Sunday, 19th November 2017

Recent News

2 weeks ago

ವಿಡಿಯೋ: ಮಂಚದ ಸಮೇತ 8 ಕಿ.ಮೀ ದೂರ ಬಾಣಂತಿಯನ್ನು ಹೊತ್ತು ಸಾಗಿದ ಡಾಕ್ಟರ್

ಭುವನೇಶ್ವರ: ವೈದ್ಯರು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಬರದೆ, ಸೂಕ್ತ ಚಿಕಿತ್ಸೆ ನೀಡದೆ ಅಥವಾ ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿಗಳು ಬಲಿಯಾದ ಬಗ್ಗೆ ಸಾಕಷ್ಟು ಸುದ್ದಿಯಾಗುತ್ತಲೇ ಇರುತ್ತದೆ. ಆದರೆ ಇಲ್ಲೊಬ್ಬ ವೈದ್ಯರು ಸುಮಾರು 8 ಕಿ.ಮೀ ದೂರ ಬಾಣಂತಿಯೊಬ್ಬರನ್ನು ಮಂಚದ ಸಮೇತ ಹೊತ್ತೊಯ್ದು ಮಾದರಿಯಾಗಿದ್ದಾರೆ. ಈ ಘಟನೆ ಒಡಿಶಾದ ಮಲ್ಕಾಂಗಿರಿ ಜಿಲ್ಲೆಯ ಸರಿಗೆಟಾ ಎಂಬ ಕುಗ್ರಾಮದಲ್ಲಿ ನಡೆದಿದೆ. ಜಿಲ್ಲೆಯ ಪಾಪ್ಲುರ್ ಆಸ್ಪತ್ರೆಯಲ್ಲಿ ವೈದ್ಯರಾಗಿರೋ ಡಾ. ಓಂಕಾರ್ ಹೋಟಾ ಅವರು ಬಾಣಂತಿಯನ್ನ 8 ಕಿ.ಮೀ ದೂರದ ಗ್ರಾಮದಿಂದ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. […]

1 month ago

ಹೆಡ್ ಮಾಸ್ಟರ್ ನಿಂದ್ಲೇ ರೇಪ್- ಗರ್ಭಿಣಿಯಾಗಿದ್ದಕ್ಕೆ ಗ್ರಾಮದಿಂದಲೇ ಬಾಲಕಿ ಕುಟುಂಬಕ್ಕೆ ಬಹಿಷ್ಕಾರ

ಭುವನೇಶ್ವರ್: ಮೂರು ವಾರಗಳ ಹಿಂದೆ ಶಾಲೆಯ ಮುಖ್ಯೋಪಾದ್ಯಾಯನೊಬ್ಬ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಆಕೆಯನ್ನು ಗರ್ಭವತಿ ಮಾಡಿ ಜೈಲಿಗೆ ಹೋದ ಘಟನೆ ಒಡಿಶಾದ ಕೊರತ್ ಪುತ್ ಜಿಲ್ಲೆಯಲ್ಲಿ ನಡೆದಿದೆ. ಮದುವೆಯ ಮುಂಚೆ ಬಾಲಕಿ ಗರ್ಭವತಿ ಆಗಿರುವ ವಿಷಯ ತಿಳಿದು ಗ್ರಾಮಸ್ಥರು ಬಾಲಕಿಯ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದಾರೆ. ಅಕ್ಟೋಬರ್ ತಿಂಗಳ ಮೊದಲು ಕೊರತ್ ಪುತ್ ಜಿಲ್ಲೆಯ ನಂದಾಪುರ್ ಬ್ಲಾಕ್...

ಗರ್ಭಿಣಿಯನ್ನ ಜೋಳಿಗೆಯಲ್ಲೇ 16 ಕಿ.ಮೀ ಹೊತ್ತೊಯ್ದರು!

4 months ago

ಕಲಹಂಡಿ: ಈ ಹಿಂದೆ ಒಡಿಶಾದಲ್ಲಿ ವೈದ್ಯಕೀಯ ನಿರ್ಲಕ್ಷ್ಯ ಮತ್ತು ಆರೋಗ್ಯ ಸೇವೆ ವೈಫಲ್ಯವಾಗಿರುವುದರ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ. ಆದ್ರೆ ಇದೀಗ ಕಾರಣಾಂತರಗಳಿಂದ ಆಂಬುಲೆನ್ಸ್ ಬರಲು ಸಾಧ್ಯವಾಗದೆ ಜೋಳಿಗೆಯಲ್ಲೇ ತುಂಬು ಗರ್ಭಿಣಿಯನ್ನು ಹೊತ್ತೊಯ್ದ ಹೃದಯವಿದ್ರಾವಕ ಘಟನೆಯೊಂದು ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ....

ಕಾಂಗ್ರೆಸ್ ಮುಕ್ತ ಭಾರತದ ಬಳಿಕ ಮೋದಿ, ಅಮಿತ್ ಶಾ ಹೊಸ ಟಾರ್ಗೆಟ್ ಇದು

7 months ago

ನವದೆಹಲಿ: ಕಾಂಗ್ರೆಸ್ ಮುಕ್ತ ಭಾರತದ ಗುರಿ ಹಾಕಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮುಂದೆ ಪ್ರಾದೇಶಿಕ ಪಕ್ಷ ಮುಕ್ತ ಭಾರತವನ್ನು ನಿರ್ಮಿಸುವ ಗುರಿಯನ್ನು ಹಾಕಿಕೊಂಡಿದ್ದಾರೆ. ಪ್ರಾದೇಶಿಕ ಪಕ್ಷ ಮುಕ್ತ ಭಾರತದ ಮೊದಲ ಹೆಜ್ಜೆಯಾಗಿ ಒಡಿಶಾದಲ್ಲಿ ಭುವನೇಶ್ವರದಲ್ಲಿ...

ಎಐಸಿಸಿ ಹುದ್ದೆಗೆ ಬಿಕೆ ಹರಿಪ್ರಸಾದ್ ರಾಜೀನಾಮೆ ತಿರಸ್ಕರಿಸಿದ ಹೈಕಮಾಂಡ್

8 months ago

ಬೆಂಗಳೂರು: ಎಐಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಬಿಕೆ ಹರಿಪ್ರಸಾದ್ ನೀಡಿದ್ದ ರಾಜೀನಾಮೆಯನ್ನು ಕಾಂಗ್ರೆಸ್ ಹೈಕಮಾಂಡ್ ಅಂಗೀಕಾರ ಮಾಡಿಲ್ಲ. ಒಡಿಶಾ ರಾಜ್ಯದ ಸ್ಥಳೀಯ ಚುನಾವಣೆಯಲ್ಲಿ ಸೋಲು ಅನುಭವಿಸಿದ ಹಿನ್ನಲೆಯಲ್ಲಿ ಮಾ. 9ರಂದು ಬಿ.ಕೆ. ಹರಿಪ್ರಸಾದ್ ರಾಜೀನಾಮೆ ನೀಡಿದ್ದರು. ಆದ್ರೆ ಬಿ.ಕೆ. ಹರಿಪ್ರಸಾದ್ ರಾಜೀನಾಮೆಯನ್ನು...