Friday, 25th May 2018

Recent News

5 months ago

ಗೋವಾ ಪರವೇ ಕೇಸ್ ಗಟ್ಟಿಯಾಗಿದೆ: ಗೋವಾ ವಕೀಲ ಆತ್ಮಾರಾಮ ನಾಡಕರ್ಣಿ

ಬೆಂಗಳೂರು: ಆಗಸ್ಟ್ ನಲ್ಲಿ ಮಹದಾಯಿ ಕುರಿತಂತೆ ನ್ಯಾಯಮಂಡಳಿ ತೀರ್ಪು ಬರಲಿದೆ. ಮಹದಾಯಿ ವಿಚಾರದಲ್ಲಿ ಗೋವಾ ನ್ಯಾಯಾಧಿಕರಣದ ಮುಂದೆ ದೃಢವಾದ ಸಾಕ್ಷ್ಯಾಧಾರಗಳನ್ನ ಒದಗಿಸಿದೆ ಎಂದು ಗೋವಾ ಪರವಾಗಿ ವಾದ ಮಾಡುತ್ತಿರುವ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆತ್ಮಾರಾಮ ನಾಡಕರ್ಣಿ ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ನಾಡಕರ್ಣಿ, ನ್ಯಾಯಾಧಿಕರಣದಲ್ಲಿ ಕೇಸ್ ಗೋವಾ ಪರವೇ ಗಟ್ಟಿ ಇದೆ. ಗೋವಾ ವಕೀಲರ ತಂಡ ರಾಜ್ಯದ ಹಿತಾಸಕ್ತಿಗಾಗಿ ಹೋರಾಟ ಮಾಡ್ತಿದೆ. ಇದರಲ್ಲಿ ಯಾವುದೇ ರಾಜಿ ಇಲ್ಲ. ನಮಗೆ ಮಹದಾಯಿ ನದಿ ಗೋವಾದಲ್ಲಿ ಹರಿಯಬೇಕು ಎಂದು ಹೇಳಿದ್ದಾರೆ. […]

1 year ago

ಸಾಲಿಸಿಟರ್ ಆಗಿದ್ದು ಗೋವಾ ಪರ ವಾದ ಮಾಡುವುದು ಎಷ್ಟು ಸರಿ: ಕೇಂದ್ರದ ವಿರುದ್ಧ ಕೋನರೆಡ್ಡಿ ಅಸಮಾಧಾನ

ಬೆಂಗಳೂರು: ಮಹದಾಯಿ ಯೋಜನೆ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ಗೋವಾ ಪರ ಆತ್ಮಾರಾಮ ನಾಡಕರ್ಣಿ ವಾದಮಾಡಲು ಕೇಂದ್ರದ ಅನುಮತಿ ಹಿನ್ನೆಲೆಯಲ್ಲಿ ಮಹದಾಯಿ ಹೋರಾಟ ಸಮಿತಿ ಅಧ್ಯಕ್ಷ, ಶಾಸಕ ಕೋನರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೇಕಿದ್ದರೆ ಸಾಲಿಸಿಟರ್ ಹುದ್ದೆಯಿಂದ ಆತ್ಮಾರಾಮ ನಾಡಕರ್ಣಿಗೆ ವಿಮುಕ್ತಿಕೊಡಿ. ಆ ಬಳಿಕ ಬೇಕಾದರೆ ಅವರು ಗೋವಾ ಪರ ವಾದಮಾಡಲಿ. ಆದರೆ ಸಾಲಿಸಿಟರ್ ಆಗಿದ್ದು ವಾದ ಮಾಡುವುದು...