Wednesday, 21st February 2018

Recent News

4 days ago

ದುಷ್ಕರ್ಮಿಗಳು ಹಾಕಿದ್ದ ಉರುಳಿಗೆ ಸಿಲುಕಿದ ಕರಡಿಯ ರಕ್ಷಣೆ

ರಾಮನಗರ: ಕಾಡು ಹಂದಿಗಳ ಬೇಟೆಗಾಗಿ ದುಷ್ಕರ್ಮಿಗಳು ಹಾಕಿದ್ದ ಉರುಳಿಗೆ ಕರಡಿಯೊಂದು ಸಿಕ್ಕಿಬಿದ್ದು, ನರಕಯಾತನೆ ಅನುಭವಿಸಿದ ಘಟನೆ ರಾಮನಗರ ತಾಲೂಕಿನ ಬಿಳಗುಂಬ ಗ್ರಾಮದಲ್ಲಿ ನಡೆದಿದೆ. ಬಿಳಗುಂಬ ಗ್ರಾಮದ ರಮೇಶ್ ಎಂಬವರ ಗಂಧ ಹಾಗೂ ಮಾವಿನ ಮರದ ತೋಪಿನಲ್ಲಿ ಕಿಡಿಗೇಡಿಗಳು ರಾತ್ರಿ ಹಂದಿ ಬೇಟೆಗಾಗಿ ಬೈಕ್‍ನ ಕ್ಲಚ್ ವೈರ್‍ಗಳ ಉರುಳನ್ನು ಹಾಕಿದ್ದಾರೆ. ಬೆಳಗ್ಗಿನ ಜಾವದ ವೇಳೆ ಆಹಾರ ಅರಸಿ ಬಂದ ಒಂದೂವರೆ ವರ್ಷದ ಹೆಣ್ಣು ಕರಡಿ ಉರುಳಿನಲ್ಲಿ ಸಿಕ್ಕಿಬಿದ್ದಿದೆ. ಉರುಳಿನಿಂದ ತಪ್ಪಿಸಿಕೊಳ್ಳಲು ಸಾಕಷ್ಟು ಹರಸಾಹಸ ಮಾಡಿದೆ. ಆದದೂ ಏನು ಪ್ರಯೋಜನವಾಗಿಲ್ಲ. […]

1 week ago

ಮರದ ಟೊಂಗೆಯಲ್ಲಿ ಅಡಗಿದ್ದ 20 ಅಡಿ ಹೆಬ್ಬಾವು ಹಿಡಿದು ಫ್ರೈ ಮಾಡಿ ತಿಂದ ಜನರು

ಕೌಲಾಲಂಪುರ: ಬಿದ್ದಿರುವ ಮರದ ಟೊಂಗೆಯಲ್ಲಿ ಅಡಗಿ ಕುಳಿತಿದ್ದ ಹೆಬ್ಬಾವನ್ನು ಹಿಡಿದು ಗ್ರಾಮಸ್ಥರು ಫ್ರೈ ಮಾಡಿ ತಿಂದಿರುವ ಘಟನೆ ಮಲೇಷ್ಯಾದ ಬೋರ್ನಿಯೋ ದ್ವೀಪದಲ್ಲಿ ನಡೆದಿದೆ. ಶನಿವಾರ ದ್ವೀಪದ ಜನರು ಬೇಟೆಗಾಗಿ ಕಾಡಿನಲ್ಲಿ ಸಂಚರಿಸುತ್ತಿರುವಾಗ ಕಾಡಿನಲ್ಲಿ ಬಿದ್ದಿರುವ ಮರದ ಟೊಂಗೆಯಿಂದ ಶಬ್ಧ ಕೇಳಿಸಿದೆ. ಟೊಂಗೆಯಲ್ಲಿ ಚಿಕ್ಕಪುಟ್ಟ ಹಾವುಗಳು ಇರಬಹುದು ಎಂದು ನೋಡಿದಾಗ 20 ಅಡಿ ಉದ್ದದ ಗಂಡು ಹೆಬ್ಬಾವು...

