Thursday, 14th December 2017

Recent News

3 days ago

ಕಲ್ಯಾಣ ಮಂಟಪಕ್ಕೆ ಜೀನ್ಸ್ ಪ್ಯಾಂಟ್ ಹಾಕ್ಕೊಂಡು ಬಂದ ಹುಡ್ಗಿಯನ್ನ ಯಾರಾದ್ರು ಮದ್ವೆ ಆಗ್ತಾರಾ: ಕೇಂದ್ರ ಸಚಿವ

ಲಕ್ನೋ: ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಖಾತೆಯ ರಾಜ್ಯ ಸಚಿವ ಸತ್ಯಪಾಲ್ ಸಿಂಗ್ ಅವರು ಹೆಣ್ಣು ಮಕ್ಕಳ ಉಡುಪಿನ ಬಗ್ಗೆ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ಮದುವೆ ಮಂಟಪಕ್ಕೆ ಹೆಣ್ಣುಮಕ್ಕಳು ಜೀನ್ಸ್ ಪ್ಯಾಂಟ್ ಹಾಕಿಕೊಂಡು ಬಂದಲ್ಲಿ ಯಾವ ಹುಡುಗನೂ ಆಕೆಯನ್ನು ಮದುವೆಯಾಗಲು ಒಪ್ಪಲ್ಲ ಅಂತ ಹೇಳಿದ್ದಾರೆ. ಗೊರಖ್ ಪುರದ ಮಹರಾಣಾ ಪ್ರತಾಪ್ ಶಿಕ್ಷಾ ಪರಿಷದ್ ನಲ್ಲಿ ನಡೆದ ಸ್ಥಾಪನಾ ದಿನಾಚರಣೆಯ ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಸಂದರ್ಭದಲ್ಲಿ ಸಚಿವರು ಈ ಹೇಳಿಕೆಯನ್ನು ನೀಡಿದ್ದಾರೆ. ತಮ್ಮ ಭಾಷಣದ ವೇಳೆ ಭಾರತೀಯ […]

7 days ago

ವಿಡಿಯೋ: ಕಾಲೇಜಿಗೆ ಸರ್ಪ್ರೈಸ್ ವಿಸಿಟ್ ಕೊಟ್ಟ 40 ಕೆಜಿ ತೂಕದ ಹೆಬ್ಬಾವು- ಬರಿಗೈಯಲ್ಲೇ ಹಿಡಿದ ಪ್ರೊಫೆಸರ್!

ಅಲಹಾಬಾದ್: 12 ಅಡಿ ಉದ್ದದ ಹೆಬ್ಬಾವೊಂದು ಕಾಲೇಜು ಆವರಣದಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ ಘಟನೆ ಬುಧವಾರದಂದು ಉತ್ತರಪ್ರದೇಶದ ಅಲಹಾಬಾದ್‍ನಲ್ಲಿ ನಡೆದಿದೆ. ಇಲ್ಲಿನ ಶ್ಯಾಮ ಪ್ರಸಾದ್ ಮುಖರ್ಜಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಹಾವು ಕಾಣಿಸಿಕೊಂಡಿತ್ತು. ಆಶ್ಚರ್ಯವೆಂಬಂತೆ ಕಾಲೇಜಿನ ಪ್ರಾಧ್ಯಾಪಕರೇ ಈ 40 ಕೆಜಿ ತೂಕದ ಹಾವನ್ನ ರಕ್ಷಣೆ ಮಾಡಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಹಾವನ್ನ ರಕ್ಷಿಸಿದ...

