Wednesday, 22nd November 2017

Recent News

23 hours ago

ಮಂತ್ರಿಗಳು, ಸರ್ಕಾರಿ ಅಧಿಕಾರಿಗಳ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದುವುದು ಕಡ್ಡಾಯ!

ಬೆಂಗಳೂರು: ಕನ್ನಡ ಉಳಿಸುವ ನಿಟ್ಟಿನಲ್ಲಿ ಸರ್ಕಾರದ ಮಂತ್ರಿಗಳ ಮಕ್ಕಳು ಕಡ್ಡಾಯವಾಗಿ ಸರ್ಕಾರಿ ಶಾಲೆಯಲ್ಲಿ ಓದುವ ಮಸೂದೆಯನ್ನು ಮಂಡಿಸಲು ರಾಜ್ಯಸರ್ಕಾರ ಮುಂದಾಗಿದೆ. ಸರ್ಕಾರಿ ನೌಕರರ, ರಾಜ್ಯದ ಮುಖ್ಯಮಂತ್ರಿಗಳ ಮತ್ತು ಕ್ಯಾಬಿನೆಟ್ ಸಚಿವರ ಮಕ್ಕಳು ಕಡ್ಡಾಯವಾಗಿ ಸರ್ಕಾರಿ ಶಾಲೆಯಲ್ಲಿ ಓದಿಸುವ ಮಸೂದೆಯನ್ನು ಪರಿಷತನ್ ನಲ್ಲಿ ಮಂಡಿಸಲಾಗುವುದು ಎಂದು ಕರ್ನಾಟಕ ಸರ್ಕಾರದ ಕರ್ನಾಟಕ ವಾರ್ತೆ ತನ್ನ ಅಧಿಕೃತ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿ ತಿಳಿಸಿದೆ. ಕರ್ನಾಟಕ ವಾರ್ತೆ ಮಂಗಳವಾರ ಮಧ್ಯಾಹ್ನ 2.56ಕ್ಕೆ ಟ್ವೀಟ್ ಮಾಡಿ ಈ ವಿಚಾರವನ್ನು ತಿಳಿಸಿದ್ದರೂ ನಂತರ ಈ […]

1 week ago

ಬೆಂಗ್ಳೂರಿನಲ್ಲಿ ಕನ್ನಡದ ಹೆಸರಲ್ಲಿ ಹೆಚ್ಚುತ್ತಿದೆ ದಾಂಧಲೆ!

ಬೆಂಗಳೂರು: ನಗರದಲ್ಲಿ ಕನ್ನಡ ಪರ ಹೋರಾಟ ನಡೆಸುತ್ತಿದ್ದೇವೆ ಎಂದು ಹೇಳಿಕೊಂಡು ಜನ ಸಾಮಾನ್ಯರ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ತಾಜಾ ಉದಾಹರಣೆ ಎಂಬಂತೆ ನಗರದ ಹುಳಿಮಾವಿನ ಪ್ರದೇಶದಲ್ಲಿ ಇಂತಹದ್ದೇ ಘಟನೆ ನಡೆದಿದೆ. ಅಂಗಡಿಯ ಮುಂದೇ ಕನ್ನಡದಲ್ಲೇ ಬೋರ್ಡ್ ಹಾಕಬೇಕೆಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಸಂಘಟನೆಯ ಕಾರ್ಯಕರ್ತರು ದಾಂಧಲೆ ನಡೆಸಿದ್ದಾರೆ. ಹುಳಿಮಾವಿನ ಬಳಿ ಇರುವ...

ಹರಾಜಿಗಿದೆ ಸ್ಯಾಂಡಲ್‍ವುಡ್ ನಟಿಯರ ಬಟ್ಟೆ: ಖರೀದಿ ಹೇಗೆ?

2 weeks ago

ಬೆಂಗಳೂರು: ಸ್ಯಾಂಡ್‍ಲ್‍ವುಡ್ ಮಹಿಳಾ ಅಭಿಮಾನಿಗಳಿಗೆ ಗುಡ್ ನ್ಯೂಸ್. ಬಹಳಷ್ಟು ಮಂದಿ ನಟಿಯರಿಗೆ ಅವರದ್ದೇ ಆದ ಮಹಿಳಾ ಅಭಿಮಾನಿಗಳಿದ್ದಾರೆ. ಈಗ ಈ ಮಹಿಳಾ ಅಭಿಮಾನಿಗಳಿಗಾಗಿ ನಟಿಯರು ತಮ್ಮ ಡ್ರೆಸ್ ಮಾರಾಟ ಮಾಡಲು ಮುಂದಾಗಿದ್ದಾರೆ. ಹೌದು, ನಟಿಯರು ಅಂದ್ರೆ ಡ್ರೆಸ್ ಗಳಿಗೆ ಕೊರತೆ ಇರುವುದಿಲ್ಲ....

ಹಿಂದಿ ಬರ್ತಿಲ್ಲಾ ಅಂತಾ ಉಬರ್ ಚಾಲಕನನ್ನು ಥಳಿಸಿದ ಯುವಕರು

2 weeks ago

ಬೆಂಗಳೂರು: ನಗರದ ಉಬರ್ ಚಾಲಕರೊಬ್ಬರಿಗೆ ಹಿಂದಿ ಭಾಷೆ ಬಂದಿಲ್ಲ ಎಂದು ಮೂವರು ಯುವಕರು ಹಲ್ಲೆಗೈದಿರುವ ಘಟನೆ ಶೇಷಾದ್ರಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಜಗದೀಶ್ ಹಲ್ಲೆಗೊಳಗಾದ ಉಬರ್ ಚಾಲಕ. ಶನಿವಾರ ರಾತ್ರಿ ಹೆಬ್ಬಾಳದಿಂದ ಮೂವರು ಯುವಕರನ್ನು ಜಗದೀಶ್ ಪಿಕ್ ಮಾಡಿ, ಐಸಿಸ್...