ಅರಣ್ಯ ಪ್ರದೇಶಕ್ಕೆ ಸೇರಿದ ಜಾಗದಲ್ಲಿ ಬಾರ್ ನಿರ್ಮಾಣ- ಶಾಸಕರ ಪತ್ನಿಯ ವಿರುದ್ಧ ಗ್ರಾಮಸ್ಥರ ಆಕ್ರೋಶ

5 months ago

ಕೊಪ್ಪಳ: ಅರಣ್ಯ ಭೂಮಿಯಲ್ಲಿ ಅಕ್ರಮವಾಗಿ ಕಟ್ಟಡ ಕಟ್ಟುವ ಮೂಲಕ ಬಾರ್ ತೆರೆಯುವುದಕ್ಕೆ ಮುಂದಾಗಿರುವ ಶಾಸಕರ ಪತ್ನಿ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಹಂಪಿ ಅರಣ್ಯ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ಸಾಣಾಪೂರ-ವೀರೂಪಾಪೂರಗಡ್ಡಿ ಅರಣ್ಯ...

ಪರಿಸರ ಸಂರಕ್ಷಣೆಗೆ ಗ್ರಾಮಸ್ಥರ ಪಣ-ಕಾಡಿನ ಜೊತೆ ಬೆಸೆದುಕೊಂಡ ಜೀವನ

6 months ago

-ಕಾರವಾರದ ಸಾತಗೇರಿ ಇವತ್ತಿನ ಪಬ್ಲಿಕ್‍ಹೀರೋ ಕಾರವಾರ: ಮನಸ್ಸು ಮಾಡಿದ್ರೆ ಯಾವುದು ಅಸಾಧ್ಯವಲ್ಲ ಅನ್ನೋದಕ್ಕೆ ಇವತ್ತಿನ ನಮ್ಮ ಪಬ್ಲಿಕ್ ಹೀರೋ ಸಾಕ್ಷಿಯಾಗಿದ್ದಾರೆ. ಕಾರವಾರದ ಸಾತಗೇರಿ ಗ್ರಾಮದ ಗ್ರಾಮಸ್ಥರು ಹಸಿರು ಪರಿಸರವನ್ನೇ ತಮ್ಮ ಉಸಿರಾಗಿಸಿಕೊಂಡಿದ್ದಾರೆ. ಕಾರವಾರದಿಂದ 25 ಕಿ.ಮೀ. ದೂರದ ಸಾತಗೇರಿ ಗ್ರಾಮದಲ್ಲಿ ಪರಿಸರ...

ಉರುಳಿಗೆ ಸಿಲುಕಿ ನರಳಾಟ: ಚಿರತೆ ನೋಡಲು ಮುಗಿಬಿದ್ದ ಜನ

7 months ago

ಚಿಕ್ಕಮಗಳೂರು:  5 ವರ್ಷದ ಚಿರತೆಯೊಂದು ಚಿಕ್ಕಮಗಳೂರು ತಾಲೂಕಿನ ಬಸರವಳ್ಳಿ ಗ್ರಾಮದಲ್ಲಿ ಉರುಳಿಗೆ ಬಿದ್ದಿದೆ ಗ್ರಾಮಸ್ಥರು ಪ್ರಾಣಿ ಬೇಟೆಗಾಗಿ ಕಾಫಿ ತೋಟದಲ್ಲಿ ಉರುಳನ್ನು ಹಾಕಿದ್ದರು. ಈ ಉರುಳಿಗೆ ಚಿರತೆ ಬಿದ್ದಿತ್ತು. ಚಿರತೆಯ ಒಂದು ಕಾಲು ಉರುಳಿನಲ್ಲಿ ಸಿಕ್ಕಿಕೊಂಡ ಕಾರಣ ನರಳಾಡುತಿತ್ತು. ಉರುಳಿಗೆ ಬಿದ್ದ ಸುದ್ದಿ...

