Wednesday, 20th September 2017

4 weeks ago

ಬೋರ್‍ವೆಲ್ ಇಲ್ಲ, ಕರೆಂಟ್ ಇಲ್ಲ-ಆದ್ರೂ ಸಮೃದ್ಧ ಕೃಷಿಯಲ್ಲಿ ಖುಷಿ ಕಂಡುಕೊಂಡ ಕೋಲಾರದ ರೈತ

ಕೋಲಾರ: ಸಾವಿರಾರು ಅಡಿ ಬೋರ್‍ವೆಲ್ ಕೊರೆದ್ರೂ ಜೀವ ಜಲ ಸಿಗದ ಕೋಲಾರದಲ್ಲಿ ರೈತರೊಬ್ರು ಬೋರ್‍ವೆಲ್, ಕರೆಂಟ್ ಯಾವುದೂ ಇಲ್ಲದೆ ಕೃಷಿಯಲ್ಲಿ ಸುಂದರ ಬದುಕು ಕಟ್ಟಿಕೊಂಡಿದ್ದಾರೆ. ಬರಡು ಭೂಮಿಯಲ್ಲಿ ವ್ಯವಸಾಯ ಮಾಡಿ, ಬರದಲ್ಲೂ ಹಚ್ಚ ಹಸುರಿನ ಬೆಳೆ ಬೆಳೆದು ಮಾದರಿ ಕೃಷಿಕರಾಗಿದ್ದಾರೆ. ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕು ರಾಂಪುರ ಗ್ರಾಮದ ಪ್ರಗತಿಪರ ರೈತ ಅಶೋಕ್‍ಕುಮಾರ್ ಇವತ್ತಿನ ನಮ್ಮ ಪಬ್ಲಿಕ್ ಹೀರೋ. 16 ವರ್ಷಗಳಿಂದ ಕೃಷಿಕರಾಗಿದ್ದಾರೆ. 13 ವರ್ಷಗಳ ಕಾಲ ಶ್ರೀನಿವಾಸಪುರ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಿದ್ದಾರೆ. […]

1 month ago

ರೈತರ ಪ್ರತಿಭಟನೆಯಿಂದ ಹಾರಂಗಿ ಡ್ಯಾಂನಿಂದ ಕಾಲುವೆಗಳಿಗೆ ನೀರು

ಮಡಿಕೇರಿ: ಕೊಡಗಿನಾದ್ಯಂತ ಹಲವು ದಿನಗಳಿಂದ ಮಳೆ ಸುರಿದು ಹಳ್ಳಕೊಳ್ಳ ಉಕ್ಕಿ ಹರಿದರೂ ಜಿಲ್ಲೆಯ ರೈತಾಪಿ ವರ್ಗ ನೀರಿಗಾಗಿ ಬೀದಿಗಿಳಿದು ಹೋರಾಟ ಮಾಡುವ ಪರಿಸ್ಥಿತಿ ಎದುರಾಗಿದೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಹಾರಂಗಿ ಜಲಾಶಯದಿಂದ ಕೃಷಿ ಚಟುವಟಿಕೆಗಾಗಿ ಕಾಲುವೆಗಳಿಗೆ ನೀರು ಹರಿಸುವಂತೆ ಕೆಲವು ದಿನಗಳ ಹಿಂದೆ ನಾಲೆಗಳಿಗೆ ನೀರು ಬೀಡಬೇಕು ಎಂದು ಆಗ್ರಹಿಸಿ ಹಾರಂಗಿ ಅಚ್ಚುಕಟ್ಟು ಪ್ರದೇಶದ...

ತೋಟದಲ್ಲಿ ಕಾಲು ಜಾರಿ ಬಾವಿಗೆ ಬಿದ್ದು ರೈತ ಸಾವು

2 months ago

ಕಾರವಾರ: ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ರೈತರೊಬ್ಬರು ಕಾಲು ಜಾರಿ ಬಾವಿಗೆ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕೆರೆಕೋಣದಲ್ಲಿ ನೆಡೆದಿದೆ. ಕೆರೆಕೋಣ ನಿವಾಸಿ ಗಣಪತಿ ಪರಮೇಶ್ವರ ಭಟ್ಟ ಉಂಚುಟ್ಟೆ (55) ಮೃತ ರೈತ. ತಮ್ಮ ತೋಟದಲ್ಲಿ...

ರಾಜ್ಯದ ಹಲವೆಡೆ ಮಳೆರಾಯನ ರುದ್ರನರ್ತನ- ಈ ಮಾರ್ಗದ ರಸ್ತೆಗಳು ಬಂದ್

2 months ago

ಬೆಂಗಳೂರು: ಮಳೆ ಬಂದ್ರೂ ಕಷ್ಟ, ಬರದಿದ್ರೂ ಕಷ್ಟ. ಮುಂಗಾರು ಮಳೆ ಕೈಕೊಡ್ತಲ್ಲಪ್ಪ ಅನ್ನೋ ಹೊತ್ತಲ್ಲಿ ಕರ್ನಾಟಕದ ಹಲವೆಡೆ ಮಳೆರಾಯ ಅಬ್ಬರಿಸಿದ್ದಾನೆ. ಚಿಕ್ಕಮಗಳೂರಲ್ಲಿ ಮಳೆಯ ಆರ್ಭಟ ನಿಲ್ತಿಲ್ಲ. ಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಈಗಾಗಲೇ ಕಳಸ ಸಮೀಪದ ಹೆಬ್ಬಾಳೆ ಸೇತುವೆ...