ಗೂಗಲ್ ನಕ್ಷೆಯಲ್ಲೂ ಕನ್ನಡ ಕಲರವ ಆರಂಭ

3 weeks ago

ಬೆಂಗಳೂರು: ಜಗತ್ತಿನ ಅತೀ ದೊಡ್ಡ ಸರ್ಚ್ ಎಂಜಿನ್ ಗೂಗಲ್ ನಕ್ಷೆಯಲ್ಲಿ ಸ್ಥಳಗಳ ಹೆಸರು ಕನ್ನಡದಲ್ಲಿ ಕಾಣಿಸಿಕೊಂಡಿದೆ. ಇನ್ನೂ ಮುಂದೆ ಇಂಗ್ಲಿಷ್ ಸೇರಿದಂತೆ ಪ್ರಾದೇಶಿಕ ಭಾಷೆಯಲ್ಲೂ ಸ್ಥಳಗಳ ಹೆಸರುಗಳು ಕಾಣಿಸಿಕೊಳ್ಳುತ್ತವೆ. ಹೌದು, ಇನ್ನೂ ಗೂಗಲ್ ನಕ್ಷೆಯಲ್ಲಿ ಸರ್ಚ್ ಮಾಡುವ ಸಂದರ್ಭದಲ್ಲಿ ಸ್ಥಳಗಳ ಹೆಸರು...

ಕನ್ನಡ ರಾಜ್ಯೋತ್ಸವದಂದು ಕ್ಷಮೆ ಕೋರಿದ ಕಿಚ್ಚ ಸುದೀಪ್!

3 weeks ago

ಬೆಂಗಳೂರು: ಕನ್ನಡ ರಾಜ್ಯೋತ್ಸವದ ದಿನವಾದ ಇಂದು ಟ್ಟಿಟ್ಟರ್‍ನಲ್ಲಿ ಆದ ಕಾಗುಣಿತ ದೋಷ ಸರಿಪಡಿಸಿಕೊಂಡು ನಟ ಸುದೀಪ್ ಅಭಿಮಾನಿಗಳ ಕ್ಷಮೆ ಕೋರಿದ್ದಾರೆ. ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಟ ಸುದೀಪ್ ಕನ್ನಡದಲ್ಲಿ ಟ್ವೀಟ್ ಮಾಡಿ ಶುಭಾಶಯ ಹೇಳಿದ್ದರು. ಆದರೆ ಇದರಲ್ಲಿ ಕಾಗುಣಿತ ದೋಷವಿದ್ದ ಹಿನ್ನೆಲೆಯಲ್ಲಿ...

ಭಾಷೆ, ನೆಲ, ಜಲಕ್ಕೆ ಸಂಬಂಧಿಸಿದ ಪ್ರಶ್ನೆ ಎದುರಾದಾಗ ನಮ್ಮೆಲ್ಲರದ್ದು ಒಂದೇ ಪಕ್ಷ: ಸಿಎಂ

3 weeks ago

ಬೆಂಗಳೂರು: ಕನ್ನಡ ಕಾವಲು ಸಮಿತಿ ಅಧ್ಯಕ್ಷನಾಗಿ ರಾಜಕೀಯ ಜೀವನ ಪ್ರಾರಂಭಿಸಿದ್ದ ನಾನು ಅಲ್ಲಿಂದ ಇಲ್ಲಿಯ ವರೆಗೆ ನಾಡು-ನುಡಿ ಬಗ್ಗೆ ರಾಜಿಮಾಡಿಕೊಂಡಿಲ್ಲ. ಭಾಷೆ, ನೆಲ, ಜಲಕ್ಕೆ ಸಂಬಂಧಿಸಿದ ಪ್ರಶ್ನೆ ಎದುರಾದಾಗ ನಮ್ಮೆಲ್ಲರದ್ದು ಒಂದೇ ಪಕ್ಷ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಕನ್ನಡ ರಾಜ್ಯೋತ್ಸವದ...

62ನೇ ಕನ್ನಡ ರಾಜ್ಯೋತ್ಸವ ಸಂಭ್ರಮ- ಲಹರಿ ಸಂಗೀತ ಸಂಸ್ಥೆಯಿಂದ `ಅಮ್ಮಾ ಕಾವೇರಿ` ಹಾಡು ಸಮರ್ಪಣೆ

3 weeks ago

ಬೆಂಗಳೂರು: ಕನ್ನಡ ಎನ್ನುವುದು ಬರೀ ಭಾಷೆ ಮಾತ್ರ ಅಲ್ಲ. ಇಲ್ಲಿಯ ನೆಲ, ಜಲ ಕನ್ನಡದ ಜೊತೆಜೊತೆಗೆ ಬಂದು ನಿಲ್ಲುತ್ತವೆ. ಕನ್ನಡ ಮಾತಾಡುವುದು, ಕನ್ನಡ ಉಳಿಸುವುದು ಮತ್ತು ಬೆಳೆಸುವುದು ಎಷ್ಟು ಮುಖ್ಯವೋ ಅದೇ ರೀತಿ ಇಲ್ಲಿಯ ನೆಲ-ಜಲವನ್ನು ರಕ್ಷಣೆ ಮಾಡಬೇಕಾದದ್ದು ನಮ್ಮೆಲ್ಲರ ಕರ್ತವ್ಯ....