾಣಿ-ಪಕ್ಷಿಗಳು ಹಾಗೂ ಜನರು ಫುಲ್ ಖಷಿಯಾಗಿದ್ದಾರೆ. ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಮಾಗಡಿ 134...

ಕೆರೆಯಲ್ಲಿ ಶ್ರಮದಾನ ಮಾಡಿದ ಹಾವೇರಿಯ ಜಿಲ್ಲಾಧಿಕಾರಿ

3 months ago

ಹಾವೇರಿ: ಜಿಲ್ಲಾಧಿಕಾರಿಗಳು ಅಂದ್ರೆ ಕಚೇರಿ ಕೆಲಸ ಮಾಡಿಕೊಂಡು ಅಧಿಕಾರಿಗಳ ಸಭೆ ನಡೆಸಿ ಕ್ರಮ ತೆಗೆದುಕೊಳ್ಳುವುದು ಕಾಮನ್. ಆದ್ರೆ ಹಾವೇರಿ ಜಿಲ್ಲಾಧಿಕಾರಿ ಡಾ.ಎಂ.ವ್ಹಿ.ವೆಂಕಟೇಶ್ ಉದ್ಯೋಗ ಖಾತ್ರಿ ಯೋಜನೆಯಲ್ಲಿ ತಾವು ಹಾಗೂ ತಮ್ಮ ಸಿಬ್ಬಂದಿಯ ಜೊತೆ ಸೇರಿಕೊಂಡು ಶ್ರಮದಾನ ಮಾಡಿ, ಅವರ ಕುಂದು-ಕೊರತೆಗಳನ್ನ ಕೇಳಿದ್ದಾರೆ....

ಕಾಡುಪ್ರಾಣಿಗಳ ನೀರಿನ ದಾಹ ನೀಗಿಸಿ ಮಾನವೀಯತೆ ಮೆರೆದ ರೈತ ಮದಾರಸಾಬ

3 months ago

ಧಾರವಾಡ: ಭೀಕರ ಬರಗಾಲದಿಂದ ವಿದ್ಯಾಕಾಶಿ ಧಾರವಾಡ ಜಿಲ್ಲೆಯೂ ಹೊರತಾಗಿಲ್ಲ. ಇಂಥ ಬರದ ಪರಿಸ್ಥಿತಿಯ ನಡುವೆಯೂ ಕಳೆದ ಮೂರು ವರ್ಷದಿಂದ ಪ್ರಾಣಿಗಳಿಗೆ ನೀರುಣಿಸಿ ಹೃದಯ ವೈಶಾಲ್ಯತೆ ಮೆರೆದಿದ್ದಾರೆ ಈ ನಮ್ಮ ಪಬ್ಲಿಕ್ ಹೀರೋ. ಧಾರವಾಡ ತಾಲೂಕಿನ ಲಾಳಗಟ್ಟಿ ಗ್ರಾಮ ಚಿಕ ರೈತ ಮದಾರಸಾಬ...