ಮುಂಬೈ ಸ್ಫೋಟದ ರೂವಾರಿ ಹಫೀಜ್ ಸಯೀದ್ ಬಿಡುಗಡೆ-ಉತ್ತರ ಪ್ರದೇಶದಲ್ಲಿ ಸಂಭ್ರಮಾಚರಣೆ

3 weeks ago

ಲಕ್ನೋ: ಮುಂಬೈ ಸ್ಫೋಟದ ರೂವಾರಿ ಹಾಗೂ ಲಷ್ಕರ್ ಎ ತೊಯಿಬಾ ಸಂಘಟನೆಯ ಸಂಸ್ಥಾಪಕ ಮುಖಂಡನಾದ ಹಫೀಜ್ ಸಯೀದ್ ಬಿಡುಗಡೆ ಭಾಗ್ಯ ಸಿಕ್ಕಿದ ಬೆನ್ನಲ್ಲೇ ಉತ್ತರ ಪ್ರದೇಶದ ಯುವಕರ ಗುಂಪೊಂದು ಸಯೀದ್ ಬಿಡುಗಡೆಯಾಗಿದ್ದಕ್ಕೆ ಸಂಭ್ರಮಾಚರಣೆ ನಡೆಸಿರುವ ಕುರಿತು ಮಾಧ್ಯಮವೊಂದು ವರದಿ ಮಾಡಿದೆ. ಉತ್ತರ...

ಬಿಜೆಪಿಗೆ ಮತ ಹಾಕಿ ಇಲ್ಲವೇ ಪರಿಣಾಮ ಎದುರಿಸಿ- ಮುಸ್ಲಿಮರಿಗೆ ಬಿಜೆಪಿ ಮುಖಂಡ ಎಚ್ಚರಿಕೆ

4 weeks ago

ಲಕ್ನೋ: ನಿಮ್ಮ ಮತವನ್ನು ಬಿಜೆಪಿ ಪಕ್ಷಕ್ಕೆ ನೀಡಿ. ಇಲ್ಲವೆಂದಲ್ಲಿ ಮುಂದೆ ಬರಲಿರುವ ಪರಿಣಾಮವನ್ನು ನೀವೇ ಎದುರಿಸಲಿದ್ದೀರಿ ಅಂತ ಉತ್ತರಪ್ರದೇಶದ ಬಿಜೆಪಿ ಮುಖಂಡ ರಂಜೀತ್ ಕುಮಾರ್ ಶ್ರೀವತ್ಸವ್ ಮುಸ್ಲಿಮರಿಗೆ ಎಚ್ಚರಿಕೆ ನೀಡಿರುವ ವಿಡಿಯೋ ಒಂದು ಈಗ ವೈರಲ್ ಆಗಿದೆ. ರಂಜೀತ್ ಪತ್ನಿ ಬರಾಬಂಕಿ...

ಸಚಿವರ ಕಾಲು ಒತ್ತಿ ಮಸಾಜ್ ಮಾಡಿದ ಬಿಜೆಪಿ ಕಾರ್ಯಕರ್ತರು- ವಿಡಿಯೋ ವೈರಲ್

4 weeks ago

ಲಕ್ನೋ: ಅಲಹಾಬಾದ್‍ನಲ್ಲಿ ಚುನಾವಣಾ ಪ್ರಚಾರಕ್ಕಾಗಿ ಓಡಾಡಿ ಸುಸ್ತಾಗಿದ್ದ ಸಂಪುಟ ಸಚಿವರಿಗೆ ಬಿಜೆಪಿ ಕಾರ್ಯಕರ್ತರು ಕಾಲಿನ ಮಸಾಜ್ ಮಾಡಿದ್ದು, ಇದರ ವಿಡಯೋ ಇದೀಗ ವೈರಲ್ ಆಗಿದೆ. ಉತ್ತರಪ್ರದೇಶದ ಬಿಜೆಪಿ ಸಚಿವ ನಂದ ಗೋಪಾಲ್ ಗುಪ್ತಾ ಅವರಿಗೆ ಪಕ್ಷದ ಕಾರ್ಯಕರ್ತರು ಕಾಲು ಒತ್ತಿ ಮಸಾಜ್...