ನೀರಿಗಾಗಿ ಅರಣ್ಯದಿಂದ ನಾಡಿಗೆ ಬಂದ ಸಿಂಹದ ಮರಿ ಬಾವಿಗೆ ಬಿತ್ತು: ವಿಡಿಯೋ ನೋಡಿ

7 months ago

ಗಾಂಧಿನಗರ: ಇತ್ತೀಚಿಗೆ ಕಾಡು ಪ್ರಾಣಿಗಳು ಕಾಡಿನಲ್ಲಿ ಆಹಾರ ಇಲ್ಲದೆ ಇರುವುದರಿಂದ ನಾಡಿನ ಕಡೆ ಬರುವುದು ಸಾಮಾನ್ಯವಾಗಿದೆ. ಆದ್ರೆ ಗುಜರಾತಿನಲ್ಲಿ ಸಿಂಹದ ಮರಿಯೊಂದು ಆಹಾರಕ್ಕಾಗಿ ಅರಣ್ಯದಿಂದ ನಾಡಿನ ಕಡೆಗೆ ಬರುವಾಗ ಕಾಲುಜಾರಿ ಬಾವಿಯೊಳಗೆ ಬಿದ್ದಿರುವ ವಿಡಿಯೋವೊಂದು ವೈರಲ್ ಆಗಿದೆ. ಹೌದು, ಗುಜರಾತ್‍ದ ಅಮರಾಪುರ...

ದೇವಾಲಯದ ಪ್ರವೇಶಕ್ಕೆ ನಿರ್ಬಂಧ: ಅರಣ್ಯಾಧಿಕಾರಿಗಳ ಜೊತೆ ಜನ್ರ ತಳ್ಳಾಟ, ನೂಕಾಟ- ವಿಡಿಯೋ

8 months ago

ಚಾಮರಾಜನಗರ: ಅರಣ್ಯದಲ್ಲಿರುವ ದೇವಸ್ಥಾನಕ್ಕೆ ಸಾರ್ವಜನಿಕರಿಗೆ ನಿರ್ಬಂಧ ಹೇರಿದ್ದಕ್ಕೆ ಅರಣ್ಯ ಅಧಿಕಾರಿಗಳು ಮತ್ತು ಸಾರ್ಜನಿಕರ ಮಧ್ಯೆ ತಳ್ಳಾಟ ನೂಕಾಟ ನಡೆದ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ನಡೆದಿದೆ. ಗುಂಡ್ಲುಪೇಟೆ ತಾಲೂಕಿನ ಮದ್ದೂರು ಅರಣ್ಯ ಚೆಕ್ ಪೋಸ್ಟ್ ನಲ್ಲಿ ಈ ಘಟನೆ ನಡೆದಿದ್ದು, ಸುಮಾರು...

ಚಿಕ್ಕಮಗಳೂರಿನ ಈ ಅರಣ್ಯದಲ್ಲಿ ಬೆಂಕಿ -ಲಕ್ಷಾಂತರ ರೂ. ಮೌಲ್ಯದ ಮರ ನಾಶ!

12 months ago

ಚಿಕ್ಕಮಗಳೂರು: ಜಿಲ್ಲೆಯ ಬಾಳೆಹೊನ್ನೂರು ಸಮೀಪದಲ್ಲಿರುವ ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಸಾಗುವಾನಿ ಮರ ಸೇರಿದಂತೆ ಇತರೆ ಮರಗಳಿಗೂ ಬೆಂಕಿ ಪಸರಿಸಿ ಲಕ್ಷಾಂತರ ರೂ. ಮೌಲ್ಯದ ಮರ ನಾಶವಾಗಿರುವ ಘಟನೆ ಸಂಭವಿಸಿದೆ. ಚಿಕ್ಕಮಗಳೂರು ಜಿಲ್ಲೆಯ ಎನ್‍ಆರ್‍ಪುರ ತಾಲೂಕಿನ ಬಾಳೆಹೊನ್ನೂರಿನ ಮುದುಗುಣಿ ಅರಣ್ಯದಲ್ಲಿ ಬೆಂಕಿ...