Saturday, 23rd September 2017

Recent News

2 days ago

ಕರ್ನಾಟಕಕ್ಕೆ ಮತ್ತೆ ಕಾವೇರಿ ಆತಂಕ: ಫೆಬ್ರವರಿಯಲ್ಲಿ ಆಗುತ್ತಾ ಎಲ್ಲಾ ನಿರ್ಣಯ?

ನವದೆಹಲಿ: ಕಾವೇರಿ ನ್ಯಾಯಮಂಡಳಿಯ 2007ರ ಐತೀರ್ಪು ಪ್ರಶ್ನಿಸಿ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸುವ ಇಂಗಿತ ವ್ಯಕ್ತಪಡಿಸಿದೆ. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ 4 ರಾಜ್ಯಗಳ ವಾದ ಆಲಿಸಿ 2 ವಾರಗಳಲ್ಲಿ ದಾಖಲೆ ಒದಗಿಸುವಂತೆ ಕಾಲಾವಕಾಶ ನೀಡಿದೆ. ಆದರೆ ಇದಕ್ಕೆ ಕೇಂದ್ರ ಸರ್ಕಾರ ಆಕ್ಷೇಪ ಎತ್ತಿದ್ದು, ಕರ್ನಾಟಕದ ವಾದಕ್ಕೆ ಬೆಂಬಲ ನೀಡಿದೆ. ಕೋರ್ಟ್ ಕಲಾಪ ಹೀಗಿತ್ತು: ತಮಿಳುನಾಡಿನ ಶೇಖರ್ ನಾಫಡೆ ಅವರು ಕಾವೇರಿ ನಿರ್ವಹಣಾ ಮಂಡಳಿ […]

4 days ago

ಸಿಎಂ ಎಲ್ಲೇ ನಿಂತರೂ ಗೆದ್ದೇ ಗೆಲ್ತಾರೆ: ಸಂತೋಷ್ ಲಾಡ್

ಧಾರವಾಡ: ಜನಮೆಚ್ಚಿದ ನಾಯಕರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ರಾಜ್ಯದ ಯಾವ ಕ್ಷೇತ್ರದಲ್ಲಿ ಚುನಾವಣೆಗೆ ನಿಂತರೂ ಅವರು ಗೆದ್ದೇ ಗೆಲ್ಲುತ್ತಾರೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ಸಿದ್ದರಾಮಯ್ಯನವರು ನನ್ನ ಕ್ಷೇತ್ರಕ್ಕೆ ಬರುತ್ತೇನೆ ಎಂದು ಹೇಳಿದರೆ ನಾನು ಕ್ಷೇತ್ರ ಬಿಟ್ಟು ಕೊಡಲು ಸಿದ್ಧ ಎಂದರು. ನಮ್ಮ ಸಿಎಂ ಪ್ರಚಾರ...

ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟಕ್ಕೆ ಹಿನ್ನಡೆ, ಎಂಬಿ ಪಾಟೀಲ್‍ಗೆ ಭಾರೀ ಮುಖಭಂಗ

2 weeks ago

ತುಮಕೂರು: ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟಕ್ಕೆ ತೀವ್ರ ಹಿನ್ನಡೆಯಾಗಿದ್ದು, ತಮ್ಮ ಹೇಳಿಕೆಯನ್ನ ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ತಿರುಚಿದ್ದಾರೆ ಅಂತ ಸಿದ್ದಗಂಗಾ ಮಠ ಅಧಿಕೃತ ಪ್ರಕಟಣೆ ಹೊರಡಿಸಿದೆ. ಲಿಂಗಾಯತ-ವೀರಶೈವ ಎರಡು ಒಂದೇ, ಧರ್ಮವನ್ನ ಒಡೆಯಬೇಡಿ ಎಂದು ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಸಚಿವ...

ಇತಿಹಾಸಕಾರ ರಾಮಚಂದ್ರ ಗುಹಾಗೆ ಕರ್ನಾಟಕ ಬಿಜೆಪಿಯಿಂದ ಲೀಗಲ್ ನೋಟಿಸ್

2 weeks ago

ನವದೆಹಲಿ: ಪತ್ರಕರ್ತೆ ವಿಚಾರವಾದಿ ಗೌರಿ ಲಂಕೇಶ್ ಹತ್ಯೆಯ ಹಿಂದೆ ಸಂಘ ಪರಿವಾರ ವ್ಯಕ್ತಿಗಳ ಕೈವಾಡ ಇದೆ ಎಂದು ಆರೋಪಿಸಿದ್ದಕ್ಕೆ ಇತಿಹಾಸಕಾರ ರಾಮಚಂದ್ರ ಗುಹಾ ಅವರಿಗೆ ಕರ್ನಾಟಕ ಬಿಜೆಪಿಯು ಲೀಗಲ್ ನೋಟಿಸ್ ಕಳುಹಿಸಿದೆ. ಬಿಜೆಪಿ ಯುವ ಮೋರ್ಚಾದ ಕಾಯದರ್ಶಿ ಕರುಣಾಕರ್ ಅವರು ಲೀಗಲ್...