ಮುಂಗಾರು ಆರಂಭವಾದ್ರೂ ಬಾರದ ಮಳೆ- ಕೃಷಿಗೆ ಹರಿಸದೆ ಕುಡಿಯಲು ನೀರು ಕೊಟ್ಟ ಧಾರವಾಡದ ಬಿಸೇರೊಟ್ಟಿ ಸಹೋದರರು

3 months ago

ಧಾರವಾಡ: ಮುಂಗಾರು ಮಳೆ ಈಗಾಗಲೇ ಆರಂಭವಾಗಿದೆ. ರಾಜ್ಯದ ಅಲ್ಲಲ್ಲಿ ವರ್ಷಧಾರೆಯಾಗ್ತಿದೆ. ಆದ್ರೆ ಧಾರವಾಡದ ಕುಂದಗೋಳ ತಾಲೂಕಿನಲ್ಲಿ ಕಳೆದ 6 ವರ್ಷಗಳಿಂದ ಬರ ಆವರಿಸಿದೆ. ಹಿರೇಗುಂಜಾಳ ಗ್ರಾಮದ ಇವತ್ತಿನ ಪಬ್ಲಿಕ್ ಹೀರೋ ಬಿಸೇರೊಟ್ಟಿ ಸಹೋದರರು ಇಂತಹ ಸ್ಥಿತಿಯಲ್ಲೂ ಗ್ರಾಮಕ್ಕೆ ಉಚಿತವಾಗಿ ಕುಡಿಯುವ ನೀರು...

ಮುಕ್ಕಾಲು ಇಂಚು ನೀರಲ್ಲೇ 5 ಎಕರೆಯಲ್ಲಿ ಕೃಷಿ ಮಾಡ್ತಿರೋ ಚಿತ್ರದುರ್ಗದ ದಯಾನಂದ್ ಮೂರ್ತಿ

4 months ago

ಚಿತ್ರದುರ್ಗ: ಈ ಬೇಸಿಗೆಯಲ್ಲಿ ನೀರಿಲ್ಲದೇ ಎಷ್ಟೋ ಅಡಿಕೆ, ತೆಂಗಿನ ತೋಟಗಳು ಒಣಗಿ ಹೋಗಿವೆ. ಆದರೆ ಚಿತ್ರದುರ್ಗದ ರೈತರೊಬ್ಬರು ಕೇವಲ ಮುಕ್ಕಾಲು ಇಂಚು ನೀರಿನಲ್ಲೇ ಸಮಗ್ರ ಕೃಷಿ ಮಾಡ್ತಿದ್ದಾರೆ. ಅಡಿಕೆ, ದಾಳಿಂಬೆ ಸೇರಿದಂತೆ ಸೊಂಪಾಗಿ ಮರ ಗಿಡಗಳನ್ನ ಬೆಳೆಸುತ್ತಿದ್ದಾರೆ. ಜಿಲ್ಲೆಯ ಚಳ್ಳಕೆರೆ ತಾಲೂಕಿನ...

ಮಂಗಳೂರಿನಲ್ಲಿ ಭಾರೀ ಮಳೆ

4 months ago

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಸಂಜೆ ಭರ್ಜರಿ ಮಳೆಯಾಗಿದೆ. ಮಂಗಳೂರಿನಲ್ಲಿ ಧಾರಾಕಾರ ಮಳೆ ಸುರಿದಿದ್ದು, ಸಂಜೆಯ ವೇಳೆಗೆ ಸುರಿದ ಮಳೆ ನಗರವಾಸಿಗಳನ್ನು ಹೈರಾಣಾಗಿಸಿದೆ. ಭಾರೀ ಮಳೆಯ ಪರಿಣಾಮ ಡ್ರೈನೇಜ್ ತುಂಬಿ ನೀರು ರಸ್ತೆಯಲ್ಲಿ ಹರಿದಿದ್ದು, ದ್ವಿಚಕ್ರ ವಾಹನ ಸವಾರರು ಪರದಾಡಿದ್ದಾರೆ....

ನಾಯಿಗಳಿಗೆ ಹೆದರಿ ನೇಗಿಲು ಸಹಿತ 30 ಅಡಿ ಪಾಳು ಬಾವಿಗೆ ಬಿದ್ದ ಎತ್ತುಗಳು

4 months ago

ಕೋಲಾರ: ಉಳುಮೆ ಮಾಡುವ ವೇಳೆ ನಾಯಿಗಳಿಗೆ ಬೆದರಿದ ಎತ್ತುಗಳು ನೇಗಿಲು ಸಹಿತ 30 ಅಡಿ ಆಳದ ಪಾಳು ಬಾವಿಗೆ ಬಿದ್ದ ಘಟನೆ ಬಂಗಾರಪೇಟೆ ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಜೀಡಮಾಕನಪಲ್ಲಿ ಗ್ರಾಮದ ನಿವಾಸಿ ರೈತ ಮುನಿಯಪ್ಪ ಎಂಬವರ ಎತ್ತುಗಳು ಪಾಳು ಬಾವಿಗೆ ಬಿದ್ದು...