Wednesday, 23rd August 2017

Recent News

3 days ago

ರೈಲು ಹತ್ತುವಾಗ ಕೂಲಿ ಅರಸಿ ಮೈಸೂರಿಗೆ ಬರುತ್ತಿದ್ದ ಕಾರ್ಮಿಕನ ಕೈ ಕಟ್!

ಮೈಸೂರು: ಕೂಲಿ ಅರಸಿ ಬಂದು ರೈಲು ಹತ್ತಲು ಹೋಗಿ ಕಾರ್ಮಿಕನೋರ್ವ ಕೈ ಕಳೆದುಕೊಂಡಿರುವ ಘಟನೆ ಜಿಲ್ಲೆಯ ನಂಜನಗೂಡಿನ ಸುಜಾತಪುರಂ ರೈಲ್ವೆ ನಿಲ್ದಾಣದ ಬಳಿ ನಡೆದಿದೆ. ಮೂಲತಃ ಶ್ರೀರಂಗಟಪಟ್ಟಣ ತಾಲೂಕಿನ ಕಡತನಾಳು ಗ್ರಾಮದ ಪರಮೇಶ್ (30) ಕೈ ಕಳೆದುಕೊಂಡ ಕಾರ್ಮಿಕ. ಪರಮೇಶ್ ಕೂಲಿ ಅರಸಿಕೊಂಡು ಪ್ರತಿ ದಿನ ಚಾಮರಾಜನಗರದಿಂದ ಮೈಸೂರಿಗೆ ಬರುವ ಪ್ಯಾಸೆಂಜರ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಸುಜಾತಪುರಂ ರೈಲ್ವೆ ನಿಲ್ದಾಣದಲ್ಲಿ ರೈಲು ಹತ್ತುವಾಗ ಆಯತಪ್ಪಿ ಕೆಳಗೆ ಬಿದ್ದು ತಮ್ಮ ಎಡಗೈಯನ್ನು ಕಳೆದುಕೊಂಡಿದ್ದಾರೆ. ಕೈ ಕಳೆದುಕೊಂಡ ನಂತರ […]

1 week ago

ಡಿಎಂಕೆ ಅಧ್ಯಕ್ಷ ಕರುಣಾನಿಧಿ ಆಸ್ಪತ್ರೆಗೆ ದಾಖಲು

  ಚೆನ್ನೈ: ತಮಿಳುನಾಡಿನ ವಿರೋಧ ಪಕ್ಷ ದ್ರಾವಿಡ ಮುನೇತ್ರ ಕಳಗಂ(ಡಿಎಂಕೆ) ಅಧ್ಯಕ್ಷ ಎಂ. ಕರುಣಾನಿಧಿ ಎಂಡೋಸ್ಕೋಪಿಕ್ ಪ್ರಕ್ರಿಯೆಗಾಗಿ ಬುಧವಾರದಂದು ಇಲ್ಲಿನ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕರುಣಾನಿಧಿ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಯ್ತು ಎಂದು ವರದಿಯಾಗಿದೆ. ದೀರ್ಘ ಕಾಲದಿಂದ ಕರುಣಾನಿಧಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. (ಪಕ್ರ್ಯೂಟೇನಿಯಸ್ ಎಂಡೋಸ್ಕೋಪಿಕ್ ಗ್ಯಾಸ್ಟ್ರೋನೊಮಿ) ಪಿಇಜಿ ಟ್ಯೂಬ್ ಬದಲಾವಣೆಗಾಗಿ ಕರುಣಾನಿಧಿಯವರನ್ನ...

ನಟ ಜಗ್ಗೇಶ್ ಮಗ ಗುರುರಾಜ್‍ಗೆ ಚಾಕು ಇರಿತ

1 week ago

ಬೆಂಗಳೂರು: ನಟ ಜಗ್ಗೇಶ್ ಅವರ ಮಗ ಗುರುರಾಜ್ ಅವರಿಗೆ ದುಷ್ಕರ್ಮಿಗಳು ಚಾಕು ಇರಿದು ಪರಾರಿಯಾಗಿದ್ದಾರೆ. ಭಾನುವಾರ ಸಂಜೆ ಗುರುರಾಜ್‍ಗೆ ಚಾಕು ಇರಿದಿದ್ದು, ಸದ್ಯ ಗುರು ಅವರನ್ನು ಆರ್.ಟಿ.ನಗರದ ಪೂರ್ಣಿಮಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಗುರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆಯ...

ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಜನ್ರು ಛೀ.. ಥೂ.. ಅನ್ನೋ ಕೆಲಸ ಎನಾಗಿದೆ ಗೊತ್ತಾ..?

2 weeks ago

ವಿಜಯಪುರ: ಸರ್ಕಾರಿ ಆಸ್ಪತ್ರೆ ಅಂದ್ರೆ ಸಾಕು ಜನಾ ಮೂಗು ಮುರಿಯುತ್ತಾರೆ. ಅಂತಹದರಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಜನ್ರು ಛೀ.. ಥೂ.. ಎನ್ನುವಂತಹ ಕೆಲಸ ನಡೆಯುತ್ತಿದೆ. ನಗರದ ಜಿಲ್ಲಾ ಆಸ್ಪತ್ರೆ ಹಿಂಭಾಗದಲ್ಲಿರುವ ಶವಾಗಾರದ ಎದುರು ದಿನನಿತ್ಯ ಮಾಂಸದ ತುಂಡುಗಳು ಬೀಳುತ್ತಿವೆ. ಪ್ರತಿದಿನ ನಡೆಯುವ ಶಸ್ತ್ರಚಿಕಿತ್ಸೆಯಲ್ಲಿ...