ವಾಟ್ಸಪ್, ಎಸ್‍ಎಂಎಸ್‍ನಲ್ಲೇ ಅಲಿಘರ್ ವಿವಿ ಪ್ರಾಧ್ಯಾಪಕನಿಂದ ತಲಾಖ್ – ಪತ್ನಿಯಿಂದ ಆತ್ಮಹತ್ಯೆ ಬೆದರಿಕೆ

1 month ago

ನವದೆಹಲಿ: ಸುಪ್ರೀಂಕೋರ್ಟ್ ಎರಡು ತಿಂಗಳ ಹಿಂದೆ ಮುಸ್ಲಿಮರ ತ್ರಿವಳಿ ತಲಾಕ್‍ಗೆ ನಿಷೇಧ ಹೇರಿರೋದು ನಿಮಗೆಲ್ಲಾ ಗೊತ್ತೇ ಇದೆ. ಆದ್ರೆ ತ್ರಿವಳಿ ತಲಾಖ್ ಭೂತ ಇನ್ನೂ ಕೊನೆಗೊಂಡಿಲ್ಲ. ಉತ್ತರಪ್ರದೇಶದ ಅಲಿಘಡ ಮುಸ್ಲಿಂ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಮತ್ತು ಸಂಸ್ಕೃತ ವಿಭಾಗದ ಮುಖ್ಯಸ್ಥ ಖಾಲಿದ್ ಬಿನ್...

ಎನ್‍ಟಿಪಿಸಿ ದುರಂತ- ಸಾವಿನ ಸಂಖ್ಯೆ 20ಕ್ಕೆ ಏರಿಕೆ, ರಾಯ್‍ಬರೇಲಿಯ ಆಸ್ಪತ್ರೆಗೆ ರಾಹುಲ್ ಗಾಂಧಿ ಭೇಟಿ

1 month ago

ಲಕ್ನೋ: ಉತ್ತರಪ್ರದೇಶದ ರಾಯ್‍ಬರೇಲಿಯಲ್ಲಿ ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮಕ್ಕೆ (ಎನ್‍ಟಿಪಿಸಿ)ಸೇರಿದ ಸ್ಥಾವರದಲ್ಲಿ ಬುಧವಾರದಂದು ಸ್ಫೋಟ ಸಂಭವಿಸಿದ್ದು, ಸಾವಿನ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ಈವರೆಗೆ 20 ಜನ ಮೃತಪಟ್ಟಿರುವುದಾಗಿ ಜಿಲ್ಲಾ ಆಡಳಿತ ದೃಢಪಡಿಸಿದೆ. ಘಟನೆಯಲ್ಲಿ 90 ರಿಂದ 100 ಮಂದಿ ಗಾಯಗೊಂಡಿದ್ದಾರೆ. ತೀವ್ರವಾಗಿ...

ಎನ್‍ಟಿಪಿಸಿ ಘಟಕದಲ್ಲಿ ಬಾಯ್ಲರ್ ಸ್ಫೋಟ: 10 ಸಾವು, 100 ಮಂದಿಗೆ ಗಾಯ

1 month ago

ನವದೆಹಲಿ: 30 ವರ್ಷ ಹಳೆಯ ರಾಷ್ಟ್ರೀಯ ಶಾಖೋತ್ಪನ್ನ ವಿದ್ಯುತ್ ನಿಗಮದ(ಎನ್‍ಟಿಪಿಸಿ) ಬಾಯ್ಲರ್ ಸ್ಫೋಟಗೊಂಡ ಪರಿಣಾಮ 10 ಮಂದಿ ಮೃತಪಟ್ಟು 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ರಾಯ್‍ಬರೇಲಿಯಲ್ಲಿ ನಡೆದಿದೆ. ಉಚಾಹಾರ್ ಘಟಕದಲ್ಲಿ ಈ ದುರಂತ ಸಂಭವಿಸಿದ್ದು, ಬಾಯ್ಲರ್ ಪೈಪ್...