Monday, 25th September 2017

Recent News

2 hours ago

ಹೊಟ್ಟೆ ನೋವೆಂದು ಆಸ್ಪತ್ರೆಗೆ ಹೋದ್ರೆ ಅತ್ಯಾಚಾರ ಪ್ರಕರಣ ಬಯಲಾಯ್ತು!

ಉಡುಪಿ: ಯುವತಿಯ ಮೇಲೆ ಅತ್ಯಾಚಾರ ನಡೆದ ವಿಚಾರ ಎಂಟು ತಿಂಗಳ ನಂತರ ಬೆಳಕಿಗೆ ಬಂದಿರುವ ಪ್ರಕರಣ ಉಡುಪಿ ಜಿಲ್ಲೆಯ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅತ್ಯಾಚಾರಕ್ಕೊಳಗಾದ ಯುವತಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಯುವತಿಯನ್ನು ಕೂಡಲೇ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ನೀಡಿದ ವೈದ್ಯರು ಯುವತಿ ಗರ್ಭವತಿಯಾಗಿರುವುದನ್ನು ಮನೆಯವರಿಗೆ ತಿಳಿಸಿದ್ದಾರೆ. ಕೆಲವೇ ಕ್ಷಣಗಳಲ್ಲಿ ಯುವತಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಕುಟುಂಬಸ್ಥರು ವಿಚಾರಣೆ ಮಾಡಿದಾಗ 8 ತಿಂಗಳ ಹಿಂದೆ ಭಾಸ್ಕರ್ ಆಚಾರಿ ಎಂಬ […]

1 day ago

14 ತಿಂಗಳು ನರಕ ಅನುಭವಿಸಿ ತವರಿಗೆ ಮರಳಿದ ಜೆಸಿಂತಾ

ಉಡುಪಿ: ಸಂಸಾರದ ಭಾರ ಹೊತ್ತು, ಸೌದಿ ಅರೆಬಿಯಾದಲ್ಲಿ ನರಕಯಾತನೆ ಅನುಭವಿಸುತ್ತಿದ್ದ ಜೆಸಿಂತಾ ಉಡುಪಿಗೆ ವಾಪಸ್ಸಾಗಿದ್ದಾರೆ. ಡಾ. ರವೀಂದ್ರನಾಥ ಶಾನುಭಾಗ್ ನೇತೃತ್ವದ ಮಾನವ ಹಕ್ಕುಗಳ ಪ್ರತಿಷ್ಟಾನದ ಹೋರಾಟಕ್ಕೆ ಜಯಗಳಿಸಿದೆ. ಕ್ರೂರಿ ಅರಬ್ಬಿಯ ಮನೆಯಲ್ಲಿ ಎಂಜಲು ತಿಂದ ದಿನಗಳನ್ನು ನೆನೆದು ಅವರು ಕಣ್ಣೀರಿಡುತ್ತಿದ್ದಾರೆ. ವೇದಿಕೆಯ ಮೇಲೆ ಕುಳಿತು ಕಣ್ಣೀರಿಡುತ್ತಿರುವ ಇವರು ಜೆಸಿಂತಾ. ಉಡುಪಿ ಜಿಲ್ಲೆಯ ಮುದರಂಗಡಿಯವರು. ಇವರು ಜೂನ್...

ಉಡುಪಿಯಲ್ಲೊಂದು ಇಂಟರ್‍ನ್ಯಾಶನಲ್ ಮ್ಯಾರೇಜ್!

3 days ago

ಉಡುಪಿ: ಜಿಲ್ಲೆಯ ಕುಂದಾಪುರದ ಕೋಟದಲ್ಲಿ ಇಂಟರ್‍ನ್ಯಾಶನಲ್ ಮ್ಯಾರೇಜ್ ಆಗಿದೆ. ನೇಪಾಳದ ಯುವಕ ಉಡುಪಿಯ ಕೋಟ ಮಣೂರಿನ ಯುವತಿಯನ್ನು ಮದುವೆಯಾಗಿದ್ದಾರೆ. ದಲಿತ ಸಮುದಾಯದ ಯುವತಿ ದೀಪಾ ಅವರು ನೇಪಾಳದ ಉಪೇನ್ ಡೈಮಾರಿ ಅವರನ್ನು ಕಳೆದ ಮೂರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಈಗ ಎರಡೂ...

ಮಣಿಪಾಲದಲ್ಲಿ ಗೂಳಿ ಮೇಲೆ ತಲ್ವಾರ್ ದಾಳಿ- ಚಿಂತಾಜನಕ ಸ್ಥಿತಿಯಲ್ಲಿ ಮೂಕ ಪ್ರಾಣಿ!

3 days ago

ಉಡುಪಿ: ಅಕ್ರಮ ಕಸಾಯಿಖಾನೆಗೆ ಕೊಂಡೊಯ್ಯಲು ತಲವಾರಿನಿಂದ ಗೂಳಿಗೆ ಕಡಿದ ಘಟನೆ ಉಡುಪಿಯ ಮಣಿಪಾಲದಲ್ಲಿ ನಡೆದಿದೆ. ಎರಡು ದಿನಗಳ ಹಿಂದೆ ಕಸಾಯಿಖಾನೆಯ ಗುಂಪೊಂದು ಮಣಿಪಾಲದಲ್ಲಿ ಹೊರಿಯನ್ನು ಟೆಂಪೋದೊಳಗೆ ತುಂಬಿಸಲು ಯತ್ನಿಸಿತ್ತು. ಈ ಸಂದರ್ಭ ಗೂಳಿ ಸಹಕರಿಸದಿದ್ದಾಗ ದುಷ್ಕರ್ಮಿಗಳು ತಲ್ವಾರಿನಿಂದ ಕಡಿದಿದ್ದಾರೆ. ತೀವ್ರ ಸ್ವರೂಪದಲ್ಲಿ...