ಉತ್ತರಪ್ರದೇಶ ಆಸ್ಪತ್ರೆಯಲ್ಲಿ 60ಕ್ಕೂ ಹೆಚ್ಚು ಮಕ್ಕಳ ಸಾವು – ತನಿಖೆಗೆ ಯೋಗಿ ಆದಿತ್ಯನಾಥ್ ಸರ್ಕಾರ ಆದೇಶ

2 weeks ago

ಲಕ್ನೋ: ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥರ ಸ್ವಕ್ಷೇತ್ರದವಾದ ಗೋರಖ್‍ಪುರ್‍ನಲ್ಲಿ ಭಾರೀ ದುರಂತವೊಂದು ನಡೆದಿದೆ. ಕಳೆದ 5 ದಿನಗಳಲ್ಲಿ ಇಲ್ಲಿನ ಬಾಬಾ ರಾಘವ್ ದಾಸ್ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ 60ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿದ್ದಾರೆ. ಅದರಲ್ಲೂ ಕಳೆದ 48 ಗಂಟೆಗಳಲ್ಲಿ 30 ಮಕ್ಕಳು...

ಬೆಡ್ ಖಾಲಿ ಇದ್ರೂ ನೆಲದಲ್ಲಿ ಚಿಕಿತ್ಸೆ: ಸ್ಮಾರ್ಟ್‍ಸಿಟಿ ದಾವಣಗೆರೆ ಜಿಲ್ಲಾಸ್ಪತ್ರೆಗೆ ಬಂದಿದೆ ರೋಗ!

2 weeks ago

ದಾವಣಗೆರೆ: ಸ್ಮಾರ್ಟ್ ಸಿಟಿಗೆ ನಗರ ಆಯ್ಕೆಯಾದಾಗ ದಾವಣೆಗೆರೆಯ ಜನ ಹೆಮ್ಮೆಪಟ್ಟುಕೊಂಡಿದ್ದರು. ಆದರೆ ಈಗ ನಗರದಲ್ಲಿರುವ ಜಿಲ್ಲಾಸ್ಪತ್ರೆಗೆ ರೋಗ ಬಂದಿದ್ದು, ದೂರದ ಊರಿನಿಂದ ಬರುವ ರೋಗಿಳನ್ನ ನೆಲದ ಮೇಲೆ ಮಲಗಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲಾಸ್ಪತ್ರೆಯ ಕೆಲ ವಾರ್ಡ್‍ಗಳಲ್ಲಿ ಬೆಡ್ ಗಳು ಖಾಲಿ ಇದ್ದರೂ...

ಶಾಲೆ ಆವರಣದಲ್ಲಿ ಕಾಲುಜಾರಿ ಬಿದ್ದು 10 ವರ್ಷದ ಬಾಲಕ ಸಾವು!

3 weeks ago

ಘಜಿಯಾಬಾದ್: ಇಲ್ಲಿನ ಇಂದಿರಾಪುರಂ ಶಾಲೆಯ ಎರಡನೇ ಮಹಡಿಯ ಆವರಣದಲ್ಲಿ 10 ವರ್ಷದ ಬಾಲಕನೊಬ್ಬ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ. ಅರ್ಮನ್ ಸೆಹಗಲ್ ಮೃತ ದುರ್ದೈವಿ ಬಾಲಕ. ಈತ ಇಂದಿರಾಪುರಂ ಜಿ ಜಿ ಗೊಯೆಂಕಾ ಪಬ್ಲಿಕ್ ಸ್ಕೂಲ್...

ಎಲೆಕೋಸಿನ ಜೊತೆ ಹಾವು ಬೇಯಿಸಿ ತಿಂದ್ರು- ಅಮ್ಮ ಮಗಳು ಆಸ್ಪತ್ರೆಗೆ ದಾಖಲು

4 weeks ago

ಇಂದೋರ್: ಆಕಸ್ಮಿಕವಾಗಿ ಗುರುವಾರ ರಾತ್ರಿ ಎಲೆಕೋಸಿನ ಜೊತೆ ಪುಟಾಣಿ ಹಾವೊಂದನ್ನ ಬೇಯಿಸಿ ತಿಂದು 35 ವರ್ಷದ ಮಹಿಳೆ ಹಾಗೂ ಅವರ ಮಗಳು ಆಸ್ಪತ್ರೆಗೆ ದಾಖಲಾಗಿರೋ ಘಟನೆ ಇಂದೋರ್‍ನಲ್ಲಿ ನಡೆದಿದೆ. ಅಫ್ಜಾನ್ ಇಮಾಮ್ ಹಾಗೂ ಅವರ 15 ವರ್ಷದ ಮಗಳು ಆಮ್ನಾ ಸದ್ಯ...