ರಾಜ್ಯದಲ್ಲಿ ಭಾರೀ ಮಳೆ- ಸಿಡಿಲ ಆರ್ಭಟಕ್ಕೆ ಮೂರು ಜನರ ಸಾವು

2 weeks ago

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಭರ್ಜರಿಯಾಗಿಯೇ ಸುರಿಯುತ್ತಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ಅಥಣಿ, ರಾಯಬಾಗ, ಬೈಲಹೊಂಗಲ ಪಟ್ಟಣದಲ್ಲಂತೂ ಮಳೆರಾಯ ಅಕ್ಷರಶಃ ಆರ್ಭಟ ತೋರಿದ್ದಾನೆ. ಇಂಚಲ ಗ್ರಾಸ್‍ನಲ್ಲಿ ಬೈಕ್‍ವೊಂದು ಕೊಚ್ಚಿ ಹೋಗ್ತಿದ್ರೆ, ಇನ್ನೊಬ್ಬರು ತನ್ನ ಬೈಕ್ ಹಿಡಿಯಲು ಒದ್ದಾಡುತ್ತಿದ್ದ ದೃಶ್ಯ ಕಂಡುಬಂತು....

ಬಿಜೆಪಿ, ಆರ್‍ಎಸ್‍ಎಸ್ ವಿರುದ್ಧ ಮಾತನಾಡೋ ಮಂದಿಯ ವಿರುದ್ಧ ದಾಳಿ: ರಾಹುಲ್ ಗಾಂಧಿ

2 weeks ago

ನವದೆಹಲಿ: ಬಿಜೆಪಿ ಮತ್ತು ಆರ್‍ಎಸ್‍ಎಸ್ ಸಿದ್ಧಾಂತ ವಿರುದ್ಧ ಮಾತನಾಡುವವರ ಮೇಲೆ ಹಲ್ಲೆ, ದಾಳಿ ಆಗುತ್ತಿದ್ದು, ಅಷ್ಟೇ ಅಲ್ಲದೇ ಅವರ ಹತ್ಯೆ ನಡೆಯುತ್ತಿದೆ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಗೌರಿ ಲಂಕೇಶ್ ಹತ್ಯೆಯ ಹಿನ್ನೆಲೆಯಲ್ಲಿ ಮಾಧ್ಯಗಳ ಜೊತೆ ಮಾತನಾಡಿದ ಅವರು,...

ಮಂಗಳೂರು ಚಲೋಗೆ ‘ಹ್ಯಾಂಡ್’ ಬ್ರೇಕ್: ಶನಿವಾರ ಕರ್ನಾಟಕ ಬಂದ್?

3 weeks ago

ಬೆಂಗಳೂರು: ಯುವ ಮೋರ್ಚಾದ ಮಂಗಳೂರು ಚಲೋ ಬೈಕ್ ರ‍್ಯಾಲಿಗೆ ಅನುಮತಿ ನೀಡದ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿರುವ ರಾಜ್ಯ ಬಿಜೆಪಿ ನಾಯಕರು ಸೆಪ್ಟೆಂಬರ್ 9 ರಂದು ಕರ್ನಾಟಕ ಬಂದ್ ನಡೆಸಲು ಚಿಂತನೆ ನಡೆಸಿದ್ದಾರೆ. ಬೆಂಗಳೂರು ಮತ್ತು ರಾಜ್ಯದ ಹಲವು ಕಡೆಗಳಲ್ಲಿ ನಾಯಕರು ಮತ್ತು ಕಾರ್ಯಕರ್ತರನ್ನು...

ಸಿಎಂ ಸಿದ್ದರಾಮಯ್ಯ ಬೇನಾಮಿ ಆಸ್ತಿ: ಐಟಿಯಿಂದ ತನಿಖೆ ಆರಂಭ

3 weeks ago

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೊಂದಿದ್ದಾರೆ ಎನ್ನಲಾದ ಬೇನಾಮಿ ಆಸ್ತಿಯ ತನಿಖೆಗೆ ಆದಾಯ ತೆರಿಗೆ ಇಲಾಖೆ ಮುಂದಾಗಿದೆ. ಆರ್‍ಟಿಐ ಕಾರ್ಯಕರ್ತ ರಾಮಮೂರ್ತಿ ಎಂಬವರು ದೂರು ನೀಡಿದ ಆಧಾರದ ಮೇಲೆ ಐಟಿ ಈಗ ಸಿಎಂ ಆಸ್ತಿಯ ತನಿಖೆ ಇಳಿದಿದೆ. ಮುಖ್ಯಮಂತ್ರಿ ಆದ ಮೇಲೆ ಸಿದ್ದರಾಮಯ್ಯ...