ಕಚೇರಿಗೆ ನುಗ್ಗಿ ಯುವತಿಗೆ ದೊಣ್ಣೆಯಿಂದ ಹೊಡೆದು 2.50 ಲಕ್ಷ ರೂ. ದರೋಡೆ

5 days ago

ಉಡುಪಿ: ಕುಂದಾಪುರ ತಾಲೂಕಿನ ರಟ್ಟಾಡಿ ಗ್ರಾಮದಲ್ಲಿ ಯುವತಿಯ ಮೇಲೆ ದೊಣ್ಣೆಯಿಂದ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಕರ್ಮಿಗಳು 2.50 ಲಕ್ಷ ರೂ. ಹಣವನ್ನು ಕದ್ದಿದ್ದಾರೆ.   ಪ್ರೀತಿ(24) ಹಲ್ಲೆಗೆ ಒಳಗಾದ ಯುವತಿ. ಹೆಲ್ಮೆಟ್ ಹಾಕಿಕೊಂಡು ಬೈಕ್‍ನಲ್ಲಿ ಬಂದ ದುಷ್ಕರ್ಮಿಗಳು ಶ್ರೀಕ್ಷೇತ್ರ ಧರ್ಮಸ್ಥಳದ...

3 ಕೆಜಿ ಬೆಳ್ಳಿ ಕದ್ದಿದ್ದ 5 ನೇಪಾಳಿಗರು ಅರೆಸ್ಟ್

6 days ago

ಉಡುಪಿ: ಚಿನ್ನದಂಗಡಿಯಲ್ಲಿದ್ದ ಆಭರಣಗಳನ್ನು ಕಳವು ಮಾಡಿದ್ದ ಐವರು ನೇಪಾಳಿಗರನ್ನು ಉಡುಪಿ ಡಿಸಿಐಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಶಿವಾಸಿಂಗ್ ಬಹುದ್ದೂರ್, ಕಮರ್ ಸಿಂಗ್, ರಮೇಶ್ ಸಿಂಗ್ ಪಾರ್ಕಿ, ಹರ್ಕ್ ಬಹುದ್ದೂರ್ ಸೌದ್, ಮತ್ತು ಪ್ರೇಮ್ ಬಹುದ್ದೂರ್ ಸೌದ್ ಬಂಧಿತ ಆರೋಪಿಗಳು. ಬಂಧಿತರಿಂದ...

ಚಲಿಸುತ್ತಿದ್ದ ರೈಲಿನಲ್ಲಿ ಪಿಸ್ತೂಲ್ ತೋರಿಸಿ 4.11ಕಿಲೋ ಚಿನ್ನ ದರೋಡೆ!

6 days ago

ಉಡುಪಿ: ಚಲಿಸುತ್ತಿದ್ದ ರೈಲಿನಲ್ಲಿ ಪಿಸ್ತೂಲ್ ತೋರಿಸಿ ಚಿನ್ನ ದರೊಡೆ ಮಾಡಿದ ಘಟನೆ ಉಡುಪಿಯಲ್ಲಿ ನಡೆದಿದೆ. ಮುಂಬೈನಿಂದ ತಿರುವನಂತಪುರಕ್ಕೆ ತೆರಳುತ್ತಿದ್ದ ನೇತ್ರಾವತಿ ಎಕ್ಸ್ ಪ್ರೆಸ್ ರೈಲಿನಲ್ಲಿ ಈ ಘಟನೆ ನಡೆದಿದೆ. ಉಡುಪಿ ಜಿಲ್ಲೆಯ ಗಡಿಭಾಗ ಪಡುಬಿದ್ರೆ ಗ್ರಾಮವನ್ನು ಹಾದು ಹೋಗುತ್ತಿದ್ದ ವೇಳೆ ಚಿನ್ನದ...

ಅತ್ತೆ, ಮಾವನಿಗೆ ಸಟ್ಟುಗ ಬಿಸಿಮಾಡಿ ಬರೆ ಹಾಕಿ ಚಿತ್ರಹಿಂಸೆ ಕೊಟ್ಟಿದ್ದ ಸೊಸೆ ಅರೆಸ್ಟ್

7 days ago

ಉಡುಪಿ: ಅತ್ತೆ ಮಾವನನ್ನು ಚಿತ್ರಹಿಂಸೆ ಕೊಲೆಯತ್ನ ನಡೆಸಿದ್ದ ಸೊಸೆಯನ್ನ ಮಲ್ಪೆ ಠಾಣಾ ವ್ಯಾಪ್ತಿಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೌದು, ಹಲ್ಲೆಗೊಳಗಾದವರ ಮಕ್ಕಳಿಂದ ಅಶ್ವಿನಿ ಪೈ ವಿರುದ್ಧ ಕೇಸ್ ದಾಖಲಾಗಿತ್ತು. ದೂರಿನ ಹಿನ್ನೆಲೆಯಲ್ಲಿ ಮಲ್ಪೆಯ ನಿವಾಸದಲ್ಲಿದ್ದ ಅಶ್ವಿನಿಯನ್ನು ಪೊಲೀಸರು ಬಂಧಿಸಿದ್ದಾರೆ. ಏನು ಇದು...